ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ 15.3.2017ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ಆರೋಗ್ಯ ನೀತಿ 2017 (ಎನ್.ಎಚ್.ಪಿ. 2017) ಕ್ಕೆ ತನ್ನ ಅನುಮೋದನೆ ನೀಡಿದೆ. ಈ ನೀತಿಯು ಸಮಗ್ರ ಸಂಯೋಜಿತ ರೀತಿಯಲ್ಲಿ ಕ್ಷೇಮದೆಡೆಗೆ ಸಾಗಲು ಪ್ರತಿಯೊಬ್ಬರನ್ನೂ ತಲುಪುವುದನ್ನು ಬಯಸುತ್ತದೆ. ಇದು ಸಾರ್ವತ್ರಿಕವಾದ ಆರೋಗ್ಯ ಕವರೇಜ್ ಮತ್ತು ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಗುರಿ ಹೊಂದಿದೆ.
ಈ ನೀತಿಯು ತಮ್ಮ ಕಾರ್ಯತಂತ್ರಾತ್ಮಕ ಪಾಲುದಾರರಾದ ಖಾಸಗಿ ವಲಯದ ಜತೆ ಸಮಸ್ಯೆಗಳು ಮತ್ತು ಪರಿಹಾರಗಳತ್ತ ನೋಡುತ್ತದೆ. ಆರೋಗ್ಯ ರಕ್ಷಣೆಯಲ್ಲಿ ಗುಣಮಟ್ಟ ಉತ್ತೇಜಿಸುವ, ಹೊರಹೊಮ್ಮುವ ಕಾಯಿಲೆಗಳ ಮೇಲೆ ನಿಗಾ ಮತ್ತು ಉತ್ತೇಜನದಾಯಕ ಮತ್ತು ತಡೆಗಟ್ಟುವಂತಹ ಆರೋಗ್ಯ ಸೇವೆಗಳಲ್ಲಿನ ಹೂಡಿಕೆಯನ್ನು ಬಯಸುತ್ತದೆ. ಈ ನೀತಿಯುವ ರೋಗಿಗಳ ಕೇಂದ್ರೀಕೃತವಾಗಿದೆ ಮತ್ತು ಗುಣಮಟ್ಟ ಚಾಲಿತವಾಗಿದೆ. ಇದು ಆರೋಗ್ಯ ಭದ್ರತೆ ಮತ್ತು ಔಷಧ ಮತ್ತು ಸಲಕರಣೆಗಳಿಗೆ ಸಂಬಂಧಿಸಿದಂತೆ ಮೇಕ್ ಇನ್ ಇಂಡಿಯಾ ಸವಾಲು ಪೂರೈಸುತ್ತದೆ.
ರಾಷ್ಟ್ರೀಯ ಆರೋಗ್ಯ ಸೇವೆಗಳ ನೀತಿ 2017ರ ಮುಖ್ಯ ಉದ್ದೇಶ ಸಾಧ್ಯವಾದಷ್ಟು ಅತ್ಯುನ್ನತ್ತ ದರ್ಜೆಯ ಉತ್ತಮ ಆರೋಗ್ಯ ಮತ್ತು ಕ್ಷೇಮವನ್ನು ತಡೆಗಟ್ಟಬಹುದಾದ ಮತ್ತು ಎಲ್ಲ ಅಭಿವೃದ್ಧಿಪರ ನೀತಿಗಳಲ್ಲಿ ಉತ್ತೇಜನಕಾರಿ ಆರೋಗ್ಯ ರಕ್ಷಣೆಯ ಮೂಲಕ ಸಾಧಿಸುವುದಾಗಿದೆ, ಮತ್ತು ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆಯ ಸೇವೆಗಳು ಸಾರ್ವತ್ರಿಕವಾಗಿ ಯಾವುದೇ ರೀತಿಯ ಆರ್ಥಿಕ ತೊಡಕಾಗದ ರೀತಿ ಲಭಿಸುವಂತೆ ಮಾಡುವುದಾಗಿದೆ. ಮಾಧ್ಯಮಿಕ ಮತ್ತು ತೃತೀಯ ರಕ್ಷಣೆಯ ಹಂತಗಳಲ್ಲಿ ಆರ್ಥಿಕ ಸಂರಕ್ಷಣೆ ಒದಗಿಸುವ ಸಲುವಾಗಿ, ಈ ನೀತಿಯು ಉಚಿತ ಔಷಧ, ಉಚಿತ ರೋಗಪತ್ತೆ ಮತ್ತು ಉಚಿತ ತುರ್ತು ರಕ್ಷಣಾ ಸೇವೆಯನ್ನು ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಒದಗಿಸುತ್ತದೆ. ಆರೋಗ್ಯ ವ್ಯವಸ್ಥೆಯಲ್ಲಿನ ಗಂಭೀರ ತೊಂದರೆಗಳನ್ನು ಮತ್ತು ಅಲ್ಪಕಾಲೀನ ಪೂರಕ ಮಾಧ್ಯಮಿಕ ಮತ್ತು ತೃತೀಯ ಆರೋಗ್ಯ ರಕ್ಷಣಾ ಸೇವೆಯ ಕಾರ್ಯತಂತ್ರಾತ್ಮಕ ಖರೀದಿಗೆ ಈ ನೀತಿ ಅವಕಾಶ ನೀಡುತ್ತದೆ.
