Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಸಿಯಾನ್ – ಭಾರತ: ಹಂಚಿಕೆಯ ಮೌಲ್ಯ, ಸಮಾನ ಡೆಸ್ಟಿನಿ: ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸಿಯಾನ್ – ಭಾರತ ಪಾಲುದಾರಿಕೆಯ ಬಗ್ಗೆ ಸಂಪಾದಕೀಯ ಪುಟದ ಪಕ್ಕದ ಪುಟದಲ್ಲಿ ‘ಆಸಿಯಾನ್ – ಭಾರತ: ಹಂಚಿಕೆಯ ಮೌಲ್ಯ, ಸಮಾನ ನಿರ್ದಿಷ್ಟ ಸ್ಥಾನ (ಡೆಸ್ಟಿನಿ)’ ಎಂಬ ಶೀರ್ಷಿಕೆಯಡಿ ತಮ್ಮ  ನಿಲುವನ್ನು ಹಂಚಿಕೊಂಡಿದ್ದಾರೆ. ಈ ಲೇಖನ ಆಸಿಯಾನ್ ಸದಸ್ಯ ರಾಷ್ಟ್ರಗಳ ಪ್ರಮುಖ ದೈನಿಕಗಳಲ್ಲಿ ಪ್ರಕಟವಾಗಿವೆ. ಈ ಲೇಖನದ ಪೂರ್ಣ ಪಾಠ ಈ ಕೆಳಕಂಡಂತಿದೆ.

 

ಆಸಿಯಾನ್- ಇಂಡಿಯಾಹಂಚಿಕೆಯ ಮೌಲ್ಯಗಳುಸಮಾನ ಡೆಸ್ಟಿನಿ

 

ಲೇಖಕರು : ಶ್ರೀ ನರೇಂದ್ರ ಮೋದಿ

 

ಇಂದು 125 ಕೋಟಿ ಭಾರತೀಯರು ಇಂದು ನಮ್ಮ ರಾಜಧಾನಿ, ನವದೆಹಲಿಯಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಆಸಿಯಾನ್ ರಾಷ್ಟ್ರಗಳ 10 ಘನತೆವೆತ್ತ ನಾಯಕರಿಗೆ ಆತಿಥ್ಯ ನೀಡುವ ಗೌರವ ಪಡೆದಿದ್ದಾರೆ.

ಭಾರತ – ಆಸಿಯಾನ್ ಪಾಲುದಾರಿಕೆಯ 25ನೇ ವರ್ಷದ ಅಂಗವಾಗಿ ನಡೆದ ಸ್ಮರಣಾರ್ಥ ಶೃಂಗದಲ್ಲಿ  ಗುರುವಾರ, ಆಸಿಯಾನ್ ನಾಯಕರಿಗೆ ಆತಿಥ್ಯ ನೀಡುವ ಗೌರವ ನನಗೆ ದೊರೆತಿತ್ತು. ನಮ್ಮೊಂದಿಗೆ ಅವರುಗಳ ಉಪಸ್ಥಿತಿ ಆಸಿಯಾನ್ ರಾಷ್ಟ್ರಗಳ ಅಭಿಮಾನದ ಧ್ಯೋತಕವಾಗಿದೆ. ಇದಕ್ಕೆ ಸ್ಪಂದನೆ ನೀಡಲು ಅವರಿಗೆ ಬೆಚ್ಚನೆಯ ಸ್ನೇಹದ ಆಲಿಂಗನದೊಂದಿಗೆ ಸ್ವಾಗತಿಸಲು ಚಳಿಯ ಬೆಳಗಿನಲ್ಲಿ ಭಾರತ ಹೊರ ಬಂದಿದೆ.

ಇದು ಒಂದು ಸಾಧಾರಣ ಕಾರ್ಯಕ್ರಮವಲ್ಲ. ಮನುಕುಲದ ಸುಮಾರು ನಾಲ್ಕನೇ ಒಂದು ಭಾಗದಷ್ಟು ಅಂದರೆ ತಮ್ಮ 190 ಕೋಟಿ ಜನರಿಗೆ ದೊಡ್ಡ ಭರವಸೆಯನ್ನು ನೀಡುವ ಭಾರತ ಮತ್ತು ಆಸಿಯಾನ್ ನ ಆಳವಾದ ಸಹಭಾಗಿತ್ವದಲ್ಲಿ ಪ್ರಯಾಣದಲ್ಲಿ ಇದು ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ.

