ಗೌರವಾನ್ವಿತ, ಘನತೆವೆತ್ತ ಪ್ರಧಾನ ಮಂತ್ರಿ ಮೆಲೋನಿ ಅವರೇ,
ಎರಡೂ ದೇಶಗಳ ನಿಯೋಗಗಳ ಪ್ರತಿನಿಧಿಗಳೇ,
ಮಾಧ್ಯಮ ಮಿತ್ರರೇ,
ನಮಸ್ಕಾರ!
ಭಾರತಕ್ಕೆ ಮೊದಲ ಭೇಟಿ ನೀಡಿರುವ ಪ್ರಧಾನ ಮಂತ್ರಿ ಮೆಲೋನಿ ಮತ್ತು ಅವರ ನಿಯೋಗಕ್ಕೆ ನಾನು ಆತ್ಮೀಯ ಸ್ವಾಗತವನ್ನು ಕೋರುತ್ತೇನೆ. ಕಳೆದ ವರ್ಷ ಅಲ್ಲಿ ನಡೆದ ಚುನಾವಣೆಯಲ್ಲಿ ಇಟಲಿಯ ನಾಗರಿಕರು ಅವರನ್ನು ಮೊದಲ ಮಹಿಳಾ ಮತ್ತು ಕಿರಿಯ ಪ್ರಧಾನಿಯಾಗಿ ಆಯ್ಕೆ ಮಾಡಿದರು. ಈ ಐತಿಹಾಸಿಕ ಸಾಧನೆಗೆ ಎಲ್ಲಾ ಭಾರತೀಯರ ಪರವಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಮತ್ತು ಶುಭ ಹಾರೈಸುತ್ತೇನೆ. ಅವರು ಅಧಿಕಾರ ವಹಿಸಿಕೊಂಡ ಕೆಲವು ದಿನಗಳ ನಂತರ ಬಾಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ನಾವು ನಮ್ಮ ಮೊದಲ ಸಭೆಯನ್ನು ನಡೆಸಿದ್ದೆವು.
ಸ್ನೇಹಿತರೇ,
ಇಂದಿನ ನಮ್ಮ ಚರ್ಚೆಗಳು ಬಹಳ ಉಪಯುಕ್ತ ಮತ್ತು ಅರ್ಥಪೂರ್ಣವಾಗಿವೆ. ಈ ವರ್ಷ ಭಾರತ ಮತ್ತು ಇಟಲಿ ತಮ್ಮ ದ್ವಿಪಕ್ಷೀಯ ಸಂಬಂಧದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿವೆ. ಈ ಸಂದರ್ಭದಲ್ಲಿ, ನಾವು ಭಾರತ-ಇಟಲಿ ಸಹಭಾಗಿತ್ವಕ್ಕೆ ಕಾರ್ಯತಂತ್ರದ ಸಹಭಾಗಿತ್ವದ ಸ್ಥಾನಮಾನವನ್ನು ನೀಡಲು ನಿರ್ಧರಿಸಿದ್ದೇವೆ. ನಮ್ಮ ಆರ್ಥಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ನಾವು ಒತ್ತು ನೀಡಿದ್ದೇವೆ. ನಮ್ಮ “ಮೇಕ್ ಇನ್ ಇಂಡಿಯಾ” ಮತ್ತು “ಆತ್ಮನಿರ್ಭರ ಭಾರತ” ಅಭಿಯಾನಗಳು ಭಾರತದಲ್ಲಿ ಉತ್ತಮ ಹೂಡಿಕೆಯ ಅವಕಾಶಗಳನ್ನು ತೆರೆಯುತ್ತಿವೆ. ನವೀಕರಿಸಬಹುದಾದ ಇಂಧನ, ಹಸಿರು ಜಲಜನಕ, ಮಾಹಿತಿ ತಂತ್ರಜ್ಞಾನ, ಸೆಮಿಕಂಡಕ್ಟರ್‌ಗಳು, ಟೆಲಿಕಾಂ, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ನಾವು ವಿಶೇಷ ಒತ್ತು ನೀಡಿದ್ದೇವೆ. ಇಂದು ನಾವು ಭಾರತ ಮತ್ತು ಇಟಲಿ ನಡುವೆ ʼಸ್ಟಾರ್ಟ್‌ಅಪ್ ಬ್ರಿಡ್ಜ್ʼ ಸ್ಥಾಪನೆಯನ್ನು ಘೋಷಿಸುತ್ತಿದ್ದೇವೆ ಮತ್ತು ಈ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ.