ಎಲ್ಲ ಆಯಾಮಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಉತ್ತಮವಾಗಿ ರೂಪಿಸುವಲ್ಲಿ ಸರ್ಕಾರದ ಪಾತ್ರದ ಅದ್ಯತೆಗೂ ಈ ನೀತಿ ಶಿಫಾರಸು ಮಾಡುತ್ತದೆ. ಈ ಹೊಸ ನೀತಿಯ ಮಾರ್ಗದರ್ಶಿಯನ್ನು ಸಾರ್ವಜನಿಕ ವೆಚ್ಚ ಮತ್ತು ಎಲ್ಲರಿಗೂ ಕೈಗೆಟಕುವ ಮತ್ತು ಸಮಗ್ರ ಹಾಗೂ ಸಂಯೋಜಿತ ಸಾರ್ವಜನಿಕ ಆರೋಗ್ಯಸೇವೆಯ ಮೇಲೆ ನಿರ್ಧರಿಸಲಾಗಿದೆ.
ಎನ್.ಎಚ್.ಪಿ. 2017 ರಾಷ್ಟ್ರೀಯ ಗುರಿಗಳನ್ನು ಸಾಧಿಸಲು ಗಂಭೀರವಾದ ಕಂದಕವನ್ನು ತುಂಬಲು, ಖಾಸಗಿ ವಲಯದೊಂದಿಗೆ ಧನಾತ್ಮಕ ಮತ್ತು ಜನಪರವಾದ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸುತ್ತದೆ. ಕಾರ್ಯತಂತ್ರಾತ್ಮಕ ಖರೀದಿ, ಸಾಮರ್ಥ್ಯ ವರ್ಧನೆ, ಕೌಶಲ ವರ್ಧನೆ ಕಾರ್ಯಕ್ರಮ, ಪೀಳಿಗೆಯ ಜಾಗೃತಿ, ಸಮುದಾಯಕ್ಕೆ ಮಾನಸಿಕ ಆರೋಗ್ಯ ಸೇವೆ ಬಲಪಡಿಸಲು ಸುಸ್ಥಿರ ಅಭಿವೃದ್ಧಿ ಜಾಲ ಮತ್ತು ವಿಕೋಪ ನಿರ್ವಹಣೆಗೆ ಖಾಸಗಿ ವಲಯದ ಸಹಯೋಗ ಪಡೆಯಲು ಇದು ಅವಕಾಶ ನೀಡುತ್ತದೆ. ಈ ನೀತಿಯು ಆರ್ಥಿಕ ಮತ್ತು ಪ್ರೋತ್ಸಾಹಕ ರಹಿತವಾದ ಖಾಸಗಿ ವಲಯದ ಪಾಲುದಾರಿಕೆಯನ್ನು ಪ್ರತಿಪಾದಿಸುತ್ತದೆ.