ಭಾರತ-ಆಸಿಯಾನ್ ಪಾಲುದಾರಿಕೆ ಕೇವಲ 25 ವರ್ಷ ಹಳೆಯದಾಗಿರಬಹುದು. ಆದರೆ, ಆಗ್ನೇಯ ಏಷ್ಯಾದೊಂದಿಗಿನ ಭಾರತದ ನಂಟು ಎರಡು ಸಮಸ್ರಮಾನಗಳಿಗೂ ಹಿಂದೆ ಹೋಗುತ್ತದೆ. ಶಾಂತಿ ಮತ್ತು ಸ್ನೇಹ, ಧರ್ಮ ಮತ್ತು ಸಂಸ್ಕೃತಿ, ಕಲೆ ಮತ್ತು ವಾಣಿಜ್ಯ, ಭಾಷೆ ಮತ್ತು ಸಾಹಿತ್ಯದಲ್ಲಿ ಒಂದಾಗಿರುವ ಇದು ಭಾರತ ಮತ್ತು ಆಗ್ನೇಯ ಏಷ್ಯಾದ ಭವ್ಯವಾದ ವೈವಿಧ್ಯತೆಯ ಪ್ರತಿಯೊಂದು ಭಾಗದಲ್ಲಿ ಶಾಶ್ವತ ಸಂಪರ್ಕಗಳು ಈಗಲೂ ಅಸ್ತಿತ್ವದಲ್ಲಿದ್ದು, ನಮ್ಮ ಜನರ ನಡುವೆ ಒಂದು ಅನನ್ಯ ಹೊಂದಾಣಿಕೆ ಮತ್ತು ಪರಿಚಿತತೆಯನ್ನು ಒದಗಿಸುತ್ತದೆ.

ಎರಡು ದಶಕಗಳ ಹಿಂದೆ, ಭಾರತ ಬೃಹತ್ ಪ್ರಕ್ರಿಯಾತ್ಮಕ ಬದಲಾವಣೆಗಳೊಂದಿಗೆ ವಿಶ್ವಕ್ಕೆ ತೆರೆದುಕೊಂಡಿತು. ಶತಮಾನಗಳಿಂದಲೂ ಹೊಂದಿದ್ದ ಪ್ರವೃತ್ತಿಯಿಂದ, ಇದು ಸಹಜವಾಗಿಯೇ ಪೂರ್ವದತ್ತ ತಿರುಗಿತು. ಹೀಗಾಗಿ ಪೂರ್ವದಿಂದ ಭಾರತದ ಪುನರ್ ಸಂಯೋಜನೆಯ ಹೊಸ ಪಯಣ ಆರಂಭವಾಯಿತು. ಭಾರತದದ ಹೆಚ್ಚಿನ ಪ್ರಮುಖ ಪಾಲುದಾರರು ಮತ್ತು ಮಾರುಕಟ್ಟೆಗಳು ಆಸಿಯಾನ್ ಮತ್ತು ಪೂರ್ ಏಷ್ಯಾದಿಂದ ಉತ್ತರ ಅಮೆರಿಕಾವರೆಗೆ ಇದ್ದು – ಇವು ಪೂರ್ವದಲ್ಲೇ ಇವೆ. ಆಗ್ನೇಯ ಏಷ್ಯಾ ಮತ್ತು ಆಸಿಯಾನ್ ಭೂ ಹಾಗೂ ಸಾಗರದಿಂದ ನಮ್ಮ ನೆರೆಯವರಾಗಿದ್ದು, ಅವರು ನಮ್ಮ ಪೂರ್ವದತ್ತ ನೋಟ ಮತ್ತು ಕಳೆದ ಮೂರು ವರ್ಷಗಳ ಪೂರ್ವದತ್ತ ಕ್ರಮ ನೀತಿಯಲ್ಲಿ ಪುಟಿದೇಳುವ ಸಾಧನವಾಗಿವೆ.

