ಭಾರತ್ ಮಾತಾ ಕಿ ಜೈ,
ಭಾರತ್ ಮಾತಾ ಕಿ ಜೈ,
ಬುದ್ಧನ ಪವಿತ್ರ ಭೂಮಿಯ ನಮ್ಮ ಎಲ್ಲಾ ಸಿದ್ಧಾರ್ಥ ನಗರದ ವಾಸಿಗಳಿಗೆ ನಮಸ್ಕಾರ. ಭಗವಾನ್ ಬುದ್ಧ ತಮ್ಮ ಆರಂಭಿಕ ದಿನಗಳನ್ನು ಕಳೆದ ಈ ಭೂಮಿಯಲ್ಲಿ 9 ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಲಾಗಿದೆ. ಆರೋಗ್ಯಪೂರ್ಣ ಮತ್ತು ಸದೃಢ ಭಾರತದತ್ತ ಇದೊಂದು ದೊಡ್ಡ ಹೆಜ್ಜೆ. ನಿಮಗೆಲ್ಲರಿಗೂ ಅಭಿನಂದನೆಗಳು.
ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್ ಜಿ, ಉತ್ತರ ಪ್ರದೇಶದ ಜನಪ್ರಿಯ ಮತ್ತು ಕರ್ಮಯೋಗಿ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜಿ, ಕೇಂದ್ರ ಆರೋಗ್ಯ ಸಚಿವ ಶ‍್ರೀ ಮನ್ಸುಖ್ ಮಾಂಡವೀಯ ಜಿ, ವೇದಿಕೆಯ ಮೇಲೆ ಉಪಸ್ಥಿತರಿರುವ ಉತ್ತರ ಪ್ರದೇಶದ ಇನ್ನಿತರೆ ಸಚಿವರೇ, ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಿರುವ ಸ್ಥಳಗಳಲ್ಲಿನ ಯುಪಿ ಸರ್ಕಾರದ ಸಚಿವರು, ಸಂಸದರು, ಶಾಸಕರು ವೇದಿಕೆಯ ಮೇಲೆ ಉಪಸ್ಥಿತರಿದ್ದಾರೆ ಮತ್ತು ನನ್ನ ಪ್ರೀತಿಯ ಸಹೋದರ, ಸಹೋದರಿಯರೇ.
ಇಂದು ಪೂರ್ವಾಂಚಲ ಮತ್ತು ಉತ್ತರ ಪ್ರದೇಶಕ್ಕೆ ಉಡುಗೊರೆ ಮತ್ತು ಆರೋಗ್ಯದ ಡಬಲ್ ಡೋಸ್ ನೀಡಲು ಬಂದಿದ್ದೇವೆ. ಸಿದ್ಧಾರ್ಥನಗರ್ ದಿಂದ ಇಂದು 9 ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಲಾಗಿದೆ. ಇದು ಮತ್ತೊಂದು ದೊಡ್ಡ ವೈದ್ಯಕೀಯ ಮೂಲ ಸೌಕರ್ಯ ಯೋಜನೆಯಾಗಿದೆ. ಇದು ಇಡೀ ದೇಶಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಪೂರ್ವಾಂಚಲದಿಂದ ಇದನ್ನು ಆರಂಭಿಸಲಾಗುತ್ತಿದೆ. ನಿಮ್ಮೊಂದಿಗೆ ಸಂವಾದ ನಡೆಸಿದ ನಂತರ, ನಿಮ್ಮಿಂದ ಮತ್ತು ಈ ಭೂಮಿಯಿಂದ ಆಶಿರ್ವಾದ ಪಡೆದ ನಂತರ ಕಾಶಿಯಲ್ಲಿ ಇದನ್ನು ಉದ್ಘಾಟನೆ ಮಾಡಲಾಗುವುದು.
ಸ್ನೇಹಿತರೇ.
ಕೇಂದ್ರ ಮತ್ತು ಯುಪಿಯಲ್ಲಿನ ಈ ಸರ್ಕಾರಗಳು ಹಲವು ಕರ್ಮಯೋಗಿಗಳ ದಶಕಗಳ ತಪಸ್ಸಿನ ಪ್ರತಿಫಲವಾಗಿವೆ. ಸಿದ್ಧಾರ್ಥನಗರ್ ಮಾಧವ್ ಪ್ರಸಾದ್ ತ್ರಿಪಾಠಿ ಜಿ ಅವರಂತಹ ಅರ್ಪಣಾ ಮನೋಭಾಗದ ಸಾರ್ವಜನಿಕ ಪ್ರತಿನಿಧಿಗಳನ್ನು ದೇಶಕ್ಕೆ ಕೊಡುಗೆ ನೀಡಿದೆ. ಅವರು ವಿಶ‍್ರಮಿಸದೇ ಕಠಿಣ ಪರಿಶ್ರಮದಿಂದ ದೇಶಕ್ಕಾಗಿ ದುಡಿಯುತ್ತಿದ್ದವರು. ಮಾಧವ್ ಬಾಬು ಅವರು ರಾಜಕಾರಣದಲ್ಲಿ “ಕರ್ಮಯೋಗ” ಸ್ಥಾಪಿಸಲು ತಮ್ಮ ಇಡೀ ಜೀವನವನ್ನು ಸವೆಸಿದ್ದರು. ಉತ್ತರ ಪ್ರದೇಶದ ಮೊದಲ ಬಿಜೆಪಿ ಅಧ್ಯಕ್ಷರಾಗಿದ್ದ ಮತ್ತು ಕೇಂದ್ರದಲ್ಲಿ ಸಚಿವರಾಗಿದ್ದ ಅವರು, ಪೂರ್ವಾಂಚಲದ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಆದ್ದರಿಂದ ಸಿದ್ಧಾರ್ಥನಗರದ ನೂತನ ವೈದ್ಯಕೀಯ ಕಾಲೇಜಿಗೆ ಮಾಧವ್ ಬಾಬು ಹೆಸರಿಡುವುದು ಅವರ ಸೇವೆಗೆ ಸಲ್ಲಿಸುವ ನಿಜವಾದ ಗೌರವವಾಗಿದೆ.
