Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಂ.ಎಸ್. ಸ್ವಾಮಿನಾಥನ್ : ದಿ ಕ್ವೆಸ್ಟ್ ಫಾರ್ ಎ ವರ್ಲ್ಡ್ ವಿತೌಟ್ ಹಂಗರ್ 2 ಭಾಗದ ಸರಣಿಯ ಪುಸ್ತಕ ಬಿಡುಗಡೆ ಮಾಡಿದ ಪ್ರಧಾನಿ

ಎಂ.ಎಸ್. ಸ್ವಾಮಿನಾಥನ್ : ದಿ ಕ್ವೆಸ್ಟ್ ಫಾರ್ ಎ ವರ್ಲ್ಡ್ ವಿತೌಟ್ ಹಂಗರ್ 2 ಭಾಗದ ಸರಣಿಯ ಪುಸ್ತಕ ಬಿಡುಗಡೆ ಮಾಡಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು ಹೆಸರಾಂತ ಕೃಷಿ ವಿಜ್ಞಾನಿ ಡಾ. ಎಂ.ಎಸ್. ಸ್ವಾಮಿನಾಥನ್ ಅವರ ಎರಡು ಭಾಗದ ಪುಸ್ತಕ ಸರಣಿಯನ್ನು ಬಿಡುಗಡೆ ಮಾಡಿದರು. ಈ ಸರಣಿಯ ಶೀರ್ಷಿಕೆ –ಎಂ.ಎಸ್. ಸ್ವಾಮಿನಾಥನ್: ದಿ ಕ್ವೆಸ್ಟ್ ಫಾರ್ ಎ ವರ್ಲ್ಡ್ ವಿಥೌಟ್ ಹಂಗರ್. ಹಲವು ಕೇಂದ್ರ ಸಚಿವರು ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರೊ. ಸ್ವಾಮಿನಾಥನ್ ಅವರೊಂದಿಗೆ ಸಮಾಲೋಚಿಸಿ ಮಣ್ಣಿನ ಆರೋಗ್ಯ ಕಾರ್ಡ್ ಉಪಕ್ರಮ ಆರಂಭಿಸಿದನ್ನು ಸ್ಮರಿಸಿದರು.

ಪ್ರೊ. ಸ್ವಾಮಿನಾಥನ್ ಅವರ ಬದ್ಧತೆ ಮತ್ತು ಸಮರ್ಪಣಾ ಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಅವರನ್ನು ಕೇವಲ ಕೃಷಿ ವಿಜ್ಞಾನಿಯಷ್ಟೇ ಅಲ್ಲ- ‘ಕೃಷಿಕರ ವಿಜ್ಞಾನಿ’ಎಂದು ಬಣ್ಣಿಸಿದರು.

ಪ್ರೊ.ಸ್ವಾಮಿನಾಥನ್ ಅವರ ವಿಶೇಷತೆ ಎಂದರೆ, ಅವರ ಕಾರ್ಯ ಪ್ರಾಯೋಗಿಕ ವಾಸ್ತವತೆಯಲ್ಲಿ ನೆಲೆಯಾಗಿದೆ ಎಂದು ಪ್ರಧಾನಿ ತಿಳಿಸಿದರು. ಅವರು ಪ್ರೊ. ಸ್ವಾಮಿನಾಥನ್ ಅವರ ಸರಳತೆಯನ್ನು ಪ್ರಶಂಸಿಸಿದರು.

ಕೃಷಿ ವಲಯದಲ್ಲಿ ಇಂದು ಇರುವ ಸವಾಲುಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಕೃಷಿಯಲ್ಲಿನ ಯಶಸ್ಸನ್ನು ಪೂರ್ವ ಭಾರತಕ್ಕೂ ವಿಸ್ತರಿಸುವ ಅಗತ್ಯವಿದೆ ಎಂದರು. ವೈಜ್ಞಾನಿಕ ಮತ್ತು ತಾಂತ್ರಿಕ ಮಧ್ಯಸ್ಥಿಕೆ ಇದರ ಸಾಕಾರಕ್ಕೆ ಅಗತ್ಯ ಎಂದರು.

ಆಧುನಿಕ ವೈಜ್ಞಾನಿಕ ಪದ್ಧತಿಗಳು ಮತ್ತು ಸಾಂಪ್ರದಾಯಿಕ ಕೃಷಿ ಜ್ಞಾನದ ಸಮ್ಮಿಲನ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಪ್ರಧಾನಿ ತಿಳಿಸಿದರು. ಕೆಲವು ರಾಜ್ಯಗಳ ಉದಾಹರಣೆ ನೀಡಿದ ಭಾರತದ ಪ್ರತಿಯೊಂದು ಜಿಲ್ಲೆಯೂ ತನ್ನದೇ ಸ್ವಂತ ‘ಕೃಷಿ –ಗುರುತು’ ಹೊಂದಿರಬೇಕು ಎಂದರು. ಇದು ಮಾರುಕಟ್ಟೆ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಕೈಗಾರಿಕಾ ಕ್ಲಸ್ಟರ್ ಗಳ ರೀತಿಯಲ್ಲೇ ಕೃಷಿ ಕ್ಲಸ್ಟರ್ ಗಳ ಅಭಿವೃದ್ಧಿಗೆ ನೆರವಾಗುತ್ತದೆ ಎಂದರು.

2022ರಹೊತ್ತಿಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಗುರಿಯ ಬಗ್ಗೆ ಮಾತನಾಡಿದ ಪ್ರಧಾನಿ, ಇದಕ್ಕೆ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಗುರಿಯಾಧಾರಿತ ನಿಲುವಿನ ಅಗತ್ಯವಿದೆ ಎಂದರು. ಪ್ರಧಾನಮಂತ್ರಿ ಫಸಲು ವಿಮೆ ಯೋಜನೆಗೆ ಹಿಂದಿನ ಎಲ್ಲ ಯೋಜನೆಗಳಿಗಿಂತ ರೈತರಲ್ಲಿ ಹೆಚ್ಚಿನ ಸ್ವೀಕಾರ ಕಂಡು ಬರುತ್ತಿದೆ ಎಂದು ಸಂತೃಪ್ತಿಯಿಂದ ಉಲ್ಲೇಖಿಸಿದರು. ಇದು ರೈತರಿಗೆ ನಿರೀಕ್ಷಿತ ಅಪಾಯ ಎದುರಿಸುವ ಶಕ್ತಿ ನೀಡುತ್ತದೆ ಮತ್ತು ಪ್ರಯೋಗಾಲಯದಿಂದ ಭೂಮಿಗೆ ನಾವಿನ್ಯ ಪ್ರಕ್ರಿಯೆ ಕೈಗೊಳ್ಳುವ ಅವಕಾಶ ನೀಡುತ್ತದೆ ಎಂದರು.

ಡಾ. ಎಂ.ಎಸ್. ಸ್ವಾಮಿನಾಥನ್ ಅವರು ಪ್ರಧಾನಮಂತ್ರಿಯವರಾಡಿದ ಮಾತುಗಳಿಗೆ ಧನ್ಯವಾದ ಅರ್ಪಿಸಿದರು, ಮತ್ತು ಅವರ ದೃಷ್ಟಿಕೋನವನ್ನು ಪ್ರಶಂಸಿಸಿದರು. ತಂತ್ರಜ್ಞಾನ ಮತ್ತು ಸಾರ್ವಜನಿಕ ನೀತಿಯ ನಡುವೆ ಹೊಂದಾಣಿಕೆಯ ಮಹತ್ವನ್ನು ಅವರು ಪ್ರತಿಪಾದಿಸಿದರು.

***

AKT/SH