ಸಂವಾದನಾತ್ಮಕ ಪಾಲುದಾರಿಕೆಯ ಹಾದಿಯುದ್ದಕ್ಕೂ ಆಸಿಯಾನ್ ಮತ್ತು ಭಾರತ ವ್ಯೂಹಾತ್ಮಕ ಪಾಲುದಾರರಾಗಿ ಪರಿವರ್ತಿತವಾಗಿವೆ. ನಾವು ನಮ್ಮ ವಿಶಾಲ ನೆಲೆಯ  ಪಾಲುದಾರಿಕೆಯನ್ನು 30 ವ್ಯವಸ್ಥೆಗಳ ಮೂಲಕ ಮುಂದುವರಿಸಿದ್ದೇವೆ. ಪ್ರತಿಯೊಂದು ಆಸಿಯಾನ್ ಸದಸ್ಯರೊಂದಿಗೆ ನಾವು, ರಾಜತಾಂತ್ರಿಕವಾಗಿ, ಆರ್ಥಿಕವಾಗಿ ಮತ್ತು ಸುರಕ್ಷತೆಯ ಪಾಲುದಾರರಾಗಿ ಬೆಳೆಯುತ್ತಿದ್ದೇವೆ. ನಾವು ನಮ್ಮ ಕಡಲ ಸುರಕ್ಷತೆ ಮತ್ತು ರಕ್ಷಣೆಗೆ ಒಗ್ಗೂಡಿ ಶ್ರಮಿಸುತ್ತಿದ್ದೇವೆ. ನಮ್ಮ ವಾಣಿಜ್ಯ ಮತ್ತು ಹೂಡಿಕೆಯ ಹರಿವು ಹಲವುಪಟ್ಟು ಹೆಚ್ಚಾಗಿದೆ. ಆಸಿಯಾನ್ ಭಾರತದ ನಾಲ್ಕನೇ ಅತಿ ದೊಡ್ಡ ವಾಣಿಜ್ಯ ಪಾಲುದಾರನಾಗಿದ್ದರೆ; ಭಾರತವು ಆಸಿಯಾನ್ ನ 7ನೆಯದಾಗಿದೆ. ಭಾರತದ ಶೇಕಡ 20ರಷ್ಟು ವಿದೇಶೀ ಹೂಡಿಕೆ ಆಸಿಯಾನ್ ಗೆ ಹೋಗುತ್ತದೆ. ಸಿಂಗಾಪೂರ್ ನೇತೃತ್ವದ ಆಸಿಯಾನ್ ಭಾರತದ ಪ್ರಮುಖ ಹೂಡಿಕೆಯ ಮೂಲವಾಗಿದೆ. ವಲಯದಲ್ಲಿ ಭಾರತದ ಮುಕ್ತ ವಾಣಿಜ್ಯ ಒಪ್ಪಂದಗಳು  ಅತ್ಯಂತ ಹಳೆಯದಾಗಿದ್ದು, ಯಾವುದೇ ಪ್ರದೇಶಕ್ಕಿಂತ ಹೆಚ್ಚು ಆಶಾದಾಯಕವಾಗಿವೆ.

ವಾಯು ಸಂಪರ್ಕಗಳು ತ್ವರಿತವಾಗಿ ವಿಸ್ತರಣೆಯಾಗಿದ್ದು, ನಾವು ಹೆದ್ದಾರಿಗಳನ್ನು ಆಗ್ನೇಯ ಏಷ್ಯಾದ ಭೂಖಂಡದಲ್ಲಿ ಹೊಸ ತುರ್ತು ಮತ್ತು ಆದ್ಯತೆಯೊಂದಿಗೆ ವಿಸ್ತರಿಸುತ್ತಿದ್ದೇವೆ. ಬೆಳೆಯುತ್ತಿರುವ ಸಂಪರ್ಕಗಳು, ಸಾಮಿಪ್ಯತೆಯ ಬಲವರ್ಧನೆ ಮಾಡಿವೆ. ಇದು ಭಾರತವನ್ನು ಆಗ್ನೇಯ ಏಷ್ಯಾದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರವಾಸೋದ್ಯಮ ಮೂಲವಾಗಿ ಮಾಡಿದೆ. ಈ ವಲಯದಲ್ಲಿನ 6 ದಶಲಕ್ಷದಷ್ಟು ಬಲಿಷ್ಠ ಭಾರತೀಯ ಸಮುದಾಯ ವೈವಿಧ್ಯತೆ ಮತ್ತು  ಚೈತನ್ಯದಿಂದ ಆಳವಾಗಿ ಬೇರೂರಿದ್ದು, ಅಭೂತಪೂರ್ವ ಮಾನವೀಯ ಬಂಧನವನ್ನು ನಮ್ಮ ನಡುವೆ ಬೆಸೆದಿದೆ.

ಪ್ರಧಾನಮಂತ್ರಿಯವರು ಪ್ರತಿಯೊಂದು ಆಸಿಯಾನ್ ಸದಸ್ಯ ರಾಷ್ಟ್ರದೊಂದಿಗೆ ಹಂಚಿಕೊಂಡಿರುವ ಅಭಿಪ್ರಾಯ ಈ ಕೆಳಗಿನಂತಿದೆ. 

