Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಿಸಾನ್ ಸಮ್ಮಾನ್ ಸಮ್ಮೇಳನ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಿಸಾನ್ ಸಮ್ಮಾನ್ ಸಮ್ಮೇಳನ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿಂದು ಕಿಸಾನ್ ಸಮ್ಮಾನ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು.  ಸಮಾರಂಭದಲ್ಲಿ ಅವರು ಸುಮಾರು 9.26 ಕೋಟಿ ರೈತ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ 20,000 ಕೋಟಿ ರೂ. ಮೊತ್ತದ ಪ್ರಧಾನ ಮಂತ್ರಿಗಳ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್)ಯ 17ನೇ ಕಂತು ವಿತರಿಸಿದರು. ಕಾರ್ಯಕ್ರಮದಲ್ಲಿ ಅವರು ಸ್ವಸಹಾಯ ಗುಂಪು(ಎಸ್‌ಎಚ್‌ಜಿ)ಗಳ 30,000ಕ್ಕೂ ಹೆಚ್ಚು ಮಹಿಳೆಯರಿಗೆ ‘ಕೃಷಿ ಸಖಿ’ ಪ್ರಮಾಣಪತ್ರಗಳನ್ನು ವಿತರಿಸಿದರು. ದೇಶದೆಲ್ಲೆಡೆಯ ರೈತರನ್ನು ತಂತ್ರಜ್ಞಾನದ ಮೂಲಕ ಕಾರ್ಯಕ್ರಮಕ್ಕೆ ಸಂಪರ್ಕ ಕಲ್ಪಿಸಲಾಗಿತ್ತು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಲೋಕಸಭೆ ಚುನಾವಣೆಯಲ್ಲಿ ಕಾಶಿ ಕ್ಷೇತ್ರದಿಂದ ಗೆದ್ದ ನಂತರ ತಮ್ಮ ಮೊದಲ ಭೇಟಿಯಲ್ಲಿ ಕಾಶಿಯ ಜನತೆಗೆ ಶುಭಾಶಯ ಕೋರಿದರು. ಸತತ 3ನೇ ಬಾರಿಗೆ ಆಯ್ಕೆ ಮಾಡಿದ್ದಕ್ಕಾಗಿ ಕ್ಷೇತ್ರದ ಜನತೆಗೆ ಧನ್ಯವಾದ ಅರ್ಪಿಸಿದರು. “ಈಗ ಗಂಗಾ ಮಾತೆಯೂ ನನ್ನನ್ನು ದತ್ತು ಪಡೆದಂತೆ ತೋರುತ್ತಿದೆ, ನಾನು ಕಾಶಿಗೆ ಸ್ಥಳೀಯನಾಗಿದ್ದೇನೆ” ಎಂದು ಕೃತಜ್ಞತಾ ಭಾವದಿಂದ ಪ್ರಧಾನಿ ಮೋದಿ ಹೇಳಿದರು.