ಈ ನೀತಿಯು ಸಾರ್ವಜನಿಕ ಆರೋಗ್ಯ ವೆಚ್ಚವನ್ನು ಕಾಲಮಿತಿಯ ಸ್ವರೂಪದಲ್ಲಿ ಜಿಡಿಪಿಯ ಶೇ.2.5ಕ್ಕೆ ಹೆಚ್ಚಿಸಲು ಪ್ರಸ್ತಾಪಿಸುತ್ತದೆ. ಈ ನೀತಿಯು ಆರೋಗ್ಯ ಮತ್ತು ಕ್ಷೇಮ (ಚಿಕಿತ್ಸಾ) ಕೇಂದ್ರಗಳ ಮೂಲಕ ಪ್ರಾಥಮಿಕ ಆರೋಗ್ಯ ರಕ್ಷಣೆಯ ಬೃಹತ್ ಪ್ಯಾಕೇಜ್ ಒದಗಿಸಲು ಅವಕಾಶ ಕಲ್ಪಿಸುತ್ತದೆ. ಈ ನೀತಿಯು ಜೆರಿಯಾಟ್ರಿಕ್ ಆರೋಗ್ಯ ರಕ್ಷಣೆ, ಉಪಶಮನ ಆರೈಕೆ ಮತ್ತು ಪುನರ್ವಸತಿ ಸೇವೆಗಳನ್ನು ಒಳಗೊಂಡ ಸಮಗ್ರ ಪ್ರಾಥಮಿಕ ಆರೋಗ್ಯ ಪ್ಯಾಕೇಜ್ ನ ಆಯ್ದ ಪ್ರಮುಖ ಬದಲಾವಣೆ ಸೂಚಿಸುತ್ತದೆ. ಈ ನೀತಿಯು ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ಹಂತದ ಆರೋಗ್ಯ ರಕ್ಷಣೆಗೆ ಹೆಚ್ಚಿನ ಪ್ರಮಾಣದಲ್ಲಿ (ಮೂರನೇ ಎರಡು ಭಾಗದಷ್ಟು ಅಥವಾ ಹೆಚ್ಚು) ಸಂಪನ್ಮೂಲಗಳ ಹಂಚಿಕೆಯನ್ನು ಪ್ರತಿಪಾದಿಸುತ್ತದೆ. ಈ ನೀತಿಯು ಪ್ರಸ್ತುತ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಒದಗಿಸುತ್ತಿರುವ ಮಾಧ್ಯಮಿಕ ಆರೋಗ್ಯ ರಕ್ಷಣೆಯನ್ನು ಜಿಲ್ಲಾ ಮಟ್ಟದಲ್ಲಿ ಒದಗಿಸಬೇಕೆಂದು ಬಯಸುತ್ತದೆ.
ಈ ನೀತಿಯು ಆರೋಗ್ಯ ಸ್ಥಿತಿ ಮತ್ತು ಕಾರ್ಯಕ್ರಮಗಳ ಪರಿಣಾಮ, ಆರೋಗ್ಯ ಕಾರ್ಯವೈಖರಿಯನ್ನು ಮತ್ತು ವ್ಯವಸ್ಥೆಯನ್ನು ಬಲಪಡಿಸುವ, ರೋಗ ಸ್ಥಿತಿ/ಪ್ರಕರಣಗಳನ್ನು ತಗ್ಗಿಸಲು ನಿರ್ದಿಷ್ಟ ಪರಿಮಾಣಾತ್ಮಕ ಗುರಿಗಳನ್ನು ನಿಯೋಜಿಸುತ್ತದೆ. ಇದು ಆರೋಗ್ಯ ನಿಗಾ ವ್ಯವಸ್ಥೆಯನ್ನು ಬಲಪಡಿಸಲು ಮತ್ತು 2020ರ ವೇಳೆಗೆ ಸಾರ್ವಜನಿಕ ಆರೋಗ್ಯದ ಮಹತ್ವದಲ್ಲಿ ಕಾಯಿಲೆಗಳಿಗೆ ರಿಜಿಸ್ಟ್ರಿಗಳನ್ನು ಸ್ಥಾಪಿಸಲು ಬಯಸುತ್ತದೆ. ಸಾರ್ವಜನಿಕ ಆರೋಗ್ಯದ ಗುರಿಯೊಂದಿಗೆ ವೈದ್ಯಕೀಯ ಉಪಕರಣಗಳು ಮತ್ತು ಸಲಕರಣೆಗಳನ್ನು ಇತರ ನೀತಿಯಲ್ಲಿ ಜೋಡಿಸಲು ಬಯಸುತ್ತದೆ.