ಸಹೋದರರೇ ಮತ್ತು ಸಹೋದರಿಯರೇ
ಉತ್ತರ ಪ್ರದೇಶ ಮತ್ತು ಪೂರ್ವಾಂಚಲವು ನಂಬಿಕೆ, ಆದ್ಯಾತ್ಮಿಕತೆ ಮತ್ತು ಸಾಮಾಜಿಕ ಜೀವನಕ್ಕೆ ಸಂಬಂಧಿಸಿದಂತೆ ವಿಶಾಲ ಪರಂಪರೆಯನ್ನು ಹೊಂದಿದೆ. ಉತ್ತರ ಪ್ರದೇಶದ ಭವಿಷ್ಯ, ಆರೋಗ್ಯ ಮತ್ತು ಸಮೃದ್ಧಿಯೊಂದಿಗೆ ಈ ಪರಂಪರೆ ಬೆಸೆದುಕೊಂಡಿದೆ. ಇಂದು ಉದ್ಘಾಟನೆ ಮಾಡುತ್ತಿರುವ 9 ಜಿಲ್ಲೆಗಳ ವೈದ್ಯಕೀಯ ಕಾಲೇಜುಗಳು ಸಹ ಇದನ್ನು ಪ್ರತಿಫಲಿಸುತ್ತಿವೆ. ಸಿದ್ಧಾರ್ಥನಗರದ ಮಾಧವ್ ಪ್ರಸಾದ್ ತ್ರಿಪಾಠಿ ವೈದ್ಯಕೀಯ ಕಾಲೇಜು, ದಿಯೋರಿಯಾದಲ್ಲಿರುವ ಮಹರ್ಷಿ ದೇವ್ರಾಹ ಬಾಬಾ ವೈದ್ಯಕೀಯ ಕಾಲೇಜು, ಗಾಝಿಪುರ್ ನ ಮಹರ್ಷಿ ವಿಶ್ವಾಮಿತ್ರ ವೈದ್ಯಕೀಯ ಕಾಲೇಜು, ಮಿರ್ಜಾಪುರ್ ನ ಮಾ ವಿದ್ಯಾವಾಸಿನಿ ವೈದ್ಯಕೀಯ ಕಾಲೇಜು, ಪ್ರತಾಪ್ ಘರ್ ನ ಡಾ, ಸೋನೆಲಾಲ್ ಪಟೇಲ್ ವೈದ್ಯಕೀಯ ಕಾಲೇಜು, ಏಕ್ತಾದ ವೀರಾಂಗಣ ಅವಂತಿ ಭಾಯಿ ಲೋಧಿ ವೈದ್ಯಕೀಯ ಕಾಲೇಜು, ನಂತರ ವೈದ್ಯಕೀಯ ಕಾಲೇಜುಗಳಿಗೆ ಶ್ರೇಷ್ಠ ಸೇನಾನಿಗಳಾದ ಅಮರ್ ಶಹೀದ್ ಜೋಧಾ ಸಿಂಗ್ ಮತ್ತು ಫಾತೆಪುರ್ ನ ಠಾಕೂರ್ ದರಿಯವ್ನಾ ಸಿಂಗ್, ಜಾನ್ ಪುರ್ ನ ಉಮನಾಥ್ ಸಿಂಗ್ ಅವರ ಹೆಸರನ್ನು ಇಡಲಾಗಿದೆ. ಪೂರ್ವಾಂಚಲದಲ್ಲಿ ಹಲವಾರು ಹೊಸ ವೈದ್ಯಕೀಯ ಕಾಲೇಜುಗಳು ಜನರಿಗೆ ಸೇವೆ ಸಲ್ಲಿಸಲು ಇದೀಗ ಸಜ್ಜಾಗಿವೆ. ಈ 9 ವೈದ್ಯಕೀಯ ಕಾಲೇಜುಗಳಿಂದ ಸುಮಾರು 2,500 ಹಾಸಿಗೆಗಳನ್ನು ಸಜ್ಜುಗೊಳಿಸಲಾಗಿದೆ ಮತ್ತು ಐದು ಸಾವಿರ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಿದ್ದು, ಹೊಸ ಉದ್ಯೋಗಾವಕಾಶಗಳು ಸಹ ಇಲ್ಲಿ ಸೃಷ್ಟಿಯಾಗುತ್ತಿವೆ. ಇದಲ್ಲದೇ ಈ ಕ್ರಮದಿಂದ ಪ್ರತಿವರ್ಷ ನೂರಾರು ಯುವ ಜನರಿಗೆ ವೈದ್ಯಕೀಯ ಶಿಕ್ಷಣದ ಹೊಸ ಮಾರ್ಗವನ್ನು ಸಹ ತೆರೆದಂತಾಗಿದೆ.
ಸ್ನೇಹಿತರೇ
ಹಿಂದಿನ ಸರ್ಕಾರಗಳು ಈ ಭಾಗಗಳಲ್ಲಿ ರೋಗಗಳನ್ನು ಸರಿಯಾಗಿ ನಿಯಂತ್ರಿಸುತ್ತಿರಲಿಲ್ಲ. ಇದೀಗ ಪೂರ್ವಾಂಚಲ ವೈದ್ಯಕೀಯ ಕೇಂದ್ರವಾಗುತ್ತಿದೆ. ಈಗ ಈ ಭೂಮಿ ಹಲವಾರು ವೈದ್ಯರನ್ನು ಸೃಷ್ಟಿಸುತ್ತಿದ್ದು, ಇವರು ರೋಗಗಳಿಂದ ದೇಶವನ್ನು ರಕ್ಷಿಸಲಿದ್ದಾರೆ. ಹಿಂದಿನ ಸರ್ಕಾರಗಳು ಪೂರ್ವಾಂಚಲದ ವರ್ಚಸ್ಸಿಗೆ ಕಳಂಕ ತಂದಿದ್ದು, ಮೆದುಳು ಜ್ವರದ ಸಾವುಗಳಿಂದ ಈ ಪ್ರದೇಶ ಮಂಕಾಗಿತ್ತು, ಇದೇ ಉತ್ತರ ಪ್ರದೇಶ ಪೂರ್ವ ಭಾರತಕ್ಕೆ ಆರೋಗ್ಯದ ಹೊಸ ಬೆಳಕನ್ನು ನೀಡಲಿದೆ.
