ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಒಟ್ಟು 10,037 ಕೋಟಿ ರೂಪಾಯಿ ವೆಚ್ಚದಲ್ಲಿ 8 ವರ್ಷಗಳ ಬದ್ಧ ಹೊಣೆಗಾರಿಕೆಗಳೊಂದಿಗೆ ಅಧಿಸೂಚನೆಯ ದಿನಾಂಕದಿಂದ 10 ವರ್ಷಗಳ ಅವಧಿಗೆ ಉತ್ತರ ಪೂರ್ವ ಪರಿವರ್ತನಾ ಕೈಗಾರಿಕೀಕರಣ ಯೋಜನೆ, 2024 (UNNATI – 2024) ಗಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯ ಪ್ರಸ್ತಾವನೆಯನ್ನು ಅನುಮೋದಿಸಿದೆ.
ಹೊಸ ಘಟಕಗಳನ್ನು ಸ್ಥಾಪಿಸಲು ಅಥವಾ ಅಸ್ತಿತ್ವದಲ್ಲಿರುವ ಘಟಕಗಳ ವಿಸ್ತರಣೆಯನ್ನು ಕೈಗೊಳ್ಳಲು ಹೂಡಿಕೆದಾರರಿಗೆ ಯೋಜನೆಯ ಅಡಿಯಲ್ಲಿ ಈ ಕೆಳಗಿನ ಪ್ರೋತ್ಸಾಹಗಳು ಲಭ್ಯವಿರುತ್ತವೆ.
1 |
ಬಂಡವಾಳ ಹೂಡಿಕೆಯ ಪ್ರೋತ್ಸಾಹ (ಹೊಸ ಮತ್ತು ವಿಸ್ತರಣೆಯ ಎರಡೂ ಘಟಕಗಳಿಗೆ):
ವಲಯ ಎ: ರೂ. 5 ಕೋಟಿಗಳ ಮಿತಿಯೊಂದಿಗೆ ಘಟಕ ಮತ್ತು ಯಂತ್ರೋಪಕರಣಗಳು / ಕಟ್ಟಡ ನಿರ್ಮಾಣ ಮತ್ತು ಬಾಳಿಕೆ ಬರುವ ಭೌತಿಕ ಆಸ್ತಿಗಳಲ್ಲಿನ ಹೂಡಿಕೆಯ ಅರ್ಹ ಮೌಲ್ಯದ ಶೇ.30.
ವಲಯ ಬಿ: ರೂ 7.5 ಕೋಟಿಗಳ ಮಿತಿಯೊಂದಿಗೆ ಘಟಕ ಮತ್ತು ಯಂತ್ರೋಪಕರಣಗಳು / ಕಟ್ಟಡ ನಿರ್ಮಾಣ ಮತ್ತು ಬಾಳಿಕೆ ಬರುವ ಭೌತಿಕ ಸ್ವತ್ತುಗಳಲ್ಲಿನ ಹೂಡಿಕೆಯ ಅರ್ಹ ಮೌಲ್ಯದ ಶೇ.50. |
ಬಂಡವಾಳ ಹೂಡಿಕೆಯ ಪ್ರೋತ್ಸಾಹ (ಹೊಸ ಮತ್ತು ವಿಸ್ತರಣೆಯ ಎರಡೂ ಘಟಕಗಳಿಗೆ):
ವಲಯ ಎ: ರೂ 10 ಕೋಟಿಗಳ ಮಿತಿಯೊಂದಿಗೆ ಘಟಕ ಮತ್ತು ಯಂತ್ರೋಪಕರಣಗಳು / ಕಟ್ಟಡ ನಿರ್ಮಾಣ ಮತ್ತು ಬಾಳಿಕೆ ಬರುವ ಭೌತಿಕ ಆಸ್ತಿಗಳಲ್ಲಿನ ಹೂಡಿಕೆಯ ಅರ್ಹ ಮೌಲ್ಯದ ಶೇ.30.
