Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉಡುಪು / ಸಿದ್ಧ ಉಡುಪುಗಳು ಮತ್ತು ಮೇಡ್-ಅಪ್‌ ಗಳ ರಫ್ತು ಕುರಿತು ರಾಜ್ಯ ಮತ್ತು ಕೇಂದ್ರ ತೆರಿಗೆ ಮತ್ತು ಸುಂಕಗಳ ರಿಯಾಯಿತಿ (ಆರ್‌ ಒ ಎಸ್‌ ಸಿ ಟಿಎಲ್) ರಿಯಾಯಿತಿಯನ್ನು ಮುಂದುವರಿಸಲು ಸರ್ಕಾರ ಅನುಮೋದಿಸಿದೆ


ಪ್ರಧಾನಿಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು,  ರಾಜ್ಯ ಮತ್ತು ಕೇಂದ್ರ ತೆರಿಗೆ ಮತ್ತು ಸುಂಕದ ರಿಯಾಯಿತಿ (ಆರ್‌ ಒ ಎಸ್‌ ಸಿಟಿಎಲ್) ಯನ್ನು ಮುಂದುವರೆಸಲು ಅನುಮೋದನೆ ನೀಡಿದೆ. ಜವಳಿ ಸಚಿವಾಲಯ ತನ್ನ ಮಾರ್ಚ್ 8, 2019 ರ ಪ್ರಕಟಣೆಯಲ್ಲಿ  ಘೋಷಿಸಿದ ಉಡುಪು / ಸಿದ್ಧ ಉಡುಪುಗಳು (ಅಧ್ಯಾಯಗಳು -61 ಮತ್ತು 62) ಮತ್ತು ಮೇಡ್-ಅಪ್ಸ್ (ಅಧ್ಯಾಯಗಳು -63)  ಆನ್ ಎಕ್ಸ್‌ಪೋರ್ಟೆಡ್ ಪ್ರಾಡಕ್ಟ್ಸ್ (ಆರ್‌ ಒ ಡಿ ಟಿ ಇ ಪಿ) ಹೊರತುಪಡಿಸಿ ರಾಜ್ಯ ಮತ್ತು ಕೇಂದ್ರ ತೆರಿಗೆ ಮತ್ತು ಸುಂಕದ ರಿಯಾಯಿತಿ (ಆರ್‌ ಒ ಎಸ್‌ ಸಿಟಿಎಲ್)ಯನ್ನು ಅದೇ ದರದಲ್ಲಿ ಮುಂದುವರಿಸಲು ಅನುಮತಿಸಲಾಗಿದೆ. ಈ ಯೋಜನೆಯು ಮಾರ್ಚ್ 24, 2024 ರವರೆಗೆ ಮುಂದುವರಿಯುತ್ತದೆ.

 
ಆರ್‌ ಒ ಎಸ್‌ ಸಿಟಿಎಲ್ ವ್ಯಾಪ್ತಿಗೆ ಒಳಪಡದ ಇತರ ಜವಳಿ ಉತ್ಪನ್ನಗಳು (ಅಧ್ಯಾಯಗಳು -61, 62 ಮತ್ತು 63 ಹೊರತುಪಡಿಸಿ) ಆರ್‌ ಒ ಡಿ ಟಿ ಇ ಪಿ ಅಡಿಯಲ್ಲಿ ವಾಣಿಜ್ಯ ಇಲಾಖೆಯಿಂದ ಸಿದ್ಧಪಡಿಸಿದ ಇತರ ಉತ್ಪನ್ನಗಳ ಪಟ್ಟಿಯ ಪ್ರಕಾರ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ..