ಸ್ನೇಹಿತರೇ
ಯೋಗಿ ಜಿ ಅವರು ಸಂಸತ್ತಿನಲ್ಲಿ ವಿವರಿಸಿರುವಂತೆ ಯುಪಿಯಲ್ಲಿನ ಕಳಪೆ ವೈದ್ಯಕೀಯ ವ್ಯವಸ್ಥೆಯ ಸಂಕಟವನ್ನು ಇಲ್ಲಿನ ಸಹೋದರರು ಮತ್ತು ಸಹೋದರಿಯರು ಮರೆಯಲು ಸಾಧ್ಯವಿಲ್ಲ. ಆಗ ಯೋಗಿ ಜಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರಲಿಲ್ಲ. ಅವರು ಸಂಸದರು ಮತ್ತು ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಂಸದರಾಗಿದ್ದರು. ಯೋಗಿ ಜಿ ಅವರಿಗೆ ಜನರ ಸೇವೆ ಮಾಡಲು ಅವಕಾಶ ನೀಡಿದಾಗ ಅವರು ಹೇಗೆ ಮೆದುಳು ಜ್ವರವನ್ನು ಹರಡದಂತೆ ತಡೆದರು ಮತ್ತು ಈ ಪ್ರದೇಶದ ಸಾವಿರಾರು ಮಕ್ಕಳ ಪ್ರಾಣ ಉಳಿಸಿದರು ಎಂಬುದಕ್ಕೆ ಈಗ ಉತ್ತರ ಪ್ರದೇಶದ ಜನತೆ ಸಾಕ್ಷಿಯಾಗಿದ್ದಾರೆ. ಸರ್ಕಾರ ಸಂವೇದನಾಶೀಲವಾಗಿದ್ದಾಗ ಮತ್ತು ಬಡವರ ನೋವಿನ ವಿಚಾರದಲ್ಲಿ ಕರುಣೆಯ ಭಾವನೆ ಇದ್ದಾಗ ಈ ರೀತಿಯ ಕೆಲಸಗಳು ನಡೆಯುತ್ತವೆ.
ಸಹೋದರೇ ಮತ್ತು ಸಹೋದರಿಯರೇ
ದೇಶದಲ್ಲಿ ಸ್ವಾತಂತ್ರ್ಯದ ಮೊದಲು ಮತ್ತು ನಂತರದಲ್ಲಿ ಮೂಲಭೂತ ವೈದ್ಯಕೀಯ ಮತ್ತು ಆರೋಗ್ಯ ಸೌಲಭ್ಯಗಳಿಗೆ ಆದ್ಯತೆ ನೀಡಿರಲ್ಲ. ನಿಮಗೆ ಉತ್ತಮ ಚಿಕಿತ್ಸೆ ಬೇಕಿದ್ದರೆ ನೀವು ದೊಡ್ಡ ನಗರಗಳಿಗೆ ಹೋಗಬೇಕು. ನಿಮಗೆ ದೊಡ್ಡ ವೈದ್ಯರಿಂದ ಉತ್ತಮ ಚಿಕಿತ್ಸೆ ಬೇಕಿದ್ದರೆ ನೀವು ದೊಡ್ಡ ನಗರಗಳಿಗೆ ತೆರಳಬೇಕಾಗುತ್ತದೆ. ರಾತ್ರಿ ವೇಳೆಯಲ್ಲಿ ಕೆಲವೊಬ್ಬರ ಆರೋಗ್ಯ ಕೆಟ್ಟಿದ್ದರೆ ಕಾರಿನ ವ್ಯವಸ್ಥೆ ಮಾಡಬೇಕಾಗುತ್ತದೆ, ನಂತರ ನಗರಗಳಿಗೆ ಪ್ರಯಾಣ ಬೆಳೆಸಬೇಕಾಗುತ್ತದೆ. ಇದು ನಮ್ಮ ಹಳ್ಳಿಗಳು ಮತ್ತು ಹಳ್ಳಿಗಳಲ್ಲಿನ ವಾಸ್ತವ ಪರಿಸ್ಥಿತಿಯಾಗಿದೆ. ಹಳ್ಳಿಗಳು, ಪಟ್ಟಣಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲೂ ಸಹ ಉತ್ತಮ ಆರೋಗ್ಯ ಸೌಲಭ್ಯಗಳು ಅಷ್ಟೇನು ಲಭ್ಯವಿರಲಿಲ್ಲ. ಸ್ವತಃ ನಾನು ಕೂಡ ಈ ಸಮಸ್ಯೆಯನ್ನು ಅನುಭವಿಸಿದ್ದೇನೆ. ದೇಶದ ಬಡವರು, ದಲಿತರು, ಶೋ಼ಷಿತರು, ಅವಕಾಶ ವಂಚಿತರು, ರೈತರು, ಹಳ್ಳಿಗಳ ಜನತೆ, ಚಿಕ್ಕಮಕ್ಕಳ ತಾಯಂದಿರು ಮತ್ತು ಹಿರಿಯರು ಮೂಲ ಆರೋಗ್ಯ ಸೌಲಭ‍್ಯಗಳತ್ತ ಕಣ್ಣು ಹಾಯಿಸಿದಾಗ ಅಲ್ಲಿ ನಿರಾಸೆ ಕಾಣುತ್ತದೆ. ನನ್ನ ಬಡ ಸಹೋದರರು ಮತ್ತು ಸಹೋದರಿಯರು ಈ ಹತಾಶೆಯನ್ನು ತಮ್ಮ ಹಣೆಬರಹವಾಗಿ ಸ್ವೀಕರಿಸಿದ್ದರು. 2014 ರಲ್ಲಿ ನೀವು ದೇಶ ಸೇವೆ ಮಾಡಲು ನಮಗೆ ಅವಕಾಶ ಕಲ್ಪಿಸಿದಾಗ ನಮ್ಮ ಸರ್ಕಾರ ಹಗಲು ರಾತ್ರಿ ಕೆಲಸ ಮಾಡಿ ದೇಶದ ಪರಿಸ್ಥಿತಿಯನ್ನು ಬದಲಾಯಿಸಲು ಶ್ರಮಿಸಿತು. ಶ್ರೀ ಸಾಮಾನ್ಯನ ನೋವನ್ನು ಅರ್ಥಮಾಡಿಕೊಂಡ ನಾವು ಅವರ ದುಃಖ ಮತ್ತು ನೋವಿನಲ್ಲಿ ಮಿತ್ರರಾದೆವು. ನಾವು ಮಹಾಯಜ್ಞವನ್ನು ಪ್ರಾರಂಭಿಸಿದ್ದೇವೆ ಮತ್ತು ದೇಶದ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲು ಮತ್ತು ಆಧುನೀಕರಣಗೊಳಿಸಲು ಅನೇಕ ಯೋಜನೆಗಳಿಗೆ ಚಾಲನೆಕೊಟ್ಟಿದ್ದೇವೆ. ಆದರೆ ಇಲ್ಲಿ ಹಿಂದೆ ಇದ್ದ ಸರ್ಕಾರ ನಮಗೆ ಬೆಂಬಲ ನೀಡಲಿಲ್ಲ ಎಂದು ನಾನು ಯಾವಾಗಲೂ ವಿಷಾದಿಸುತ್ತೇನೆ. ಇದು ಅಭಿವೃದ್ಧಿ ಕಾರ್ಯಗಳನ್ನು ರಾಜಕೀಯಗೊಳಿಸಿತು ಮತ್ತು ಯುಪಿಯಲ್ಲಿ ಕೇಂದ್ರದ ಯೋಜನೆಗಳ ಪ್ರಗತಿಗೆ ಆಸ್ಪದ ಕೊಡಲಿಲ್ಲ.
