Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇದುವರೆಗೆ ಸುಮಾರು ₹ 3.5 ಲಕ್ಷ ಕೋಟಿ ರೈತರ ಖಾತೆಗಳಿಗೆ ಜಮೆಯಾಗಿರುವುದು ನನಗೆ ಅಪಾರ ತೃಪ್ತಿ ಮತ್ತು ಹೆಮ್ಮೆಯ ಸಂಗತಿ: ಪ್ರಧಾನಮಂತ್ರಿ


ಭಾರತದ ಕೃಷಿಕರಿಗೆ ಬೆಂಬಲ ನೀಡಲು ಮತ್ತು ಅವರ ಉನ್ನತಿಗಾಗಿ ಜಾರಿಗೆ ತರಲಾಗಿರುವ ಮಹತ್ವಾಕಾಂಕ್ಷಿ ಉಪಕ್ರಮವಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 6ನೇ ವಾರ್ಷಿಕೋತ್ಸವದಂದು ದೇಶಾದ್ಯಂತದ ಎಲ್ಲಾ ರೈತ ಸಹೋದರ ಸಹೋದರಿಯರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇದುವರೆಗೆ ಸುಮಾರು ₹ 3.5 ಲಕ್ಷ ಕೋಟಿ ರೈತರ ಖಾತೆಗೆ ಜಮೆಯಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

 ಅವರು ಎಕ್ಸ್  ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ: 

“ಪಿಎಂ-ಕಿಸಾನ್ 6 ವರ್ಷಗಳನ್ನು ಪೂರೈಸಿದ್ದು ದೇಶಾದ್ಯಂತದ ನಮ್ಮ ರೈತ ಸಹೋದರ ಸಹೋದರಿಯರಿಗೆ ಅನಂತಾನಂತ ಅಭಿನಂದನೆಗಳು. ಇದುವರೆಗೆ ಸುಮಾರು 3.5 ಲಕ್ಷ ಕೋಟಿ ರೂಪಾಯಿ ರೈತರ ಖಾತೆಗೆ ಜಮೆಯಾಗಿರುವುದು ನನಗೆ ಅಪಾರ ಸಂತಸ ತಂದಿದೆ ಮತ್ತು ಹೆಮ್ಮೆಯ ಸಂಗತಿಯಾಗಿದೆ.  ನಮ್ಮ ಈ ಪ್ರಯತ್ನ ಅನ್ನದಾತರಿಗೆ ಗೌರವ, ಸಮೃದ್ಧಿ ಮತ್ತು ಹೊಸ ಹುರುಪು ನೀಡುತ್ತಿದೆ.

#PMKisan”

 

 

*****