18ನೇ ಲೋಕಸಭೆಗೆ ಇತ್ತೀಚೆಗೆ ಮುಕ್ತಾಯಗೊಂಡ ಸಾರ್ವತ್ರಿಕ ಚುನಾವಣೆಯು ಭಾರತದ ಪ್ರಜಾಪ್ರಭುತ್ವದ ಅಗಾಧತೆ, ಸಾಮರ್ಥ್ಯಗಳು, ಸಮಗ್ರತೆ ಮತ್ತು ಬೇರುಗಳನ್ನು ಸಂಕೇತಿಸಿತು ಮತ್ತು ಅದನ್ನು ಜಗತ್ತಿಗೆ ಪ್ರಸ್ತುತಪಡಿಸಿತು. ಈ ಚುನಾವಣೆಯಲ್ಲಿ 64 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಿದರು. ಇಂತಹ ಬೃಹತ್ ಪ್ರಮಾಣದ ಚುನಾವಣೆ ಬೇರೆಲ್ಲೂ ನಡೆಯುವುದಿಲ್ಲ, ನಾಗರಿಕರ ಅಪಾರ ಭಾಗವಹಿಸುವಿಕೆಗೆ ಇದು ಸಾಕ್ಷಿಯಾಯಿತು. ಇಟಲಿಯಲ್ಲಿ ನಡೆದ ಜಿ-7 ಶೃಂಗಸಭೆಗೆ ಇತ್ತೀಚೆಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ಪ್ರಧಾನಿ, ಭಾರತದ ಮತದಾರರ ಸಂಖ್ಯೆ ಎಲ್ಲಾ ಜಿ-7 ರಾಷ್ಟ್ರಗಳ ಮತದಾರರ ಸಂಖ್ಯೆಗಿಂತ ಒಂದೂವರೆ ಪಟ್ಟು ಹೆಚ್ಚು ಮತ್ತು ಐರೋಪ್ಯ ಒಕ್ಕೂಟದ ಎಲ್ಲಾ ಸದಸ್ಯ ರಾಷ್ಟ್ರಗಳ ಮತದಾರರ ಸಂಖ್ಯೆಗಿಂತ ಎರಡೂವರೆ ಪಟ್ಟು ಹೆಚ್ಚು ಎಂದು ಗಮನ ಸೆಳೆದರು.. 31 ಕೋಟಿಗೂ ಹೆಚ್ಚು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಇದು ಒಂದೇ ರಾಷ್ಟ್ರದಲ್ಲಿ ವಿಶ್ವದ ಅತಿ ಹೆಚ್ಚು ಮಹಿಳಾ ಮತದಾರರಾಗಿದ್ದಾರೆ. ಇದು ಅಮೆರಿಕದ ಸಂಪೂರ್ಣ ಜನಸಂಖ್ಯೆಗೆ ಹತ್ತಿರದಲ್ಲಿದೆ. “ಭಾರತದ ಪ್ರಜಾಪ್ರಭುತ್ವದ ಶಕ್ತಿ ಮತ್ತು ಸೌಂದರ್ಯವು ಇಡೀ ಜಗತ್ತನ್ನು ಆಕರ್ಷಿಸುವ ಜತೆಗೆ, ಗಾಢ ಪ್ರಭಾವವನ್ನು ಬೀರುತ್ತದೆ”. ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗವಹಿಸಿ ಅದನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಿದ್ದಕ್ಕಾಗಿ ವಾರಾಣಸಿಯ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. “ವಾರಾಣಸಿಯ ಜನರು ಕೇವಲ ಸಂಸತ್ತಿನ ಸದಸ್ಯರನ್ನು ಆಯ್ಕೆ ಮಾಡಿಲ್ಲ, ಅವರು ಸ್ವತಃ ಪ್ರಧಾನ ಮಂತ್ರಿಯನ್ನೇ ಆಯ್ಕೆ ಮಾಡಿದ್ದಾರೆ” ಎಂದು ಮೋದಿ ಕೃತಜ್ಞತೆ ಸಲ್ಲಿಸಿದರು.

ಚುನಾಯಿತ ಸರ್ಕಾರವನ್ನು 3ನೇ ಬಾರಿಗೆ ಆಯ್ಕೆ ಮಾಡಿರುವ ಜನಾದೇಶವನ್ನು ‘ಅಭೂತಪೂರ್ವ’ ಎಂದು ಬಣ್ಣಿಸದ ಪ್ರಧಾನಿ, ಇದು ಜಾಗತಿಕ ಪ್ರಜಾಪ್ರಭುತ್ವಗಳಲ್ಲಿ ಅಪರೂಪದ ಸಾಧನೆ. “ಈ ರೀತಿಯ ಹ್ಯಾಟ್ರಿಕ್ ಸಾಧನೆ ಭಾರತದಲ್ಲಿ 60 ವರ್ಷಗಳ ಹಿಂದೆ ಸಂಭವಿಸಿದೆ”. “ಭಾರತದಂತಹ ಯುವಜನರ ಆಕಾಂಕ್ಷೆಗಳು ತುಂಬಾ ಹೆಚ್ಚಿದ್ದರೆ, 10 ವರ್ಷಗಳ ಆಡಳಿತದ ನಂತರ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದೆ. ಇದು ಭಾರಿ ಗೆಲುವು ಮತ್ತು ವಿಶ್ವಾಸದ ದೊಡ್ಡ ಮತವಾಗಿದೆ. ನಿಮ್ಮ ಈ ನಂಬಿಕೆಯು ನನ್ನ ದೊಡ್ಡ ಬಂಡವಾಳವಾಗಿದೆ ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನನಗೆ ಶಕ್ತಿ ತುಂಬಿದೆ ಎಂದರು.