ಸ್ನೇಹಿತರೇ
ಇಲ್ಲಿ ವಿವಿಧ ವಯೋಮಾನದ ಸಹೋದರರು ಮತ್ತು ಸಹೋದರಿಯರು ಕುಳಿತಿದ್ದಾರೆ. ನಿಮ್ಮಲ್ಲಿ ಯಾರಿಗಾದರೂ ನೆನಪಿದೆಯೇ ಮತ್ತು ಉತ್ತರ ಪ್ರದೇಶದ ಇತಿಹಾಸದಲ್ಲಿ ಇಷ್ಟೊಂದು ವೈದ್ಯಕೀಯ ಕಾಲೇಜುಗಳನ್ನು ಏಕಕಾಲದಲ್ಲಿ ಉದ್ಘಾಟನೆ ಮಾಡಿದ್ದರೆ ನನಗೆ ತಿಳಿಸಿ. ಈ ರೀತಿ ಹಿಂದೆ ಯಾವಾಗಲಾದರೂ ಆಗಿದೆಯೇ?. ಇಲ್ಲ. ಹಿಂದೆಂದೂ ಆಗಿರಲಿಲ್ಲ. ಯಾಕೆ ಈ ಹಿಂದೆ ಈ ರೀತಿ ಆಗಿರಲಿಲ್ಲ ಮತ್ತು ಈಗ ಏಕೆ ಆಗುತ್ತಿದೆ ಎಂಬುದಕ್ಕೆ ರಾಜಕೀಯ ಆದ್ಯತೆ ಮತ್ತು ರಾಜಕೀಯ ಇಚ್ಚಾಶಕ್ತಿ ಕಾರಣವಾಗಿದೆ. ಈ ಹಿಂದೆ ಸರ್ಕಾರದಲ್ಲಿದ್ದವರ ಆದ್ಯತೆ ತಾವು ಹಣ ಸಂಪಾದಿಸಿ ತಮ್ಮ ಬೊಕ್ಕಸ ತುಂಬಿಸಿಕೊಳ್ಳುವುದಾಗಿತ್ತು. ಈಗ ಬಡವರ ಹಣ ಉಳಿಸುವುದು ಮತ್ತು ಬಡ ಕುಟುಂಬಗಳಿಗೆ ಮೂಲ ಸೌಕರ್ಯ ಒದಗಿಸುವುದು ನಮ್ಮ ಆದ್ಯತೆಯಾಗಿದೆ.
ಸ್ನೇಹಿತರೇ
ಅನಾರೋಗ್ಯದಲ್ಲಿ ಬಡವರು ಮತ್ತು ಶ್ರೀಮಂತರು ಎಂಬ ಬೇಧವನ್ನು ಹೊಂದಿಲ್ಲ. ಅದಕ್ಕೆ ಎಲ್ಲರೂ ಸಮಾನರು. ಆದ್ದರಿಂದ ಈ ಸೌಲಭ್ಯಗಳು ಬಡ ಮತ್ತು ಮದ್ಯಮವರ್ಗದ ಕುಟುಂಬಗಳಿಗೆ ಹೆಚ್ಚಿನ ಪ್ರಯೋಜನ ದೊರಕಿಸಿಕೊಡುತ್ತದೆ.
