Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಂಜಿನಿಯರ್‌ಗಳ ದಿನದಂದು ಎಂಜಿನಿಯರ್‌ಗಳಿಗೆ ಶುಭ ಕೋರಿದ ಪ್ರಧಾನಮಂತ್ರಿ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಂಜಿನಿಯರ್‌ಗಳ ದಿನದಂದು ಎಂಜಿನಿಯರ್‌ಗಳಿಗೆ ಶುಭಾಶಯ ಕೋರಿದ್ದಾರೆ. ಎಂಜಿನಿಯರ್‌ಗಳ ದಿನದಂದು ಸರ್ ಎಂ. ವಿಶ್ವೇಶ್ವರಯ್ಯನವರ ಅದ್ಭುತ ಕೊಡುಗೆಯನ್ನು ಶ್ರೀ ಮೋದಿಯವರು ಸ್ಮರಿಸಿದ್ದಾರೆ.

ಈ ಕುರಿತು ಅವರು ಸರಣಿ ಟ್ವೀಟ್‌ ಮಾಡಿದ್ದಾರೆ. 

“ಎಲ್ಲಾ ಎಂಜಿನಿಯರ್‌ಗಳಿಗೆ #EngineersDayಶುಭಾಶಯಗಳು. ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ನುರಿತ ಮತ್ತು ಪ್ರತಿಭಾವಂತ ಎಂಜಿನಿಯರ್‌ಗಳ ಸಮೂಹವನ್ನು ಹೊಂದಿರುವುದು ನಮ್ಮ ರಾಷ್ಟ್ರದ ಅದೃಷ್ಟವಾಗಿದೆ. ನಮ್ಮ ಸರ್ಕಾರವು ಹೆಚ್ಚಿನ ಎಂಜಿನಿಯರಿಂಗ್ ಕಾಲೇಜುಗಳನ್ನು ನಿರ್ಮಿಸುವುದು ಸೇರಿದಂತೆ ಎಂಜಿನಿಯರಿಂಗ್ ಅಧ್ಯಯನಕ್ಕಾಗಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕೆಲಸ ಮಾಡುತ್ತಿದೆ.” ಎಂದು ಪ್ರಧಾನಿಯವರು ಹೇಳಿದ್ದಾರೆ.

#EngineersDay ಸಂದರ್ಭದಲ್ಲಿ, ನಾವು ಸರ್ ಎಂ. ವಿಶ್ವೇಶ್ವರಯ್ಯನವರ ಅದ್ಭುತ ಕೊಡುಗೆಯನ್ನು ಸ್ಮರಿಸುತ್ತೇವೆ. ಮುಂದಿನ ತಲೆಮಾರುಗಳ ಭವಿಷ್ಯದ ಎಂಜಿನಿಯರ್‌ಗಳು ತಮ್ಮನ್ನು ತಾವು ಗುರುತಿಸಿಕೊಳ್ಳಲು ವಿಶ್ವೇಶ್ವರಯ್ಯನವರು ಸ್ಫೂರ್ತಿ ನೀಡುತ್ತಿರಲಿ. ನಾನು ಈ ವಿಷಯದ ಬಗ್ಗೆ ಮಾತನಾಡಿದ ಹಿಂದಿನ #MannKiBaatಕಾರ್ಯಕ್ರಮದ ತುಣುಕನ್ನು ಸಹ ಹಂಚಿಕೊಳ್ಳುತ್ತಿದ್ದೇನೆ.” ಎಂದು ಪ್ರಧಾನಿಯವರು ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

*****