ಅಭಿವೃದ್ಧಿ ಹೊಂದಿದ ಭಾರತದ ಆಧಾರಸ್ತಂಭಗಳಾಗಿ ರೈತರು, ನಾರಿಶಕ್ತಿ, ಯುವಕರು ಮತ್ತು ಬಡವರಿಗೆ ತಾವು ನೀಡಿದ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ ಪ್ರಧಾನಿ, ಸರ್ಕಾರ ರಚನೆಯ ನಂತರ ಮೊದಲ ನಿರ್ಧಾರ ರೈತರು ಮತ್ತು ಬಡ ಕುಟುಂಬಗಳ ಬಗ್ಗೆಯೇ ಆಗಿದೆ ಎಂದು ನೆನಪಿಸಿಕೊಂಡರು. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಥವಾ ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿ, 3 ಕೋಟಿ ಹೆಚ್ಚುವರಿ ಕುಟುಂಬಗಳಿಗೆ ಸಂಬಂಧಿಸಿದ ಈ ನಿರ್ಧಾರಗಳು ಜನರಿಗೆ ಸಹಾಯ ಮಾಡುತ್ತದೆ ಎಂದು ಪ್ರಧಾನ ಮಂತ್ರಿ ಹೇಳಿದರು.

ತಂತ್ರಜ್ಞಾನದ ಮೂಲಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೈತರನ್ನು ಪ್ರಧಾನ ಮಂತ್ರಿ ಅವರು ಅಭಿನಂದಿಸಿದರು. ಕೋಟ್ಯಂತರ ರೈತರ ಖಾತೆಗೆ 20,000 ಕೋಟಿ ರೂಪಾಯಿ ಜಮೆಯಾಗಿದೆ. ಕೃಷಿ ಸಖಿ ಉಪಕ್ರಮವು 3 ಕೋಟಿ ‘ಲಕ್ಷಾಧಿಪತಿ ದೀದಿ’ಯರನ್ನು ಸೃಷ್ಟಿಸುವ ದಿಕ್ಕಿನಲ್ಲಿ ದಿಟ್ಟ ಹೆಜ್ಜೆಯಾಗಿದೆ. ಈ ಉಪಕ್ರಮವು ಫಲಾನುಭವಿ ಮಹಿಳೆಯರಿಗೆ ಆದಾಯದ ಮೂಲದ ಘನತೆ ಮತ್ತು ಭರವಸೆಯನ್ನು ಖಚಿತಪಡಿಸುತ್ತಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.

