Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ಕಲ ದಿನದ ಅಂಗವಾಗಿ ಪ್ರಧಾನಮಂತ್ರಿ ಶುಭಾಶಯ


ಉತ್ಕಲ ದಿವಸದ ಅಂಗವಾಗಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ಒಡಿಶಾದ ಇತಿಹಾಸ, ಸಾಹಿತ್ಯ ಮತ್ತು ಸಂಗೀತ ಭಾರತಕ್ಕೆ ಹೆಮ್ಮೆ ಎಂದು ಬಣ್ಣಿಸಿರುವ ಅವರು, ಕೇಂದ್ರ ಸರ್ಕಾರ ಮತ್ತು ಒಡಿಶಾ ಸರ್ಕಾರಗಳು ರಾಜ್ಯದ ಪ್ರಗತಿ ವರ್ಧನೆಗೆ ವ್ಯಾಪಕವಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದ್ದಾರೆ.

ಅವರ ಎಕ್ಸ್ ಪೋಸ್ಟ್ ಹೀಗಿದೆ: 

“ಉತ್ಕಲ ದಿನದ ಶುಭಾಶಯಗಳು!

ಈ ದಿನವು ಒಡಿಶಾದ ವೈಭವಯುತ ಸಂಸ್ಕೃತಿಗೆ ಸಲ್ಲಿಸುವ ಸೂಕ್ತ ಗೌರವವಾಗಿದೆ. ಒಡಿಶಾದ ಇತಿಹಾಸ, ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಭಾರತ ಹೆಮ್ಮೆಪಡುತ್ತದೆ. ಒಡಿಶಾದ ಜನರು ಶ್ರಮಜೀವಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಔನ್ನತ್ಯ ಸಾಧಿಸಿದ್ದಾರೆ. ಕಳೆದೊಂದು ವರ್ಷದಿಂದ, ಕೇಂದ್ರ  ಮತ್ತು ಒಡಿಶಾ ಸರ್ಕಾರಗಳು ರಾಜ್ಯದ ಪ್ರಗತಿಯನ್ನು ವರ್ಧಿಸಲು ವ್ಯಾಪಕವಾಗಿ ಕೆಲಸ ಮಾಡುತ್ತಿವೆ.”

 

 

*****