ಸ್ನೇಹಿತರೇ,
ಉಭಯ ದೇಶಗಳು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿರುವ ಮತ್ತೊಂದು ಕ್ಷೇತ್ರವಿದೆ, ಅದು ರಕ್ಷಣಾ ಸಹಕಾರವಾಗಿದೆ. ಭಾರತದಲ್ಲಿ ರಕ್ಷಣಾ ಉತ್ಪಾದನಾ ವಲಯದಲ್ಲಿ ಸಹ-ಉತ್ಪಾದನೆ ಮತ್ತು ಸಹ-ಅಭಿವೃದ್ಧಿಗೆ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ, ಇದು ಎರಡೂ ದೇಶಗಳಿಗೆ ಪ್ರಯೋಜನಕಾರಿಯಾಗಿದೆ. ಎರಡೂ ದೇಶಗಳ ಸಶಸ್ತ್ರ ಪಡೆಗಳ ನಡುವೆ ನಿಯಮಿತ ಜಂಟಿ ಅಭ್ಯಾಸ ಮತ್ತು ತರಬೇತಿ ಕೋರ್ಸ್‌ಗಳನ್ನು ಆಯೋಜಿಸಲು ನಾವು ನಿರ್ಧರಿಸಿದ್ದೇವೆ. ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಇಟಲಿ ಪರಸ್ಪರ ಸಹಕರಿಸುತ್ತಿವೆ. ಈ ಸಹಕಾರವನ್ನು ಇನ್ನಷ್ಟು ಬಲಪಡಿಸುವುದು ಹೇಗೆ ಎಂಬುದರ ಕುರಿತು ನಾವು ಸವಿವರವಾಗಿ ಚರ್ಚಿಸಿದ್ದೇವೆ.
ಸ್ನೇಹಿತರೇ,
ಭಾರತ ಮತ್ತು ಇಟಲಿ ನಡುವೆ ಶತಮಾನಗಳಷ್ಟು ಹಳೆಯ ಸಾಂಸ್ಕೃತಿಕ ಮತ್ತು ಜನರ-ಜನರ ನಡುವಿನ ಸಂಬಂಧಗಳಿವೆ. ಸದ್ಯದ ಅಗತ್ಯಕ್ಕೆ ತಕ್ಕಂತೆ ಈ ಸಂಬಂಧಗಳಿಗೆ ಹೊಸ ರೂಪ ಮತ್ತು ಹೊಸ ಶಕ್ತಿ ನೀಡುವ ಕುರಿತು ಚರ್ಚೆ ನಡೆಸಿದೆವು. ವಲಸೆ ಮತ್ತು ಸಂಚಾರ ಪಾಲುದಾರಿಕೆ ಒಪ್ಪಂದದ ಕುರಿತು ಉಭಯ ದೇಶಗಳ ನಡುವೆ ನಡೆಯುತ್ತಿರುವ ಮಾತುಕತೆಗಳು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಈ ಒಪ್ಪಂದದ ತ್ವರಿತ ತೀರ್ಮಾನವು ನಮ್ಮ ಜನರ-ಜನರ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ಉಭಯ ದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ಸಹಕಾರವನ್ನು ಉತ್ತೇಜಿಸುವ ಅಗತ್ಯವನ್ನು ನಾವು ಒತ್ತಿ ಹೇಳಿದ್ದೇವೆ. ಭಾರತ ಮತ್ತು ಇಟಲಿ ನಡುವಿನ ಸಂಬಂಧದ 75 ನೇ ವಾರ್ಷಿಕೋತ್ಸವವನ್ನು ಆಚರಿಸಲು, ನಾವು ಕ್ರಿಯಾ ಯೋಜನೆಯನ್ನು ರೂಪಿಸಲು ನಿರ್ಧರಿಸಿದ್ದೇವೆ. ಇದರ ಸಹಾಯದಿಂದ ನಾವು ಜಾಗತಿಕ ವೇದಿಕೆಯಲ್ಲಿ ಎರಡೂ ದೇಶಗಳ ವೈವಿಧ್ಯತೆ, ಇತಿಹಾಸ, ವಿಜ್ಞಾನ ಮತ್ತು ತಂತ್ರಜ್ಞಾನ, ನಾವೀನ್ಯತೆ, ಕ್ರೀಡೆ ಮತ್ತು ಸಾಧನೆಗಳನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ.