ರಾಷ್ಟ್ರೀಯ ಆರೋಗ್ಯ ನೀತಿ 2017ರ ಪ್ರಾಥಮಿಕ ಗುರಿಯು,– ಆರೋಗ್ಯದಲ್ಲಿ ಹೂಡಿಕೆ, ಸಂಘಟನೆ ಮತ್ತು ಆರೋಗ್ಯ ರಕ್ಷಣೆ ಸೇವೆಗಳಿಗೆ ಆರ್ಥಿಕ ನೆರವು, ರೋಗಗಳ ತಡೆ ಮತ್ತು ಅಡ್ಡ ಕ್ಷೇತ್ರೀಯ ಕ್ರಮಗಳ ಮೂಲಕ ಉತ್ತಮ ಆರೋಗ್ಯ ಉತ್ತೇಜನ, ತಂತ್ರಜ್ಞಾನಕ್ಕೆ ಪ್ರವೇಶ, ಮಾನವ ಸಂಪನ್ಮೂಲದ ಅಭಿವೃದ್ಧಿ, ವೈದ್ಯಕೀಯ ಬಹುಸಂಸ್ಕೃತಿಗೆ ಉತ್ತೇಜನ, ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಜ್ಞಾನದ ಸೆಲೆಯನ್ನು ಅಭಿವೃದ್ಧಿಪಡಿಸುವುದು, ಆರ್ಥಿಕ ಸಂರಕ್ಷಣೆಯ ಕಾರ್ಯತಂತ್ರ ಮತ್ತು ನಿಯಂತ್ರಣ ಹಾಗೂ ಪ್ರಗತಿದಾಯಕ ಆರೋಗ್ಯದ ಖಾತ್ರಿಯ ಎಲ್ಲ ಆಯಾಮಗಳಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ ಸರ್ಕಾರದ ಪಾತ್ರವನ್ನು ಆದ್ಯತೆಗೊಳಿಸುವ ಮತ್ತು ಬಲಪಡಿಸುವ, ಸ್ಪಷ್ಟಪಡಿಸುವ ಮತ್ತು ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.
ಈ ನೀತಿಯು ದೇಶಾದ್ಯಂತ ಇರುವ ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಬಲಪಡಿಸುವ ಮತ್ತು ಪುನಶ್ಚೇತನಗೊಳಿಸಲು ಒತ್ತು ನೀಡುತ್ತದೆ, ಈ ಮೂಲಕ ಸಾರ್ವತ್ರಿಕವಾಗಿ ಉಚಿತ ಔಷಧ, ರೋಗಪತ್ತೆ ಮತ್ತು ಇತರ ಅಗತ್ಯ ಆರೋಗ್ಯ ರಕ್ಷಣೆಗಳನ್ನು ಒದಗಿಸುತ್ತದೆ.
ಈ ನೀತಿಯ ವಿಸ್ತೃತವಾದ ತತ್ವಗಳು ವೃತ್ತಪರತೆ, ಏಕತೆ ಮತ್ತು ಸಿದ್ಧಾಂತ, ಸಮಾನತೆ, ಕೈಗೆಟಕುವ ದರದ, ಸಾರ್ವರ್ತಿಕ, ರೋಗಿ ಕೇಂದ್ರಿತ ಮತ್ತು ಗುಣಮಟ್ಟದ ಆರೋಗ್ಯರಕ್ಷಣೆ, ಹೊಣೆಗಾರಿಕೆ ಮತ್ತು ಬಹುಶ್ರುತತೆಯಿಂದ ಕೂಡಿದೆ.
