Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ತರ ಪ್ರದೇಶದ ಮಹೋಬಾದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ

ಉತ್ತರ ಪ್ರದೇಶದ ಮಹೋಬಾದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮಹೋಬಾದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಯೋಜನೆಗಳು ಪ್ರದೇಶದ ನೀರಿನ ಕೊರತೆಯ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತವೆ ಮತ್ತು ರೈತರ ಬಹು ನಿರೀಕ್ಷಿತ  ಪರಿಹಾರವನ್ನು ಒದಗಿಸುತ್ತವೆ. ಯೋಜನೆಗಳಲ್ಲಿ ಅರ್ಜುನ್ ಸಹಾಯಕ್ ಯೋಜನೆ, ರತೌಲಿ ಅಣೆಕಟ್ಟೆ ಯೋಜನೆ, ಭಹೋನಿ ಅಣೆಕಟ್ಟು ಯೋಜನೆ ಮತ್ತು ಮಜ್ಗಾಂವ್ಚಿಲ್ಲಿ ತುಂತುರು ನೀರಾವರಿ ಯೋಜನೆ ಸೇರಿವೆ. ಯೋಜನೆಗಳ ಒಟ್ಟು ವೆಚ್ಚವು 3250 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ ಮತ್ತು ಅವುಗಳ ಕಾರ್ಯಾಚರಣೆಯು ಮಹೋಬಾ, ಹಮೀರ್ ಪುರ್, ಬಾಂಡಾ ಮತ್ತು ಲಲಿತಪುರ ಜಿಲ್ಲೆಗಳಲ್ಲಿ ಸುಮಾರು 65೦೦೦ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತದೆ, ಇದರಿಂದ ಪ್ರದೇಶದ ಲಕ್ಷಾಂತರ ರೈತರಿಗೆ ಪ್ರಯೋಜನಕಾರಿಯಾಗಿದೆ. ಯೋಜನೆಗಳು ಪ್ರದೇಶಕ್ಕೆ ಕುಡಿಯುವ ನೀರನ್ನು ಸಹ ಒದಗಿಸುತ್ತವೆ. ರಾಜ್ಯಪಾಲರಾದ ಶ್ರೀಮತಿ ಆನಂದೀ ಬೆನ್ ಪಟೇಲ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ರಾಜ್ಯ ಸಚಿವರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಗುಲಾಮಗಿರಿಯ ಯುಗದಲ್ಲಿ ಭಾರತದಲ್ಲಿ ಹೊಸ ಪ್ರಜ್ಞೆಯನ್ನು ಜಾಗೃತಗೊಳಿಸಿದ ಗುರುನಾನಕ್ ದೇವ್ ಜೀ ಅವರ ಪ್ರಕಾಶ್ ಪೂರಬ್    ಶುಭ ಹಾರೈಸಿದರು. ಇಂದು ಭಾರತದ ವೀರ ವನಿತೆ, ಬುಂದೇಲ್ ಖಂಡ್ ಹೆಮ್ಮೆರಾಣಿ ಲಕ್ಷ್ಮಿಬಾಯಿಯವರ ಜಯಂತಿ ಎಂದೂ ಅವರು ಉಲ್ಲೇಖಿಸಿದರು.

ಕಳೆದ 7 ವರ್ಷಗಳಲ್ಲಿ ದೆಹಲಿಯ ಮುಚ್ಚಿದ   ಕೋಣೆಗಳಿಂದ ದೇಶದ ಮೂಲೆ ಮೂಲೆಗೂ ಸರ್ಕಾರ ಹೇಗೆ ಬಂದಿದೆ ಎಂಬುದಕ್ಕೆ ಮಹೋಬಾ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ ಭೂಮಿ ಅಂತಹ ಯೋಜನೆಗಳಿಗೆ ಸಾಕ್ಷಿಯಾಗಿದೆ, ಅಂತಹ ನಿರ್ಧಾರಗಳು, ದೇಶದ ಬಡ ತಾಯಂದಿರು ಸಹೋದರಿಯರುಹೆಣ್ಣುಮಕ್ಕಳ ಜೀವನದಲ್ಲಿ ದೊಡ್ಡ ಮತ್ತು ಅರ್ಥಪೂರ್ಣ ಬದಲಾವಣೆಗಳನ್ನು ಮಾಡಿವೆಎಂದು ಪ್ರಧಾನಮಂತ್ರಿ ತಿಳಿಸಿದರು. ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್ ನಿಂದ ಬಿಡುಗಡೆ ಮಾಡುವುದಾಗಿ ಮಹೋಬಾ ಭೂಮಿಯಿಂದ ತಾವು ನೀಡಿದ್ದ ಭರವಸೆಯನ್ನು ಪ್ರಧಾನಮಂತ್ರಿ ಸ್ಮರಿಸಿ, ಇಂದು ಭರವಸೆ ಈಡೇರಿದೆ ಎಂದರು. ಉಜ್ವಲಾ 2.0ನ್ನು ಸಹ ಇಲ್ಲಿಂದ ಪ್ರಾರಂಭಿಸಲಾಗಿತ್ತು ಎಂದರು.