ವಲಯ ಬಿ: ರೂ 10 ಕೋಟಿಗಳ ಮಿತಿಯೊಂದಿಗೆ ಘಟಕ ಮತ್ತು ಯಂತ್ರೋಪಕರಣಗಳು / ಕಟ್ಟಡ ನಿರ್ಮಾಣ ಮತ್ತು ಬಾಳಿಕೆ ಬರುವ ಭೌತಿಕ ಆಸ್ತಿಗಳಲ್ಲಿನ ಹೂಡಿಕೆಯ ಅರ್ಹ ಮೌಲ್ಯದ ಶೇ.50. |
2 |
ಕೇಂದ್ರೀಯ ಬಂಡವಾಳದ ಬಡ್ಡಿ ರಿಯಾಯಿತಿ (ಹೊಸ ಮತ್ತು ವಿಸ್ತರಣೆಯ ಘಟಕಗಳಿಗೆ):
ವಲಯ ಎ: 7 ವರ್ಷಗಳವರೆಗೆ ಶೇ.3 ಬಡ್ಡಿ ರಿಯಾಯಿತಿ ನೀಡಲಾಗುತ್ತದೆ ವಲಯ ಬಿ: 7 ವರ್ಷಗಳವರೆಗೆ ಶೇ.5 ಬಡ್ಡಿ ರಿಯಾಯಿತಿ ನೀಡಲಾಗುತ್ತದೆ |
ಕೇಂದ್ರೀಯ ಬಂಡವಾಳದ ಬಡ್ಡಿ ರಿಯಾಯಿತಿ (ಹೊಸ ಮತ್ತು ವಿಸ್ತರಣೆಯ ಎರಡೂ ಘಟಕಗಳಿಗೆ):
ವಲಯ ಎ: 7 ವರ್ಷಗಳವರೆಗೆ ಶೇ.3 ಬಡ್ಡಿ ರಿಯಾಯಿತಿ ನೀಡಲಾಗುತ್ತದೆ ವಲಯ ಬಿ: 7 ವರ್ಷಗಳವರೆಗೆ ಶೇ.5 ಬಡ್ಡಿ ರಿಯಾಯಿತಿ ನೀಡಲಾಗುತ್ತದೆ |
3 |
ಉತ್ಪಾದನೆ ಮತ್ತು ಸೇವೆ ಆಧಾರಿತ ಪ್ರೋತ್ಸಾಹ (MSLI)– ಹೊಸ ಘಟಕಗಳಿಗೆ ಮಾತ್ರ – ಜಿ ಎಸ್ ಟಿ ಯ ನಿವ್ವಳ ಪಾವತಿಗೆ ಲಿಂಕ್ ಮಾಡಲಾಗಿದೆ,
ವಲಯ ಎ: P&M ನಲ್ಲಿ ಹೂಡಿಕೆಯ ಅರ್ಹ ಮೌಲ್ಯದ ಶೇ.75 ವಲಯ ಬಿ: P&M ನಲ್ಲಿ ಹೂಡಿಕೆಯ ಅರ್ಹ ಮೌಲ್ಯದ ಶೇ.100 |
ಇಲ್ಲ |
ಯೋಜನೆಯ ಎಲ್ಲಾ ಭಾಗಗಳ ಒಂದು ಘಟಕಕ್ಕೆ ಗರಿಷ್ಠ ಅರ್ಹ ಪ್ರಯೋಜನಗಳು: ರೂ 250 ಕೋಟಿ. |
ಕ್ರ.ಸಂ. | ಜಿ ಎಸ್ ಟಿ ಅನ್ವಯದಲ್ಲಿ | ಜಿ ಎಸ್ ಟಿ ಅನ್ವಯವಾಗದಲ್ಲಿ |
---|
ಹಣಕಾಸು ವೆಚ್ಚ:
ಪ್ರಸ್ತಾವಿತ ಯೋಜನೆಯ ಹಣಕಾಸು ವೆಚ್ಚವು ಅಧಿಸೂಚನೆಯ ದಿನಾಂಕದಿಂದ 10 ವರ್ಷಗಳವರೆಗೆ ಯೋಜನೆಯ ಅವಧಿಗೆ 10,037 ಕೋಟಿ ರೂ. ಆಗಿದೆ. (ಬದ್ಧ ಹೊಣೆಗಾರಿಕೆಗಳಿಗೆ ಹೆಚ್ಚುವರಿ 8 ವರ್ಷಗಳು). ಇದು ಕೇಂದ್ರ ವಲಯದ ಯೋಜನೆಯಾಗಲಿದೆ. ಯೋಜನೆಯನ್ನು ಎರಡು ಭಾಗಗಳಾಗಿ ವಿಂಗಡಿಸಲು ಪ್ರಸ್ತಾಪಿಸಲಾಗಿದೆ. ಭಾಗ, ಎ ಅರ್ಹ ಘಟಕಗಳಿಗೆ (9737 ಕೋಟಿ ರೂ.) ಪ್ರೋತ್ಸಾಹಕಗಳನ್ನು ಒದಗಿಸುತ್ತದೆ, ಮತ್ತು ಭಾಗ ಬಿ, ಯೋಜನೆಯ ಅನುಷ್ಠಾನ ಮತ್ತು ಸಾಂಸ್ಥಿಕ ವ್ಯವಸ್ಥೆಗಳಿಗಾಗಿ ಇದೆ. (300 ಕೋಟಿ ರೂ.)
ಗುರಿಗಳು:
ಪ್ರಸ್ತಾವಿತ ಯೋಜನೆಯು ಸರಿಸುಮಾರು 2180 ಅರ್ಜಿಗಳನ್ನು ಅಂದಾಜಿಸುತ್ತದೆ ಮತ್ತು ಯೋಜನೆಯ ಅವಧಿಯಲ್ಲಿ ಸುಮಾರು 83,000 ನೇರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಗಮನಾರ್ಹ ಸಂಖ್ಯೆಯ ಪರೋಕ್ಷ ಉದ್ಯೋಗಗಳು ಸಹ ಸೃಷ್ಟಿಯಾಗುವ ನಿರೀಕ್ಷೆಯಿದೆ.