“ಪ್ರಧಾನ ಮಂತ್ರಿಗಳ ಕಿಸಾನ್ ಸಮ್ಮಾನ್ ನಿಧಿ ವಿಶ್ವದ ಅತಿದೊಡ್ಡ ನೇರ ನಗದು ವರ್ಗಾವಣೆ ಯೋಜನೆಯಾಗಿ ಹೊರಹೊಮ್ಮಿದೆ”, 3.25 ಲಕ್ಷ ಕೋಟಿಗಿಂತ ಹೆಚ್ಚಿನ ವಾರಣಾಸಿಯಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ 700 ಕೋಟಿ ರೂ. ವರ್ಗಾಯಿಸಲಾಗಿದೆ.. ಅರ್ಹ ಫಲಾನುಭವಿಗಳಿಗೆ ಪ್ರಯೋಜನಗಳನ್ನು ತಲುಪಿಸುವಲ್ಲಿ ತಂತ್ರಜ್ಞಾನದ ಬಳಕೆ ಶ್ಲಾಘನೀಯವಾಗಿದೆ. 1 ಕೋಟಿಗೂ ಹೆಚ್ಚು ರೈತರು ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿಸಿಕೊಳ್ಳಲು ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ ಸಾಧ್ಯವಾಗಿಸಿದೆ. ರೈತರ ಪ್ರವೇಶ ಹೆಚ್ಚಿಸಲು ನಿಯಮಗಳು ಮತ್ತು ನಿಬಂಧನೆಗಳನ್ನು ಸರಳೀಕರಿಸಲಾಗಿದೆ. “ಉದ್ದೇಶಗಳು ಮತ್ತು ನಂಬಿಕೆಗಳು ಸರಿಯಾದ ಸ್ಥಳದಲ್ಲಿದ್ದಾಗ ರೈತರ ಕಲ್ಯಾಣಕ್ಕೆ ಸಂಬಂಧಿಸಿದ ಕೆಲಸಗಳು ವೇಗವಾಗಿ ನಡೆಯುತ್ತವೆ” ಎಂದು ಶ್ರೀ ಮೋದಿ ಹೇಳಿದರು.

