ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭೂತಾನ್ ಸರ್ಕಾರದ ಆರೋಗ್ಯ ಸಚಿವಾಲಯದ ಆಹಾರ ಮತ್ತು ಔಷಧ ಪ್ರಾಧಿಕಾರ [ಬಿ.ಎಫ್.ಡಿ.ಎ] ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ[ಎಫ್ಎಸ್ಎಸ್ಎಐ]ದ ನಡುವೆ ಆಹಾರ ಸುರಕ್ಷತಾ ವಲುಯದಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ಭೂತಾನ್ ಸರ್ಕಾರದ ಆರೋಗ್ಯ ಸಚಿವಾಲಯದ ಭೂತಾನ್ ಆಹಾರ ಮತ್ತು ಔಷಧ ಪ್ರಾಧಿಕಾರ [ಬಿ.ಎಫ್.ಡಿ.ಎ] ಮತ್ತು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ನಡುವೆ ಒಡಂಬಡಿಕೆಗೆ ಸಹಿ ಹಾಕಲಿದ್ದು, ಎರಡು ನೆರೆ ಹೊರೆ ರಾಷ್ಟ್ರಗಳ ನಡುವೆ ವ್ಯಾಪಾರ ವಹಿವಾಟಿಗೆ ಸರ್ಕಾರ ವೇದಿಕೆ ಕಲ್ಪಿಸುತ್ತಿದೆ. ಭಾರತಕ್ಕೆ ಉತ್ಪನ್ನಗಳನ್ನು ರಫ್ತು ಮಾಡುವಾಗ ಎಫ್ಎಸ್ಎಸ್ಎಐ ಸೂಚಿಸಿದ ಅಗತ್ಯಗಳ ಅನುಸರಣೆಯ ಪುರಾವೆಯಾಗಿ ಬಿ.ಎಫ್.ಡಿ.ಎ ಆರೋಗ್ಯ ಪ್ರಮಾಣ ಪತ್ರ ನೀಡಲಿದೆ. ಇದು ಸುಗಮ ವ್ಯಾಪಾರವನ್ನು ಉತ್ತೇಜಿಸುತ್ತದೆ ಮತ್ತು ಎರಡೂ ಕಡೆಯ ಅನುಸರಣೆಯ ವೆಚ್ಚವನ್ನು ತಗ್ಗಿಸಲಿದೆ.
***********