ಸಾರ್ವಜನಿಕ ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣೆ ಕೊರತೆ ಪ್ರದೇಶಗಳಲ್ಲಿ ಮಾನ್ಯತೆ ಪಡೆದ ಸರ್ಕಾರೇತರ ಆರೋಗ್ಯ ಸೇವೆಗಳ ಪೂರೈಕೆದಾರರಿಂದ, ಆರೋಗ್ಯ ರಕ್ಷಣೆ ವೆಚ್ಚದಲ್ಲಿ ಗಣನೀಯವಾಗಿ ಜೇಬಿಗೆ ಬೀಳುವ ಖರ್ಚನ್ನು ತಗ್ಗಿಸುವ, ಸಾರ್ವಜನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ನಂಬಿಕೆ ಪುನರ್ ಸ್ಥಾಪಿಸುವ ಮತ್ತು ಖಾಸಗಿ ಆರೋಗ್ಯ ರಕ್ಷಣಾ ಕೈಗಾರಿಕೆಯ ಕಾರ್ಯಾಚರಣೆ ಮತ್ತು ವೃದ್ಧಿಯ ಜೊತೆಗೆ ವೈದ್ಯಕೀಯ ತಂತ್ರಜ್ಞಾನವನ್ನು ಸಾರ್ವಜನಿಕ ಆರೋಗ್ಯ ಗುರಿಗಳ ಸಾಲಿನಲ್ಲಿ ಕಾರ್ಯತಂತ್ರಾತ್ಮಕ ಖರೀದಿಯ ಮೂಲಕ ಗುಣಮಟ್ಟದ ಮಾಧ್ಯಮಿಕ ಮತ್ತು ತೃತೀಯ ಹಂತದ ಆರೋಗ್ಯ ರಕ್ಷಣೆಯ ಸುಧಾರಿತ ಸೇವೆಗಳನ್ನು ಇದು ಬಯಸುತ್ತದೆ.
ಈ ನೀತಿಯು ಮಗು ಮತ್ತು ಯುವಜನರ ಆರೋಗ್ಯದ ಗರಿಷ್ಠ ಮಟ್ಟವನ್ನು ಸಾಧಿಸಲು ಪೂರ್ವಭಾವಿ ಆರೈಕೆ (ರೋಗವು ಬರುವ ಮೊದಲೇ ತಡೆಯುವ ಗುರಿ)ಯ ಬದ್ಧತೆಯನ್ನು ಪ್ರತಿಪಾದಿಸುತ್ತದೆ. ಈ ನೀತಿಯು ಶಾಲಾ ಆರೋಗ್ಯ ಕಾರ್ಯಕ್ರಮಗಳನ್ನು ಪ್ರಮುಖ ಗಮನದ ಕ್ಷೇತ್ರವಾಗಿ ಪರಿಗಣಿಸುತ್ತದೆ ಮತ್ತು ಶಾಲಾ ಪಠ್ಯದಲ್ಲಿ ನೈರ್ಮಲ್ಯವನ್ನು ಒಂದು ಭಾಗವಾಗಿ ಮಾಡುತ್ತದೆ. ಸಾಂಸ್ಕೃತಿಕ ಆರೋಗ್ಯ ಪರಂಪರೆಯನ್ನು ಬಳಸಿಕೊಳ್ಳುವ ಸಲುವಾಗಿ, ಈ ನೀತಿಯು ವಿವಿಧ ಆರೋಗ್ಯ ವ್ಯವಸ್ಥೆಗಳನ್ನು ಮುಖ್ಯವಾಹಿನಿಗೆ ತರಲು ಶಿಫಾರಸು ಮಾಡುತ್ತದೆ. ಆಯುಷ್ ನ ಸಾಮರ್ಥ್ಯವನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ, ಈ ನೀತಿಯು ಸಾರ್ವಜನಿಕ ಸೌಲಭ್ಯದಲ್ಲಿ ಕೋ ಲೊಕೇಷನ್ ಮೂಲಕ ಆಯುಷ್ ನ ಪರಿಹಾರಗಳ ಉತ್ತಮ ಲಭ್ಯತೆಗೆಅವಕಾಶ ನೀಡುತ್ತದೆ.
ಗ್ರಾಮೀಣ ಪ್ರದೇಶ ಮತ್ತು ಹೆಚ್ಚು ಸೌಲಭ್ಯವಿಲ್ಲದ ಪ್ರದೇಶಗಳಲ್ಲಿ ಪ್ರೊ-ಬೋನೋ ಆಧಾರದ ಮೇಲೆ ಆರೋಗ್ಯ ರಕ್ಷಣೆಯ ವೃತ್ತಿಪರರಿಗೆ “ ಸಮಾಜಕ್ಕೆ ಮರಳಿ ನೀಡಿ’ ಉಪಕ್ರಮದ ಅಡಿಯಲ್ಲಿ ಸ್ವಯಂ ಸೇವೆಯನ್ನು ಈ ನೀತಿ ಬೆಂಬಲಿಸುತ್ತದೆ.
