Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇನ್-‌ಸ್ಪೇಸ್ (IN-SPACe) ಆಶ್ರಯದಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕಾಗಿ 1,000 ಕೋಟಿ ರೂ. ವೆಂಚರ್ ಕ್ಯಾಪಿಟಲ್ ನಿಧಿ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವರಾದ ಸಂಪುಟ ಸಭೆಯು, ಇನ್-‌ಸ್ಪೇಸ್ ಆಶ್ರಯದಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮೀಸಲಾದ 1000 ಕೋಟಿ ರೂ. ವೆಂಚರ್ ಕ್ಯಾಪಿಟಲ್ ನಿಧಿಯನ್ನು ಸ್ಥಾಪಿಸಲು ಅನುಮೋದನೆ ನೀಡಿದೆ.

ಆರ್ಥಿಕ ಪರಿಣಾಮಗಳು:

ಉದ್ದೇಶಿತ 1,000 ಕೋಟಿ ರೂಪಾಯಿ ವೆಂಚರ್ ಕ್ಯಾಪಿಟಲ್ ನಿಧಿಯ ನಿಯೋಜನೆಯ ಅವಧಿಯನ್ನು ಅದರ ಕಾರ್ಯಾಚರಣೆಗಳ ಪ್ರಾರಂಭದ ದಿನಾಂಕದಿಂದ ಐದು ವರ್ಷಗಳವರೆಗೆ ಯೋಜಿಸಲಾಗಿದೆ. ಹೂಡಿಕೆಯ ಅವಕಾಶಗಳು ಮತ್ತು ನಿಧಿಯ ಅವಶ್ಯಕತೆಗಳ ಆಧಾರದ ಮೇಲೆ ಸರಾಸರಿ ನಿಯೋಜನೆ ಮೊತ್ತವು ವರ್ಷಕ್ಕೆ 150-250 ಕೋಟಿ ರೂ. ಆಗಿರಬಹುದು. ಪ್ರಸ್ತಾವಿತ ಹಣಕಾಸು ವರ್ಷವಾರು ವಿವರಗಳು ಈ ಕೆಳಗಿನಂತಿದೆ:

1

2025-26

150.00

2

2026-27

250.00

3

2027-28

250.00

4

2028-29

250.00

5

2029-30

100,00

 

ಒಟ್ಟು  (VC)

1000.00

ಕ್ರ.ಸಂ. ಆರ್ಥಿಕ ವರ್ಷ ಅಂದಾಜು (ಕೋಟಿ ರೂ.ಗಳಲ್ಲಿ)

 

ಕಂಪನಿಯ ಹಂತ, ಅದರ ಬೆಳವಣಿಗೆಯ ಹಾದಿ ಮತ್ತು ರಾಷ್ಟ್ರೀಯ ಬಾಹ್ಯಾಕಾಶ ಸಾಮರ್ಥ್ಯಗಳ ಮೇಲೆ ಅದರ ಸಂಭಾವ್ಯ ಪ್ರಭಾವವನ್ನು ಅವಲಂಬಿಸಿ ಹೂಡಿಕೆಯ ಸೂಚಕ ಶ್ರೇಣಿಯನ್ನು 10 ರಿಂದ 60 ಕೋಟಿ ರೂ. ಎಂದು ಪ್ರಸ್ತಾಪಿಸಲಾಗಿದೆ. ಸೂಚಿತ ಇಕ್ವಿಟಿ ಹೂಡಿಕೆ ಮಿತಿಗಳು ಹೀಗಿರಬಹುದು:

  • ಅಭಿವೃದ್ಧಿ ಹಂತ: ರೂ 10 ಕೋಟಿ – ರೂ 30 ಕೋಟಿ
  • ನಂತರದ ಅಭಿವೃದ್ಧಿಯ ಹಂತ: ರೂ 30 ಕೋಟಿ – ರೂ 60 ಕೋಟಿ

ಮೇಲಿನ ಹೂಡಿಕೆ ಮಿತಿಯನ್ನು ಆಧರಿಸಿ, ಈ ನಿಧಿಯು ಸುಮಾರು 40 ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುವ ನಿರೀಕ್ಷೆಯಿದೆ.