ಉಡುಪು / ಸಿದ್ಧ ಉಡುಪುಗಳು ಮತ್ತು ಮೇಡ್-ಅಪ್‌ ಗಳಿಗಾಗಿ ಆರ್‌ ಒ ಎಸ್‌ ಸಿಟಿಎಲ್ ಅನ್ನು ಮುಂದುವರಿಸುವುದರಿಂದ ಈ ಉತ್ಪನ್ನಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವ ನಿರೀಕ್ಷೆಯಿದೆ, ಪ್ರಸ್ತುತ ಯಾವುದೇ ವ್ಯವಸ್ಥೆಯಡಿ ರಿಯಾಯಿತಿಗಳಿಗೆ ಅರ್ಹವಲ್ಲದ ಎಲ್ಲಾ ತೆರಿಗೆಗಳು ಮತ್ತು ಸುಂಕಗಳಿಂದ ರಿಯಾಯಿತಿ ಮಾಡುತ್ತದೆ. ಇದು ಸ್ಥಿರ ಮತ್ತು ಊಹಿಸಬಹುದಾದ ನೀತಿ ಆಡಳಿತವನ್ನು ಖಚಿತಪಡಿಸುತ್ತದೆ ಮತ್ತು ಭಾರತೀಯ ಜವಳಿ ರಫ್ತುದಾರರಿಗೆ ಒಂದು ಮಟ್ಟದ ಸಮಾನ ಅವಕಾಶವನ್ನು ಒದಗಿಸುತ್ತದೆ. ಇದಲ್ಲದೆ, ಇದು ನವೋದ್ಯಮ ಮತ್ತು ಉದ್ಯಮಿಗಳನ್ನು  ರಫ್ತು ವ್ಯವಹಾರಕ್ಕೆ ಉತ್ತೇಜಿಸುತ್ತದೆ ಮತ್ತು ಲಕ್ಷಾಂತರ ಉದ್ಯೋಗಗಳನ್ನು ಖಾತ್ರಿಪಡಿಸುತ್ತದೆ.

ರಫ್ತು ಮಾಡಿದ ಉತ್ಪನ್ನಗಳಿಗೆ ತೆರಿಗೆ ಮರುಪಾವತಿ

ರಫ್ತುದಾರರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಮಾನ ಅವಕಾಶವನ್ನು  ಸಕ್ರಿಯಗೊಳಿಸಲು ತೆರಿಗೆ ಮತ್ತು ಸುಂಕವನ್ನು ರಫ್ತು ಮಾಡಬಾರದು ಎಂಬುದು ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ತತ್ವವಾಗಿದೆ.  ಹೆಚ್ಚುವರಿಯಾಗಿ, ಸಾಮಾನ್ಯವಾಗಿ ಮರುಪಾವತಿ ಮಾಡಲಾಗುವ ಆಮದು ಸುಂಕಗಳು ಮತ್ತು ಜಿಎಸ್‌ ಟಿಗಳಿಗೆ, ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸರ್ಕಾರವು ವಿಧಿಸುವ ಇತರ ಹಲವಾರು ತೆರಿಗೆಗಳು / ಸುಂಕಗಳು ರಫ್ತುದಾರರಿಗೆ ಮರುಪಾವತಿ ಮಾಡಲಾಗುವುದಿಲ್ಲ. ಈ ತೆರಿಗೆಗಳು ಮತ್ತು ಸುಂಕಗಳು ರಫ್ತು ಮಾಡುವ ಅಂತಿಮ ಉತ್ಪನ್ನದ ಬೆಲೆಯಲ್ಲಿ ಸೇರಿರುತ್ತವೆ. ಇಂತಹ ಸೇರಿರುವ ತೆರಿಗೆಗಳು ಮತ್ತು ಸುಂಕಗಳು ಭಾರತೀಯ ಉಡುಪು ಮತ್ತು ಮೇಡ್-ಅಪ್‌ಗಳ ಬೆಲೆಯನ್ನು ಹೆಚ್ಚಿಸುತ್ತವೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಇದರಿಂದಾಗಿ ಅವರಿಗೆ ಕಷ್ಟವಾಗುತ್ತದೆ.