ಈ ನೀತಿಯು ಆರೋಗ್ಯ ವ್ಯವಸ್ಥೆಯ ಫಲಶ್ರುತಿ ಮತ್ತು ಸಾಮರ್ಥ್ಯಕ್ಕೆ ಡಿಜಿಟಲ್ ಟೂಲ್ ಗಳ ಹೆಚ್ಚಿನ ನಿಯೋಜನೆಯನ್ನು ಪ್ರತಿಪಾದಿಸುತ್ತದೆ ಮತ್ತು ನಿಯಂತ್ರಣ, ಅಭಿವೃದ್ಧಿ ಮತ್ತು ಸಾತತ್ಯ ಆರೈಕೆಯಾದ್ಯಂತ ಡಿಜಿಟಲ್ ಆರೋಗ್ಯ ಅಳವಡಿಕೆ ಮತ್ತು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪ್ರಾಧಿಕಾರ (ಎನ್.ಡಿ.ಎಚ್.ಎ.) ಸ್ಥಾಪನೆಗೆ ಪ್ರಸ್ತಾಪಿಸುತ್ತದೆ.
ಈನೀತಿ ವೃದ್ಧಿಸುತ್ತಿರುವ ಭರವಸೆ ಆಧಾರಿತ ವಿಧಾನವನ್ನು ಶಿಫಾರಸು ಮಾಡುತ್ತದೆ.
ಹಿನ್ನೆಲೆ:
ರಾಷ್ಟ್ರೀಯ ಆರೋಗ್ಯ ನೀತಿ 2017 ತನ್ನ ಸೂತ್ರೀಕರಣಕ್ಕೆ ಬಾಧ್ಯಸ್ಥರೊಂದಿಗೆ ಸಮಾಲೋಚನೆಯನ್ನು ಒಳಗೊಂಡ ಸುದೀರ್ಘ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿದೆ. ಆ ಪ್ರಕಾರವಾಗಿ, ಭಾರತ ಸರ್ಕಾರ, ರಾಷ್ಟ್ರೀಯ ಆರೋಗ್ಯ ನೀತಿಯ ಕರಡು ರೂಪಿಸಿದೆ ಮತ್ತು ಅದನ್ನು 2014ರ ಡಿಸೆಂಬರ್ 20ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದೆ.
ಆನಂತರ, ಭಾದ್ಯಸ್ಥರು ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸವಿರವಾದ ಸಮಾಲೋಚನೆ ನಡೆಸಿ, ಬಂದ ಶಿಫಾರಸುಗಳ ಆಧಾರದ ಮೇಲೆ ರಾಷ್ಟ್ರೀಯ ಆರೋಗ್ಯ ನೀತಿಯ ಕರಡನ್ನು ಇನ್ನಷ್ಟು ಉತ್ತಮಪಡಿಸಲಾಗಿದೆ. ಇದಕ್ಕೆ ಸರ್ವೋನ್ನತ ನೀತಿ ನಿರೂಪಕ ಸಂಸ್ಥೆಯಾದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂಡಳಿಯ ಅನುಮೋದನೆಯೂ ದೊರೆತಿದೆ. ಅದು 2016ರ ಫೆಬ್ರವರಿ 27ರಂದು ನಡೆದ ತನ್ನ 12ನೇ ಸಮಾವೇಶದಲ್ಲಿ ಅನುಮೋದನೆ ನೀಡಿದೆ.
ಈ ಹಿಂದೆ 2002ರಲ್ಲಿ ಆರೋಗ್ಯ ನೀತಿ ರೂಪಿಸಲಾಗಿತ್ತು. ಆಗಿನಿಂದ ಆಗಿರುವ ಸಾಮಾಜಿಕ ಆರ್ಥಿಕ ಮತ್ತು ಸೋಂಕು ಶಾಸ್ತ್ರದ ಬದಲಾವಣೆಗಳಿಂದ ಹೊರಹೊಮ್ಮಿರುವ ಮತ್ತು ಹಾಲಿ ಸವಾಲುಗಳನ್ನು ಎದುರಿಸಲು ಹೊಸ ರಾಷ್ಟ್ರೀಯ ಆರೋಗ್ಯ ನೀತಿಯನ್ನು ರೂಪಿಸುವ ಅಗತ್ಯ ಕಂಡು ಬಂದಿತ್ತು.
AKT/VBA/SH