Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM) ಅಡಿಯಲ್ಲಿ ಮತ್ತೊಂದು ಸೆಮಿಕಂಡಕ್ಟರ್ (ಅರೆವಾಹಕ) ಘಟಕಕ್ಕೆ ಕ್ಯಾಬಿನೆಟ್ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಗುಜರಾತ್‌ನ ಸನಂದ್‌ನಲ್ಲಿ ಅರೆವಾಹಕ ಘಟಕವನ್ನು ಸ್ಥಾಪಿಸುವ ಕೇನ್ಸ್ ಸೆಮಿಕಾನ್ ಪ್ರೈವೇಟ್ ಲಿಮಿಟೆಡ್‌ನ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಅರೆವಾಹಕ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಸ್ತಾವಿತ ಘಟಕವನ್ನು 3,300 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಸ್ಥಾಪಿಸಲಾಗುವುದು. ಈ ಘಟಕದ ಸಾಮರ್ಥ್ಯವು ದಿನಕ್ಕೆ 60 ಲಕ್ಷ ಚಿಪ್ಸ್ ತಯಾರಿಕೆಯಾಗಿದೆ.

ಈ ಘಟಕದಲ್ಲಿ ಉತ್ಪಾದಿಸಲಾದ ಚಿಪ್ಸ್ ಗಳು ಕೈಗಾರಿಕಾ, ವಾಹನ, ವಿದ್ಯುತ್ ಚಾಲಿತ(ಎಲೆಕ್ಟ್ರಿಕ್) ವಾಹನಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್, ಟೆಲಿಕಾಂ, ಮೊಬೈಲ್ ಫೋನ್‌ಗಳು ಮುಂತಾದ ವಿಭಾಗಗಳನ್ನು ಒಳಗೊಂಡಿರುವ ವಿವಿಧ ರೀತಿಯ ಅಪ್ಲಿಕೇಶನ್‌ಗಳನ್ನು ಪೂರೈಸುತ್ತದೆ.

ಭಾರತದಲ್ಲಿ ಒಟ್ಟು 76,000 ಕೋಟಿ ರೂಪಾಯಿ ಅರೆವಾಹಕ (ಸೆಮಿಕಂಡಕ್ಟರ್ಸ್) ಮತ್ತು ಡಿಸ್ಪ್ಲೇ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಮ್ ಅಭಿವೃದ್ಧಿ ಕಾರ್ಯಕ್ರಮವನ್ನು 21.12.2021 ರಂದು ಅಧಿಸೂಚಿಸಲಾಯಿತು (ನೋಟಿಫೈ) ಮಾಡಲಾಯಿತು.

ಜೂನ್, 2023 ರಲ್ಲಿ, ಕೇಂದ್ರ ಸಚಿವ ಸಂಪುಟವು ಗುಜರಾತ್‌ನ ಸನಂದ್‌ನಲ್ಲಿ ಅರೆವಾಹಕ  ಘಟಕವನ್ನು ಸ್ಥಾಪಿಸುವ ಮೊದಲ ಪ್ರಸ್ತಾವನೆಯನ್ನು ಅನುಮೋದಿಸಿತ್ತು.

ಫೆಬ್ರವರಿ, 2024ರಲ್ಲಿ, ಇನ್ನೂ ಮೂರು ಅರೆವಾಹಕ ಘಟಕಗಳನ್ನು ಅನುಮೋದಿಸಲಾಗಿದೆ. ಟಾಟಾ ಇಲೆಕ್ಟ್ರಾನಿಕ್ಸ್ ಗುಜರಾತ್‌ನ ಧೋಲೆರಾದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಮತ್ತು ಅಸ್ಸಾಂನ ಮೊರಿಗಾಂವ್‌ನಲ್ಲಿ ಒಂದು ಅರೆವಾಹಕ ಘಟಕವನ್ನು ಸ್ಥಾಪಿಸುತ್ತಿದೆ.
ಸಿಜಿ ಪವರ್ (CG Power) ಗುಜರಾತ್‌ನ ಸನಂದ್‌ನಲ್ಲಿ ಒಂದು ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸುತ್ತಿದೆ

ಎಲ್ಲಾ 4 ಅರೆವಾಹಕ ಘಟಕಗಳ ನಿರ್ಮಾಣವು ತ್ವರಿತ ಗತಿಯಲ್ಲಿ ಪ್ರಗತಿಯಲ್ಲಿದೆ ಮತ್ತು ಘಟಕಗಳ ಬಳಿ ಅರೆವಾಹಕ ಪರಿಸರ ವ್ಯವಸ್ಥೆಯು ಹೊರಹೊಮ್ಮುತ್ತಿದೆ. ಈ 4 ಘಟಕಗಳು ಸುಮಾರು 1.5 ಲಕ್ಷ ಕೋಟಿ ರೂಪಾಯಿ ಹೂಡಿಕೆಯನ್ನು ತರಲಿವೆ. ಈ ಘಟಕಗಳ ಸಂಚಿತ ಸಾಮರ್ಥ್ಯವು ದಿನಕ್ಕೆ ಸುಮಾರು 7 ಕೋಟಿ ಚಿಪ್ಸ್ ತಯಾರಿಕೆಯಾಗಿದೆ.

 

*****