ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜ್ಯಸಭೆಯಲ್ಲಿ ಉಪ ರಾಷ್ಟ್ರಪತಿ ಶ್ರೀ ಹಮೀದ್ ಅನ್ಸಾರಿ ಅವರಿಗೆ ಬೀಳ್ಕೊಡುವ ಸಂದರ್ಭದಲ್ಲಿ ಇತರ ಸದಸ್ಯರ ಜೊತೆ ತಾವೂ ಭಾಗಿಯಾದರು. ಶ್ರೀ ಹಮೀದ್ ಅನ್ಸಾರಿ ಅವರ ಕುಟುಂಬ ಸಾರ್ವಜನಿಕ ಜೀವನದಲ್ಲಿ 100 ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದೆ ಎಂದರು. ಉಪರಾಷ್ಟ್ರಪತಿಯವರು ವೃತ್ತಿಪರ ರಾಜತಾಂತ್ರಿಕರಾಗಿದ್ದಾರೆ. ಹಲವು ಸಂದರ್ಭಗಳಲ್ಲಿ ತಾವು, ಉಪರಾಷ್ಟ್ರಪತಿಯವರ ರಾಜತಾಂತ್ರಿಕ ಒಳನೋಟದ ಲಾಭ ಪಡೆದಿದ್ದಾಗಿ ಹೇಳಿದರು.
ಪ್ರಧಾನಮಂತ್ರಿಯವರು ಶ್ರೀ ಹಮೀದ್ ಅನ್ಸಾರಿ ಅವರಿಗೆ ಶುಭಾಶಯಗಳನ್ನು ಸಲ್ಲಿಸಿದರು.