Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಚ್.ಎಂ.ಟಿ. ಕೈ ಗಡಿಯಾರ ನಿಯಮಿತದ ಜಮೀನನ್ನು ವರ್ಗಾವಣೆ ಮಾಡಲು ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬೃಹತ್ ಕೈಗಾರಿಕೆ ಇಲಾಖೆಯ ಈ ಕೆಳಕಂಡ ಪ್ರಸ್ತಾಪಗಳಿಗೆ ತನ್ನ ಅನುಮೋದನೆ ನೀಡಿದೆ:

i. ಬೆಂಗಳೂರು ಮತ್ತು ತುಮಕೂರಿನಲ್ಲಿರುವ ಎಚ್.ಎಂ.ಟಿ. ಕೈಗಡಿಯಾರ ನಿಯಮಿತದ 208.35 ಎಕರೆ ಜಮೀನನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ 1194.21 ಕೋಟಿ ರೂಪಾಯಿ ಮೊತ್ತ ಮತ್ತು ಅಂಗೀಕಾರಾರ್ಹವಾದ ತೆರಿಗೆ ಮತ್ತು ಸುಂಕದ ಪಾವತಿಯ ಮೇಲೆ ವರ್ಗಾವಣೆ ಮಾಡಲು.

ii. ಬೆಂಗಳೂರು ಎಚ್.ಎಂ.ಟಿ. ಲಿಮಿಟೆಡ್ ನ (ಜಾಗತಿಕ ಗೋದಾಮು) ಒಂದು ಎಕರೆ ಜಮೀನನ್ನು ಭಾರತೀಯ ಅನಿಲ ಪ್ರಾಧಿಕಾರ ನಿಯಮಿತ (ಜಿ.ಎ.ಐ.ಎಲ್.)ಗೆ 34.30 ಕೋಟಿ ರೂಪಾಯಿ ಮತ್ತು ಅಂಗೀಕಾರಾರ್ಹವಾದ ತೆರಿಗೆಗಳು ಮತ್ತು ಸುಂಕದ ಪಾವತಿಯ ಮೇಲೆ ವರ್ಗಾವಣೆ ಮಾಡಲು.

ಈ ಮಾರಾಟದಿಂದ ಬರುವ ಹಣವನ್ನು ಕಂಪನಿಯು ತತ್ ಕ್ಷಣದ ಹೊಣೆಗಳನ್ನು ಮತ್ತು ಈ ವಹಿವಾಟಿನಿಂದ ಉದ್ಭವಿಸುವ ತೆರಿಗೆ ಹೊಣೆಯನ್ನು ಪೂರೈಸಿದ ಬಳಿಕ ಸಾಲಗಳು ಮತ್ತು ಮುಂಗಡಗಳಿಗಾಗಿ ಸರ್ಕಾರದ ಖಾತೆಯಲ್ಲಿ ಜಮಾ ಮಾಡಬೇಕು.

ಹಿನ್ನೆಲೆ:

ಎಚ್.ಎಂ.ಟಿ. ವಾಚಸ್ ಲಿಮಿಟೆಡ್, ಒಂದು ಕಾಲದಲ್ಲಿ ಭಾರತೀಯ ಶ್ರೀ ಸಾಮಾನ್ಯನಿಗಾಗಿ ವಾಚುಗಳನ್ನು ಉತ್ಪಾದನೆ ಮಾಡುವುದರಲ್ಲಿ ಅಗ್ರೇಸರನಾಗಿತ್ತು ಮತ್ತು ಭಾರತದ ಸಮಯ ಪಾಲಕ (ಟೈಮ್ ಕೀಪರ್ಸ್ ಆಫ್ ಇಂಡಿಯಾ) ಎಂಬ ಖ್ಯಾತಿ ಪಡೆದಿತ್ತು. ಈಗ ಅದು ಭಾರಿ ನಷ್ಟದಿಂದ ತನ್ನ ಕಾರ್ಯಾಚರಣೆ ನಿಲ್ಲಿಸಿದ್ದು, ಈಗಿನ ಸ್ಪರ್ಧಾತ್ಮಕ ಆರ್ಥಿಕ ಸನ್ನಿವೇಶದಲ್ಲಿ, ಅದನ್ನು ಪುನಶ್ಚೇತನಗೊಳಿಸುವುದರಿಂದ ಲಾಭವಿಲ್ಲ. ಹೀಗಾಗಿ ಇದನ್ನು 2016ರ ಜನವರಿಯಿಂದ ಅದರ ನೌಕರರಿಗೆ ಆಕರ್ಷಕ ವಿಆರ್.ಎಸ್./ವಿ.ಎಸ್.ಎಸ್. ನೀಡುವ ಮೂಲಕ ಮುಚ್ಚಲಾಗಿದೆ. ಬೆಂಗಳೂರು ಮತ್ತು ತುಮಕೂರಿನ ನೌಕರರು, ಕೇಂದ್ರ ಸರ್ಕಾರ ಅನುಮೋದಿಸಿದ ಈ ಗೋಲ್ಡನ್ ಶೇಕ್ ಹ್ಯಾಂಡ್ ಸೌಲಭ್ಯವನ್ನು ಪಡೆದುಕೊಂಡು, ಸಂತೋಷವಾಗಿ ಮನೆಗೆ ಹೋಗಿದ್ದಾರೆ.

ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆ ಎಚ್.ಎಂ.ಟಿ. ವಾಚ್ ಲಿಮಿಟೆಡ್ ಗೆ ಸೇರಿದ ಬೆಂಗಳೂರಿನ ಮತ್ತು ತುಮಕೂರಿನಲ್ಲಿರುವ ಜಮೀನನ್ನು ಇತರ ಕೇಂದ್ರ ಸರ್ಕಾರದ ಕಾಯಗಳಿಗೆ ಅಂದರೆ ಇಸ್ರೋ ಮತ್ತು ಜಿ.ಎ.ಐ.ಎಲ್.ಗೆ ಮಾರಾಟ/ವರ್ಗಾವಣೆ ಮಾಡುವುದರಿಂದ, ಉತ್ಪಾದಕ ಸಂಪನ್ಮೂಲದಿಂದ ಮುಕ್ತವಾಗುತ್ತದೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಭೂ ಸಂಪನ್ಮೂಲದ ಉತ್ತಮ ಉಪಯೋಗದ ಖಾತ್ರಿ ಪಡಿಸುತ್ತದೆ.

AKT/VBA/SH