Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಈಜಿಪ್ಟ್ ಅಧ್ಯಕ್ಷರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಮಂತ್ರಿಯವರ ಮಾಧ್ಯಮ ಹೇಳಿಕೆ

ಈಜಿಪ್ಟ್ ಅಧ್ಯಕ್ಷರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಮಂತ್ರಿಯವರ ಮಾಧ್ಯಮ ಹೇಳಿಕೆ


ಘನತೆವೆತ್ತ ಅಧ್ಯಕ್ಷ ಅಬ್ದೆಲ್ ಫತ್ಹಾ ಅಲ್ ಸಿಸಿ ಅವರೇ ,

ಗೌರವಾನ್ವಿತ ಸಚಿವರೇ ಮತ್ತು ಈಜಿಪ್ಟ್ ಮತ್ತು ಭಾರತ ನಿಯೋಗದ ಸದಸ್ಯರೇ, ಮತ್ತು

ಮಾಧ್ಯಮದ ಮಿತ್ರರೇ,

ನಾನು ಘನತೆವೆತ್ತ ಶ್ರೀ ಅಬ್ದೆಲ್ ಫತ್ಹಾ ಅಲ್ ಸಿಸಿ ಅವರನ್ನು ಪ್ರಥಮ ಭಾರತದ ಭೇಟಿಗೆ ಆಹ್ವಾನಿಸಲು ಹರ್ಷಿಸುತ್ತೇನೆ. ಘನತೆವೆತ್ತರೇ, ನೀವು ದೇಶದ ಒಳಗೆ ಮತ್ತು ವಿದೇಶದಲ್ಲಿ ಹಲವು ಸಾಧನೆಗಳ ವ್ಯಕ್ತಿಯಾಗಿದ್ದೀರಿ. ಭಾರತದ 125 ಕೋಟಿ ಜನರು ನಿಮ್ಮನ್ನು ಇಲ್ಲಿ ಕಾಣಲು ಸಂತೋಷಿತರಾಗಿದ್ದಾರೆ. ಈಜಿಪ್ಟ್ ಭಾರತ ಮತ್ತು ಆಫ್ರಿಕಾವನ್ನು ಸಂಪರ್ಕಿಸುವ ಸ್ವಾಭಾವಿಕ ಸೇತುವೆಯಾಗಿದೆ. ನಿಮ್ಮ ಜನತೆ ಮಧ್ಯಮ ಇಸ್ಲಾಂನ ಧ್ವನಿಯಾಗಿದ್ದಾರೆ. ಮತ್ತು ನಿಮ್ಮ ದೇಶ ಪ್ರಾದೇಶಿಕ ಶಾಂತಿ ಮತ್ತು ಆಫ್ರಿಕಾ ಮತ್ತು ಅರಬ್ ವಿಶ್ವದ ಸ್ಥಿರತೆಯ ಅಂಶವಾಗಿದೆ. ಈಜಿಪ್ಟ್ ಅಭಿವೃದ್ಧಿಶೀಲ ರಾಷ್ಟ್ರಗಳ ಸಕಾರಣವನ್ನು ಸದಾ ಬೆಂಬಲಿಸುತ್ತಾ ಬಂದಿದೆ.

ಸ್ನೇಹಿತರೇ,

ಅಧ್ಯಕ್ಷರು ಮತ್ತು ನಾನು ನಮ್ಮ ಪಾಲುದಾರಿಕೆಯ ಸ್ವರೂಪ ಮತ್ತು ತಿರುಳಿನ ಬಗ್ಗೆ ವ್ಯಾಪಕ ಚರ್ಚೆ ನಡೆಸಿದ್ದೇವೆ. ನಾವು ನಮ್ಮ ಕಾರ್ಯಕ್ರಮಗಳನ್ನು ಮುನ್ನಡೆಸಲು ಕ್ರಿಯಾತ್ಮಕ ಆಧಾರದ ಕಾರ್ಯಕ್ರಮಪಟ್ಟಿಗೆ ಒಪ್ಪಿದ್ದೇವೆ.

ಆ ಕಾರ್ಯಕ್ರಮ:

ನಮ್ಮ ಸಾಮಾಜಿಕ-ಆರ್ಥಿಕ ಆದ್ಯತೆಗಳಿಗೆ ಸ್ಪಂದಿಸುವಂಥದ್ದು.

ವ್ಯಾಪಾರ ಮತ್ತು ಹೂಡಿಕೆ ಒಪ್ಪಂದ ಉತ್ತೇಜಿಸುವುದು;

ನಮ್ಮ ಸಮಾಜವನ್ನು ಸುರಕ್ಷಿತವಾಗಿ ಇಡುವುದು;

ನಮ್ಮ ವಲಯದಲ್ಲಿ ಶಾಂತಿ ಮತ್ತು ಸೌಹಾರ್ದತೆ ಸ್ಥಾಪಿಸಲು ನೆರವಾಗುವುದು; ಮತ್ತು

ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕತೆಯ ಮೇಲೆ ನಮ್ಮ ಕಾರ್ಯಕ್ರಮವನ್ನು ಮುಂದುವರಿಸುವುದು.

