ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮತ್ತು ಮಾಲ್ಡೀವ್ಸ್‌ನ ಚಾರ್ಟರ್ಡ್ ಅಕೌಂಟೆಂಟ್ಸ್ (ಸಿಎ ಮಾಲ್ಡೀವ್ಸ್) ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ಇಂದು ಅನುಮೋದನೆ ನೀಡಿದೆ.
ವಿವರಗಳು:
ಐಸಿಎಐ ಮತ್ತು ಸಿಎ ಮಾಲ್ಡೀವ್ಸ್ ಲೆಕ್ಕಪರಿಶೋಧಕ ಜ್ಞಾನ, ವೃತ್ತಿಪರತೆ ಮತ್ತು ಬೌದ್ಧಿಕ ಅಭಿವೃದ್ಧಿಯ ಪ್ರಗತಿಗಾಗಿ ಪರಸ್ಪರ ಸಹಕಾರವನ್ನು ಸ್ಥಾಪಿಸುವ ಗುರಿಯನ್ನು ಹೊಂದಿವೆ, ಒಪ್ಪಂದವು ಆಯಾ ಸದಸ್ಯರ ಹಿತಾಸಕ್ತಿಗಳನ್ನು ಸುಧಾರಿಸುತ್ತದೆ ಮತ್ತು ಮಾಲ್ಡೀವ್ಸ್ ಮತ್ತು ಭಾರತದಲ್ಲಿ ಲೆಕ್ಕಪತ್ರ ನಿರ್ಹಣೆ (ಅಕೌಂಟೆನ್ಸಿ) ವೃತ್ತಿಯ ಅಭಿವೃದ್ಧಿಗೆ ಧನಾತ್ಮಕ ಕೊಡುಗೆ ನೀಡುತ್ತದೆ.
ಪರಿಣಾಮ:
ಈ ತಿಳಿವಳಿಕೆ ಒಪ್ಪಂದವು ಸಿಎ ಮಾಲ್ಡೀವ್ಸ್‌ಗೆ ಸಹಾಯ ಮಾಡುವುದರ ಜೊತೆಗೆ ಮಾಲ್ಡೀವ್ಸ್‌ನಲ್ಲಿ ದೀರ್ಘಾವಧಿಯ ವೃತ್ತಿಪರ ಅವಕಾಶಗಳನ್ನು ಪಡೆಯಲು ಐಸಿಎಐ ಸದಸ್ಯರ ನಿರೀಕ್ಷೆಗಳಿಗೆ ಹೆಚ್ಚುವರಿ ಉತ್ತೇಜನವನ್ನು ನೀಡುತ್ತದೆ. ಈ ತಿಳಿವಳಿಕೆ ಒಪ್ಪಂದದೊಂದಿಗೆ, ಐಸಿಎಐ ಅಕೌಂಟೆನ್ಸಿ ವೃತ್ತಿಯಲ್ಲಿ ಸೇವೆಗಳ ರಫ್ತು ಒದಗಿಸುವ ಮೂಲಕ ಮಾಲ್ಡೀವ್ಸ್ ಜೊತೆಗಿನ ಪಾಲುದಾರಿಕೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಐಸಿಎಐ ಸದಸ್ಯರು ದೇಶಗಳಾದ್ಯಂತ ವಿವಿಧ ಸಂಸ್ಥೆಗಳಲ್ಲಿ ಮಧ್ಯಮದಿಂದ ಉನ್ನತ ಮಟ್ಟದ ಸ್ಥಾನಗಳನ್ನು ಹೊಂದಿದ್ದಾರೆ ಮತ್ತು ದೇಶದ ಆಯಾ ಸಂಸ್ಥೆಗಳ ನಿರ್ಧಾರ/ನೀತಿ ನಿರೂಪಣೆ ತಂತ್ರಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ.
ಪ್ರಯೋಜನಗಳು:
ತಿಳಿವಳಿಕೆ ಒಪ್ಪಂದವು ಐಸಿಎಐ ಸದಸ್ಯರಿಗೆ ತಮ್ಮ ವೃತ್ತಿಯ ವ್ಯಾಪ್ತಿಯನ್ನು ವಿಸ್ತರಿಸಲು ಅವಕಾಶವನ್ನು ಒದಗಿಸುತ್ತದೆ ಮತ್ತು ಸ್ಥಳೀಯ ಪ್ರಜೆಗಳ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಸಹಾಯ ಮಾಡಲು ಐಸಿಎಐಗೆ ಪ್ರೋತ್ಸಾಹವನ್ನು ನೀಡುತ್ತದೆ. ಈ ತಿಳಿವಳಿಕೆ ಒಪ್ಪಂದವು ಭಾರತ ಮತ್ತು ಮಾಲ್ಡೀವ್ಸ್ ನಡುವೆ ಬಲವಾದ ಕಾರ್ಯ ಸಂಬಂಧಗಳನ್ನು ಬೆಳೆಸುತ್ತದೆ. ಒಪ್ಪಂದವು ಎರಡೂ ದೇಶಗಳಲ್ಲಿ ವೃತ್ತಿಪರರ ಚಲನಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಜಾಗತಿಕವಾಗಿ ವ್ಯವಹಾರಕ್ಕೆ ಹೊಸ ಆಯಾಮವನ್ನು ನೀಡುತ್ತದೆ.