ಯೋಜನೆಯ ಪ್ರಮುಖ ಲಕ್ಷಣಗಳು:
ii ನೋಂದಣಿಗಾಗಿ ಅರ್ಜಿಯ ಅವಧಿ: ಕೈಗಾರಿಕಾ ಘಟಕವು ಅಧಿಸೂಚನೆಯ ದಿನಾಂಕದಿಂದ 31.03.2026 ರವರೆಗೆ ನೋಂದಣಿಗೆ ಅರ್ಜಿ ಸಲ್ಲಿಸಬಹುದು.
iii ನೋಂದಣಿಯ ಮಂಜೂರಾತಿ: ನೋಂದಣಿಗಾಗಿ ಎಲ್ಲಾ ಅರ್ಜಿಗಳನ್ನು 31.03.2027 ರೊಳಗೆ ವಿಲೇವಾರಿ ಮಾಡಬೇಕು.
ಅನುಷ್ಠಾನ ತಂತ್ರ:
ಡಿಪಿಐಐಟಿಯು ರಾಜ್ಯಗಳ ಸಹಕಾರದೊಂದಿಗೆ ಯೋಜನೆಯನ್ನು ಜಾರಿಗೊಳಿಸುತ್ತದೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕೆಳಗಿನ ಸಮಿತಿಗಳ ಮೂಲಕ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.
ಹಿನ್ನೆಲೆ:
ಭಾರತ ಸರ್ಕಾರವು ಹೊಸ ಕೈಗಾರಿಕಾ ಅಭಿವೃದ್ಧಿ ಯೋಜನೆ, UNNATI (ಉತ್ತರ ಪೂರ್ವ ಪರಿವರ್ತಕ ಕೈಗಾರಿಕೀಕರಣ ಯೋಜನೆ), 2024 ಅನ್ನು ಈಶಾನ್ಯ ಪ್ರದೇಶದ ರಾಜ್ಯಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗಾಗಿ ಕೇಂದ್ರ ವಲಯದ ಯೋಜನೆಯಾಗಿ ರೂಪಿಸಿದೆ. ಲಾಭದಾಯಕ ಉದ್ಯೋಗವನ್ನು ಸೃಷ್ಟಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ, ಇದು ಪ್ರದೇಶದ ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ಇದು ಉತ್ಪಾದನೆ ಮತ್ತು ಸೇವಾ ವಲಯಗಳಲ್ಲಿ ಉತ್ಪಾದಕ ಆರ್ಥಿಕ ಚಟುವಟಿಕೆಯನ್ನು ಸೃಷ್ಟಿಸುತ್ತದೆ.
ಹೊಸ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆಗಳನ್ನು ಪೋಷಿಸುವ ಮೂಲಕ ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಈಶಾನ್ಯ ರಾಜ್ಯ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಹೊಸ ಒತ್ತು ನೀಡಬೇಕಾಗಿದೆ. ಆದಾಗ್ಯೂ, ಕೈಗಾರಿಕಾ ಬೆಳವಣಿಗೆ ಮತ್ತು ಈಶಾನ್ಯ ರಾಜ್ಯ ಪ್ರದೇಶದ ಪರಿಸರದ ನಡುವೆ ಸೂಕ್ತ ಸಮತೋಲನವನ್ನು ಕಾಯ್ದುಕೊಳ್ಳಲು, ನವೀಕರಿಸಬಹುದಾದ ಇಂಧನ, ಇವಿ ಚಾರ್ಜಿಂಗ್ ಕೇಂದ್ರಗಳು ಮುಂತಾದ ಕೆಲವು ಕೈಗಾರಿಕೆಗಳನ್ನು ಧನಾತ್ಮಕ ಪಟ್ಟಿಯಲ್ಲಿ ಇರಿಸಲಾಗುತ್ತದೆ ಮತ್ತು ಪರಿಸರಕ್ಕೆ ಅಡ್ಡಿಪಡಿಸುವ ಸಿಮೆಂಟ್, ಪ್ಲಾಸ್ಟಿಕ್ ಇತ್ಯಾದಿ ಕೆಲವು ವಲಯಗಳು ನಕಾರಾತ್ಮಕ ಪಟ್ಟಿಯಲ್ಲಿರುತ್ತವೆ.
The Uttar Poorva Transformative Industrialisation Scheme, 2024, which has been approved by the Cabinet will enhance the growth trajectory of the Northeast and create many opportunities for the youth. https://t.co/1edmKK4KoD https://t.co/gQDXkHZg59
— Narendra Modi (@narendramodi) March 7, 2024