ಸ್ನೇಹಿತರೇ,
ಕೋವಿಡ್ ಸಾಂಕ್ರಾಮಿಕ ಮತ್ತು ಉಕ್ರೇನ್ ಸಂಘರ್ಷದಿಂದ ಉಂಟಾದ ಆಹಾರ, ಇಂಧನ ಮತ್ತು ರಸಗೊಬ್ಬರಗಳ ಬಿಕ್ಕಟ್ಟಿನಿಂದ ಎಲ್ಲಾ ದೇಶಗಳು ಪರಿಣಾಮ ಎದುರಿಸಿವೆ. ಇವು ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಿವೆ. ನಾವು ಈ ಬಗ್ಗೆ ನಮ್ಮ ಪರಸ್ಪರ ಕಳವಳವನ್ನು ವ್ಯಕ್ತಪಡಿಸಿದ್ದೇವೆ ಮತ್ತು ಈ ಸಮಸ್ಯೆಗಳನ್ನು ಪರಿಹರಿಸಲು ಜಂಟಿ ಪ್ರಯತ್ನಗಳಿಗೆ ಒತ್ತು ನೀಡಿದ್ದೇವೆ. ಭಾರತದ ಜಿ-20 ಅಧ್ಯಕ್ಷತೆಯ ಅವಧಿಯಲ್ಲೂ ನಾವು ಈ ವಿಷಯಕ್ಕೆ ಆದ್ಯತೆ ನೀಡುತ್ತಿದ್ದೇವೆ. ಉಕ್ರೇನ್ ಸಂಘರ್ಷದ ಆರಂಭದಿಂದಲೂ, ಈ ವಿವಾದವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಮಾತ್ರ ಪರಿಹರಿಸಬಹುದು ಮತ್ತು ಯಾವುದೇ ಶಾಂತಿ ಪ್ರಕ್ರಿಯೆಗೆ ಕೊಡುಗೆ ನೀಡಲು ಭಾರತವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಇಟಲಿಯ ಸಕ್ರಿಯ ಭಾಗವಹಿಸುವಿಕೆಯನ್ನು ನಾವು ಸ್ವಾಗತಿಸುತ್ತೇವೆ. ಇಂಡೋ-ಪೆಸಿಫಿಕ್ ಮಹಾಸಾಗರ ಉಪಕ್ರಮಕ್ಕೆ ಇಟಲಿ ಸೇರಲು ನಿರ್ಧರಿಸಿರುವುದು ಸಂತಸದ ವಿಷಯವಾಗಿದೆ. ಇಂಡೋ-ಪೆಸಿಫಿಕ್‌ನಲ್ಲಿ ನಮ್ಮ ಸಹಕಾರವನ್ನು ಹೆಚ್ಚಿಸಲು ಸದೃಢ ಥೀಮ್‌ಗಳನ್ನು ಗುರುತಿಸಲು ಇದು ನಮಗೆ ಅನುವು ಮಾಡಿಕೊಡುತ್ತದೆ. ಜಾಗತಿಕ ವಾಸ್ತವಗಳನ್ನು ಉತ್ತಮ ರೀತಿಯಲ್ಲಿ ಪ್ರತಿಬಿಂಬಿಸಲು ಬಹುಪಕ್ಷೀಯ ಸಂಸ್ಥೆಗಳಲ್ಲಿ ಸುಧಾರಣೆಗಳು ಅಗತ್ಯವಾಗಿದೆ. ನಾವು ಈ ವಿಷಯವನ್ನೂ ಚರ್ಚಿಸಿದ್ದೇವೆ.