ಅನುಷ್ಠಾನ ತಂತ್ರ ಮತ್ತು ಗುರಿಗಳು:
ಅಭಿಪ್ರಾಯಗಳ ವಿನಿಮಯ, ವೃತ್ತಿಪರ ಅಕೌಂಟೆನ್ಸಿ ತರಬೇತಿ, ವೃತ್ತಿಪರ ನೀತಿಶಾಸ್ತ್ರ, ತಾಂತ್ರಿಕ ಸಂಶೋಧನೆ, ಅಕೌಂಟೆಂಟ್‌ಗಳ ವೃತ್ತಿಪರ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾಹಿತಿ ವಿನಿಮಯದ ಮೂಲಕ ಅಕೌಂಟೆನ್ಸಿ ವೃತ್ತಿಯ ವಿಷಯಗಳಲ್ಲಿ ಐಸಿಎಐ ಮತ್ತು ಸಿಎ ಮಾಲ್ಡೀವ್ಸ್ ನಡುವಿನ ಸಹಕಾರವನ್ನು ಬಲಪಡಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ. ಪರಸ್ಪರರ ವೆಬ್‌ಸೈಟ್, ಸೆಮಿನಾರ್‌ಗಳು, ಸಮ್ಮೇಳನಗಳು, ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮಗಳು ಮತ್ತು ಎರಡೂ ಸಂಸ್ಥೆಗಳಿಗೆ ಪರಸ್ಪರ ಪ್ರಯೋಜನಕಾರಿಯಾದ ಇತರ ಜಂಟಿ ಚಟುವಟಿಕೆಗಳಿಗೆ ಸಂಪರ್ಕಗಳ ಮೂಲಕ ಪರಸ್ಪರ ಸಹಕಾರವನ್ನು ಉತ್ತೇಜಿಸುವ ಉದ್ದೇಶವನ್ನು ಇದು ಹೊಂದಿದೆ. ಈ ತಿಳಿವಳಿಕೆ ಒಪ್ಪಂದವು ವಿಶ್ವದಲ್ಲಿ ಅಕೌಂಟೆನ್ಸಿ ವೃತ್ತಿಯನ್ನು ಉತ್ತೇಜಿಸಲು ಭಾರತ ಮತ್ತು ಮಾಲ್ಡೀವ್ಸ್‌ನಲ್ಲಿ ಅಕೌಂಟೆನ್ಸಿ ವೃತ್ತಿಯ ಅಭಿವೃದ್ಧಿಯ ಬಗ್ಗೆ ಅಪ್‌ಡೇಟ್ ಗಳನ್ನು ಒದಗಿಸುತ್ತದೆ. ಇದಲ್ಲದೆ, ಸಿಎ ಮಾಲ್ಡೀವ್ಸ್ 135 ದೇಶಗಳಲ್ಲಿ 180 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಅಕೌಂಟೆನ್ಸಿ ವೃತ್ತಿಯ ಜಾಗತಿಕ ವೇದಿಕೆಯಾದ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಅಕೌಂಟೆಂಟ್ಸ್ (ಐಎಫ್‌ಎಸಿ) ನ ಸದಸ್ಯನಾಗಲು ಉದ್ದೇಶಿಸಿದೆ. ಸಿಎ ಮಾಲ್ಡೀವ್ಸ್ ಐಎಫ್‌ಎಸಿ ಸದಸ್ಯನಾಗಲು ಅದಕ್ಕೆ ಐಸಿಎಐ ತಾಂತ್ರಿಕ ನೆರವು ನೀಡುತ್ತದೆ.
ಹಿನ್ನೆಲೆ:
ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳ ವೃತ್ತಿಯ ನಿಯಂತ್ರಣಕ್ಕಾಗಿ ಚಾರ್ಟರ್ಡ್ ಅಕೌಂಟೆಂಟ್ಸ್ ಆಕ್ಟ್, 1949 ರ ಅಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಯಾಗಿದೆ. ಜಾಗತಿಕವಾಗಿ ಗುರುತಿಸಿಕೊಂಡಿರುವ ಚಾರ್ಟರ್ಡ್ ಅಕೌಂಟೆಂಟ್‌ಗಳ ವೃತ್ತಿಯನ್ನು ಮುಂದುವರಿಸುವಲ್ಲಿ ಶಿಕ್ಷಣ, ವೃತ್ತಿಪರ ಅಭಿವೃದ್ಧಿ, ಉನ್ನತ ಲೆಕ್ಕಪತ್ರ ನಿರ್ವಹಣೆ, ಲೆಕ್ಕಪರಿಶೋಧನೆ ಮತ್ತು ನೈತಿಕ ಮಾನದಂಡಗಳ ಕ್ಷೇತ್ರದಲ್ಲಿ ಐಸಿಎಐ ಅಪಾರ ಕೊಡುಗೆ ನೀಡಿದೆ.
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮತ್ತು ಮಾಲ್ಡೀವ್ಸ್‌ನ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಗಳ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

*****