ಥೈಲ್ಯಾಂಡ್

ಥೈಲ್ಯಾಂಡ್ ಆಸಿಯಾನ್ ನಲ್ಲಿ ಭಾರತದ ಮಹತ್ವದ ವಾಣಿಜ್ಯ ಪಾಲುದಾರನಾಗಿ ಹೊರಹೊಮ್ಮಿದೆ ಮತ್ತು ಆಸಿಯಾನ್ ನಿಂದ ಭಾರತದಲ್ಲಿ ಹೂಡಿಕೆ ಮಾಡುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತ ಮತ್ತು ಥೈಲ್ಯಾಂಡ್ ನಡುವಿನ ದ್ವಿಪಕ್ಷೀಯ ವ್ಯಾಪಾರ ಕಳೆದ ದಶಕದಲ್ಲಿ ದುಪ್ಪಟ್ಟಾಗಿದೆ. ಭಾರತ ಮತ್ತು ಥೈಲ್ಯಾಂಡ್ ನಡುವಿನ ಬಾಂಧವ್ಯ ಹಲವು ಕ್ಷೇತ್ರಗಳಲ್ಲಿ ವ್ಯಾಪಕವಾಗಿ ವಿಸ್ತರಿಸಿವೆ. ನಾವು ದಕ್ಷಿಣ ಮತ್ತು ಆಗ್ನೇಯ ಏಷ್ಯಾವನ್ನು ಬೆಸೆಯುವ ಪ್ರಮುಖ ಪ್ರಾದೇಶಿಕ ಪಾಲುದಾರರಾಗಿದ್ದೇವೆ. ನಾವು ಆಸಿಯಾನ್, ಪೂರ್ವ ಏಷ್ಯಾ ಶೃಂಗ ಮತ್ತು ಬಿಮ್ ಸ್ಟೆಕ್ (ಬಹು ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳಕೊಲ್ಲಿಯ ಉಪಕ್ರಮ)ಗಳಲ್ಲಿ ಮತ್ತು ಮೆಕಾಂಗ್ ಗಂಗಾ ಸಹಕಾರ, ಏಷ್ಯಾ ಸಹಕಾರ ಸಂವಾದ ಮತ್ತು ಹಿಂದೂ ಮಹಾಸಾಗರ ರಿಮ್ ಸಂಘಟನೆಗಳಲ್ಲಿ ಆಪ್ತವಾಗಿ ಸಹಕಾರ ನೀಡುತ್ತಿದ್ದೇವೆ. ಥೈಲ್ಯಾಂಡ್ ಪ್ರಧಾನಮಂತ್ರಿಯವರು 2016ರಲ್ಲಿ ಕೈಗೊಂಡ ಅಧಿಕೃತ ಭೇಟಿಯು ನಮ್ಮ ದ್ವಿಪಕ್ಷೀಯ ಬಾಂಧವ್ಯದ ಮೇಲೆ ದೀರ್ಘಕಾಲಿನ ಪರಿಣಾಮ ಬೀರಿದೆ.

ಥೈಲ್ಯಾಂಡ್ ನ ಜನಪ್ರಿಯ ದೊರೆ ಭುಮಿಬೋಲ್ ಅದ್ಯುಲಾದಜ್ ಅವರು ನಿಧನ ಹೊಂದಿದಾಗ ಥಾಯ್ ನ ಸಹೋದರ ಸಹೋದರಿಯರೊಂದಿಗೆ ಇಡೀ ಭಾರತವೇ ದುಃಖಿಸಿತು. ನೂತನ ದೊರೆ ಘನತೆವೆತ್ತ ಮಹಾ ವಜಿರಲಾಂಗ್ ಕೋರ್ನ್ ಬೋದಿಂದರಡೇಬಯವರಾಂಗ್ಕುನ್ ಅವರ ಶಾಂತಿಯುತ ಮತ್ತು ಸಮೃದ್ಧಿಯ ದೀರ್ಘಕಾಲಿನ ಆಡಳಿತಕ್ಕಾಗಿ ಥೈಲ್ಯಾಂಡ್ ನಆತ್ನೀಯ ಜನರೊಂದಿಗೆ ಭಾರತದ ಜನರೂ ಪ್ರಾರ್ಥಿಸಿದರು. 