ತೆರಿಗೆಗಳು ಮತ್ತು ಸುಂಕಗಳನ್ನು ಮರುಪಾವತಿಸದ ಮತ್ತು ನೇರವಾಗಿ ಮತ್ತು ಪರೋಕ್ಷವಾಗಿ ಸೇರಿಸಿದ ತೆರಿಗೆಗಳ ಭಾಗವಾಗಿರುವ ಕೆಲವು  ಸೆಸ್, ತೆರಿಗೆಗಳು ಈ ಕೆಳಗಿನಂತಿವೆ: –

  1. ಸರಕುಗಳ ಸಾಗಣೆ, ವಿದ್ಯುತ್ ಉತ್ಪಾದನೆ ಮತ್ತು ಕೃಷಿ ಕ್ಷೇತ್ರಕ್ಕೆ ಬಳಸುವ ಇಂಧನದ ಮೇಲಿನ ಕೇಂದ್ರ ಮತ್ತು ರಾಜ್ಯ ತೆರಿಗೆಗಳು, ಸುಂಕಗಳು ಮತ್ತು ಸೆಸ್‌ ಗಳು.
  2. ಮಂಡಿ ತೆರಿಗೆ 
  3. ಉತ್ಪಾದನಾ ಸರಪಳಿಯ ಎಲ್ಲಾ ಹಂತಗಳಲ್ಲಿ ವಿದ್ಯುತ್ ಶುಲ್ಕದ ಮೇಲಿನ ಸುಂಕ 
  4. ಸ್ಟ್ಯಾಂಪ್ ಡ್ಯೂಟಿ 
  5. ಕೀಟನಾಶಕಗಳು, ರಸಗೊಬ್ಬರಗಳು ಮುಂತಾದವುಗಳಿಗೆ ಜಿಎಸ್ ಟಿ ಪಾವತಿಸಿರುವುದು. 
  6. ನೋಂದಾಯಿಸದ ವಿತರಕರಿಂದ ಖರೀದಿಗೆ ಜಿಎಸ್ ಟಿ ಪಾವತಿಸಿರುವುದು.‌ 
  7. ಕಲ್ಲಿದ್ದಲು ಅಥವಾ ಇತರ ಯಾವುದೇ ಉತ್ಪನ್ನಗಳ ಮೇಲೆ ಸೆಸ್

ಸೇರಿರುವ (ಎಂಬೆಡೆಡ್) ತೆರಿಗೆಗಳು, ಸೆಸ್ಗಳು ಮತ್ತು ಸುಂಕಗಳ ಮರುಪಾವತಿಯ ಮಹತ್ವವನ್ನು ಅರಿತುಕೊಂಡ ಜವಳಿ ಸಚಿವಾಲಯವು ಮೊದಲು 2016 ರಲ್ಲಿ ರಿಬೇಟ್ ಆಫ್ ಸ್ಟೇಟ್ ಲೆವಿಸ್ (ಆರ್‌ ಒ ಎಸ್ಎಲ್) ಎಂಬ ಹೆಸರಿನ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಲ್ಲಿ ಮಾಡಲಾಯಿತು ಜವಳಿ ಸಚಿವಾಲಯದ ಬಜೆಟ್ ಮೂಲಕ ಉಡುಪು, ಸಿದ್ಧಉಡುಪು ಮತ್ತು ಮೇಡ್‌ ಅಪ್‌ ರಫ್ತುದಾರರಿಗೆ ಮರುಪಾವತಿ ಮಾಡಲಾಯಿತು   2019 ರಲ್ಲಿ, ಜವಳಿ ಸಚಿವಾಲಯವು ರಾಜ್ಯ ಮತ್ತು ಕೇಂದ್ರ ತೆರಿಗೆ ಮತ್ತು ಸುಂಕದ ರಿಯಾಯಿತಿ (ಆರ್‌ ಒ ಎಸ್‌ ಸಿಟಿಎಲ್) ಹೆಸರಿನ ಹೊಸ ಯೋಜನೆಯನ್ನು ಸೂಚಿಸಿತು. ಈ ಯೋಜನೆಯಡಿಯಲ್ಲಿ, ರಫ್ತು ಮಾಡಿದ ಉತ್ಪನ್ನದಲ್ಲಿ ಒಳಗೊಂಡಿರುವ ತೆರಿಗೆಗಳು ಮತ್ತು ಸುಂಕಗಳ ಮೌಲ್ಯಕ್ಕಾಗಿ ರಫ್ತುದಾರರಿಗೆ ಡ್ಯೂಟಿ ಕ್ರೆಡಿಟ್ ಸ್ಕ್ರಿಪ್ಟ್ ನೀಡಲಾಗುತ್ತದೆ. ಉಪಕರಣಗಳು, ಯಂತ್ರೋಪಕರಣಗಳು ಅಥವಾ ಸಂಬಂಧಿಸಿದ ಇನ್ನಾವುದೇ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಮೂಲ ಕಸ್ಟಮ್ಸ್ ಸುಂಕವನ್ನು ಪಾವತಿಸಲು ರಫ್ತುದಾರರು ಈ ಸ್ಕ್ರಿಪ್ಟ್ ಅನ್ನು ಬಳಸಬಹುದು.