21ನೇ ಶತಮಾನದಲ್ಲಿ ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವಲ್ಲಿ ಕೃಷಿ-ಪರಿಸರ ವ್ಯವಸ್ಥೆಯ ಪಾತ್ರವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳಲ್ಲಿ ಸ್ವಾವಲಂಬನೆ ಸಾಧಿಸುವ ಜಾಗತಿಕ ದೃಷ್ಟಿಕೋನ ಅರ್ಥಪೂರ್ಣ. ಭಾರತವು ಅಗ್ರಗಣ್ಯ ಕೃಷಿ ರಫ್ತುದಾರನಾಗುವ ಅಗತ್ಯವಿದೆ. ಈ ಪ್ರದೇಶದ ಸ್ಥಳೀಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯನ್ನು ಕಂಡುಕೊಳ್ಳುತ್ತಿವೆ. ಪ್ರತಿ ಜಿಲ್ಲೆಯ “ಒಂದು ಜಿಲ್ಲೆ ಒಂದು ಉತ್ಪನ್ನ” ಯೋಜನೆ ಮತ್ತು ರಫ್ತು ಕೇಂದ್ರಗಳ ಮೂಲಕ ರಫ್ತುಗೆ ಉತ್ತೇಜನ ದೊರೆಯುತ್ತಿದೆ. “ವಿಶ್ವಾದ್ಯಂತ ಪ್ರತಿ ಮನೆಯ ಊಟದ ಮೇಜಿನ ಮೇಲೆ ಕನಿಷ್ಠ ಒಂದು ಭಾರತೀಯ ಆಹಾರ ಉತ್ಪನ್ನ ಇರಬೇಕು ಎಂಬುದು ನನ್ನ ಕನಸು” ಎಂದು ಅವರು ಕೃಷಿಯಲ್ಲೂ ಶೂನ್ಯ ದೋಷ-ಶೂನ್ಯ ಪರಿಣಾಮದ ಮಂತ್ರವನ್ನು ಒತ್ತಿ ಹೇಳಿದರು. ಕಿಸಾನ್ ಸಮೃದ್ಧಿ ಕೇಂದ್ರಗಳ ಮೂಲಕ ಸಿರಿಧಾನ್ಯ, ಗಿಡಮೂಲಿಕೆ ಉತ್ಪನ್ನಗಳು ಮತ್ತು ನೈಸರ್ಗಿಕ ಕೃಷಿಗೆ ಬೆಂಬಲ ನೀಡುವ ಬೃಹತ್ ಜಾಲವನ್ನು ರಚಿಸಲಾಗುತ್ತಿದೆ ಎಂದು ಅವರು ಹೇಳಿದರು.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಉಪಸ್ಥಿತಿಯನ್ನು ಗಮನಿಸಿದ ಪ್ರಧಾನ ಮಂತ್ರಿ, ಕೃಷಿಯಲ್ಲಿ ಅವರ ಪ್ರಾಮುಖ್ಯತೆ ಮತ್ತು ಬೆಂಬಲ ಅತ್ಯಗತ್ಯ. ಅವರ ಕೊಡುಗೆಗಳನ್ನು ಹೆಚ್ಚಿಸಲು ಕೃಷಿಯ ವ್ಯಾಪ್ತಿ ವಿಸ್ತರಿಸಬೇಕಿದೆ. ಡ್ರೋನ್ ದೀದಿ ಕಾರ್ಯಕ್ರಮದಂತೆಯೇ ಕೃಷಿ ಸಖಿ ಕಾರ್ಯಕ್ರಮವು ಈ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಪ್ರಧಾನ ಮಂತ್ರಿ ಹೈಲೈಟ್ ಮಾಡಿದರು. ಆಶಾ ಕಾರ್ಯಕರ್ತೆಯರು ಮತ್ತು ಬ್ಯಾಂಕ್ ಸಖಿಗಳಾಗಿ ಮಹಿಳೆಯರ ಕೊಡುಗೆಯನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ, ಕೃಷಿ ಸಖಿಗಳಾಗಿ ಅವರ ಸಾಮರ್ಥ್ಯಗಳನ್ನು ಈಗ ರಾಷ್ಟ್ರವು ವೀಕ್ಷಿಸಲಿದೆ. 30,000ಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳಿಗೆ ಕೃಷಿ ಸಖಿ ಪ್ರಮಾಣಪತ್ರಗಳನ್ನು ನೀಡುವ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಪ್ರಸ್ತುತ 11 ರಾಜ್ಯಗಳಲ್ಲಿ ಜಾರಿಯಲ್ಲಿರುವ ಈ ಯೋಜನೆಯು ರಾಷ್ಟ್ರಾದ್ಯಂತ ಸಾವಿರಾರು ಸ್ವಸಹಾಯ ಸಂಘಗಳೊಂದಿಗೆ ಸಂಪರ್ಕ ಸಾಧಿಸುತ್ತದೆ ಮತ್ತು 3 ಕೋಟಿ ಲಕ್ಷಾಧಿಪತಿ ದೀದಿಗಳನ್ನು ಸೃಷ್ಟಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಕಾಶಿ ಮತ್ತು ಪೂರ್ವಾಂಚಲದ ರೈತರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊಂದಿರುವ ಕಾಳಜಿಯನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ಬನಾಸ್ ಡೇರಿ ಸಂಕುಲ್, ಕೊಳೆಯುವ ಆಹಾರ ಉತ್ಪನ್ನಗಳ ಸರಕು ಕೇಂದ್ರ ಮತ್ತು ಇಂಟಿಗ್ರೇಟೆಡ್ ಪ್ಯಾಕೇಜಿಂಗ್ ಹೌಸ್ ಇದಕ್ಕೆ ನಿದರ್ಶನ. “ಬನಾಸ್ ಡೇರಿಯು ಬನಾರಸ್ ಮತ್ತು ಸುತ್ತಮುತ್ತಲ ರೈತರು ಮತ್ತು ಜಾನುವಾರು ಸಾಕಣೆದಾರರ ಭವಿಷ್ಯವನ್ನು ಬದಲಾಯಿಸಿದೆ. ಇಂದು ಈ ಡೇರಿ ಪ್ರತಿದಿನ ಸುಮಾರು 3 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಬನಾರಸ್ ಒಂದರಲ್ಲೇ 14 ಸಾವಿರಕ್ಕೂ ಹೆಚ್ಚು ಜಾನುವಾರು ಸಾಕಣೆ ಕುಟುಂಬಗಳು ಈ ಡೇರಿಯಲ್ಲಿ ನೋಂದಣಿಯಾಗಿವೆ. ಇದೀಗ ಬನಾಸ್ ಡೇರಿ ಮುಂದಿನ ಒಂದೂವರೆ ವರ್ಷದಲ್ಲಿ ಕಾಶಿಯ 16 ಸಾವಿರ ಜಾನುವಾರು ಸಾಕಣೆದಾರರನ್ನು ಸೇರಿಸಲಿದೆ. ಬನಾಸ್ ಡೇರಿಯ ಆಗಮನದ ನಂತರ, ಬನಾರಸ್‌ನ ಅನೇಕ ಹಾಲು ಉತ್ಪಾದಕರ ಆದಾಯವು 5 ಲಕ್ಷ ರೂಪಾಯಿವರೆಗೆ ಹೆಚ್ಚಾಗಿದೆ ಎಂದರು.