ಸ್ನೇಹಿತರೇ,

ನಮ್ಮ ಮಾತುಕತೆಯಲ್ಲಿ, ಅಧ್ಯಕ್ಷ ಸಿಸಿ ಮತ್ತು ನಾನು ನಮ್ಮ ಸಹಕಾರಕ್ಕೆ ಬಹು ಸ್ತಂಬಗಳನ್ನು ನಿರ್ಮಿಸಲು ಸಮ್ಮತಿಸಿದ್ದೇವೆ. ನಾವು ಉನ್ನತ ಮಟ್ಟದ ರಾಜಕೀಯ ವಿನಿಮಯಕ್ಕೆ ಸುಸ್ಥಿರ ಮತ್ತು ಬಲವಾದ ಚಾಲನೆ ನೀಡಲು ಸಮ್ಮತಿಸಿದ್ದೇವೆ. ನಮ್ಮ ಸಮಾಜಗಳ ಆರ್ಥಿಕ ಪ್ರಗತಿಗೆ ಬಲವಾದ ವಾಣಿಜ್ಯ ಮತ್ತು ಹೂಡಿಕೆಯ ನಂಟು ಅವಶ್ಯ ಎಂಬುದನ್ನು ನಾವು ಗುರುತಿಸಿದ್ದೇವೆ. ಹೀಗಾಗಿ ನಾವು, ನಮ್ಮ ಎರಡು ಆರ್ಥಿಕತೆಯ ನಡುವೆ ಪ್ರಮುಖ ಆದ್ಯತೆಯೊಂದಿಗೆ ಸರಕು, ಸೇವೆ ಮತ್ತು ಬಂಡವಾಳದ ಹೆಚ್ಚಿನ ಹರಿವಿಗೆ ಸಮ್ಮತಿಸಿದ್ದೇವೆ. ಈ ನಿಟ್ಟಿನಲ್ಲಿ, ಸಾಗರ ಸಾಗಣೆಯ ಕುರಿತಂತೆ ಇಂದು ಅಂಕಿತ ಹಾಕಲಾಗಿರುವ ಒಪ್ಪಂದ ಒಂದು ಮಹತ್ವದ ಶಕ್ತಿಯಾಗಿದೆ. ಎರಡೂ ರಾಷ್ಟ್ರಗಳ ನಡುವೆ ಹೊಸ ವ್ಯಾಪಾರ ಮತ್ತು ವಾಣಿಜ್ಯ ಪಾಲುದಾರಿಕೆಯನ್ನು ಕಟ್ಟಲು ಮುಂದಾಳತ್ವ ವಹಿಸುವಂತೆ ನಾನು ನಮ್ಮ ಖಾಸಗಿ ವಲಯದವರಿಗೆ ಮನವಿ ಮಾಡುತ್ತೇನೆ. ಆರ್ಥಿಕ ಕಾರ್ಯಕ್ರಮಗಳ ವೈವಿಧ್ಯತೆಯ ಖಾತೆಯಲ್ಲಿ, ನಾವು ಕೃಷಿ, ಕೌಶಲ ಅಭಿವೃದ್ಧಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಮತ್ತು ಆರೋಗ್ಯ ವಲಯದಲ್ಲಿ ಸಹಕಾರವನ್ನು ಆಳಗೊಳಿಸುತ್ತಿದ್ದೇವೆ.
ಸ್ನೇಹಿತರೇ,

ಅಧ್ಯಕ್ಷರು ಹಾಗೂ ನಾನು ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಹಬ್ಬುತ್ತಿರುವ ಭಯೋತ್ಪಾದನೆಯಿಂದ ನಮ್ಮ ಎರಡೂ ರಾಷ್ಟ್ರಗಳಿಗೆ ಎದುರಾಗಿರುವ ಭೀತಿಯ ಬಗ್ಗೆ, ವಲಯದಾದ್ಯಂತ ಇರುವ ರಾಷ್ಟ್ರಗಳ ಮತ್ತು ಸಮುದಾಯದ ಬಗ್ಗೆಯೂ ಆಮೂಲಾಗ್ರವಾಗಿ ಒಂದು ನೋಟವನ್ನು ಹೊಂದಿದ್ದೇವೆ.