ವಿಯಟ್ನಾಂ

ವಿದೇಶಿ ಆಡಳಿತದಿಂದ ವಿಮೋಚನೆ, ಮತ್ತು ಸ್ವಾತಂತ್ರ್ಯದ ರಾಷ್ಟ್ರೀಯ ಹೋರಾಟದಂಥ  ಸಮಾನ ಹೋರಾಟದಲ್ಲಿ ಸಾಂಪ್ರದಾಯಿಕವಾಗಿ ಆಪ್ತ ಮತ್ತು ಸೌಹಾರ್ದ ಸಂಬಂಧಗಳು ತಮ್ಮ ಐತಿಹಾಸಿಕ ಬೇರುವನ್ನು ಹೊಂದಿವೆ. ಮಹಾತ್ಮಾ ಗಾಂಧಿ ಮತ್ತು ಅಧ್ಯಕ್ಷ ಹೋ ಚಿ ಮಿನ್ಹ್ ಅವರು ವಸಾಹತುಶಾಹಿಯ ವಿರುದ್ಧದ ಹೋರಾಟದಲ್ಲಿ ನಮ್ಮ ಜನರನ್ನು ಮುನ್ನಡೆಸಿದ್ದರು. 2007ರಲ್ಲಿ ಪ್ರಧಾನಮಂತ್ರಿ ಎನ್ಗುಯೆನ್ ತಾನ್ ಡುಂಗ್ ಅವರು ಭಾರತ ಭೇಟಿ ನೀಡಿದ್ದಾಗ, ನಾವು ವ್ಯೂಹಾತ್ಮಕ ಪಾಲುದಾರಿಕೆಯ ಒಪ್ಪಂದಕ್ಕೆ ಅಂಕಿತ ಹಾಕಿದೆವು.  ಈ ವ್ಯೂಹಾತ್ಮಕ ಪಾಲುದಾರಿಕೆಯು 2016ರಲ್ಲಿ ನನ್ನ ವಿಯೆಟ್ ನಾಮ್ ಭೇಟಿಯಿಂದ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯಾಗಿ ಬೆಳೆಯಿತು.

ವಿಯೆಟ್ ನಾಮ್ ನೊಂದಿಗಿನ ಭಾರತದ ಬಾಂಧವ್ಯವು, ವೃದ್ಧಿಸುತ್ತಿರುವ ಆರ್ಥಿಕ ಮತ್ತು ವಾಣಿಜ್ಯ ಕಾರ್ಯಕ್ರಮಗಳ ಮೂಲಕ ಗುರುತಿಸಲ್ಪಟ್ಟಿವೆ. ಭಾರತ ಮತ್ತು ವಿಯೆಟ್ ನಾಂ ನಡುವಿನ ದ್ವಿಪಕ್ಷೀಯ ವಾಣಿಜ್ಯ 10 ವರ್ಷಗಳಲ್ಲಿ 10ಪಟ್ಟು ಹೆಚ್ಚಳವಾಗಿದೆ. ಭಾರತ ಮತ್ತು ವಿಯಟ್ನಾಂ ನಡುವಿನ ರಕ್ಷಣಾ ಸಹಕಾರವು ವ್ಯೂಹಾತ್ಮಕ ಪಾಲುದಾರಿಕೆಯ ಮಹತ್ವದ ಆಧಾರಸ್ತಂಭವಾಗಿ ಹೊರಹೊಮ್ಮಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಭಾರತ ಮತ್ತು ವಿಯಟ್ನಾಂ ನಡುವಿನ ಸಹಕಾರದ ಮಹತ್ವದ ಮತ್ತೊಂದು ಕ್ಷೇತ್ರವಾಗಿದೆ.

ಮ್ಯಾನ್ಮಾರ್

ಭಾರತ ಮತ್ತು ಮ್ಯಾನ್ಮಾರ್ ಸುಮಾರು 1600 ಕಿ.ಮೀ ನೆಲ ಗಡಿ ಮತ್ತು ಸಾಗರ ಗಡಿಯನ್ನು ಹಂಚಿಕೊಂಡಿವೆ. ನಮ್ಮ ಆಳವಾದ ಸಂಬಂಧದಿಂದ ಹರಿಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಬೌದ್ಧ ಧರ್ಮದ ನಮ್ಮ ಸಮಾನ ಪರಂಪರೆಯು ಹಿಂದಿನ ಐತಿಹಾಸಿಕ ಹಂಚಿಕೆಯಂತೆ ನಮ್ಮನ್ನು ಬೆಸೆದಿವೆ. ಶ್ವೇಡಾಗಾನ್ ಪಗೋಡಾದ ಮಿನುಗುತ್ತಿರುವ ಗೋಪುರಕ್ಕಿಂತ ಯಾವುದೂ ಹೆಚ್ಚು ಪ್ರಕಾಶಿಸುವುದಿಲ್ಲ. ಭಾರತೀಯ ಪುರಾತತ್ವ ಇಲಾಖೆಯ ನೆರವಿನೊಂದಿಗೆ ಬಗಾನ್ ನಲ್ಲಿನ ಆನಂದ ದೇವಾಲಯದ ಜೀರ್ಣೋದ್ಧಾರದ ಸಹಕಾರ ಸಹ ನಮ್ಮ ಹಂಚಿಕೆಯ ಪರಂಪರೆಯ ಸಂಕೇತವಾಗಿದೆ.