ಗೌರವಾನ್ವಿತರೇ,
ಇಂದು ಸಂಜೆ ನೀವು ರೈಸಿನಾ ಸಂವಾದದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತೀರಿ. ಅಲ್ಲಿ ನಿಮ್ಮ ಭಾಷಣವನ್ನು ಕೇಳಲು ನಾವೆಲ್ಲರೂ ಎದುರು ನೋಡುತ್ತಿದ್ದೇವೆ. ನಿಮ್ಮ ಭಾರತ ಭೇಟಿಗಾಗಿ ಮತ್ತು ನಮ್ಮ ಉಪಯುಕ್ತ ಚರ್ಚೆಗಳಿಗಾಗಿ ನಿಮಗೆ ಮತ್ತು ನಿಮ್ಮ ನಿಯೋಗಕ್ಕೆ ತುಂಬಾ ಧನ್ಯವಾದಗಳು.
My remarks at the press meet with PM @GiorgiaMeloni of Italy. https://t.co/HdylKLH4ay
— Narendra Modi (@narendramodi) March 2, 2023
इस वर्ष भारत और इटली अपने द्विपक्षीय संबंधों की 75वीं वर्षगाँठ मना रहे हैं।
— PMO India (@PMOIndia) March 2, 2023
और इस अवसर पर हमने भारत-इटली साझेदारी को Strategic Partnership का दर्जा देने का निर्णय लिया है: PM @narendramodi
हमने अपने आर्थिक संबंधों को और सुदृढ़ करने पर जोर दिया।
— PMO India (@PMOIndia) March 2, 2023
हमारे “Make in India” और “आत्मनिर्भर भारत” अभियान से भारत में निवेश के अपार अवसर खुल रहे हैं: PM @narendramodi
हमने Renewable Energy, Green Hydrogen, IT, semiconductors, telecom, space जैसे क्षेत्रों में सहयोग बढ़ाने पर विशेष जोर दिया।
— PMO India (@PMOIndia) March 2, 2023
भारत और इटली के बीच एक Startup Bridge की स्थापना की आज घोषणा हो रही है, जिसका हम स्वागत करते हैं: PM @narendramodi
आतंकवाद और अलगाववाद के खिलाफ लड़ाई में भारत और इटली कंधे से कंधा मिला कर चल रहे हैं।
— PMO India (@PMOIndia) March 2, 2023
हमने इस सहयोग को और मज़बूत करने पर विस्तारपूर्वक चर्चा की: PM @narendramodi
भारत और इटली के संबंधों की 75वीं वर्षगाँठ मनाने के लिए हमने एक Action Plan बनाने का निर्णय लिया।
— PMO India (@PMOIndia) March 2, 2023
इससे हम दोनों देशों की विविधता, इतिहास, science and technology, innovation, sports और अन्य क्षेत्रों में उपलब्धियों को वैश्विक पटल पर showcase कर सकेंगे: PM @narendramodi
यूक्रेन संघर्ष के शुरुआत से ही भारत ने यह स्पष्ट किया है कि इस विवाद को केवल डायलॉग और डिप्लोमेसी के ज़रिये ही सुलझाया जा सकता है।
— PMO India (@PMOIndia) March 2, 2023
और भारत किसी भी शांति प्रक्रिया में योगदान देने के लिए पूर्ण रूप से तैयार है: PM @narendramodi
हम Indo-Pacific में इटली की सक्रीय भागीदारी का भी स्वागत करते हैं।
— PMO India (@PMOIndia) March 2, 2023
यह बहुत ख़ुशी की बात है कि इटली ने Indo-Pacific Ocean Initiative में शामिल होने का निर्णय लिया है।
इससे हम Indo-Pacific में अपना सहयोग बढ़ाने के लिए ठोस विषयों की पहचान कर सकेंगे: PM @narendramodi