Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎನ್ ಎಸ್ ಜಿ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಎನ್ ಎಸ್ ಜಿ ಸಿಬ್ಬಂದಿಗೆ ಪ್ರಧಾನಮಂತ್ರಿ ನಮನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಎನ್ ಎಸ್ ಜಿ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಎನ್ ಎಸ್ ಜಿ ಸಿಬ್ಬಂದಿಯ ಅಚಲ ಸಮರ್ಪಣೆ, ಧೈರ್ಯ ಮತ್ತು ದೃಢನಿಶ್ಚಯವನ್ನು ಶ್ಲಾಘಿಸಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:

“ಎನ್ಎಸ್ ಜಿ  ಸಂಸ್ಥಾಪನಾ ದಿನದ ಸಂದರ್ಭದಲ್ಲಿ, ನಮ್ಮ ರಾಷ್ಟ್ರವನ್ನು ರಕ್ಷಿಸುವಲ್ಲಿ ಎಲ್ಲಾ ಎನ್ಎಸ್ ಜಿ ಸಿಬ್ಬಂದಿಯ ಅಚಲ ಸಮರ್ಪಣೆ, ಧೈರ್ಯ ಮತ್ತು ದೃಢನಿಶ್ಚಯಕ್ಕಾಗಿ ಭಾರತ ವಂದಿಸುತ್ತದೆ. ಬೆದರಿಕೆಗಳಿಂದ ನಮ್ಮ ರಾಷ್ಟ್ರವನ್ನು ರಕ್ಷಿಸುವ ಅವರ ಬದ್ಧತೆ ಶ್ಲಾಘನೀಯ. ಅವರು ಶೌರ್ಯ ಮತ್ತು ವೃತ್ತಿಪರತೆಯನ್ನು ಸಾಕಾರಗೊಳಿಸುತ್ತಾರೆ,’’ ಎಂದಿದ್ದಾರೆ.

 

 

*****