ವಿವರಗಳು:

ಈ ನಿಧಿಯನ್ನು ಭಾರತದ ಬಾಹ್ಯಾಕಾಶ ಕ್ಷೇತ್ರವನ್ನು ಮುನ್ನಡೆಸಲು ಕಾರ್ಯತಂತ್ರವಾಗಿ ವಿನ್ಯಾಸಗೊಳಿಸಲಾಗಿದೆ, ರಾಷ್ಟ್ರೀಯ ಆದ್ಯತೆಳಿಗೆ ಅನುಗುಣವಾಗಿರುತ್ತದೆ ಮತ್ತು ಕೆಳಗಿನ ಪ್ರಮುಖ ಉಪಕ್ರಮಗಳ ಮೂಲಕ ನಾವೀನ್ಯತೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ:

ಎ.        ಬಂಡವಾಳ ಪುನರ್ಭರ್ತಿ

ಬಿ.        ಭಾರತದಲ್ಲಿ ಕಂಪನಿಗಳನ್ನು ಉಳಿಸಿಕೊಳ್ಳುವುದು

ಸಿ.        ಬಾಹ್ಯಾಕಾಶ ಆರ್ಥಿಕತೆಯ ಅಭಿವೃದ್ಧಿ

ಡಿ.        ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಯನ್ನು ವೇಗಗೊಳಿಸುವುದು

ಇ.        ಜಾಗತಿಕ ಸ್ಪರ್ಧೆಯನ್ನು ಉತ್ತೇಜಿಸುವುದು

ಎಫ್.   ಆತ್ಮನಿರ್ಭರ ಭಾರತವನ್ನು ಬೆಂಬಲಿಸುವುದು

ಜಿ.        ರೋಮಾಂಚಕ ನಾವೀನ್ಯತೆ ಪೂರಕ ವ್ಯವಸ್ಥೆಯನ್ನು ರಚಿಸುವುದು

ಎಚ್.   ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವುದು

ಐ.        ದೀರ್ಘಾವಧಿಯ ಸುಸ್ಥಿರತೆಯನ್ನು ಖಾತರಿಪಡಿಸುವುದು

 

ಈ ಅಂಶಗಳಿಗೆ ಒತ್ತು ನೀಡುವ ಮೂಲಕ, ನಿಧಿಯು ಭಾರತವನ್ನು ಪ್ರಮುಖ ಬಾಹ್ಯಾಕಾಶ ಆರ್ಥಿಕತೆಗಳಲ್ಲಿ ಕಾರ್ಯತಂತ್ರ ಸ್ಥಾನದಲ್ಲಿ ಇರಿಸುವ ಗುರಿಯನ್ನು ಹೊಂದಿದೆ.

 

ಪ್ರಯೋಜನಗಳು:

i.  ನಂತರದ ಹಂತದ ಅಭಿವೃದ್ಧಿಗಾಗಿ ಹೆಚ್ಚುವರಿ ಹಣವನ್ನು ಆಕರ್ಷಿಸುವ ಮೂಲಕ ಗುಣಕ ಪರಿಣಾಮವನ್ನು ಸೃಷ್ಟಿಸಲು ಬಂಡವಾಳದ ಹೂಡಿಕೆಯು ಖಾಸಗಿ ಹೂಡಿಕೆದಾರರಲ್ಲಿ ವಿಶ್ವಾಸವನ್ನು ತುಂಬುತ್ತದೆ.

ii.  ಭಾರತದೊಳಗೆ ನೆಲೆಸಿರುವ ಬಾಹ್ಯಾಕಾಶ ಕಂಪನಿಗಳನ್ನು ಉಳಿಸಿಕೊಳ್ಳುವುದು ಮತ್ತು ವಿದೇಶದಲ್ಲಿ ನೆಲೆಸುವ ಭಾರತೀಯ ಕಂಪನಿಗಳ ಪ್ರವೃತ್ತಿಯನ್ನು ಎದುರಿಸುವುದು.