ಸ್ನೇಹಿತರೇ
ಪೂರ್ವಾಂಚಲ್ ವಿಚಾರದಲ್ಲಿ ಏಳು ವರ್ಷಗಳ ಹಿಂದೆ ದೆಹಲಿಯಲ್ಲಿದ್ದ ಮತ್ತು ನಾಲ್ಕು ವರ್ಷಗಳ ಹಿಂದೆ ಯುಪಿಯಲ್ಲಿದ್ದ ಸರ್ಕಾರಗಳು ಏನು ಮಾಡುತ್ತಿದ್ದವು. ಈ ಹಿಂದೆ ಆಡಳಿತದಲ್ಲಿದ್ದ ಸರ್ಕಾರಗಳು ಮತಗಳಿಕೆಗಾಗಿ ಚಿಕಿತ್ಸಾಲಯ ಇಲ್ಲವೆ ಸಣ್ಣ ಆಸ್ಪತ್ರೆಗಳನ್ನು ಘೋಷಿಸುತ್ತಿದ್ದರು. ಹೀಗಾಗಿ ಜನತೆಯಲ್ಲಿ ನಿರೀಕ್ಷೆ ಇತ್ತು. ಆದರೆ ಒಟ್ಟಿಗೆ ಏಳು ವರ್ಷಗಳೇ ಕಳೆದರೂ ಒಂದೋ ಕಟ್ಟಡ ನಿರ್ಮಾಣವಾಗಿಲ್ಲ, ಕಟ್ಟಡ ಕಟ್ಟಿದ್ದರೂ ಯಂತ್ರೋಪಕರಣಗಳು ಇರಲಿಲ್ಲ. ಇವರೆಡೂ ವ್ಯವಸ್ಥೆ ಮಾಡಿದರೆ ವೈದ್ಯರು ಮತ್ತಿತರ ಸಿಬ್ಬಂದಿ ಇರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಬಡವರ ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದ ಭ್ರಷ್ಟಾಚಾರದ ಚಕ್ರ ಗಡಿಯಾರದ ಸುತ್ತ ಓಡುತ್ತಿತ್ತು. ಔಷಧ ಮತ್ತು ಆಂಬುಲೆನ್ಸ್ ಖರೀದಿ, ನೇಮಕಾತಿ ಮತ್ತು ವರ್ಗಾವಣೆಯಲ್ಲಿ ಭ್ರಷ್ಟಾಚಾರವಿತ್ತು. ಈ ಸಂಪೂರ್ಣ ಆಟದಲ್ಲಿ ಕೆಲವು ರಾಜವಂಶಿಗಳು ಪ್ರವರ್ಧಮಾನಕ್ಕೆ ಬಂದವು ಮತ್ತು ಭ್ರಷ್ಟಾಚಾರ ಚಕ್ರ ಮುಂದುವರೆಯಿತು. ಇದರಿಂದ ಪೂರ್ವಾಂಚಲ ಮತ್ತು ಉತ್ತರ ಪ್ರದೇಶದ ಬಡ ಕುಟುಂಬಗಳು ನಲುಗಿದವು.
ಅದಕ್ಕಾಗಿ ಸರಿಯಾಗಿಯೇ ಹೇಳಿದ್ದಾರೆ :
‘जाके पाँव न फटी बिवाई, वो क्या जाने पीर पराई’ (ತಾನು ದುಃಖ ಅನುಭವಿಸದವನು ಇತರರ ದುಃಖವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ).
ಸ್ನೇಹಿತರೇ
ಕಳೆದ ಕೆಲವು ವರ್ಷಗಳಿಂದ ಡಬಲ್ ಎಂಜಿನ್ ಸರ್ಕಾರ ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗಿದೆ ಮತ್ತು ಪ್ರತಿಯೊಬ್ಬ ಬಡವರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ. ನಾವು ಹೊಸ ಆರೋಗ್ಯ ನೀತಿಯನ್ನು ಜಾರಿಗೆ ತಂದಿದ್ದು, ಇದರಿಂದ ಬಡವರು ಕೈಗೆಟುವ ರೀತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರು ರೋಗಗಳಿಂದ ರಕ್ಷಣೆ ಪಡೆಯುತ್ತಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಯುಪಿಯ 90 ಲಕ್ಷ ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದಾರೆ. ಈ ಯೋಜನೆಯಡಿ ಚಿಕಿತ್ಸೆ ಪಡೆದ ಕಾರಣ ಬಡವರಿಗೆ 1000 ಕೋಟಿ ರೂಪಾಯಿ ಚಿಕಿತ್ಸಾ ವೆಚ್ಚ ಉಳಿತಾಯವಾಗಿದೆ. ಸಹಸ್ರಾರು ಜನೌಷಧಿ ಕೇಂದ್ರಗಳಲ್ಲಿ ಕೈಗೆಟುವ ದರದಲ್ಲಿ ಔಷಧಿಗಳು .ದೊರೆಯುತ್ತಿವೆ ಕ್ಯಾನ್ಸರ್ ಚಿಕಿತ್ಸೆ, ಡಯಾಲಿಸಿಸ್ ಮತ್ತು ಹೃದಯ ಶಸ್ತ್ರ ಚಿಕಿತ್ಸೆ ಕೂಡ ಇದೀಗ ಕೈಗೆಟುಕುತ್ತಿದೆ ಮತ್ತು ಶೌಚಾಲಯದಂತಹ ಸೌಲಭ್ಯಗಳಿಂದ ಹಲವಾರು ರೋಗಗಳನ್ನು ನಿಯಂತ್ರಿಸಲು ಸಾಧ್ಯವಾಗಿದೆ. ಇದಲ್ಲದೇ ಭವಿಷ್ಯದ ದೃಷ್ಟಿಯಿಂದ ದೇಶಾದ್ಯಂತ ಉತ್ತಮ ಆಸ್ಪತ್ರೆಗಳನ್ನು ನಿರ್ಮಿಸಲು, ಉತ್ತಮ ವೈದ್ಯರು ಮತ್ತು ಇತರೆ ವೈದ್ಯಕೀಯ ಸಿಬ್ಬಂದಿಯನ್ನು ಸಜ್ಜುಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ಈಗ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳ ಶಂಕು ಸ್ಥಾಪನೆ ನೆರವೇರಿದ ನಂತರ ನಿಗದಿತ ಸಮಯಕ್ಕೆ ಉದ್ಘಾಟನೆಯೂ ಆಗಿದೆ. ಯೋಗಿ ಜಿ ಅವರಿಗಿಂತ ಹಿಂದೆ ಇದ್ದ ಸರ್ಕಾರ ತನ್ನ ಅವಧಿಯಲ್ಲಿ ಯುಪಿಯಲ್ಲಿ ಕೇವಲ 6 ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಿತ್ತು. ಇದೀಗ ಯೋಗಿ ಜಿ ಅವರ ಆಡಳಿತದಲ್ಲಿ 16 ವೈದ್ಯಕೀಯ ಕಾಲೇಜುಗಳು ಪ್ರಾರಂಭವಾಗಿದೆ ಮತ್ತು ಹೊಸದಾಗಿ 30 ವೈದ್ಯಕೀಯ ಕಾಲೇಜುಗಳ ನಿರ್ಮಾಣ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ. ರಾಯ್ ಬರೇಲಿ ಮತ್ತು ಗೋರಖ್ ಪುರದಲ್ಲಿ ಏಮ್ಸ್ ನಿರ್ಮಿಸಿದ್ದು, ಇದು ಯುಪಿಗೆ ಬೋನಸ್ ಇದ್ದಂತೆ.