ಮೀನು ಸಾಕಾಣಿಕೆದಾರರ ಆದಾಯ ಸುಧಾರಿಸಲು ಸರ್ಕಾರ ಮಾಡಿರುವ ಕೆಲಸಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿಗಳ ಮತ್ಸ್ಯ ಸಂಪದ ಯೋಜನೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಪ್ರಯೋಜನಗಳನ್ನು ಪ್ರಸ್ತಾಪಿಸಿದರು. ವಾರಾಣಸಿಯಲ್ಲಿ ಮೀನು ಸಾಕಾಣಿಕೆಯಲ್ಲಿ ತೊಡಗಿರುವವರಿಗೆ ನೆರವಾಗಲು ಚಂದೌಲಿಯಲ್ಲಿ ಸುಮಾರು 70 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಮೀನು ಮಾರುಕಟ್ಟೆ ನಿರ್ಮಾಣ ಕುರಿತು ಮಾಹಿತಿ ನೀಡಿದರು.

ವಾರಾಣಸಿಯಲ್ಲಿ ಪ್ರಧಾನ ಮಂತ್ರಿಗಳ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯು ಪ್ರವರ್ಧಮಾನಕ್ಕೆ ಬರುತ್ತಿದೆ. ಸುಮಾರು 40 ಸಾವಿರ ಸ್ಥಳೀಯ ಜನರು ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ, 2,500 ಮನೆಗಳು ಈಗಾಗಲೇ ಸೌರ ಫಲಕಗಳನ್ನು ಪಡೆದಿವೆ. 3,000 ಮನೆಗಳಿಗೆ ಈಗಾಗಲೇ ಕೆಲಸ ನಡೆಯುತ್ತಿದೆ. ಇದು ಫಲಾನುಭವಿ ಕುಟುಂಬಗಳಿಗೆ ಶೂನ್ಯ ವಿದ್ಯುತ್ ಬಿಲ್ ಮತ್ತು ಹೆಚ್ಚುವರಿ ಆದಾಯದ ಎರಡು ಪ್ರಯೋಜನಳನ್ನು ಒದಗಿಸುತ್ತಿದೆ ಎಂದರು.

