Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎನ್ ಎಚ್ ಎಂ ಅಡಿ ಸಾಧಿಸಿರುವ ಪ್ರಗತಿ ಮತ್ತು ಎನ್ಎಚ್ ಎಂನ ಎಂಎಸ್ ಜಿ ಹಾಗೂ ಇಪಿಸಿ ಕೈಗೊಂಡಿರುವ ನಿರ್ಧಾರಗಳ ಬಗ್ಗೆ ಸಂಪುಟ ಮೆಚ್ಚುಗೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಂ ಎಚ್ ) ಅಡಿ ಸಾಧಿಸಿರುವ ಪ್ರಗತಿ ಮತ್ತು ಎನ್ ಎಂಎಚ್ ಅಡಿಯ ಸಚಿವರ ಉನ್ನತ ಸಮಿತಿ ಹಾಗೂ ಉನ್ನತಾಧಿಕಾರಿ ಕಾರ್ಯಕ್ರಮ ಸಮಿತಿಗಳ ನಿರ್ಧಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. 

ಪ್ರಮುಖಾಂಶಗಳು: 

  • ಎನ್ ಆರ್ ಎಚ್ ಎಂ/ಎನ್ ಎಚ್ ಎಂ ಆರಂಭಿಸಿದ ನಂತರ ಐಎಂ ಆರ್ ಮತ್ತು ಯು5ಎಂಆರ್ ಅಡಿಯಲ್ಲಿ ತಾಯಂದಿರ ಮರಣ ಪ್ರಮಾಣ(ಎಂಎಂಆರ್) ಗಣನೀಯವಾಗಿ ಇಳಿಕೆಯಾಗಿದೆ. ಪ್ರಸಕ್ತ ಇಳಿಕೆ ದರದಲ್ಲಿ, ಭಾರತ ನಿಗದಿತ 2030ಕ್ಕೆ ಮುನ್ನವೇ  ಸುಸ್ಥಿರ ಗುರಿ ಅಭಿವೃದ್ಧಿ (ಎಸ್ ಡಿಜಿ) ಅಡಿಯಲ್ಲಿ  (ಎಂಎಂಆರ್ -70, ಯು5ಎಂಆರ್ -25) ಅನ್ನು ಸಾಧಿಸಲಿದೆ. 
  • ಮಲೇರಿಯಾ ಪ್ರಕರಣಗಳು ಮತ್ತು ಸಾವುಗಳ ಪ್ರಮಾಣ 2013ರಲ್ಲಿ ಶೇಕಡ 50.22ರಷ್ಟಿತ್ತು, ಅದು 2017ರ ವೇಳೆಗೆ ಶೇ.49.09ರಷ್ಟಕ್ಕೆ ಇಳಿಕೆಯಾಗಿದ್ದು, ಆ ಮೂಲಕ ವಿಶ್ವದ ಮಲೇರಿಯಾ ಪೀಡಿತ ದೇಶಗಳ ಪೈಕಿ ಭಾರತ ಅತಿದೊಡ್ಡ ಯಶೋಗಾಥೆಯನ್ನು ಸಾಧಿಸಿದೆ.
  • ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ(ಆರ್ ಎನ್ ಟಿಸಿಪಿ) ಗಮನಾರ್ಹವಾಗಿ ಬಲವರ್ಧನೆಗೊಳಿಸಲಾಗಿದೆ ಮತ್ತು ಚುರುಕುಗೊಳಿಸಲಾಗಿದೆ.  ಎಲ್ಲ ಜಿಲ್ಲೆಗಳಲ್ಲಿ 1,180 ಸಿಬಿನ್ಯಾಟ್ ಯಂತ್ರಗಳನ್ನು ಅಳವಡಿಸಲಾಗಿದ್ದು, ಅವುಗಳ ಮೂಲಕ ಟಿ.ಬಿ ಕಾಯಿಲೆಯನ್ನು ಖಚಿತವಾಗಿ ಮತ್ತು ಶೀಘ್ರ ಪತ್ತೆ ಹಚ್ಚುವುದಲ್ಲದೆ, ಟಿ.ಬಿ ಗೆ ರೋಗ ನಿರೋಧಕ ನೀಡಲು ಸಹಾಯಕವಾಗುತ್ತಿದೆ. ಇದರಿಂದಾಗಿ ಕಳೆದ ವರ್ಷ ಸಿಬಿನ್ಯಾಟ್ ಬಳಕೆ ಪ್ರಮಾಣ ಮೂರುಪಟ್ಟು ಹೆಚ್ಚಾಗಿದೆ.  ಸತತ ಪ್ರಯತ್ನಗಳ ಪರಿಣಾಮ ಒಂದು ವರ್ಷದಲ್ಲಿ ಹೊಸ ಪ್ರಕರಣಗಳ ಪತ್ತೆ ಪ್ರಮಾಣ ಶೇ.16ರಷ್ಟು ಏರಿಕೆಯಾಗಿದೆ. ಸಾಮೂಹಿಕ ಡ್ರಗ್ ಸೆನ್ಸಿಟಿವ್ ಪ್ರಕರಣಗಳೂ ಸಹ ಶೇ.54ರಷ್ಟು ಹೆಚ್ಚಾಗಿವೆ. ದೇಶಾದ್ಯಂತ ಟಿ .ಬಿ ರೋಗಿಗಳಿಗೆ ಅವರು ಚಿಕಿತ್ಸೆ ಪಡೆಯುವಷ್ಟು ಅವಧಿಗೆ ಅವರಿಗೆ ಹೊಸ ಔಷಧ ಬೆಡಕ್ವಿಲೈನ್ ಮತ್ತು ಡೆಲಮಿನಿಡೆ ಜೊತೆಗೆ ಪೌಷ್ಟಿಕಾಂಶ ನೆರವು ನೀಡಲಾಗುತ್ತಿದೆ. 
