Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಸ್ರೇಲ್ ನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಿ ಭಾಷಣ

ಇಸ್ರೇಲ್ ನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಿ ಭಾಷಣ

ಇಸ್ರೇಲ್ ನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಿ ಭಾಷಣ


 ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಬುಧವಾರ ಇಸ್ರೇಲ್ ನ ಟೆಲ್ ಅವೀವ್ ನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಭಾಷಣ ಮಾಡಿದರು.

 

ಭಾರತೀಯ ಪ್ರಧಾನಮಂತ್ರಿಯೊಬ್ಬರು ಇಸ್ರೇಲ್ ಗೆ ಬಂರುತ್ತಿರುವುದು ಇದೇ ಮೊದಲು ಎಂದು ಉಲ್ಲೇಖಿಸುತ್ತಾ ತಮ್ಮ ಭಾಷಣ ಆರಂಭಿಸಿದ ಪ್ರಧಾನಿ, ಸ್ವಾತಂತ್ರ್ಯಾನಂತರ ಇದು 70 ವರ್ಷಗಳ ದೀರ್ಘಾವಧಿ ತೆಗೆದುಕೊಂಡಿತು ಎಂದರು.

 

ಆತ್ಮೀಯ ಸ್ವಾಗತ ಮತ್ತು ತಮ್ಮ ಭೇಟಿಯ ಉದ್ದಕ್ಕೂ ಗೌರವ ನೀಡಿದ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು.

 

ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಕೇವಲ 25 ವರ್ಷ ಹಳೆಯದಾದರೂ, ಭಾರತ ಮತ್ತು ಇಸ್ರೇಲ್ ನಡುವಿನ ಬಾಂಧವ್ಯ ಹಲವು ಶತಮಾನಗಳ ಹಿಂದಕ್ಕೆ ಹೋಗುತ್ತದೆ ಎಂದರು. 13ನೇ ಶತಮಾನದಲ್ಲಿ ಭಾರತೀಯ ಸುಫಿ ಸಂತ ಬಾಬಾ ಫರೀದ್ ಅವರು ಜೆರುಸೆಲೆಮ್ ಗೆ ಬಂದಿದ್ದರು ಮತ್ತು ಇಲ್ಲಿನ ಗುಹೆಯಲ್ಲಿ ಧ್ಯಾನ ಮಾಡಿದ್ದರು ಎಂದು ನನಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಭಾರತ ಮತ್ತು ಇಸ್ರೇಲ್ ನಡುವಿನ ಬಾಂಧವ್ಯವು ಸಂಸ್ಕೃತಿ, ನಂಬಿಕೆ ಮತ್ತು ಸ್ನೇಹದ ಒಂದು ಸಂಪ್ರದಾಯವಾಗಿದೆ ಎಂದು ಬಣ್ಣಿಸಿದರು. ಹಬ್ಬಗಳ ಆಚರಣೆಯಲ್ಲಿ ಭಾರತ ಮತ್ತು ಇಸ್ರೇಲ್ ನಡುವಿನ ಸಾಮ್ಯತೆಯನ್ನು ಉಲ್ಲೇಖಿಸಿದರು. ಈ ನಿಟ್ಟಿನಲ್ಲಿ ಅವರು ಹೋಲಿ ಮತ್ತು ಪೂರಿಮ್, ಹಾಗೂ ದೀಪಾವಳಿ ಮತ್ತು ಹನುಖ್ ಅನ್ನು ಪ್ರಸ್ತಾಪಿಸಿದರು.

 

ಇಸ್ರೇಲ್ ತಂತ್ರಜ್ಞಾನದಲ್ಲಿ ಮಾಡಿರುವ ತೃಪ್ತಿದಾಯಕ ಪ್ರಗತಿ ಮತ್ತು ಅದರ ಶೌರ್ಯ ಮತ್ತು ಹುತಾತ್ಮತೆಯ ದೀರ್ಘ ಸಂಪ್ರದಾಯಗಳನ್ನು ಪ್ರಧಾನಿ ಉಲ್ಲೇಖಿಸಿದರು. ಪ್ರಥಮ ಮಹಾಯುದ್ಧದ ಸಂದರ್ಭದಲ್ಲಿ ಹೈಫಾ ವಿಮೋಚನೆಯಲ್ಲಿ ಭಾರತೀಯ ಯೋಧರು ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ಪ್ರಧಾನಿ ಸ್ಮರಿಸಿದರು. ಭಾರತ ಮತ್ತು ಇಸ್ರೇಲ್ ನಲ್ಲಿ ಭಾರತೀಯ ಯಹೂದಿ ಸಮುದಾಯದ ದೊಡ್ಡ ಕೊಡುಗೆಯನ್ನೂ ಅವರು ಉಲ್ಲೇಖಿಸಿದರು.