iii. ಮುಂದಿನ ಹತ್ತು ವರ್ಷಗಳಲ್ಲಿ ಭಾರತೀಯ ಬಾಹ್ಯಾಕಾಶ ಆರ್ಥಿಕತೆಯ ಐದು ಪಟ್ಟು ವಿಸ್ತರಣೆಯ ಗುರಿಯನ್ನು ಈಡೇರಿಸಲು ಖಾಸಗಿ ಬಾಹ್ಯಾಕಾಶ ಉದ್ಯಮದ ಬೆಳವಣಿಗೆಯನ್ನು ವೇಗಗೊಳಿಸುವುದು.

iv.  ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪ್ರಗತಿಗೆ ಚಾಲನೆ ನೀಡುವುದು ಮತ್ತು ಖಾಸಗಿ ವಲಯದ ಸಹಭಾಗಿತ್ವದ ಮೂಲಕ ಭಾರತದ ನಾಯಕತ್ವವನ್ನು ಬಲಪಡಿಸುವುದು.

    v.  ಜಾಗತಿಕ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವುದು.

    vi. ಆತ್ಮನಿರ್ಭರ ಭಾರತವನ್ನು ಬೆಂಬಲಿಸುವುದು.

ಉದ್ಯೋಗ ಸೃಷ್ಟಿ ಸಾಮರ್ಥ್ಯ ಸೇರಿದಂತೆ ಪರಿಣಾಮ:

ಪ್ರಸ್ತಾವಿತ ನಿಧಿಯು ಸಂಪೂರ್ಣ ಬಾಹ್ಯಾಕಾಶ ಪೂರೈಕೆ ಸರಪಳಿ-ಅಪ್‌ ಸ್ಟ್ರೀಮ್, ಮಿಡ್‌ ಸ್ಟ್ರೀಮ್ ಮತ್ತು ಡೌನ್‌ ಸ್ಟ್ರೀಮ್‌ ನಾದ್ಯಂತ ಸ್ಟಾರ್ಟ್‌ಅಪ್‌ ಗಳನ್ನು ಬೆಂಬಲಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಇದು ವ್ಯವಹಾರಗಳನ್ನು ಹೆಚ್ಚಿಸಲು, ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಯಲ್ಲಿ ಹೂಡಿಕೆ ಮಾಡಲು ಮತ್ತು ಕಾರ್ಯಪಡೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಪ್ರತಿಯೊಂದು ಹೂಡಿಕೆಯು ಎಂಜಿನಿಯರಿಂಗ್, ಸಾಫ್ಟ್‌ವೇರ್ ಅಭಿವೃದ್ಧಿ, ಡೇಟಾ ವಿಶ್ಲೇಷಣೆ ಮತ್ತು ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ನೂರಾರು ನೇರ ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಜೊತೆಗೆ ಪೂರೈಕೆ ಸರಪಳಿಗಳು, ಲಾಜಿಸ್ಟಿಕ್ಸ್ ಮತ್ತು ವೃತ್ತಿಪರ ಸೇವೆಗಳಲ್ಲಿ ಸಾವಿರಾರು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಪ್ರಬಲವಾದ ಸ್ಟಾರ್ಟ್‌ಅಪ್‌ ಪೂರಕ ವ್ಯವಸ್ಥೆಯನ್ನು ಪೋಷಿಸುವ ಮೂಲಕ, ನಿಧಿಯು ಉದ್ಯೋಗಗಳನ್ನು ಸೃಷ್ಟಿಸುವುದಲ್ಲದೆ, ನುರಿತ ಉದ್ಯೋಗಿಗಳನ್ನು ಅಭಿವೃದ್ಧಿಪಡಿಸುತ್ತದೆ, ನಾವೀನ್ಯತೆಗೆ ಚಾಲನೆ ನೀಡುತ್ತದೆ ಮತ್ತು ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಭಾರತದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ.

