Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ಪಾದನೆ ಆಧರಿತ ಪ್ರೋತ್ಸಾಹಧನ ಯೋಜನೆಯಾದ ʻಅತ್ಯಧಿಕ ಕಾರ್ಯದಕ್ಷತೆಯ ಸೋಲಾರ್ ಫೋಟೊ ವೆಹಿಕಲ್ ಮಾಡ್ಯೂಲ್ ಕುರಿತಾದ ರಾಷ್ಟ್ರೀಯ ಯೋಜನೆʼಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ


ಉತ್ಪಾದನೆ ಆಧರಿತ ಪ್ರೋತ್ಸಾಹಧನ (ಪಿಎಲ್ಐ) ಯೋಜನೆಯಾದ  ʻಅತ್ಯಧಿಕ ಕಾರ್ಯದಕ್ಷತೆಯ ಸೋಲಾರ್ ಫೋಟೊ ವೆಹಿಕಲ್ ಮಾಡ್ಯೂಲ್ ಕುರಿತಾದ ರಾಷ್ಟ್ರೀಯ ಯೋಜನೆʼಯನ್ನು ಅನುಷ್ಠಾನಗೊಳಿಸುವ ಸಂಬಂಧ ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯು ಅನುಮೋದಿಸಿದೆ. ಅತ್ಯಧಿಕ ಕಾರ್ಯದಕ್ಷತೆಯ ಸೋಲಾರ್ ಫೋಟೊ ವೆಹಿಕಲ್ ಮಾಡ್ಯೂಲ್ಗಳಲ್ಲಿ ಗಿಗಾ ವ್ಯಾಟ್(ಜಿಡಬ್ಲ್ಯೂಮಟ್ಟದಲ್ಲಿ ಉತ್ಪಾದನಾ ಸಾಮರ್ಥ್ಯ ಸಾಧಿಸುವುದು ಯೋಜನೆಯ ಗುರಿಯಾಗಿದ್ದು, ಇದಕ್ಕಾಗಿ 4,500 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಪ್ರಸ್ತುತ ಸೋಲಾರ್ ಪಿವಿ ಕೋಶಗಳು ಮತ್ತು ಮಾಡ್ಯೂಲ್ಗಳ ದೇಶೀಯ ಉತ್ಪಾದನಾ ವಲಯದ ಸಾಮರ್ಥ್ಯವು ಸೀಮಿತವಾಗಿರುವ ಕಾರಣ, ಸೌರಶಕ್ತಿಯ ಸಾಮರ್ಥ್ಯ ಹೆಚ್ಚಳಕ್ಕೆ ವಿದೇಶದಿಂದ ಆಮದು ಮಾಡಿಕೊಳ್ಳಲಾದ ಸೋಲಾರ್ ಪಿವಿ ಕೋಶಗಳು ಮತ್ತು ಮಾಡ್ಯೂಲ್ಗಳ ಮೇಲೆ ಅತಿಯಾಗಿ ಅವಲಂಬನೆಯಿದೆ. ಅತ್ಯಧಿಕ ಕಾರ್ಯದಕ್ಷತೆಯ ಸೋಲಾರ್ ಪಿವಿ ಮಾಡ್ಯೂಲ್ಗಳ ರಾಷ್ಟ್ರೀಯ ಯೋಜನೆಯು ವಿದ್ಯುತ್ನಂತಹ ಆಯಕಟ್ಟಿನ ಕ್ಷೇತ್ರಗಳಲ್ಲಿ ಆಮದಿನ ಮೇಲೆ ಅವಲಂಬನೆಯನ್ನು ತಗ್ಗಿಸುತ್ತದೆ.

ಪಾರದರ್ಶಕ, ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಸೋಲಾರ್ ಪಿವಿ ಉತ್ಪಾದಕರನ್ನು ಆಯ್ಕೆ ಮಾಡಲಾಗುವುದು. ಸೋಲಾರ್ ಪಿವಿ ಉತ್ಪಾದನಾ ಘಟಕಗಳ ಕಾರ್ಯಾರಂಭದ ಬಳಿಕ, ಅತ್ಯಧಿಕ ಕಾರ್ಯದಕ್ಷತೆಯ ಸೋಲಾರ್ ಪಿವಿ ಮಾಡ್ಯೂಲ್ಗಳ ಮಾರಾಟದ ಮೇಲೆ  ಮುಂದಿನ 5 ವರ್ಷಗಳಿಗೆ ಉತ್ಪಾದನೆ ಆಧರಿತ ಪ್ರೋತ್ಸಾಹ ಧನವನ್ನು ವಿತರಿಸಲಾಗುವುದು. ಸೋಲಾರ್ ಪಿವಿ ಮಾಡ್ಯೂಲ್ಗಳ ಅತ್ಯಧಿಕ ಕಾರ್ಯದಕ್ಷತೆಗಾಗಿ ಉತ್ಪಾದಕರಿಗೆ ಬಹುಮಾನ ನೀಡಲಾಗುವುದು. ಮೂಲಕ ಮಾಡ್ಯೂಲ್ನ ಕಾರ್ಯದಕ್ಷತೆ ಹಾಗೂ ಮೌಲ್ಯವರ್ಧನೆ ಹೆಚ್ಚಿದಂತೆ ಉತ್ಪಾದನೆ ಆಧರಿತ ಪ್ರೋತ್ಸಾಹಧನದ ಮೊತ್ತವೂ ಹೆಚ್ಚಾಗುತ್ತದೆ.

ಯೋಜನೆಯ ನಿರೀಕ್ಷಿತ ಪ್ರಯೋಜನಳು ಹೀಗಿವೆ:

i.          ಸಂಯೋಜಿತ ಸೋಲಾರ್ ಪಿವಿ ಉತ್ಪಾದನಾ ಘಟಕಗಳಿಗೆ ಹೆಚ್ಚುವರಿ 10,000 ಮೆ.ವ್ಯಾ. ಸಾಮರ್ಥ್ಯ,

ii.         ಸೋಲಾರ್ ಪಿವಿ ಉತ್ಪಾದನಾ ಯೋಜನೆಗಳಿಗೆ ಸುಮಾರು 17,200 ರೂ.ಗಳ  ನೇರ ಹೂಡಿಕೆ,

iii.        ʻಸಾಮಗ್ರಿಗಳ ಸಮತೋಲನʼಕ್ಕಾಗಿ ಐದು ವರ್ಷಗಳ ಅವಧಿಯಲ್ಲಿ.17,500 ಕೋಟಿ ರೂ. ಬೇಡಿಕೆ,

iv.        ಸುಮಾರು 30,000 ಮಂದಿಗೆ ನೇರ ಉದ್ಯೋಗ ಮತ್ತು ಸುಮಾರು 1,20,000 ಜನರಿಗೆ ಪರೋಕ್ಷ ಉದ್ಯೋಗಾವಕಾಶ,

v.         ಪ್ರತಿವರ್ಷ ಸುಮಾರು17,500 ಕೋಟಿ ರೂ.ಗಳ ರಫ್ತು ಪರ್ಯಾಯ, ಮತ್ತು

vi.        ಸೋಲಾರ್ ಪಿವಿ ಮಾಡ್ಯೂಲ್ಗಳಲ್ಲಿ ಅತ್ಯಧಿಕ ದಕ್ಷತೆಗಾಗಿ ಸಂಶೋಧನೆಗೆ ಉತ್ತೇಜನ.

***