Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇರಾನ್ ಇಸ್ಲಾಮಿಕ್ ಗಣರಾಜ್ಯದ ವಿದೇಶಾಂಗ ಸಚಿವ ಜಾವೆದ್ ಜರೀಫ್ ಅವರಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭೇಟಿ


2020 ರೈಸಿನ ಮಾತುಕತೆ ಸಲುವಾಗಿ ಭಾರತಕ್ಕೆ ಭೇಟಿ ನೀಡಿರುವ ಡಾ. ಮೊಹಮ್ಮದ್ ಜಾವೆದ್ ಜರೀಫ್ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಇಂದು ಭೇಟಿಯಾಗಿದ್ದರು.

ಡಾ. ಜಾವೆದ್ ಜರೀಫ್ ಅವರನ್ನು ಭಾರತಕ್ಕೆ ಸ್ವಾಗತಿಸಿದ ಪ್ರಧಾನಮಂತ್ರಿ ಅವರು, 2019ರ ಸೆಪ್ಟೆಂಬರ್ ನಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವ ಸಂಸ್ಥೆಯ ಮಹಾ ಅಧಿವೇಶನದ ನೇಪಥ್ಯದಲ್ಲಿ ಅಧ್ಯಕ್ಷ ರೌಹಾನಿ ಅವರೊಂದಿಗೆ ಆತ್ಮೀಯ ಹಾಗೂ ಸೌಹಾರ್ದಯುತ ಮಾತುಕತೆ ನಡೆಸಿದ್ದನ್ನು ನೆನಪು ಮಾಡಿಕೊಂಡರು. ಪ್ರಧಾನಿ ಅವರು, ಇರಾನ್ ಜೊತೆಗಿನ ಬಲಿಷ್ಠ ಮತ್ತು ಸ್ನೇಹ ಸಂಬಂಧಗಳನ್ನು ಅಭಿವೃದ್ಧಿಗೊಳಿಸಲು ಭಾರತದ ಬದ್ಧತೆ ಮುಂದುವರಿಯಲಿದೆ ಎಂದು ಪುನರುಚ್ಚರಿಸಿದರು. ಛಾಭಾರ್ ಬಂದರು ಯೋಜನೆಯಲ್ಲಿ ವಿಶೇಷ ಆರ್ಥಿಕ ವಲಯ ವಿನ್ಯಾಸ ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿಗೆ ಇರಾನ್ ನಾಯಕತ್ವ ನೆರವು ನೀಡುತ್ತಿರುವುದಕ್ಕೆ ಪ್ರಧಾನಿ ಧನ್ಯವಾದಗಳನ್ನು ಹೇಳಿದರು.

ವಿದೇಶಾಂಗ ಸಚಿವರು ಪ್ರಾಂತ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರಧಾನಮಂತ್ರಿ ಅವರು, ಪ್ರಾಂತ್ಯದಲ್ಲಿ ಸ್ಥಿರತೆ, ಶಾಂತಿ ಮತ್ತು ಸುರಕ್ಷತೆಗೆ ಭಾರತ ಬಲವಾದ ಆಸಕ್ತಿ ಹೊಂದಿದೆ ಎಂದು ಪ್ರಸ್ತಾಪಿಸಿದರು.

*****