  • 2018-19ನೇ ಸಾಲಿನಲ್ಲಿ 52,744 ಎಬಿ-ಎಚ್ ಡಬ್ಲೂಸಿಗಳಿಗೆ ಅನುಮೋದನೆ ನೀಡಲಾಗಿದ್ದು, ಅವುಗಳಲ್ಲಿ 17,149 ಕಾರ್ಯಾರಂಭ ಮಾಡಿವೆ. ಒಟ್ಟು 15ಸಾವಿರ ಗುರಿ ಹೊಂದಲಾಗಿತ್ತು. 2018-19ನೇ ಸಾಲಿನಲ್ಲಿ ಅಶಾ ಕಾರ್ಯಕರ್ತೆಯರು, ಎಂಬಿಎಚ್ ಡಬ್ಲೂ, ಸ್ಟಾಫ್ ನರ್ಸ್ ಸೇರಿ ಒಟ್ಟು 1,81,267 ಆರೋಗ್ಯ ಕಾರ್ಯಕರ್ತರಿಗೆ ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ತರಬೇತಿ ನೀಡಲಾಗಿದೆ. ರಾಜ್ಯಗಳೂ ಸಹ ಎಚ್ ಡಬ್ಲೂ ಸಿಗಳ ಮೂಲಕ ಅಂತಹ ಚಟುವಟಿಕೆಗಳನ್ನು ಆರಂಭಿಸಿವೆ. 
  • ಯುವಕರಲ್ಲಿ ಗಂಟಲು ರೋಗ ತಡೆಗೆ ನಿರೋಧಕ ಶಕ್ತಿ ನೀಡಲು 2018ರ ಸಾಮೂಹಿಕ ಲಸಿಕಾ ಕಾರ್ಯಕ್ರಮದಡಿ ಹೊಸ ಲಸಿಕೆಗಳಾದ ಟೆಟಾನಸ್ ಮತ್ತು ಅಡಲ್ಟ್ ಡಿಫ್ತಿರಿಯಾ (ಟಿಡಿ) ಬದಲಿಗೆ ಟೆಟಾನಸ್ ಟೋಕ್ಸೋಡ್ (ಟಿಟಿ) ನೀಡಲಾಗಿದೆ. 
  • 2018ರಲ್ಲಿ ಸಿಡುಬು ಮತ್ತು ದಡಾರ (ಎಂಆರ್ ) ಲಸಿಕೆ ಅಭಿಯಾನವನ್ನು ಹೆಚ್ಚುವರಿಯಾಗಿ 17 ರಾಜ್ಯಗಳಲ್ಲಿ ಕೈಗೊಳ್ಳಲಾಯಿತು, ಆ ಮೂಲಕ 2019ರಮಾರ್ಚ್ ವರೆಗೆ 30.50 ಕೋಟಿ ಮಕ್ಕಳಿಗೆ ಲಸಿಕೆ ಹಾಕಲಾಗಿದೆ. 
  • 2018-19ನೇ ಸಾಲಿನಲ್ಲಿ ಎರಡು ರಾಜ್ಯಗಳಲ್ಲಿ ರೋಟೋ ವೈರಸ್  ವ್ಯಾಕ್ಸಿನ್ (ಆರ್ ವಿವಿ) ಆರಂಭಿಸಲಾಗಿದೆ. ಇಲ್ಲಿಯವರೆಗೆ ಎಲ್ಲ ರಾಜ್ಯಗಳು/ಕೇಂದ್ರಾಳಿತ ಪ್ರದೇಶಗಳು ಆರ್ ವಿವಿ ವ್ಯಾಪ್ತಿಗೆ ಒಳಪಟ್ಟಿವೆ.
  • 2018-19ನೇ ಸಾಲಿನಲ್ಲಿ ಪೆನೆಮೊಕೊಕಲ್ ಕಾಂಜುಗೇಟೆಡ್ ವ್ಯಾಕ್ಸಿನ್ (ಪಿಸಿವಿ) ಯನ್ನು ಮಧ್ಯಪ್ರದೇಶ, ಹರಿಯಾಣ ಮತ್ತು ಬಿಹಾರ, ರಾಜಸ್ತಾನ ಮತ್ತು ಉತ್ತರ ಪ್ರದೇಶದ ಇನ್ನುಳಿದ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. 
  • ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿದ್ದ ದೈನಂದಿನ ಮತ್ತು ಭತ್ಯೆಗಳನ್ನು ತಿಂಗಳಿಗೆ 1ಸಾವಿರದಿಂದ ಎರಡು ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಆಶಾ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಭಾರತ ಸರ್ಕಾರ 330 ರೂ. ವಂತಿಗೆ ಪಾವತಿಸಲಿದೆ) ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಭಾರತ ಸರ್ಕಾರ 12 ರೂ. ವಂತಿಗೆ ಪಾವತಿಸಲಿದೆ) ವ್ಯಾಪ್ತಿಗೆ ಸೇರಿಸಲಾಗಿದೆ.
  • ಪೋಷಣ್ ಅಭಿಯಾನದಡಿ ಏಪ್ರಿಲ್ 2018ರಲ್ಲಿ ಅನಿಮಿಯಾ ಮುಕ್ತ ಭಾರತ(ಎಎಂಬಿ) ಅಭಿಯಾನ ಆರಂಭಿಸಲಾಗಿದೆ.
  • ಉಪ ಆರೋಗ್ಯ ಕೇಂದ್ರಗಳಿಗೆ ನೀಡುತ್ತಿದ್ದ ನಿಧಿಯನ್ನು 20ಸಾವಿರದಿಂದ 50ಸಾವಿರಕ್ಕೆ ಹೆಚ್ಚಳ ಮಾಡಿ ಅವುಗಳನ್ನು ಎಚ್ ಡಬ್ಲೂಸಿಗಳನ್ನಾಗಿ ಪರಿವರ್ತಿಸಲಾಗಿದೆ. 
  • ಪೋಷಣ್ ಅಭಿಯಾನದಡಿ ಗೃಹ ಆಧಾರಿತ ಚಿಕ್ಕಮಕ್ಕಳ ಆರೈಕೆ ಕೇಂದ್ರ(ಎಚ್ ಬಿವೈಸಿ) ಕಾರ್ಯಕ್ರಮ ಪರಿಚಿಸಲಾಗಿದೆ. 
  • ಕ್ಷಯರೋಗ/ಲೆಪ್ರಸಿ/ಮಲೇರಿಯಾ/ಜ್ವರ/ಲೈಂಫಟಿಕ್-ಫಿಲರೈಸಿಸ್/ಕ್ಯಾಟರಾಕ್ಟ್ ಮತ್ತಿತರ ರೋಗಗಳು ಮುಕ್ತವಾದರೆ ಅಂತಹ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು/ ಜಿಲ್ಲೆಗಳಿಗೆ ಪ್ರಶಸ್ತಿ ಯೋಜನೆಯನ್ನು ಅನುಮೋದಿಸಲಾಗಿದೆ. ಬಯಲು ಬಹಿದೆರ್ಸೆ ಮುಕ್ತ ರಾಜ್ಯಗಳು ಮತ್ತು ಜಿಲ್ಲೆಗಳಿಗೆ ನಡೆಯುತ್ತಿರುವ ಸ್ಪರ್ಧೆಯಂತೆ ಇಲ್ಲೂ ಸಹ ರಾಜ್ಯಗಳು ಮತ್ತು ಜಿಲ್ಲೆಗಳ ನಡುವೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ರೋಗಮುಕ್ತ ಪ್ರಮಾಣೀಕರಣ ಪಡೆಯಲು ಸ್ಪರ್ಧೆ ಏರ್ಪಟ್ಟಿದೆ. 
  • ಹೆಪಟೈಟಿಸ್ (ಯಕೃತ್ತಿನ ಉರಿಯೂತ)ಗೆ ಚಿಕಿತ್ಸೆ,ನಿರ್ವಹಣೆ ಮತ್ತು ತಡೆಗೆ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮ ಅನುಮೋದಿಸಿದ್ದು, ಅದರಲ್ಲಿ ಎ,ಬಿ.ಸಿ ಮತ್ತು  ಇ ಕಾರ್ಯಕ್ರಮ ಆರಂಭಿಸಲಾಗಿದೆ. ಇದರಿಂದ ಅಂದಾಜು 5 ಕೋಟಿ ಹೆಪಟೈಟಿಸ್ ರೋಗಿಗಳಿಗೆ ಪ್ರಯೋಜನವಾಗಲಿದೆ. 

 

 

ಎಂಎಂಆರ್ ಇಳಿಕೆ ದರ ಪ್ರತಿ ಲಕ್ಷ ಜೀವಂತ ಜನನಕ್ಕೆ

ಶೇ.5.3

ಶೇ.8

ಐಎಂಆರ್ ಇಳಿಕೆ ದರ

ಪ್ರತಿ 1ಲಕ್ಷ ಜೀವಂತ ಜನನಕ್ಕೆ

ಶೇ.2.8

ಶೇ.4.7

5 ರೊಳಗಿನ ಮರಣ ದರ ಇಳಿಕೆ ಪ್ರಮಾಣ

ಶೇ.3.9

ಶೇ.6.6

  1990-2013 2013-2016