ವಾರಾಣಸಿ ಮತ್ತು ಸಮೀಪದ ಹಳ್ಳಿಗಳಲ್ಲಿ ಸಂಪರ್ಕ ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ 10 ವರ್ಷಗಳಲ್ಲಿ ಮಾಡಿದ ಕೆಲಸಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ವಾರಾಣಸಿಯಲ್ಲಿ ದೇಶದ ಮೊದಲ ಸಿಟಿ ರೋಪ್‌ವೇ ಯೋಜನೆಯು ಅಂತಿಮ ಹಂತ ತಲುಪಿದೆ. ಗಾಜಿಪುರ, ಅಜಂಗಢ ಮತ್ತು ಜಾನ್‌ಪುರ ನಗರಗಳನ್ನು ಸಂಪರ್ಕಿಸುವ ರಿಂಗ್ ರಸ್ತೆ, ಪೂರ್ಣಗೊಂಡಿದೆ. ಫುಲ್ವಾರಿಯಾ ಮತ್ತು ಚೌಕಘಾಟ್‌ನ ಮೇಲ್ಸೇತುವೆಗಳು, ಕಾಶಿ, ವಾರಾಣಸಿ ಮತ್ತು ಕ್ಯಾಂಟ್ ರೈಲು ನಿಲ್ದಾಣಗಳಿಗೆ ಹೊಸ ನೋಟ, ಬಬತ್‌ಪುರ ವಿಮಾನ ನಿಲ್ದಾಣವು ವಾಯು ಸಂಚಾರ ಮತ್ತು ವ್ಯಾಪಾರವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಗಂಗಾ ಘಾಟ್‌ಗಳ ಉದ್ದಕ್ಕೂ ಅಭಿವೃದ್ಧಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಹೊಸ ಸೌಲಭ್ಯಗಳು, ನಗರದ ನವೀಕರಿಸಿದ ಕುಂಡಗಳು ಮತ್ತು ಹೊಸ ವ್ಯವಸ್ಥೆಗಳು ವಾರಾಣಸಿಯ ವಿವಿಧ ಸ್ಥಳಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಕಾಶಿಯಲ್ಲಿ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಹೊಸ ಕ್ರೀಡಾಂಗಣವು ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ಹೇಳಿದರು.

ಜ್ಞಾನದ ರಾಜಧಾನಿ ಎಂಬ ಕಾಶಿಯ ಖ್ಯಾತಿಯನ್ನು ಸ್ಮರಿಸಿದ ಪ್ರಧಾನಿ, ಪಾರಂಪರಿಕ ನಗರವು ನಗರಾಭಿವೃದ್ಧಿಯ ಹೊಸ ಕಥೆಯನ್ನು ಹೇಗೆ ಬರೆಯಬಹುದು ಎಂಬುದನ್ನು ಇಡೀ ಜಗತ್ತಿಗೆ ಕಲಿಸಿದ ಪ್ರಾಚೀನ ನಗರವಾಗಿದೆ ಎಂದು ಶ್ಲಾಘಿಸಿದರು. “ಕಾಶಿಯಲ್ಲಿ ಎಲ್ಲೆಲ್ಲೂ ಅಭಿವೃದ್ಧಿ ಹಾಗೂ ಪರಂಪರೆಯ ಮಂತ್ರ ಗೋಚರಿಸುತ್ತಿದೆ. ಈ ಬೆಳವಣಿಗೆಯು ಕೃಷಿಗೆ ಪ್ರಯೋಜನ ಒದಗಿಸುವ ಜತೆಗೆ, ತಮ್ಮ ಕೆಲಸ ಮತ್ತು ಅಗತ್ಯಗಳಿಗಾಗಿ ಕಾಶಿಗೆ ಬರುವ ಸಂಪೂರ್ಣ ಪೂರ್ವಾಂಚಲ್‌ನ ಕುಟುಂಬಗಳು ಈ ಎಲ್ಲಾ ಕೆಲಸಗಳಿಂದ ಸಾಕಷ್ಟು ಸಹಾಯ ಪಡೆಯುತ್ತಾರೆ”. “ಬಾಬಾ ವಿಶ್ವನಾಥನ ಆಶೀರ್ವಾದದೊಂದಿಗೆ, ಕಾಶಿಯ ಅಭಿವೃದ್ಧಿಯ ಈ ಹೊಸ ಸಾಹಸವು ಅಡೆತಡೆಯಿಲ್ಲದೆ ಮುಂದುವರಿಯುತ್ತದೆ” ಎಂದು ಶ್ರೀ ಮೋದಿ ಹೇಳಿದರು.

