Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಈಜಿಪ್ಟ್ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿಯವರ ಸಭೆ

ಈಜಿಪ್ಟ್ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿಯವರ ಸಭೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಅರಬ್ ರಿಪಬ್ಲಿಕ್ ಆಫ್ ಈಜಿಪ್ಟ್ ನ ಗೌರವಾನ್ವಿತ ಅಧ್ಯಕ್ಷ ಶ್ರೀ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ಅಲ್-ಇತ್ತಿಹಾದಿಯಾ ಅರಮನೆಯಲ್ಲಿ ಬರಮಾಡಿಕೊಂಡರು.

2023ರ ಜನವರಿಯಲ್ಲಿ ಗಣರಾಜ್ಯೋತ್ಸವ ದಿನದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಧ್ಯಕ್ಷ ಸಿಸಿ, ಅವರ ಭಾರತ ಭೇಟಿಯನ್ನು ಉಭಯ ನಾಯಕರು ಪ್ರೀತಿಯಿಂದ ನೆನಪಿಸಿಕೊಂಡರು ಮತ್ತು ದ್ವಿಪಕ್ಷೀಯ ಸಂಬಂಧಗಳಿಗೆ ಇದು ನೀಡಿದ ವೇಗವನ್ನು ಶ್ಲಾಘಿಸಿದರು. ಈಜಿಪ್ಟ್ ಸಂಪುಟದಲ್ಲಿ ಹೊಸದಾಗಿ ಸ್ಥಾಪಿಸಲಾದ ‘ಭಾರತ ಘಟಕ’ ವು ದ್ವಿಪಕ್ಷೀಯ ಸಹಯೋಗವನ್ನು ಮುನ್ನಡೆಸುವಲ್ಲಿ ಉಪಯುಕ್ತ ಸಾಧನವಾಗಿದೆ ಎಂಬ ಬಗ್ಗೆ ಉಭಯ ನಾಯಕರು ಸಹಮತ ವ್ಯಕ್ತಪಡಿಸಿದರು.

ವಿಶೇಷವಾಗಿ ವ್ಯಾಪಾರ ಮತ್ತು ಹೂಡಿಕೆ, ಮಾಹಿತಿ ತಂತ್ರಜ್ಞಾನ,ರಕ್ಷಣೆ ಮತ್ತು ಭದ್ರತೆ, ನವೀಕರಿಸಬಹುದಾದ ಇಂಧನ, ಕೃಷಿ, ಆರೋಗ್ಯ, ಸಂಸ್ಕೃತಿ ಮತ್ತು ಉಭಯ ದೇಶವಾಸಿಗಳ ನಡುವಿನ ಸಂಬಂಧಗಳಂತಹ ಕ್ಷೇತ್ರಗಳಲ್ಲಿ ಎರಡು ದೇಶಗಳ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಮಾರ್ಗಗಳ ಕುರಿತು ನಾಯಕರು ಚರ್ಚಿಸಿದರು.

ಪ್ರಧಾನಮಂತ್ರಿ ಮತ್ತು ಅಧ್ಯಕ್ಷ ಸಿಸಿ ಅವರು ಜಿ-20 ರಲ್ಲಿ ಹೆಚ್ಚಿನ ಸಹಕಾರವನ್ನು ಕುರಿತು ಸಹ ಚರ್ಚಿಸಿದರು, ಆಹಾರ ಮತ್ತು ಇಂಧನ ಅಭದ್ರತೆ, ಹವಾಮಾನ ಬದಲಾವಣೆ ಮತ್ತು ಗ್ಲೋಬಲ್ ಸೌತ್ (ಆರ್ಥಿಕವಾಗಿ ಹಿಂದುಳಿದ) ದೇಶಗಳು ಸಂಘಟಿತ ಧ್ವನಿಯನ್ನು ಹೊಂದುವ ಅಗತ್ಯವನ್ನು ಎತ್ತಿ ಅವರು ತೋರಿಸಿದರು. ಜಿ-20 ನಾಯಕರ ಶೃಂಗಸಭೆಗಾಗಿ ಸೆಪ್ಟೆಂಬರ್ 2023 ರಲ್ಲಿ ನವದೆಹಲಿಯಲ್ಲಿ ಅಧ್ಯಕ್ಷ ಸಿಸಿ ಅವರನ್ನು ಸ್ವಾಗತಿಸಲು ಪ್ರಧಾನಿಯವರು ಎದುರು ನೋಡುತ್ತಿದ್ದಾರೆ.

ದ್ವಿಪಕ್ಷೀಯ ಸಂಬಂಧವನ್ನು “ಕಾರ್ಯತಂತ್ರದ ಸಹಭಾಗಿತ್ವ” ಕ್ಕೆ ಏರಿಸುವ ಒಪ್ಪಂದಕ್ಕೆ ನಾಯಕರು ಸಹಿ ಹಾಕಿದರು. ಕೃಷಿ, ಪುರಾತತ್ವ ಮತ್ತು ಪ್ರಾಚ್ಯವಸ್ತು ಮತ್ತು ಸ್ಪರ್ಧಾತ್ಮಕ ಕಾನೂನು ಕ್ಷೇತ್ರಗಳಲ್ಲಿ ಮೂರು ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಈಜಿಪ್ಟ್‌ನ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ಮೊಸ್ತಫಾ ಮಡ್ಬೌಲಿ ಮತ್ತು ಸಂಪುಟದ ಹಿರಿಯ ಸಚಿವರು ಉಪಸ್ಥಿತರಿದ್ದರು. ಭಾರತದ ಕಡೆಯಿಂದ, ವಿದೇಶಾಂಗ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

****