Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇ ಸಂಜೀವನಿ ಅಪ್ಲಿಕೇಶನ್‌ನಲ್ಲಿ 10 ಕೋಟಿ ಟೆಲಿ ಸಮಾಲೋಚನೆ ಹೆಗ್ಗುರುತಿಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ 


ಇ ಸಂಜೀವನಿ ಆ್ಯಪ್‌ನಲ್ಲಿ 10 ಕೋಟಿ ಟೆಲಿ ಸಮಾಲೋಚನೆಗಳ ಹೆಗ್ಗುರುತು ಸಾಧಿಸಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರ ಟ್ವೀಟ್ ನ್ನು ಹಂಚಿಕೊಂಡ ಪ್ರಧಾನಿ ಅವರು ಟ್ವೀಟ್ ಮಾಡಿ,

“10 ಕೋಟಿ ಟೆಲಿ ಸಮಾಲೋಚನೆಗಳು ಗಮನಾರ್ಹ ಸಾಧನೆಯಾಗಿದೆ. ಭಾರತದಲ್ಲಿ ಪ್ರಬಲ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಮುಂಚೂಣಿಯಲ್ಲಿರುವ ಎಲ್ಲ ವೈದ್ಯರನ್ನು ನಾನು ಈ ಸಂದರ್ಭದಲ್ಲಿ ಶ್ಲಾಘಿಸುತ್ತೇನೆ ಎಂದು ಹೇಳಿದ್ದಾರೆ.

*****