ವಸಾಹತು ಕಾಲದ ಅವಧಿಯಿಂದ, ರಾಜಕೀಯ ನಂಟಿನವರೆಗೆ ನಮ್ಮ ನಾಯಕರ ನಡುವೆ ಬಾಂಧವ್ಯವಿದೆ, ಅವರು ಸ್ವಾತಂತ್ರ್ಯದ ಸಮಾನ ಹೋರಾಟದ ವೇಳೆ ಏಕತೆ ಮತ್ತು ಶ್ರೇಷ್ಠ ಭರವಸೆಯನ್ನು ಪ್ರದರ್ಶಿಸಿದ್ದರು. ಬಾಲ ಗಂಗಾಧರ ತಿಲಕರನ್ನು ಯಂಗಾನ್ ಗೆ ಹಲವು ವರ್ಷಗಳ ಕಾಲ ಗಡಿಪಾರು ಮಾಡಲಾಗಿತ್ತು. ನೇತಾಜಿ ಸುಭಾಷ್ ಚಂದ್ರಬೋಸ್ ಅವರು ಮೊಳಗಿಸಿದ ಭಾರತದ ಸ್ವಾತಂತ್ರ್ಯದ ಕಹಳೆ ಮ್ಯಾನ್ಮಾರ್ ನ ಹಲವು ಆತ್ಮಗಳನ್ನು ಬಡಿದೆಬ್ಬಿಸಿತ್ತು.

ನಮ್ಮ ವಾಣಿಜ್ಯ ಕಳೆದ ದಶಕದಲ್ಲಿ ಎರಡುಪಟ್ಟಿಗಿಂತ ಹೆಚ್ಚಾಗಿದೆ. ನಮ್ಮ ಹೂಡಿಕೆಯ ಬಾಂಧವ್ಯ ಕೂಡ ಚೈತನ್ಯದಾಯಿಯಾಗಿದೆ. ಅಭಿವೃದ್ಧಿಯ ಸಹಕಾರ ಮ್ಯಾನ್ಮಾರ್ ನೊಂದಿಗಿನ ಭಾರತದ ಬಾಂಧವ್ಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಈ ನೆರವಿನ ಬಂಡವಾಳ ಪ್ರಸ್ತುತ 1.73 ಶತಕೋಟಿ ಡಾಲರ್ ಗಿಂತ ಹೆಚ್ಚಾಗಿದೆ. ಭಾರತದ ಪಾರದರ್ಶಕ ಅಭಿವೃದ್ಧಿ ಸಹಕಾರವು ಮ್ಯಾನ್ಮಾರ್ ರಾಷ್ಟ್ರೀಯ ಆಧ್ಯತೆಗೆ ಅನುಗುಣವಾಗಿದೆ ಮತ್ತು ಇದು ಆಸಿಯಾನ್ ಸಂಪರ್ಕದ ಮಾಸ್ಟರ್ ಪ್ಲಾನ್ ನೊಂದಿಗೆ ಸಂಯೋಗವಾಗುತ್ತದೆ.

ಸಿಂಗಾಪೂರ್

ಸಿಂಗಾಪೂರವು ವಲಯದಲ್ಲಿನ ಹಾಲಿ ಪ್ರಗತಿ ಮತ್ತು ಭವಿಷ್ಯದ ಸಾಮರ್ಥ್ಯಕ್ಕೆ ಭಾರತದ ಬಾಂಧವ್ಯದ ಪರಂಪರೆಗೆ ಗವಾಕ್ಷಿಯಾಗಿದೆ, ಸಿಂಗಾಪೂರ ಭಾರತ ಮತ್ತು ಆಸಿಯಾನ್ ನಡುವಿನ ಸೇತುವೆಯಾಗಿದೆ.

ಇಂದು ಇದು ನಮ್ಮ ಪೂರ್ವದ ಹೆಬ್ಬಾಗಿಲಾಗಿದೆ, ನಮ್ಮ ಪ್ರಮುಖ ಆರ್ಥಿಕ ಪಾಲುದಾರ ಮತ್ತು ಪ್ರಮುಖ ಜಾಗತಿಕ ವ್ಯೂಹಾತ್ಮಕ ಪಾಲುದಾರನಾಗಿದೆ, ಇದು ನಮ್ಮ ಸದಸ್ಯತ್ವದ ಹಲವಾರು ಪ್ರಾದೇಶಿಕ ಮತ್ತು ಜಾಗತಿಕ ವೇದಿಕೆಗಳಲ್ಲಿ ಅನುರಣಿಸುತ್ತದೆ.

ನಮ್ಮ ರಾಜಕೀಯ ಸಂಬಂಧಗಳು ಉತ್ತಮಿಕೆ, ಆಪ್ತತೆ ಮತ್ತು ವಿಶ್ವಾದಿಂದ ಕೂಡಿವೆ. ನಮ್ಮ ರಕ್ಷಣಾ ಬಾಂಧವ್ಯ ಇಬ್ಬರಿಗೂ ಬಲಿಷ್ಠವಾಗಿವೆ.