ಸಹೋದರರೇ ಮತ್ತು ಸಹೋದರಿಯರೇ
ವೈದ್ಯಕೀಯ ಕಾಲೇಜುಗಳು ಉತ್ತಮ ಚಿಕಿತ್ಸೆಯನ್ನಷ್ಟೇ ನೀಡುವುದಿಲ್ಲ ಬದಲಿಗೆ ಹೊಸ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ಉತ್ಪಾದಿಸಲಿದೆ. ವೈದ್ಯಕೀಯ ಕಾಲೇಜು ನಿರ್ಮಿಸಿದರೆ ಅಲ್ಲಿ ವಿಶೇಷ ಪ್ರಯೋಗಾಲಯದ ತರಬೇತಿ ಕೇಂದ್ರಗಳು, ದಾದಿಯರ ಘಟಕಗಳು, ವೈದ್ಯಕೀಯ ಘಟಕಗಳು ಮತ್ತು ಹೊಸದಾಗಿ ಹಲವಾರು ಉದ್ಯೋಗಾವಕಾಶಗಳನ್ನು ಕೂಡ ಸೃಷ್ಟಿಸಲಾಗುತ್ತಿದೆ. ದುರದೃಷ್ಟವೆಂದರೆ ಈ ಹಿಂದಿನ ದಶಕಗಳಲ್ಲಿ ದೇಶದಲ್ಲಿ ವೈದ್ಯರ ಕೊರತೆ ನೀಗಿಸಲು ಯಾವುದೇ ರೀತಿಯ ರಾಷ್ಟ್ರೀಯ ಕಾರ್ಯತಂತ್ರ ಇರಲಿಲ್ಲ. ವೈದ್ಯಕೀಯ ಕಾಲೇಜುಗಳು ಮತ್ತು ವೈದ್ಯಕೀಯ ಸಂಸ್ಥೆಗಳ ನಿರ್ವಹಣೆಗೆ ದಶಕಗಳ ಹಿಂದೆ ನಿಯಮಗಳು ಮತ್ತು ನಿಯಂತ್ರಣ ಕ್ರಮಗಳನ್ನು ರೂಪಿಸಲಾಗಿದ್ದು, ಇಂತಹ ಹಳೆಯ ವ್ಯವಸ್ಥೆಯಲ್ಲೇ ಇವು ಮುಂದುವರೆಯುತ್ತಿವೆ. ಹೊಸ ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೂ ಇದರಿಂದ ಅಡ್ಡಿಯಾಗುತ್ತಿತ್ತು.
ಕಳೆದ ಏಳು ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಣದ ಹಾದಿಯಲ್ಲಿ ಅಡಚಣೆಯಾಗುತ್ತಿರುವ ಇಂತಹ ಪ್ರತಿಯೊಂದು ಹಳೆಯ ವ್ಯವಸ್ಥೆಯನ್ನು ಬದಲಾವಣೆ ಮಾಡಲಾಗುತ್ತಿದೆ. ಇದರ ಪರಿಣಾಮ ವೈದ್ಯಕೀಯ ಸೀಟುಗಳ ಸಂಖ್ಯೆಯೂ ಸಹ ಹೆಚ್ಚಾಗಿದೆ. 2014ಕ್ಕೂ ಮುನ್ನ ದೇಶದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆ 90,000 ದಷ್ಟಿತ್ತು. ಈ ಏಳು ವರ್ಷಗಳಲ್ಲಿ 60,000 ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. 2017 ಕ್ಕೂ ಮುನ್ನ ಉತ್ತರ ಪ್ರದೇಶದಲ್ಲಿ 1,900 ವೈದ್ಯಕೀಯ ಸೀಟುಗಳಿತ್ತು. ಆದರೆ ಡಬಲ್ ಎಂಜಿನ್ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಇದಕ್ಕೆ 1,900 ಸೀಟುಗಳನ್ನು ಸೇರ್ಪಡೆ ಮಾಡಿದೆ.
ಸ್ನೇಹಿತರೇ
ವೈದ್ಯಕೀಯ ಕಾಲೇಜುಗಳು ಮತ್ತು ವೈದ್ಯಕೀಯ ಸೀಟುಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೆಚ್ಚು ಹೆಚ್ಚು ವೈದ್ಯರಾಗುವವರ ಆಕಾಂಕ್ಷೆ ಈಡೇರಲಿದೆ. ಬಡ ತಾಯಂದಿರ ಮಗ ಮತ್ತು ಮಗಳು ವೈದ್ಯರಾಗುವುದು ಸುಲಭವಾಗುತ್ತಿದೆ. ಈ ಅವಿರತ ಶ್ರಮದಿಂದ ಸ್ವಾತಂತ್ರ್ಯೋತ್ತರದ ನಂತರದಿಂದ ಈವರೆಗೆ ಲಭ್ಯವಾಗಿರುವ ವೈದ್ಯರ ಸಂಖ್ಯೆಯನ್ನು ಮುಂದಿನ 10 – 12 ವರ್ಷಗಳಲ್ಲಿ ಮೀರಿಸಲಿದೆ.
ಸ್ನೇಹಿತರೇ
ವಿವಿಧ ಪರೀಕ್ಷೆಗಳ ವಿಚಾರದಲ್ಲಿ ಯುವ ಸಮೂಹದ ಉದ್ವಿಗ್ನತೆ ತಗ್ಗಿಸುವ ಉದ್ದೇಶದಿಂದ ದೇಶಾದ್ಯಂತ ಒಂದು ರಾಷ್ಟ್ರ, ಒಂದು ಪರೀಕ್ಷೆಯ ಪರಿಕಲ್ಪನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಖರ್ಚು ಉಳಿತಾಯವಾಗಿದ್ದು, ತೊಂದರೆಯೂ ಕಡಿಮೆಯಾಗಿದೆ. ಖಾಸಗಿ ಕಾಲೇಜುಗಳಲ್ಲಿ ಶುಲ್ಕದ ವಿವರಗಳನ್ನು ಪರೀಕ್ಷಿಸಲು ಕಾನೂನು ನಿಬಂಧನೆಗಳನ್ನು ಅಡಕಗೊಳಿಸಿದ್ದು, ಇದರಿಂದ ಬಡವರು ಮತ್ತು ಮದ್ಯಮವರ್ಗದವರಿಗೆ ವೈದ್ಯಕೀಯ ಶಿಕ್ಷಣ ಕೈಗೆಟುಕುವಂತಾಗಿದೆ. ಸ್ಥಳೀಯ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ನೀಡಲು ಹಲವಾರು ತೊಂದರೆಗಳಿತ್ತು. ಇದೀಗ ಹಿಂದಿ ಒಳಗೊಂಡಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ. ಯುವ ಸಮೂಹ ಮಾತೃಭಾಷೆಯಲ್ಲಿ ಕಲಿತರೆ ತಮ್ಮ ಕೆಲಸದ ಮೇಲೆ ಹೆಚ್ಚು ಹಿಡಿತ ಸಾಧಿಸಲಿದೆ.
