Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಆಸ್ಟ್ರೇಲಿಯನ್ ಓಪನ್ ಗೆದ್ದ ರೋಹನ್ ಬೋಪಣ್ಣಗೆ ಪ್ರಧಾನಿ ಅಭಿನಂದನೆ


ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.

ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನಮಂತ್ರಿ ಈ ಕುರಿತು ಸಂದೇಶ ನೀಡಿದ್ದಾರೆ.

“ರೋಹನ್ ಬೋಪಣ್ಣ ಅವರ ಅದ್ಭುತ ಸಾಧನೆ ಯುವ ಸಮುದಾಯಕ್ಕೆ ಸ್ಫೂರ್ತಿ. ವಯಸ್ಸು ಎಂದಿಗೂ ಸಾಧನೆಗೆ ಅಡ್ಡಿ ಬರುವುದಿಲ್ಲ ಎಂದು ಇದನ್ನು ತೋರಿಸುತ್ತದೆ.  ಐತಿಹಾಸಿಕ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿರುವುದಕ್ಕೆ ಅವರಿಗೆ ಅಭಿನಂದನೆಗಳು.

ಅವರ ಗಮನಾರ್ಹ ವೃತ್ತಿ ಬದುಕು, ಶಕ್ತಿ, ಕಠಿಣ ಪರಿಶ್ರಮ ಶ್ಲಾಘನೀಯ. ಅವರ ಭವಿಷ್ಯದ ಯೋಜನೆಗಳಿಗೆ ನನ್ನ ಶುಭಾಶಯಗಳು ಎಂದು ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.

***