ಪ್ರದೇಶವು ಕಾಲಾನಂತರದಲ್ಲಿ ನೀರಿನ ಸವಾಲುಗಳು ಮತ್ತು ವಲಸೆಯ ಕೇಂದ್ರ ಹೇಗಾಯಿತು ಎಂಬುದನ್ನು ಪ್ರಧಾನಮಂತ್ರಿ ಹೇಳಿದರು. ಪ್ರದೇಶವು ನೀರಿನ ನಿರ್ವಹಣೆಗೆ ಹೆಸರುವಾಸಿಯಾಗಿದ್ದ ಐತಿಹಾಸಿಕ ಸಮಯವನ್ನು ಅವರು ನೆನಪಿಸಿಕೊಂಡರು. ಕ್ರಮೇಣ, ಹಿಂದಿನ ಸರ್ಕಾರಗಳ ಅಡಿಯಲ್ಲಿ, ಪ್ರದೇಶವು ಭಾರಿ ನಿರ್ಲಕ್ಷ್ಯ ಮತ್ತು ಭ್ರಷ್ಟ ಆಡಳಿತವನ್ನು ಅನುಭವಿಸಿತು. “ ಪ್ರದೇಶಕ್ಕೆ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡಲು ಜನರು ಹಿಂಜರಿಯಲು ಪ್ರಾರಂಭಿಸಿದ ಪರಿಸ್ಥಿತಿ ಬಂದಿತು, ಮತ್ತು ಇಲ್ಲಿನ ಹೆಣ್ಣುಮಕ್ಕಳು ಹೆಚ್ಚು ನೀರಿರುವ ಪ್ರದೇಶಗಳಲ್ಲಿರುವವರನ್ನು  ಮದುವೆಯಾಗಲು ಬಯಸಲು ಪ್ರಾರಂಭಿಸಿದರು. ಮಹೋಬಾದ ಜನರು, ಬುಂದೇಲ್ ಖಂಡ್ ಜನರಿಗೆ ಪ್ರಶ್ನೆಗಳಿಗೆ ಉತ್ತರ ತಿಳಿದಿದೆ, ಎಂದು ಪ್ರಧಾನಮಂತ್ರಿ ಹೇಳಿದರು.

ಹಿಂದಿನ ಸರ್ಕಾರಗಳು ಬುಂದೇಲ್ ಖಂಡ್ ಅನ್ನು ಲೂಟಿ ಮಾಡುವ ಮೂಲಕ ತಮ್ಮ ಕುಟುಂಬಗಳಿಗೆ ಮಾತ್ರ ಒಳ್ಳೆಯದನ್ನು ಮಾಡಿಕೊಂಡಿವೆ ಎಂದು ಪ್ರಧಾನಮಂತ್ರಿ ಹೇಳಿದರು. ” ಅವರು ಎಂದಿಗೂ ನಿಮ್ಮ ಕುಟುಂಬಗಳ ನೀರಿನ ಸಮಸ್ಯೆಯ ಬಗ್ಗೆ ಕಾಳಜಿ ವಹಿಸಲಿಲ್ಲ, ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಬುಂದೇಲ್ ಖಂಡ್ ಜನರು ದೀರ್ಘಕಾಲದಿಂದ ಲೂಟಿ ಮಾಡಿದ ಸರ್ಕಾರಗಳನ್ನು ದಶಕಗಳ ಕಾಲ ನೋಡಿದ್ದಾರೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಮೊದಲ ಬಾರಿಗೆ ಬುಂದೇಲ್ ಖಂಡ್ ಜನರು ಸರ್ಕಾರವೊಂದು ತನ್ನ ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ನೋಡುತ್ತಿದೆ ಎಂದು ಅವರು ಪ್ರತಿಪಾದಿಸಿದರು. “ಹಿಂದಿನ ಸರ್ಕಾರಗಳು ಉತ್ತರ ಪ್ರದೇಶವನ್ನು ಲೂಟಿ ಮಾಡಿದರೂ ಸುಸ್ತಾಗಲಿಲ್ಲ, ನಾವು ಕೆಲಸ ಮಾಡುತ್ತಿದ್ದು ಸುಸ್ತಾಗಿಲ್ಲಎಂದರು. ರಾಜ್ಯವು ಮಾಫಿಯಾ ಬುಲ್ಡೋಜರ್ ಅನ್ನು ಎದುರಿಸುತ್ತಿರುವಾಗ, ಅನೇಕ ಜನರು ರೋಧಿಸುತ್ತಿದ್ದರು, ಆದಾಗ್ಯೂ, ಕೂಗು ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದರು.