ಉತ್ತರ ಪ್ರದೇಶದ ಗವರ್ನರ್ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಶ್ರೀ ಭಗೀರಥ ಚೌಧರಿ, ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಶ್ರೀ ಕೇಶವ ಪ್ರಸಾದ್ ಮೌರ್ಯ ಮತ್ತು ಶ್ರೀ ಬ್ರಜೇಶ್ ಪಾಠಕ್ ಮತ್ತು ಉತ್ತರ ಪ್ರದೇಶ ಸರ್ಕಾರದ ಸಚಿವರು, ಇತರೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುವ ಪ್ರಧಾನ ಮಂತ್ರಿಗಳ ಕಿಸಾನ್ ನಿಧಿಯ 17ನೇ ಕಂತಿನ ಬಿಡುಗಡೆಯ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದರು. ಈ ಬದ್ಧತೆಯ ಮುಂದುವರಿಕೆಯಾಗಿ, ಪ್ರಧಾನ ಮಂತ್ರಿಗಳ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಅಡಿ, ಸುಮಾರು 9.26 ಕೋಟಿ ಫಲಾನುಭವಿ ರೈತರಿಗೆ 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ 17ನೇ ಕಂತನ್ನು ಪ್ರಧಾನ ಮಂತ್ರಿ ಅವರು ನೇರ ನಗದು ವರ್ಗಾವಣೆ ಮೂಲಕ ಬಿಡುಗಡೆ ಮಾಡಿದರು. ಇಲ್ಲಿಯವರೆಗೆ, 11 ಕೋಟಿಗೂ ಹೆಚ್ಚಿನ ಅರ್ಹ ರೈತ ಕುಟುಂಬಗಳು ಪಿಎಂ-ಕಿಸಾನ್ ಅಡಿ, 3.04 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಪ್ರಯೋಜನ ಪಡೆದಿವೆ.

ಪ್ರಧಾನ ಮಂತ್ರಿ ಅವರು ಸ್ವಸಹಾಯ ಗುಂಪು(ಎಸ್‌ಎಚ್‌ಜಿ)ಗಳ 30,000ಕ್ಕಿಂತ ಹೆಚ್ಚಿನ ಮಹಿಳೆಯರಿಗೆ ಕೃಷಿ ಸಖಿ ಪ್ರಮಾಣಪತ್ರಗಳನ್ನು ವಿತರಿಸಿದರು. ಕೃಷಿ ಸಖಿ ಕನ್ವರ್ಜೆನ್ಸ್ ಪ್ರೋಗ್ರಾಂ(ಕೆಎಸ್ ಸಿಪಿ) ಗ್ರಾಮೀಣ ಮಹಿಳೆಯರನ್ನು ಕೃಷಿ ಸಖಿಯಾಗಿ ಸಬಲೀಕರಣಗೊಳಿಸುವ ಮೂಲಕ ಗ್ರಾಮೀಣ ಭಾರತವನ್ನು ಪರಿವರ್ತಿಸುವ ಗುರಿ ಹೊಂದಿದೆ, ಕೃಷಿ ಸಖಿಗಳಿಗೆ ಪ್ಯಾರಾ-ವಿಸ್ತರಣಾ ಕಾರ್ಯಕರ್ತರಾಗಿ ತರಬೇತಿ ಮತ್ತು ಪ್ರಮಾಣೀಕರಣ ನೀಡುವ ಮೂಲಕ. ಈ ಪ್ರಮಾಣೀಕರಣ ಕೋರ್ಸ್ ಕೂಡ ‘ಲಕ್ಷಾಧಿಪತಿ ದೀದಿ’ ಕಾರ್ಯಕ್ರಮದ ಉದ್ದೇಶಗಳಿಗೆ ಹೊಂದಾಣಿಕೆಯಾಗುತ್ತದೆ.

 

 

*****