Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಈದ್ –ಉಲ್- ಫಿತರ್ ಸಂದರ್ಭದಲ್ಲಿ ಪ್ರಧಾನಿಯವರ ಶುಭಾಶಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಈದ್- ಉಲ್- ಫಿತರ್ ಸಂದರ್ಭದಲ್ಲಿ ತಮ್ಮ ಶುಭಾಶಯ ಹಾಗೂ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. ಪ್ರಧಾನಮಂತ್ರಿಯವರು ರಾಷ್ಟ್ರಗಳ ಮತ್ತು ಸರ್ಕಾರಗಳ ಮುಖ್ಯಸ್ಥರೊಂದಿಗೆ ಮಾತನಾಡಿದರು ಹಾಗೂ ಈ ಶುಭ ಸಂದರ್ಭದಲ್ಲಿ ಅವರಿಗೆ ಶುಭ ಕೋರಿದರು.

“ಈದ್-ಉಲ್-ಫಿತರ್ ಸಂದರ್ಭದಲ್ಲಿ ನನ್ನ ಶುಭಾಶಯಗಳು ಮತ್ತು ಶುಭ ಹಾರೈಕೆಗಳು. ಈ ವಿಶೇಷ ದಿನ ಸೌಹಾರ್ದತೆಯ ಸ್ಫೂರ್ತಿಯನ್ನು ಆಳಗೊಳಿಸಲಿ ಮತ್ತು ಸಮಾಜದಲ್ಲಿ ಶಾಂತಿ ತರಲಿ.

ಅಬುದಾಬಿಯ ಘನತೆವೆತ್ತ ದೊರೆ ಸಲ್ಮಾನ್, ಘನತೆವೆತ್ತ ಯುವರಾಜ, ಘನತೆವೆತ್ತ ಖತಾರ್ ಎಮಿರ್ ಅವರಿಗೆ ಈದ್ ಶುಭಾಶಯ ತಿಳಿಸಿದ್ದೇನೆ.

ಅಧ್ಯಕ್ಷ ರೌಹಾನಿ, ಅಧ್ಯಕ್ಷ ಘನಿ, ಪ್ರಧಾನಿ ನವಾಜ್ ಷರೀಫ್, ಪ್ರಧಾನಿ ಶೇಖ್ ಹಸೀನಾ ಮತ್ತು ಅಧ್ಯಕ್ಷ ಯಮೀನ್ ಅವರೊಂದಿಗೆ ಮಾತನಾಡಿ, ಅವರಿಗೆ ಈದ್ ಶುಭಾಶಯ ತಿಳಿಸಿದ್ದೇನೆ “, ಎಂದು ಪ್ರಧಾನಮಂತ್ರಿಯವರು ತಿಳಿಸಿದ್ದಾರೆ.