ಆರ್‌ ಒ ಎಸ್‌ ಸಿಟಿಎಲ್ ಅನ್ನು ಪ್ರಾರಂಭಿಸಿದ ಕೇವಲ ಒಂದು ವರ್ಷದ ನಂತರದಲ್ಲೇ ಸಾಂಕ್ರಾಮಿಕ ರೋಗವು ಬಂದಿದ್ದು ಮತ್ತು ರಫ್ತುದಾರರಿಗೆ ಕೆಲವು ಸ್ಥಿರವಾದ ನೀತಿ ನಿಯಮವನ್ನು ಒದಗಿಸುವ ಅವಶ್ಯಕತೆಯಿದೆ ಎಂದು ಮನಗಾಣಲಾಯಿತು. ಜವಳಿ ಉದ್ಯಮದಲ್ಲಿ, ಖರೀದಿದಾರರು ದೀರ್ಘಾವಧಿಯ ಖರೀದಿಸುವ ಆದೇಶಗಳನ್ನು ನೀಡುತ್ತಾರೆ ಮತ್ತು ರಫ್ತುದಾರರು ತಮ್ಮ ಚಟುವಟಿಕೆಗಳನ್ನು ಮುಂಚಿತವಾಗಿಯೇ ಯೋಜಿಸಬೇಕು, ಈ ಉತ್ಪನ್ನಗಳಿಗೆ ರಫ್ತು ಮಾಡುವ ಬಗ್ಗೆ ನೀತಿ ನಿಯಮವು ಸ್ಥಿರವಾಗಿರಬೇಕು. ಇದನ್ನು ಗಮನದಲ್ಲಿಟ್ಟುಕೊಂಡು, ಜವಳಿ ಸಚಿವಾಲಯವು ಆರ್‌ ಒ ಎಸ್‌ ಸಿಟಿಎಲ್ ಯೋಜನೆಯನ್ನು ಮಾರ್ಚ್ 31, 2024 ರವರೆಗೆ ಸ್ವತಂತ್ರವಾಗಿ ಪ್ರತ್ಯೇಕ ಯೋಜನೆಯಾಗಿ ಮುಂದುವರಿಸಲು ನಿರ್ಧರಿಸಿದೆ.

ಆರ್‌ ಒ ಎಸ್‌ ಸಿಟಿಎಲ್ ಯೋಜನೆ  ಯೋಜನೆಯ ಮುಂದುವರಿಕೆ ಹೆಚ್ಚುವರಿ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ ಮತ್ತು ಲಕ್ಷಾಂತರ ಮಹಿಳೆಯರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ನೀಡುತ್ತದೆ.

****