ರೈತರನ್ನು ಸಮಸ್ಯೆಗಳಲ್ಲಿ ಸಿಲುಕಿಸುವುದು ಸದಾ ಕೆಲವು ರಾಜಕೀಯ ಪಕ್ಷಗಳಿಗೆ ಆಧಾರವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ಸಮಸ್ಯೆಗಳ ರಾಜಕೀಯವನ್ನು ಮಾಡುತ್ತಾರೆ ಮತ್ತು ನಾವು ಪರಿಹಾರಗಳ ರಾಷ್ಟ್ರೀಯ ನೀತಿಯನ್ನು ಅನುಸರಿಸುತ್ತೇವೆ. ಎಲ್ಲಾ ಬಾಧ್ಯಸ್ಥಗಾರರೊಂದಿಗೆ ಸಮಾಲೋಚಿಸಿದ ನಂತರ, ಕೆನ್ಬೆಟ್ವಾ ಸಂಪರ್ಕಕ್ಕೆ ಪರಿಹಾರವನ್ನು ನಮ್ಮದೇ ಸರ್ಕಾರ ಕಂಡುಹಿಡಿದಿದೆ ಎಂದರು.

ವಂಶಪಾರಂಪರ್ಯ ಸರ್ಕಾರಗಳು ರೈತರನ್ನು ಅಭಾವದಲ್ಲಿ ಮಾತ್ರ ಇರಿಸಿದವು ಎಂದು ಪ್ರಧಾನಮಂತ್ರಿ ಹೇಳಿದರು. “ಅವರು ರೈತರ ಹೆಸರಿನಲ್ಲಿ ಘೋಷಣೆಗಳನ್ನು ಮಾಡುತ್ತಿದ್ದರು, ಆದರೆ ಒಂದೇ ಒಂದು ಪೈಸೆ ಸಹ ರೈತನನ್ನು ತಲುಪಲಿಲ್ಲ. ಆದರೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯಿಂದ ನಾವು ಇಲ್ಲಿಯವರೆಗೆ 1,62,000 ಕೋಟಿ ರೂ.ಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದೇವೆ, ಎಂದು ಪ್ರಧಾನಮಂತ್ರಿ ತಿಳಿಸಿದರು.

ಬುಂದೇಲ್ ಖಂಡ್ ನಿಂದ ವಲಸೆಯನ್ನು ತಡೆಗಟ್ಟಲು ಪ್ರದೇಶವನ್ನು ಉದ್ಯೋಗದಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ಹೆದ್ದಾರಿ ಮತ್ತು ಯುಪಿ ರಕ್ಷಣಾ ಕಾರಿಡಾರ್ ಕೂಡ ಇದಕ್ಕೆ ದೊಡ್ಡ ಪುರಾವೆಗಳಾಗಿವೆ ಎಂದರು.

ಪ್ರಧಾನಮಂತ್ರಿಯವರು ಪ್ರದೇಶದ ಶ್ರೀಮಂತ ಸಂಸ್ಕೃತಿಯ ಬಗ್ಗೆಯೂ ಪ್ರಸ್ತಾಪಿಸಿದರು ಮತ್ತು ಕರ್ಮ ಯೋಗಿಗಳ‘ ‘ಡಬಲ್ ಎಂಜಿನ್ ಸರ್ಕಾರ ಅಡಿಯಲ್ಲಿ ಪ್ರದೇಶದ ಪ್ರಗತಿ ಮಾಡುವ ಬದ್ಧತೆಯನ್ನು ವ್ಯಕ್ತಪಡಿಸಿದರು.

***