Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ಕಲ ದಿವಸ(ಒಡಿಶಾ ದಿನ) ಅಂಗವಾಗಿ ಒಡಿಶಾದ ಜನರಿಗೆ ಪ್ರಧಾನಮಂತ್ರಿ ಅವರು ಶುಭಾಶಯ ಕೋರಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾ ಜನತೆಗೆ ಉತ್ಕಲ ದಿವಸದ ವೇಳೆ ಶುಭಾಶಯ ಕೋರಿದ್ದಾರೆ. ಒಡಿಯಾ ಸಂಸ್ಕೃತಿಯು ಜಾಗತಿಕವಾಗಿ ಮೆಚ್ಚುಗೆ ಪಡೆದಿದೆ ಮತ್ತು ಒಡಿಯಾ ಜನರು ಭಾರತದ ಪ್ರಗತಿಗೆ ಮಹತ್ವದ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ಅವರು;

“ಉತ್ಕಲ ದಿವಸದ ವಿಶೇಷ ಸಂದರ್ಭದಲ್ಲಿ, ಒಡಿಶಾದ ಜನರಿಗೆ ಶುಭಾಶಯಗಳು. ಒಡಿಯಾ ಜನರು ಭಾರತದ ಪ್ರಗತಿಗೆ ಹೆಗ್ಗುರುತಾದ ಕೊಡುಗೆಗಳನ್ನು ನೀಡುತ್ತಿದ್ದಾರೆ ಮತ್ತು ಒಡಿಯಾ ಸಂಸ್ಕೃತಿಯು ಜಾಗತಿಕವಾಗಿ ಮೆಚ್ಚುಗೆ ಪಡೆದಿದೆ. ಮುಂಬರುವ ದಿನಗಳಲ್ಲಿ ಒಡಿಶಾದ ಅಭಿವೃದ್ಧಿಗಾಗಿ ನಾನು ಪ್ರಾರ್ಥಿಸುತ್ತೇನೆ.” ಎಂದಿದ್ದಾರೆ.

 

***