ನಮ್ಮ ಆರ್ಥಿಕ ಪಾಲುದಾರಿಕೆ ನಮ್ಮ ಎರಡೂ ರಾಷ್ಟ್ರಗಳ ಆದ್ಯತೆಯ ಪ್ರತಿಯೊಂದು ಕ್ಷೇತ್ರವನ್ನೂ ವ್ಯಾಪಿಸಿವೆ. ಸಿಂಗಾಪೂರವು ಹೂಡಿಕೆಯ ಭಾರತದ ಪ್ರಮುಖ ತಾಣ ಮತ್ತು ಮೂಲವಾಗಿದೆ.

ಸಾವಿರಾರು ಭಾರತೀಯ ಕಂಪನಿಗಳು ಸಿಂಗಾಪೂರ್ ನಲ್ಲಿ ನೋಂದಾಯಿಸಿಕೊಂಡಿವೆ.

ಭಾರತದ ಹದಿನಾರು ನಗರಗಳಿಂದ ಪ್ರತಿ ವಾರ ಸಿಂಗಾಪೂರಕ್ಕೆ 240 ನೇರ ವಿಮಾನಗಳಿವೆ. ಭಾರತೀತರು ಸಿಂಗಾಪೂರದಲ್ಲಿ ಮೂರನೇ ಅತಿ ದೊಡ್ಡ ಪ್ರವಾಸಿಗರ ತಂಡವಾಗಿದ್ದಾರೆ.

ಸಿಂಗಾಪುರದ ಸ್ಪೂರ್ತಿದಾಯಕ ಬಹುಸಾಂಸ್ಕೃತಿಕತೆ ಮತ್ತು ಪ್ರತಿಭೆಯ ಗೌರವವು ನಮ್ಮ ದೇಶಗಳ ನಡುವಿನ ಆಳವಾದ ಸಹಕಾರಕ್ಕೆ ಕಾರಣವಾಗುವ ರೋಮಾಂಚಕ ಮತ್ತು ಕ್ರಿಯಾತ್ಮಕ ಭಾರತೀಯ ಸಮುದಾಯವನ್ನು ಪೋಷಿಸಿದೆ.

ಪಿಲಿಪ್ಪೀನ್ಸ್

ಕಳೆದ ಎರಡು ತಿಂಗಳುಗಳ ಹಿಂದೆ ನಾನು ಪಿಲಿಪ್ಪೀನ್ಸ್ ಗೆ ತೃಪ್ತಿದಾಯಕ ಭೇಟಿ ನೀಡಿದ್ದೆ. ಆಸಿಯಾನ್ ಭಾರತ , ಇ.ಎ.ಎಸ್. ಮತ್ತು ಸಂಬಂಧಿತ ಶೃಂಗಸಭೆಗಳಲ್ಲಿ ಭಾಗವಹಿಸುವುದರ ಜೊತೆಗೆ, ನನಗೆ ಅಧ್ಯಕ್ಷ ದುತೇರ್ತೆ ಅವರನ್ನು ಭೇಟಿ ಮಾಡುವ ಗೌರವ ಲಭಿಸಿತ್ತು ಮತ್ತು ನಾವು ನಮ್ಮ ಆಪ್ತ ಮತ್ತು ಸಮಸ್ಯೆಮುಕ್ತ ಬಾಂಧವ್ಯವನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗಬೇಕು ಎಂಬ ಬಗ್ಗೆ ವ್ಯಾಪಕವಾಗಿ ಚರ್ಚಿಸಿದೆವು. ಪ್ರಮುಖ ರಾಷ್ಟ್ರಗಳ ನಡುವೆ ನಾವಿಬ್ಬರೂ ಸೇವೆಗಳಲ್ಲಿ ಮತ್ತು ವೃದ್ಧಿ ದರದಲ್ಲಿ ಬಲವಾಗಿದ್ದೇವೆ. ನಮ್ಮ ವಾಣಿಜ್ಯ ಮತ್ತು ವ್ಯಾಪಾರದ ಸಾಮರ್ಥ್ಯ ಶ್ರೇಷ್ಠ ಭರವಸೆ ಹೊಂದಿದೆ.