ಈ ನಿಟ್ಟಿನಲ್ಲಿ, ನಮ್ಮ ರಕ್ಷಣೆ ಮತ್ತು ಭದ್ರತೆಯ ಕಾರ್ಯಕ್ರಮಗಳನ್ನು ಈ ಕೆಳಗಿನ ಗುರಿಯೊಂದಿಗೆ ಮುಂದುವರಿಸಲು ನಿರ್ಧರಿಸಿದ್ದೇವೆ:

ರಕ್ಷಣಾ ವ್ಯಾಪಾರ, ತರಭೇತಿ ಮತ್ತು ಸಾಮರ್ಥ್ಯ ವರ್ಧನೆ ವಿಸ್ತರಣೆ,

ಭಯೋತ್ಪಾದನೆ ಎದುರಿಸಲು ಹೆಚ್ಚಿನ ಮಾಹಿತಿ ಮತ್ತು ಕಾರ್ಯಾಚರಣೆಯ ವಿನಿಮಯ;

ಹೆಚ್ಚುತ್ತಿರುವ ಸೈಬರ್ ಭದ್ರತೆಯ ಸವಾಲುಗಳ ಕುರಿತ ಸಹಕಾರ; ಮತ್ತು

ಮಾದಕವಸ್ತು ಕಳ್ಳಸಾಗಣೆ, ಬಹುರಾಷ್ಟ್ರೀಯ ಅಪರಾಧ ಮತ್ತು ಅಕ್ರಮ ಹಣ ರವಾನೆ ವಿರುದ್ಧದ ಹೋರಾಟಕ್ಕೆ ಒಗ್ಗೂಡಿ ಕಾರ್ಯ ನಿರ್ವಹಿಸುವುದು.
ಶ್ರೀಮಂತ ಸಂಸ್ಕೃತಿ, ಪರಂಪರೆ ಹೊಂದಿರುವ ಎರಡು ಪುರಾತನ ಮತ್ತು ಹೆಮ್ಮೆಯ ನಾಗರಿಕತೆಗಳು, ಜನರೊಂದಿಗಿನ ಸಂಪರ್ಕವನ್ನು ಮತ್ತು ಸಾಂಸ್ಕೃತಿಕ ವಿನಿಮಯವನ್ನು ಹೆಚ್ಚಿಸಲು ಅವಕಾಶ ನೀಡಲು ನಿರ್ಧರಿಸಿವೆ.

ಘನತೆವೆತ್ತರೇ,

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಸಕ್ತ ಅವಧಿಯಲ್ಲಿ ಈಜಿಪ್ಟ್ ಮಾಡುತ್ತಿರುವ ಉತ್ತಮ ಕಾರ್ಯವನ್ನು ಭಾರತ ಪ್ರಶಂಸಿಸುತ್ತದೆ. ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳಲ್ಲಿ ಅದರಲ್ಲೂ ಯು.ಎನ್. ಮತ್ತು ಅದರ ಹೊರಗೆ ಹೆಚ್ಚು ನಿಖಟವಾಗಿ ಚರ್ಚಿಸುವ ನಮ್ಮ ನಿರ್ಧಾರ ನಮ್ಮ ಸಮಾನ ಹಿತಕ್ಕೆ ಲಾಭ ತರಲಿದೆ. ಇಂದಿನ ವಾಸ್ತವತೆಯನ್ನು ಬಿಂಬಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸುಧಾರಣೆಯ ಅಗತ್ಯಕ್ಕೂ ನಾವು ಇಂದು ಸಮ್ಮತಿಸಿದ್ದೇವೆ. ನಾವು ಮುಂದಿನ ವಾರ ನಡೆಯಲಿರುವ ಜಿ 20 ರಾಷ್ಟ್ರಗಳ ಶೃಂಗದಲ್ಲಿ ಈಜಿಪ್ಟ್ ಭಾಗವಹಿಸುವಿಕೆಯನ್ನು ಸ್ವಾಗತಿಸುತ್ತೇವೆ. ಅದು ಜಿ 20ರ ಚರ್ಚೆಗೆ ಘನತೆ ಮತ್ತು ಹೂರಣ ಹೆಚ್ಚಿನ ಮೌಲ್ಯ ತಂದುಕೊಡಲಿದೆ ಎಂದು ನಾವು ಭಾವಿಸಿದ್ದೇವೆ.

ಘನತೆವೆತ್ತ ಅಧ್ಯಕ್ಷ ಅಬ್ದೆಲ್ ಫತ್ಹಾ ಅಲ್ ಸಿಸಿ ಅವರೇ,

ನಾನು ಮತ್ತೊಮ್ಮೆ ತಮಗೂ ಮತ್ತು ತಮ್ಮ ನಿಯೋಗಕ್ಕೂ ಹಾರ್ದಿಕ ಸ್ವಾಗತ ಕೋರುತ್ತೇನೆ. ನಿಮಗೂ ಮತ್ತು ಈಜಿಪ್ಟ್ ಜನತೆಗೂ ಎಲ್ಲ ರೀತಿಯ ಶುಭವನ್ನು ಕೋರುತ್ತೇನೆ. ನಿಮ್ಮ ಆರ್ಥಿಕ ಮತ್ತು ಭದ್ರತೆಯ ಗುರಿ ಸಾಧನೆಗೆ, ಅಭಿವೃದ್ಧಿ ಈಡೇರಿಕೆಗೆ ಭಾರತ ವಿಶ್ವಾಸಾರ್ಹ ಪಾಲುದಾರನಾಗಲು ಸಿದ್ಧವಿದೆ.

ಧನ್ಯವಾದಗಳು,

AKT/AK