 

ಇಸ್ರೇಲ್ ನಲ್ಲಿನ ನಾವಿನ್ಯತೆಯ ಸ್ಫೂರ್ತಿಯನ್ನು ಪ್ರಶಂಸಿಸಿದ ಪ್ರಧಾನಿ, ಭೂ-ಶಾಖೋತ್ಪನ್ನ ವಿದ್ಯುತ್, ಸೌರ ಫಲಕಗಳು, ಕೃಷಿ –ಜೈವಿಕ ತಂತ್ರಜ್ಞಾನ ಮತ್ತು ಸುರಕ್ಷತೆಯ ಕ್ಷೇತ್ರದಲ್ಲಿ ಇಸ್ರೇಲ್ ದೊಡ್ಡ ಪ್ರಗತಿ ಸಾಧಿಸಿದೆ ಎಂದರು.

 

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೈಗೊಂಡಿರುವ ಸುಧಾರಣೆಗಳ ಸ್ತೂಲ ಪರಿಚಯವನ್ನು ಪ್ರಧಾನಿ ಮಾಡಿಸಿದರು. ಜಿಎಸ್ಟಿ ಜಾರಿ, ಸ್ವಾಭಾವಿಕ ಸಂಪನ್ಮೂಲಗಳ ಹರಾಜು, ವಿಮೆ ಮತ್ತು ಬ್ಯಾಂಕಿಂಗ್ ವಲಯದ ಸುಧಾರಣೆ, ಕೌಶಲ ವರ್ಧನೆ ಮತ್ತಿತರ ವಿಚಾರಗಳನ್ನು ಅವರು ಪ್ರಸ್ತಾಪಿಸಿದರು. 2022ರ ಹೊತ್ತಿಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡಲು ಸರ್ಕಾರ ಗುರಿ ಹೊಂದಿದೆ ಎಂದೂ ಪ್ರಧಾನಿ ತಿಳಿಸಿದರು. ಭಾರತದಲ್ಲಿ ಎರಡನೇ ಹಸಿರು ಕ್ರಾಂತಿ ಮಾಡಲು ಇಸ್ರೇಲ್ ಜೊತೆಗಿನ ಪಾಲುದಾರಿಕೆ ಪ್ರಮುಖ ಅಂಶವಾಗಲಿದೆ ಎಂದರು. ಭವಿಷ್ಯದಲ್ಲಿ ವಿಜ್ಞಾನ, ನಾವಿನ್ಯ ಮತ್ತು ಸಂಶೋಧನೆಗಳು ಭಾರತ ಮತ್ತು ಇಸ್ರೇಲ್ ನಡುವಿನ ಬಾಂಧವ್ಯದ ಬುನಾದಿ ಎಂದು ಹೇಳಿದರು.

 

ಬೆಳಗ್ಗೆ 26/11ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದ ಮೋಶೆ ಹೊಲ್ತ್ ಬರ್ಗ್ ರನ್ನು ತಾವು ಭೇಟಿ ಮಾಡಿದ್ದನ್ನು ಪ್ರಧಾನಿ ಸ್ಮರಿಸಿದರು. 

 

ಇಸ್ರೇಲ್ನಲ್ಲಿ ಕಡ್ಡಾಯ ಸೇನಾ ಸೇವೆಯನ್ನು ಮಾಡಿದ್ದರೂ ಸಹ ಓಸಿಐ ಕಾರ್ಡ್ ಗಳನ್ನು ನೀಡುವ ಭರವಸೆಯನ್ನು ಭಾರತೀಯ ಸಮುದಾಯಕ್ಕೆ ಪ್ರಧಾನಿ ನೀಡಿದರು. ಇಸ್ರೇಲ್ ನಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ ಪ್ರಧಾನಿ, ಇಸ್ರೇಲ್ ಮತ್ತು ಭಾರತದ ನಡುವೆ ಶೀಘ್ರವೇ ನೇರ ವಿಮಾನಯಾನ ಸಂಪರ್ಕ ಕಲ್ಪಿಸುವುದಾಗಿಯೂ ತಿಳಿಸಿದರು.

***

AKT/AK