Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉದಯ್ ಪುರದಲ್ಲಿ ಹಲವು ಪ್ರಮುಖ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ ಪ್ರಧಾನಿ; ಪ್ರತಾಪ್ ಗೌರವ ಕೇಂದ್ರಕ್ಕೆ ಭೇಟಿ

ಉದಯ್ ಪುರದಲ್ಲಿ  ಹಲವು ಪ್ರಮುಖ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ ಪ್ರಧಾನಿ; ಪ್ರತಾಪ್ ಗೌರವ ಕೇಂದ್ರಕ್ಕೆ ಭೇಟಿ

ಉದಯ್ ಪುರದಲ್ಲಿ  ಹಲವು ಪ್ರಮುಖ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ ಪ್ರಧಾನಿ; ಪ್ರತಾಪ್ ಗೌರವ ಕೇಂದ್ರಕ್ಕೆ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ಉದಯ್ಪುರದಲ್ಲಿ ಹಲವು ಪ್ರಮುಖ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ತಾವು ಮೇವಾರ್ ನ “ವೀರಭೂಮಿ”ಯಲ್ಲಿ ಇರುವುದು ತಮಗೆ ಹರ್ಷ ತಂದಿದೆ ಎಂದರು.

ಪ್ರಕೃತಿ ವಿಕೋಪಗಳಿಂದ ಬಾಧಿತರಾಗಿರುವ ಜನರಿಗೆ ಭರವಸೆ ನೀಡಿದ ಪ್ರಧಾನಮಂತ್ರಿಯವರು, ಕೇಂದ್ರ ಸರ್ಕಾರ ಸಂಕಷ್ಟದ ಸಂದರ್ಭದಲ್ಲಿ ನಿಮ್ಮೊಂದಿಗೆ ನಿಲ್ಲುತ್ತದೆ ಎಂದರು. ಜನರು ಈ ಸವಾಲಿನಿಂದ ಹೊರಬರುತ್ತಾರೆ ಮತ್ತು ಇನ್ನೂ ಹೆಚ್ಚಿನ ಹುರುಪಿನಿಂದ ಮುಂದುವರಿಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಒಂದು ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಇಂದು ಉದ್ಘಾಟಿಸಲಾಗಿದೆ ಇಲ್ಲವೇ ಚಾಲನೆ ನೀಡಲಾಗಿದೆ (ಶಂಕುಸ್ಥಾಪನೆ ನೆರವೇರಿಸಲಾಗಿದೆ) ಎಂದು ಪ್ರಧಾನಿ ಹೇಳಿದರು.

ದೇಶದ ಪ್ರಗತಿಗೆ ಮೂಲಸೌಕರ್ಯ ಯೋಜನೆಗಳು ಮಹತ್ವದ್ದು ಎಂದು ಪ್ರಧಾನಿ ಹೇಳಿದರು. ಭಾರತವು ಇನ್ನು ಮೂಲಸೌಕರ್ಯ ಯೋಜನೆಗಳಲ್ಲಿ ಅದರಲ್ಲೂ ಸಂಪರ್ಕ ಯೋಜನೆಯಲ್ಲಿ ವಿಳಂಬವನ್ನು ಸಹಿಸುವುದಿಲ್ಲ ಎಂದು ಹೇಳಿದರು. ರಸ್ತೆಯಂಥ ಯೋಜನೆಗಳು ಜನರ ಬದುಕಿನಲ್ಲಿ ಹೊಸ ಚೈತನ್ಯ ತುಂಬುತ್ತವೆ ಎಂದು ಪ್ರಧಾನಿ ಹೇಳಿದರು.

ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಆರಂಭಿಸಿದ್ದ ಸುವರ್ಣ ಚಥುಷ್ಪಥ ಹೆದ್ದಾರಿ ಯೋಜನೆಯನ್ನು ಸ್ಮರಿಸಿದ ಪ್ರಧಾನಿಯವರು, ಇದು ರೈತರಿಗೆ ಮಾರುಕಟ್ಟೆ ತಲುಪಲು ಸಹಕಾರಿಯಾಯಿತು ಎಂದರು. ರಾಜಾಸ್ಥಾನವು ಉತ್ತಮ ಮೂಲಸೌಕರ್ಯ ಸಂಪರ್ಕದೊಂದಿಗೆ ಪ್ರವಾಸೋದ್ಯಮದಿಂದ ಪ್ರಯೋಜನ ಪಡೆಯಲಿದ್ದು, ಅದು ಉದ್ಯೋಗಾವಕಾಶ ಕಲ್ಪಿಸಲಿದೆ ಎಂದರು.

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಬಗ್ಗೆ ಮಾತನಾಡಿದ ಪ್ರಧಾನಿಯವರು, ಈ ಯೋಜನೆಯಡಿ ಎಲ್.ಪಿ.ಜಿ. ಸಂಪರ್ಕಗಳನ್ನು ಗ್ರಾಮೀಣ ಕುಟುಂಬಗಳಿಗೆ ಒದಗಿಸಲಾಗುತ್ತಿದೆ, ಇದು ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದರು.

ಜಿಎಸ್ಟಿಯು ಅಂತಾರಾಜ್ಯ ಗಡಿಯಲ್ಲಿ ಗಂಟೆಗಟ್ಟಲೆ ಕಾಯುವ ಸಮಸ್ಯೆ ಪರಿಹರಿಸಿದ್ದು, ದೇಶದ ಆರ್ಥಿಕತೆಗೆ ದೊಡ್ಡ ಲಾಭ ತಂದಿದೆ ಎಂದು ಪ್ರಧಾನಿಯವರು ಹೇಳಿದರು.

ನಂತರ ಪ್ರಧಾನಿಯವರು ಮೇವಾರ್ ನ ಅಂದಿನ ಶ್ರೇಷ್ಠ ದೊರೆ ಮಹಾರಾಣಾ ಪ್ರತಾಪ್ ಅವರ ಸಾಧನೆ, ಶೌರ್ಯ ಮತ್ತು ಜೀವನ ಬಿಂಬಿಸುವ ಪ್ರತಾಪ್ ಗೌರವ್ ಕೇಂದ್ರಕ್ಕೆ ಭೇಟಿ ನೀಡಿದರು.