ಹಿನ್ನೆಲೆ:

ಭಾರತ ಸರ್ಕಾರವು 2020 ರ ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳ ಭಾಗವಾಗಿ, ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಮೇಲ್ವಿಚಾರಣೆ ಮಾಡಲು ಇನ್-‌ಸ್ಪೇಸ್ ಅನ್ನು ಸ್ಥಾಪಿಸಿದೆ. ಇನ್-‌ಸ್ಪೇಸ್ ಭಾರತದ ಬಾಹ್ಯಾಕಾಶ ಆರ್ಥಿಕತೆಯ ಬೆಳವಣಿಗೆಯನ್ನು ಬೆಂಬಲಿಸಲು 1000 ಕೋಟಿ ರೂ. ವೆಂಚರ್ ಕ್ಯಾಪಿಟಲ್ ಫಂಡ್ ಅನ್ನು ಪ್ರಸ್ತಾಪಿಸಿದೆ. ಇದು ಪ್ರಸ್ತುತ $8.4 ಶತಕೋಟಿ ಮೌಲ್ಯವನ್ನು ಹೊಂದಿದ್ದು, 2033 ರ ವೇಳೆಗೆ $44 ಶತಕೋಟಿಯನ್ನು ತಲುಪುವ ಗುರಿಯನ್ನು ಹೊಂದಿದೆ. ಅಪಾಯದ ಬಂಡವಾಳದ ನಿರ್ಣಾಯಕ ಅಗತ್ಯವನ್ನು ಪರಿಹರಿಸುವ ಗುರಿಯನ್ನು ಈ ನಿಧಿ ಹೊಂದಿದೆ. ಸಾಂಪ್ರದಾಯಿಕ ಸಾಲದಾತರು ಈ ಹೈಟೆಕ್ ವಲಯದಲ್ಲಿ ಸ್ಟಾರ್ಟ್‌ಅಪ್‌ ಗಳಿಗೆ ಹಣ ನೀಡಲು ಹಿಂಜರಿಯುತ್ತಾರೆ. ಮೌಲ್ಯ ಸರಪಳಿಯಲ್ಲಿ ಸುಮಾರು 250 ಬಾಹ್ಯಾಕಾಶ ಸ್ಟಾರ್ಟ್‌ಅಪ್‌ ಗಳು ಹೊರಹೊಮ್ಮುತ್ತಿವೆ, ಆದ್ದರಿಂದ ಅವರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾಗರೋತ್ತರ ಪ್ರತಿಭೆಯ ನಷ್ಟವನ್ನು ತಡೆಯಲು ಸಮಯೋಚಿತ ಹಣಕಾಸಿನ ಬೆಂಬಲವು ನಿರ್ಣಾಯಕವಾಗಿದೆ. ಪ್ರಸ್ತಾವಿತ ಸರ್ಕಾರದ ಬೆಂಬಲಿತ ನಿಧಿಯು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುತ್ತದೆ, ಖಾಸಗಿ ಬಂಡವಾಳವನ್ನು ಆಕರ್ಷಿಸುತ್ತದೆ ಮತ್ತು ಬಾಹ್ಯಾಕಾಶ ಸುಧಾರಣೆಗಳನ್ನು ಮುಂದುವರೆಸುವ ಸರ್ಕಾರದ ಬದ್ಧತೆಯನ್ನು ಸೂಚಿಸುತ್ತದೆ. ಇದು ಸೆಬಿ ನಿಯಮಾವಳಿಗಳ ಅಡಿಯಲ್ಲಿ ಪರ್ಯಾಯ ಹೂಡಿಕೆ ನಿಧಿಯಾಗಿ ಕಾರ್ಯನಿರ್ವಹಿಸುತ್ತದೆ, ಆರಂಭಿಕ ಹಂತದ ಇಕ್ವಿಟಿಯನ್ನು ಸ್ಟಾರ್ಟ್‌ಅಪ್‌ ಗಳಿಗೆ ಒದಗಿಸುತ್ತದೆ ಮತ್ತು ಮತ್ತಷ್ಟು ಖಾಸಗಿ ಇಕ್ವಿಟಿ ಹೂಡಿಕೆಗಳನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.

 

*****