ನಾನು ಅಧ್ಯಕ್ಷ ದುತೇರ್ತೇ ಅವರ ಸಮಗ್ರ ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದ ಬದ್ಧತೆಯನ್ನು ಶ್ಲಾಘಿಸುತ್ತೇನೆ. ಈ ಎರಡೂ ದೇಶಗಳು ಒಗ್ಗೂಡಿ ಶ್ರಮಿಸಬಹುದಾದ ಕ್ಷೇತ್ರಗಳಾಗಿವೆ. ಸಾರ್ವತ್ರಿಕ ಗುರುತಿನ ಚೀಟಿ, ಹಣಪೂರಣ, ಎಲ್ಲರಿಗೂ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸುವುದು, ನೇರ ಸವಲತ್ತು ವರ್ಗಾವಣೆ ಮತ್ತು ನಗದು ರಹಿತ ವಹಿವಾಟು ಉತ್ತೇಜನದಲ್ಲಿ ಪಿಲಿಪ್ಪೀನ್ಸ್ ನೊಂದಿಗೆ ನಾವು ನಮ್ಮ ಅನುಭವವನ್ನು ಹಂಚಿಕೊಳ್ಳಲು ಹರ್ಷಿಸುತ್ತೇವೆ. ಎಲ್ಲರಿಗೂ ಕೈಗೆಟಕುವ ದರದಲ್ಲಿ ಔಷಧ ದೊರಕುವಂತೆ ಮಾಡುವುದು ಪಿಲಿಪ್ಪೀನ್ಸ್ ಸರ್ಕಾರದ ಮತ್ತೊಂದು ಆದ್ಯತೆಯ ಕ್ಷೇತ್ರವಾಗಿದ್ದು, ಇದಕ್ಕೆ ನಾವು ಕೊಡುಗೆ ನೀಡಲು ಸಿದ್ಧರಿದ್ದೇವೆ. ನಾವು ಸಮಾನ ಸವಾಲುಗಳನ್ನು ಎದುರಿಸಲು ಪಿಲಿಪ್ಪೀನ್ಸ್ ನೊಂದಿಗೆ ಸಹಕಾರ ಹೆಚ್ಚಿಸುತ್ತಿದ್ದೇವೆ.

ಮಲೇಷಿಯಾ

ಭಾರತ ಮತ್ತು ಮಲೇಷಿಯಾ ನಡುವಿನ ನಮ್ಮ ಸಮಕಾಲೀನ ಬಾಂಧವ್ಯ ಸಾಕಷ್ಟು ವ್ಯಾಪಕವಾಗಿದ್ದು, ಅನೇಕ ಪ್ರದೇಶಗಳಲ್ಲಿ ಹರಡಿವೆ ಮಲೇಷಿಯಾ ಮತ್ತು ಭಾರತ ವ್ಯೂಹಾತ್ಮಕ ಪಾಲುದಾರಿಕೆ ಹಂಚಿಕೊಂಡಿದ್ದು, ನಾವು ಹಲವು ಬಹುಪಕ್ಷೀಯ ಮತ್ತು ಪ್ರಾದೇಶಿಕ ವೇದಿಕೆಗಳಲ್ಲಿ ಸಹಕಾರ ನೀಡುತ್ತಿದ್ದೇವೆ. ಮಲೇಷಿಯಾದ ಪ್ರಧಾನಮಂತ್ರಿಯವರ 2017ರ ಅಧಿಕೃತ ಭಾರತ ಪ್ರವಾಸ ನಮ್ಮ ದ್ವಿಪಕ್ಷೀಯ ಬಾಂಧವ್ಯದಲ್ಲಿ ದೀರ್ಘಕಾಲೀನ ಪ್ರಭಾವ ಬೀರಿದೆ.

ಮಲೇಷಿಯಾವು ಆಸಿಯಾನ್ ನಲ್ಲಿ ಭಾರತದ ಮೂರನೇ ಅತಿದೊಡ್ಡ ವಾಣಿಜ್ಯ ಪಾಲುದಾರನಾಗಿ ಹೊರಹೊಮ್ಮಿದೆ ಮತ್ತು ಆಸಿಯಾನಿಂದ ಭಾರತದಲ್ಲಿ ಹೂಡಿಕೆ ಮಾಡುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತ ಮತ್ತು ಮಲೇಷಿಯಾ ನಡುವಿನ ದ್ವಿಪಕ್ಷೀಯ ವಾಣಿಜ್ಯ ಕಲೆದ 10 ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಾಗಿದೆ. ಭಾರತ ಮತ್ತು ಮಲೇಷಿಯಾ ಎರಡೂ ದ್ವಿಪಕ್ಷೀಯ ಸಮಗ್ರ ಆರ್ಥಿಕ ಸಹಕಾರ ಒಪ್ಪಂದವನ್ನು 2011ರಿಂದ ಹೊಂದಿವೆ. ಎರಡೂ ಕಡೆಯವರು ಸರಕು ವ್ಯಾಪಾರದಲ್ಲಿ ಆಸಿಯಾನ್ ಪ್ಲಸ್ ಬದ್ಧತೆಗಳನ್ನು ಒದಗಿಸಿವೆ ಮತ್ತು ಸೇವೆಗಳ ವ್ಯಾಪಾರದಲ್ಲಿ ