Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಸ್ರೇಲ್ ಪ್ರಧಾನ ಮಂತ್ರಿಯವರ ಭಾರತ ಭೇಟಿ ವೇಳೆ ಪ್ರಧಾನ ಮಂತ್ರಿಯವರ ಪತ್ರಿಕಾ ಹೇಳಿಕೆ ( ಜನವರಿ 15, 2018 )

ಇಸ್ರೇಲ್ ಪ್ರಧಾನ ಮಂತ್ರಿಯವರ ಭಾರತ ಭೇಟಿ ವೇಳೆ ಪ್ರಧಾನ ಮಂತ್ರಿಯವರ ಪತ್ರಿಕಾ ಹೇಳಿಕೆ ( ಜನವರಿ 15, 2018 )

ಇಸ್ರೇಲ್ ಪ್ರಧಾನ ಮಂತ್ರಿಯವರ ಭಾರತ ಭೇಟಿ ವೇಳೆ ಪ್ರಧಾನ ಮಂತ್ರಿಯವರ ಪತ್ರಿಕಾ ಹೇಳಿಕೆ ( ಜನವರಿ 15, 2018 )


ಘನತೆವೆತ್ತ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರೇ,

ಮಾಧ್ಯಮದ ಸದಸ್ಯರೇ,

ಭಾರತಕ್ಕೆ ಪ್ರಪ್ರಥಮ ಭೇಟಿ ನೀಡಿರುವ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರನ್ನು ಸ್ವಾಗತಿಸಲು ಅತೀವ ಸಂತೋಷವೆನಿಸುತ್ತದೆ.

येदीदीहायाकर, बरूख़िमहाबायिमलेहोदू!

(ನನ್ನ ಒಳ್ಳೆಯ ಮಿತ್ರ, ಭಾರತಕ್ಕೆ ಸ್ವಾಗತ!)

 

ಭಾರತ ಮತ್ತು ಇಸ್ರೇಲ್ ನಡುವಿನ ಗೆಳೆತನದ ಪಯಣದಲ್ಲಿ ನಿಮ್ಮ ಭೇಟಿ ಬಹು ನಿರೀಕ್ಷಿತ ಕ್ಷಣ ವಾಗಿದೆ.

ಭಾರತ ಮತ್ತು ಇಸ್ರೇಲ್ ನಡುವಿನ 25 ವರ್ಷಗಳ ರಾಜತಾಂತ್ರಿಕ ಸಂಬಂಧಗಳ ಜತೆಗೆ ನಿಮ್ಮ ಭೇಟಿಯು ಸೂಕ್ತವಾದ ಪರಾಕಾಷ್ಠೆಯಾಗಿದೆ.

2018ರ ನಮ್ಮ ಗೌರವಾನ್ವಿತ ಪ್ರಥಮ ಅತಿಥಿಯಾದ ನಿಮ್ಮ ಭೇಟಿ, ನಮ್ಮ ಹೊಸ ವರ್ಷದ ದಿನಚರಿಯಲ್ಲಿ ವಿಶೇಷ ಆರಂಭದ ಅಂಗವಾಗಿದೆ. ನಿಮ್ಮ ಭೇಟಿಯು, ಭಾರತಾದ್ಯಂತ ಜನರು ಸುಗ್ಗಿ, ವಸಂತನ ಆಗಮನ, ನವೀಕರಣ ಮತ್ತು ಭರವಸೆಯ ಸಂಭ್ರಮದಲ್ಲಿರುವ ಪವಿತ್ರ ಸಮಯದಲ್ಲಿ ಆಗಿದೆ. ಲೋಹರಿ, ಬಿಹು, ಮಕರ ಸಂಕ್ರಾಂತಿ ಮತ್ತು ಪೊಂಗಲ್ ಹಬ್ಬಗಳ ಆಚರಣೆಯು ಭಾರತದ ಅನೇಕತೆಯಲ್ಲಿ ಏಕತೆಯ ವೈಭವವಾಗಿದೆ.

ಸ್ನೇಹಿತರೇ,

 

ಕಳೆದ ವರ್ಷ, ನಾನು ಇಸ್ರೇಲ್ ಗೆ ಪ್ರಯಾಣ ಬೆಳೆಸಿದಾಗ 125 ಕೋಟಿ ಭಾರತೀಯರ ಶುಭಾಶಯ ಮತ್ತು ಗೆಳೆತನವನ್ನು ಹೊತ್ತು ಸಾಗಿದ್ದೆ. ಅದಕ್ಕೆ ಪ್ರತಿಯಾಗಿ, ನಾನು, ನನ್ನ ಸ್ನೇಹಿತ, ಬೀಬಿ ನೇತೃತ್ವದ ಇಸ್ರೇಲಿ ಜನರ ಉದಾರವಾದ ಪ್ರೀತಿ ಮತ್ತು ಆತ್ಮೀಯತೆಯಿಂದ ಭರಿತನಾಗಿದ್ದೆ.

ಆ ಭೇಟಿಯಲ್ಲಿ, ಪ್ರಧಾನಮಂತ್ರಿ ನೆತನ್ಯಾಹು ಮತ್ತು ನಾನು, ಬಲವಾದ ವ್ಯೂಹಾತ್ಮಕ ಮತ್ತು ವಿಶ್ವಾಸದ ಪಾಲುದಾರಿಕೆಯನ್ನು ಬೆಳೆಸಲು ಮತ್ತು ವೈವಿಧ್ಯತೆಯ ಪ್ರಗತಿ ಮತ್ತು ತುತ್ತತುದಿಯ ಸಹಕಾರ, ಮತ್ತು ಶತಮಾನಗಳಿಂದ ನಮ್ಮನ್ನು ಬೆಸೆದಿರುವ ಸ್ವಾಭಾವಿಕ ಆಪ್ತತೆಯ ಭರವಸೆಯ ಹರಿವಿನ ಹಾಗೂ ಎಲ್ಲ ಕ್ಷೇತ್ರಗಳಲ್ಲಿ ಪರಸ್ಪರರಿಗೆ ಗೆಲುವು ತಂದುಕೊಡುವ ಕಾರ್ಯಕ್ರಮಗಳನ್ನೊಳಗೊಂಡ ಜಂಟಿ ಸಾಹಸಗಳು ಮತ್ತು  ಕಟ್ಟುವುದಾಗಿ ಪರಸ್ಪರರಿಗೆ ಮತ್ತು ನಮ್ಮ ಜನರಿಗೆ ಭರವಸೆ ನೀಡಿದ್ದೆವು. 

ಭೇಟಿಯ ನಂತರದ ಕೇವಲ ಆರು ತಿಂಗಳುಗಳ ಅಲ್ಪಾವಧಿಯಲ್ಲಿ; ಭಾರತಕ್ಕೆ ಕೈಗೊಂಡ ನಿಮ್ಮ ಭೇಟಿಯು, ನಮ್ಮ ಹಂಚಿಕೆಯ ಆಶಯ ಮತ್ತು ಬದ್ಧತೆಗೆ ಇದು ಮಾನದಂಡವಾಗಿದೆ.

ಇಂದು ಮತ್ತು ನಿನ್ನೆ ಪ್ರಧಾನಮಂತ್ರಿ ನೆತನ್ಯಾಹು ಮತ್ತು ನಾನು,ಸಾಧ್ಯತೆಗಳು ಮತ್ತು ನಮ್ಮ ಬಾಂಧವ್ಯದ ಪ್ರಗತಿಯನ್ನು ಪರಾಮರ್ಶಿಸಿದೆವು ಮತ್ತು ನಮಗೆ ಕೈಬೀಸಿ ಕರೆವ ಅವಕಾಶಗಳು ಮತ್ತು ಅದನ್ನು ಪಡೆಯಬಹುದಾದ ಅಗತ್ಯದ ಕುರಿತಂತೆ ನಮ್ಮ ಮಾತುಕತೆಯನ್ನು ನವೀಕರಿಸಿದೆವು. 