ಸ್ನೇಹಿತರೇ
ಉತ್ತರ ಪ್ರದೇಶದಲ್ಲಿ ಕೊರೋನಾ ಸಂದರ್ಭದಲ್ಲಿ ರಾಜ್ಯದ ಜನರಿಗೆ ಆರೋಗ್ಯ ಸೌಲಭ್ಯವನ್ನು ತ್ವರಿತವಾಗಿ ಸುಧಾರಿಸಲಾಗಿದೆ. ನಾಲ್ಕು ದಿನಗಳ ಹಿಂದೆ ದೇಶದಲ್ಲಿ ಅತಿದೊಡ್ಡ ಗುರಿಯಾದ 100 ಕೋಟಿ ಲಸಿಕಾ ಡೋಸ್ ಗಳನ್ನು ಹಾಕಿ ಮಹತ್ವದ ಸಾಧನೆ ಮಾಡಿದೆ ಮತ್ತು ಯುಪಿ ಕೂಡ ಈ ಸಾಧನೆಯಲ್ಲಿ ಪ್ರಮುಖ ಕೊಡುಗೆ ನೀಡಿದೆ. ಯುಪಿ ಜನತೆ, ಕೊರೋನಾ ಸೇನಾನಿಗಳು, ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯನ್ನು ನಾನು ಅಭಿನಂದಿಸುತ್ತೇನೆ. 100 ಕೋಟಿ ಡೋಸ್ ಲಸಿಕೆ ಮೂಲಕ ದೇಶ ಇಂದು ರಕ್ಷಾ ಕವಚ ತೊಟ್ಟಿದೆ. ಇದಲ್ಲದೇ ಕೊರೋನಾದಿಂದ ರಕ್ಷಣೆ ಪಡೆಯಲು ಯುಪಿ ಅವಿಶ್ರಾಂತವಾಗಿ ಕಾರ್ಯನಿರ್ವಹಿಸುತ್ತಿದೆ. ಕೊರೋನಾ ನಿಯಂತ್ರಿಸಲು ಯುಪಿಯ ಪ್ರತಿಯೊಂದು ಜಿಲ್ಲೆಯಲ್ಲಿ ಮಕ್ಕಳ ಆರೈಕೆ ಘಟಕ ಸ್ಥಾಪಿಸಿದೆ ಅಥವಾ ಸ್ಥಾಪಿಸುತ್ತಿದೆ. ಯುಪಿಯಲ್ಲಿ ಇದೀಗ 60 ಕ್ಕೂ ಹೆಚ್ಚು ಕೋವಿಡ್ ಸೋಂಕು ಪತ್ತೆ ಪರೀಕ್ಷಾ ಪ್ರಯೋಗಾಲಗಳನ್ನು ಸ್ಥಾಪಿಸಲಾಗಿದೆ. 500 ಕ್ಕೂ ಹೆಚ್ಚು ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುವ ಕಾರ್ಯ ತ್ವರಿತ ವೇಗದಲ್ಲಿ ಸಾಗಿದೆ.
ಸ್ನೇಹಿತರೇ
ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಎಂಬುದು ಸರ್ಕಾರದ ಮುನ್ನಡೆಯ ಮಾರ್ಗವಾಗಿದೆ. ದೇಶಕ್ಕೆ ಪ್ರತಿಯೊಬ್ಬರ ಪ್ರಯತ್ನವೂ ಉಪಯುಕ್ತವಾಗಿದ್ದು, ಪ್ರತಿಯೊಬ್ಬರು ಆರೋಗ್ಯವಂತರಾದಾಗ ಮತ್ತು ಪ್ರತಿಯೊಬ್ಬರಿಗೂ ಅವಕಾಶಗಳು ದೊರೆಯುತ್ತವೆ. ಇದು ದೀಪಾವಳಿ ಸಮಯ ಮತ್ತು ಪೂರ್ವಾಂಚಲದಲ್ಲಿ ಈ ಛತ್ ನವ ಆರೋಗ್ಯದ ನಂಬಿಕೆಯನ್ನು ಮೂಡಿಸಲಿ. ಈ ನಂಬಿಕೆಯು ಕ್ಷಿಪ್ರ ಬೆಳವಣಿಗೆಗೆ ಆಧಾರವಾಗಲಿ ಎಂಬ ಹಾರೈಕೆಯೊಂದಿಗೆ ಹೊಸ ವೈದ್ಯಕೀಯ ಕಾಲೇಜುಗಳಿಗಾಗಿ ಮತ್ತು ನಮ್ಮನ್ನು ಆಶಿರ್ವದಿಸಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ನಿಮ್ಮೆಲ್ಲರಿಗೂ ಅಭಿನಂದನೆಗಳು ಮತ್ತು ತುಂಬಾ ಧನ್ಯವಾದಗಳು.
;- ಇದು ಪ್ರಧಾನಮಂತ್ರಿಯವರ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಅವರು ಹಿಂದಿಯಲ್ಲಿ ಮಾಡಿದ್ದಾರೆ.
Addressing a public meeting in Siddharthnagar. https://t.co/LDnCxX9Flb
— Narendra Modi (@narendramodi) October 25, 2021
आज केंद्र में जो सरकार है, यहां यूपी में जो सरकार है, वो अनेकों कर्मयोगियों की दशकों की तपस्या का फल है।
— PMO India (@PMOIndia) October 25, 2021
सिद्धार्थनगर ने भी स्वर्गीय माधव प्रसाद त्रिपाठी जी के रूप में एक ऐसा समर्पित जनप्रतिनिधि देश को दिया, जिनका अथाह परिश्रम आज राष्ट्र के काम आ रहा है: PM @narendramodi
सिद्धार्थनगर के नए मेडिकल कॉलेज का नाम माधव बाबू के नाम पर रखना उनके सेवाभाव के प्रति सच्ची कार्यांजलि है।
— PMO India (@PMOIndia) October 25, 2021
माधव बाबू का नाम यहां से पढ़कर निकलने वाले युवा डॉक्टरों को जनसेवा की निरंतर प्रेरणा भी देगा: PM @narendramodi
9 नए मेडिकल कॉलेजों के निर्माण से, करीब ढाई हज़ार नए बेड्स तैयार हुए हैं, 5 हज़ार से अधिक डॉक्टर और पैरामेडिक्स के लिए रोज़गार के नए अवसर बने हैं।
— PMO India (@PMOIndia) October 25, 2021
इसके साथ ही हर वर्ष सैकड़ों युवाओं के लिए मेडिकल की पढ़ाई का नया रास्ता खुला है: PM @narendramodi
जिस पूर्वांचल की छवि पिछली सरकारों ने खराब कर दी थी,
— PMO India (@PMOIndia) October 25, 2021
जिस पूर्वांचल को दिमागी बुखार से हुई दुखद मौतों की वजह से बदनाम कर दिया गया था,
वही पूर्वांचल, वही उत्तर प्रदेश, पूर्वी भारत को सेहत का नया उजाला देने वाला है: PM @narendramodi
यूपी के भाई-बहन भूल नहीं सकते कि कैसे योगी जी ने संसद में यूपी की बदहाल मेडिकल व्यवस्था की व्यथा सुनाई थी।
— PMO India (@PMOIndia) October 25, 2021
योगी जी तब मुख्यमंत्री नहीं थे, सांसद थे: PM @narendramodi
आज यूपी के लोग ये भी देख रहे है कि जब योगी जी को जनता-जनार्दन ने सेवा का मौका दिया तो कैसे उन्होंने दिमागी बुखार को बढ़ने से रोक दिया, इस क्षेत्र के हजारों बच्चों का जीवन बचा लिया।
— PMO India (@PMOIndia) October 25, 2021
सरकार जब संवेदनशील हो, गरीब का दर्द समझने के लिए मन में करुणा का भाव हो तो इसी तरह काम होता है: PM
क्या कभी किसी को याद पढ़ता है कि उत्तर प्रदेश के इतिहास में कभी एक साथ इतने मेडिकल कॉलेज का लोकार्पण हुआ हो?
— PMO India (@PMOIndia) October 25, 2021
बताइए, क्या कभी ऐसा हुआ है?
पहले ऐसा क्यों नहीं होता था और अब ऐसा क्यों हो रहा है, इसका एक ही कारण है- राजनीतिक इच्छाशक्ति और राजनीतिक प्राथमिकता: PM @narendramodi
7 साल पहले जो दिल्ली में सरकार थी और 4 साल पहले जो यहां यूपी में सरकार थी, वो पूर्वांचल में क्या करते थे?
— PMO India (@PMOIndia) October 25, 2021
जो पहले सरकार में थे, वो वोट के लिए कहीं डिस्पेंसरी की, कहीं छोटे-मोटे अस्पताल की घोषणा करके बैठ जाते थे: PM @narendramodi
सालों-साल तक या तो बिल्डिंग ही नहीं बनती थी, बिल्डिंग होती थी तो मशीनें नहीं होती थीं, दोनों हो गईं तो डॉक्टर और दूसरा स्टाफ नहीं होता था।
— PMO India (@PMOIndia) October 25, 2021
ऊपर से गरीबों के हजारों करोड़ रुपए लूटने वाली भ्रष्टाचार की सायकिल चौबीसों घंटे अलग से चलती रहती थी: PM @narendramodi
2014 से पहले हमारे देश में मेडिकल की सीटें 90 हज़ार से भी कम थीं।
— PMO India (@PMOIndia) October 25, 2021
बीते 7 वर्षों में देश में मेडिकल की 60 हज़ार नई सीटें जोड़ी गई हैं: PM @narendramodi
यहां उत्तर प्रदेश में भी 2017 तक सरकारी मेडिकल कॉलेजों में मेडिकल की सिर्फ 1900 सीटें थीं।
— PMO India (@PMOIndia) October 25, 2021
जबकि डबल इंजन की सरकार में पिछले चार साल में ही 1900 सीटों से ज्यादा मेडिकल सीटों की बढ़ोतरी की गयी है: PM @narendramodi
जिस पूर्वांचल को पहले की सरकारों ने बीमारियों से जूझने के लिए छोड़ दिया था, वही पूर्वांचल अब पूर्वी भारत का मेडिकल हब बनेगा, बीमारियों से बचाने वाले अनेक डॉक्टर देश को देगा। pic.twitter.com/OqtiBjlJtB
— Narendra Modi (@narendramodi) October 25, 2021
पहले की सरकार में गरीबों के हजारों करोड़ रुपये लूटने वाली भ्रष्टाचार की साइकिल चौबीसों घंटे चलती रहती थी।
— Narendra Modi (@narendramodi) October 25, 2021
आज केंद्र और यूपी सरकार की प्राथमिकता है- गरीब का पैसा बचाना, गरीब के परिवार को मूलभूत सुविधाएं देना। pic.twitter.com/iUGKAh5ICY
For diagnosis of a disease, one had to go to a big city.
— Narendra Modi (@narendramodi) October 25, 2021
For consulting a doctor, one had to go to a big city.
For treatment and cure of major ailments, one had to go to a big city.
Such a system was not acceptable to us. Hence, we worked to improve rural health infra. pic.twitter.com/hiM6ljoQja
The establishment of a medical college ramps up the entire healthcare eco-system of an area. The benefits are innumerable. pic.twitter.com/9q2yOYWk83
— Narendra Modi (@narendramodi) October 25, 2021