ನಮ್ಮ ಚರ್ಚೆ ವಿಸ್ತೃತ ಶ್ರೇಣಿಯದಾಗಿತ್ತು ಮತ್ತು ವ್ಯಾಪಕವಾಗಿತ್ತು. ಅವು ಇನ್ನೂ ಹೆಚ್ಚಿನದನ್ನು ಮಾಡುವ ಆಶಯದ ಸಂಕೇತವಾಗಿವೆ. ಪ್ರಧಾನಮಂತ್ರಿಯವರು ಹಾಗೂ ನಾನು, ಫಲಶ್ರುತಿಗಳನ್ನು ಪಡೆಯುವಲ್ಲಿ ಅಸಹನೆಯ ಖ್ಯಾತಿಯನ್ನು ಹೊಂದಿದ್ದೇವೆ.

ನಾನು ಒಂದು ಮುಕ್ತ ರಹಸ್ಯ ಬಹಿರಂಗ ಪಡಿಸಿದರೆ, ನಾನೇನೆಂಬುದು ನಿಮಗೆ ತಿಳಿಯುತ್ತದೆ.

ಕಳೆದ ವರ್ಷ ಟೆಲ್ ಅವೀನ್ ನಲ್ಲಿ, ಅಧಿಕಾರಶಾಹಿಯ ಕೆಂಪು ಟೇಪ್ ಅನ್ನು ಮ್ಯಾಚೆಟ್ನೊಂದಿಗೆ ಕತ್ತರಿಸುವ ಮತ್ತು ವೇಗದಲ್ಲಿ ಮುಂದೆ ಸಾಗಬೇಕೆಂಬ ಉದ್ದೇಶವನ್ನು ವ್ಯಕ್ತಪಡಿಸಿದ್ದೀರಿ. 

ಪ್ರಧಾನಮಂತ್ರಿಯವರೇ, ಭಾರತದಲ್ಲಿ, ನಾವು ಅದನ್ನು ಮಾಡುವ ಮಾರ್ಗದಲ್ಲಿದ್ದೇವೆ ಎಂದು ನಿಮಗೆ ಹೇಳಲು ನಾನು ಹರ್ಷಿಸುತ್ತೇನೆ. ನಮ್ಮ ಮುಂಚಿನ ನಿರ್ಧಾರಗಳ ಜಾರಿ ಕುರಿತಂತೆ ನಮ್ಮ ಹಂಚಿಕೆಯ ಅಸಹನೆಯನ್ನು ವ್ಯಕ್ತಪಡಿಸಿದ್ದು, ಅದು ಪರಿಣಾಮ ಬೀರಿದೆ.

ಅದರ ಫಲಶ್ರುತಿ ಈಗ ಕಣ್ಣಿಗೇ ಗೋಚರಿಸುತ್ತಿದೆ. ಇಂದು ನಾವು ನಡೆಸಿದ ಚರ್ಚೆ, ನಮ್ಮ ಕಾರ್ಯಕ್ರಮಗಳನ್ನು ವೇಗಗೊಳಿಸುವ ಮತ್ತು ನಮ್ಮ ಪಾಲುದಾರಿಕೆಯನ್ನು ಉನ್ನತೀಕರಿಸುವ ಅಭಿಮತವನ್ನು ವ್ಯಕ್ತಪಡಿಸಿದ್ದೇವೆ. 

ನಾವು ಇದನ್ನು ಮೂರು ಮಾರ್ಗಗಳ ಮೂಲಕ ಪಾಲಿಸುತ್ತೇವೆ:

ಮೊದಲಿಗೆ ನಾವು ನಮ್ಮ ಜನರ ಬದುಕನ್ನು ಸ್ಪರ್ಶಿಸುವ ಕ್ಷೇತ್ರಗಳಲ್ಲಿ ಸಹಕಾರದ ಹಾಲಿ ಸ್ತಂಬಗಳನ್ನು ಬಲಪಡಿಸಲಿದ್ದೇವೆ. ಇವು ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭದ್ರತೆಯಾಗಿವೆ.

ನಾವು, ಇಸ್ರೇಲ್ ನ ತಂತ್ರಜ್ಞಾನ ಮತ್ತು ಮುಂದುವರಿದ ಪದ್ಧತಿಗಳನ್ನು ತರುವ ಮತ್ತು ಕೃಷಿ ಸಹಕಾರಕ್ಕೆ  ಮುಖ್ಯವಾದ ಶ್ರೇಷ್ಠತೆಯ ಕೇಂದ್ರಗಳನ್ನು ಉನ್ನತೀಕರಿಸುವ ಮಾಡುವ ದೃಷ್ಟಿಕೋನಗಳನ್ನು ನಾವು ವಿನಿಮಯ ಮಾಡಿದ್ದೇವೆ.

ರಕ್ಷಣಾ ಕ್ಷೇತ್ರದಲ್ಲಿ, ಉದಾರೀಕರಣಗೊಂಡ ಎಫ್.ಡಿ.ಐ. ಆಡಳಿತದ ಲಾಭ ಪಡೆದು  ನಮ್ಮ ಕಂಪೆನಿಗಳೊಂದಿಗೆ ಭಾರತದಲ್ಲಿ ಹೆಚ್ಚು ಪ್ರಯೋಜನವನ್ನು ಪಡೆಯಲು ಇಸ್ರೇಲಿ ಕಂಪೆನಿಗಳನ್ನು ಆಹ್ವಾನಿಸಿದ್ದೇವೆ.

ಎರಡನೆಯದಾಗಿ,

ನಾವು, ಕಡಿಮೆ ಬಳಕೆ ಮಾಡಿಕೊಂಡಿರುವ ಕ್ಷೇತ್ರಗಳಲ್ಲಿ ಅಂದರೆ ತೈಲ ಮತ್ತು ಅನಿಲ, ಸೈಬರ್ ಭದ್ರತೆ, ಚಲನಚಿತ್ರ ಮತ್ತು ನವೋದ್ಯಮಗಳಲ್ಲಿ ನ ಸಹಕಾರಕ್ಕೆ ಪ್ರವೇಶಿಸುತ್ತಿದ್ದೇವೆ. ಇದನ್ನು ನೀವು ಈಗ ಸ್ಪಲ್ಪ ಹೊತ್ತಿನ ಮೊದಲು ವಿನಿಮಯವಾದ ಒಪ್ಪಂದಗಳಲ್ಲಿ ಪ್ರತಿಫಲನವಾಗಿರುವುದನ್ನು ನೋಡಬಹುದು.  ಈ ಪ್ರದೇಶಗಳಲ್ಲಿ ಅನೇಕವು ವೈವಿಧ್ಯಗೊಳಿಸಲು ಮತ್ತು ವಿಶಾಲ-ನೆಲೆಯ ಕಾರ್ಯಕ್ರಮಗಳ ನಮ್ಮ ಆಶಯವನ್ನು ಸೂಚಿಸುತ್ತವೆ.

ಮತ್ತು ಮೂರನೆಯದಾಗಿ,

ನಾವು ನಮ್ಮ ಭೌಗೋಳಿಕತೆಯ ನಡುವೆ ಜನರ ಹರಿವು ಮತ್ತು ಕಲ್ಪನೆಗಳ ಹರಿವಿಗೆ ಅವಕಾಶ ನೀಡಲು ಬದ್ಧರಾಗಿದ್ದೇವೆ. ಇದು ನೀತಿಯ ಅನುಕೂಲ, ಮೂಲಸೌಕರ್ಯ ಮತ್ತು ಸಂಪರ್ಕದ ಕೊಂಡಿಗಳು ಮತ್ತು ಸರ್ಕಾರದಾಚೆಗೆ ಕ್ಷೇತ್ರಗಳ ಬೆಂಬಲವನ್ನು ವೇಗಗೊಳಿಸುವ ಅಗತ್ಯವನ್ನು ಬಯಸುತ್ತವೆ. 

ನಮ್ಮ ಜನರು ದೀರ್ಘ ಕಾಲದವರೆಗೆ ಕೆಲಸ ಮಾಡುವುದೂ ಸೇರಿದಂತೆ ಪರಸ್ಪರ ರಾಷ್ಟ್ರಗಳಲ್ಲಿ ಕೆಲಸ ಮಾಡಲು ಮತ್ತು ಭೇಟಿ ಮಾಡಲು ನಾವು ಇಸ್ರೇಲ್ ನೊಂದಿಗೆ ಕಾರ್ಯೋನ್ಮುಖರಾಗಿದ್ದೇವೆ. ಎರಡೂ ಕಡೆಗಳ ಜನರನ್ನು ಹತ್ತಿರಕ್ಕೆ ತರಲು, ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನು ಶೀಘ್ರದಲ್ಲೇ ಇಸ್ರೇಲ್ ನಲ್ಲಿ ತೆರೆಯಲಾಗುತ್ತಿದೆ.

ವಿಜ್ಞಾನ ಸಂಬಂಧಿತ ಶೈಕ್ಷಣಿಕ ವಾಹಿನಿಯಲ್ಲಿ ನೂರು ಯುವ ಜನರನ್ನು ವಾರ್ಷಿಕ ದ್ವಿಪಕ್ಷೀಯ ವಿನಿಮಯಕ್ಕಾಗಿ ಕಳುಹಿಸುವ ಕಾರ್ಯಕ್ರಮವನ್ನು ನಾನು ನಿರ್ಧರಿಸಿದ್ದೇವೆ.

ಸ್ನೇಹಿತರೆ,
ಎರಡೂ ಕಡೆಯ ವಾಣಿಜ್ಯ ಮತ್ತು ಹೂಡಿಕೆಗೆ ಅವಕಾಶ ನೀಡುವುದು ನಮ್ಮ ಬಲವಾದ ಪಾಲುದಾರಿಕೆಯ ಮುನ್ನೋಟದ ಅವಿಭಾಜ್ಯ ಅಂಗವಾಗಿದೆ. ಪ್ರಧಾನಮಂತ್ರಿ ನೆತನ್ಯಾಹು ಮತ್ತು ನಾನು, ಈ ನಿಟ್ಟಿನಲ್ಲಿ ಹೆಚ್ಚನದನ್ನು ಮಾಡಲು ಒಪ್ಪಿದ್ದೇವೆ. ಕಳೆದ ವರ್ಷ ಟೆಲ್ ಅವೀವ್ ನಲ್ಲಿ ನಡೆದ ಭೇಟಿಯ, ನಾವು ದ್ವಿಪಕ್ಷೀಯ ವೇದಿಕೆಯಡಿ ಸಿಇಓಗಳೊಂದಿಗೆ ಎರಡನೇ ಬಾರಿ ಸಂವಾದ ನಡೆಸಿದ್ದೇವೆ.

ನೆತನ್ಯಾಹು ಅವರು ತಮ್ಮೊಂದಿಗೆ ಕರೆ ತಂದಿರುವ ಬೃಹತ್ ವಾಣಿಜ್ಯ ಬಳಗವನ್ನು ಸ್ವಾಗತಿಸುತ್ತೇನೆ ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಸ್ಥಿತಿಯ ಬಗ್ಗೆ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದೇವೆ. 

ನಾವು ನಮ್ಮ ವಲಯದಲ್ಲಿ ಮತ್ತು ವಿಶ್ವದಲ್ಲಿ ಸ್ಥಿರತೆ ಮತ್ತು ಶಾಂತಿಯ ವಿಚಾರಗಳಲ್ಲಿ ನಮ್ಮ ಸಹಕಾರವನ್ನು ಪರಾಮರ್ಶಿಸಿದ್ದೇವೆ.

ಸ್ನೇಹಿತರೆ,
ನಿನ್ನೆ ಭಾರತದ ಮಣ್ಣಿಗೆಬಂದ ಬಳಿಕ, ಮೊದಲ ಬಾರಿಗೆ, ಪ್ರಧಾನಮಂತ್ರಿ ನೆತನ್ಯಾಹು ಅವರು, ನೂರು ವರ್ಷಗಳ ಹಿಂದೆ ಇಸ್ರೇಲ್ ನ ಹೈಫಾ ಯುದ್ಧದಲ್ಲಿ ಬಲಿದಾನಗೈದ ಭಾರತೀಯ ವೀರ ಯೋಧರ  ಸ್ಮಾರಕಕ್ಕೆ ಶ್ರದ್ಧಾಂಜಲಿ ಸಲ್ಲಿಸಲು ಪುನರ್ ನಾಮಕರಣಗೊಂಡ ತೀನ್ ಮೂರ್ತಿ ಹೈಫಾ ಚೌಕದಲ್ಲಿ ನ್ನೊಂದಿಗೆ ಆಗಮಿಸಿದರು. 

ನಮ್ಮ ಇತಿಹಾಸ ಮತ್ತು ಹಿರೋಗಳನ್ನು ಎಂದಿಗೂ ಮರೆಯದಂಥ ಎರಡು ರಾಷ್ಟ್ರಗಳು ನಮ್ಮದಾಗಿವೆ. ನಾವು ಪ್ರಧಾನಮಂತ್ರಿ ನೆತನ್ಯಾಹು ಅವರ ಈ ಔದಾರ್ಯಕ್ಕೆ ಆಳವಾಗಿ ಮೆಚ್ಚುಗೆ ಸೂಚಿಸುತ್ತೇವೆ.

ನಾವು ಇಸ್ರೇಲ್ ನೊಂದಿಗಿನ ಪಾಲುದಾರಿಕೆಯ ಭವ್ಯ ಭವಿಷ್ಯವನ್ನು ನೋಡಿದಾಗ, ನನಗೆ ಆಶಾವಾದ ಮತ್ತು ವಿಶ್ವಾಸ ಮೂಡುತ್ತದೆ. ಪ್ರಧಾನಮಂತ್ರಿ ನೆತನ್ಯಾಹು ಅವರು ಮತ್ತು ನಾನು, ಭಾರತ – ಇಸ್ರೇಲ್ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಬದ್ಧರಾಗಿರುವ ಸಮಾನ ಸಹವರ್ತಿಗಳಾಗಿದ್ದೇವೆ. 
ಅಂತಿಮವಾಗಿ ಪ್ರಧಾನಿಯವರೆ, ನಾಳೆ, ನನ್ನ ತವರು ರಾಜ್ಯ ಗುಜರಾತ್ ನಲ್ಲಿ ನಿಮ್ಮೊಂದಿಗೆ ಇರುವ ಹೆಮ್ಮೆಯ ಅವಕಾಶ ನನಗೆ ದೊರೆತಿದೆ.

ಅಲ್ಲಿ, ನಮ್ಮ ಪರಸ್ಪರ ಸಹಕಾರವು ವ್ಯವಸಾಯ, ತಂತ್ರಜ್ಞಾನ, ಮತ್ತು ನಾವೀನ್ಯತೆಗಳಂತಹ ವಿಭಿನ್ನ ಕ್ಷೇತ್ರಗಳಲ್ಲಿ ಹೊಂದಿರುವ ಭರವಸೆಯ ನೆರವೇರಿಕೆಗೆ ನಮಗೆ ಮತ್ತೊಂದು ಅವಕಾಶ ಕಲ್ಪಿಸುತ್ತಿದೆ.

ನಾನು ಪ್ರಧಾನಮಂತ್ರಿ ನೆತನ್ಯಾಹು ಮತ್ತು ಶ್ರೀಮತಿ ನೆತನ್ಯಾಹು ಅವರಿಗೆ ಭಾರತದಲ್ಲಿ ಹರ್ಷದಾಯಕ ಮತ್ತು ನೆನಪಿನಲ್ಲಿ ಉಳಿಯುವಂತ ವಾಸ್ತವ್ಯದ ಆಶಯ ವ್ಯಕ್ತಪಡಿಸುತ್ತೇನೆ.

 

ಧನ್ಯವಾದಗಳು, ತುಂಬಾ ತುಂಬಾ ಧನ್ಯವಾದಗಳು. ತೋಡಾ ರಾಬಾ!

*******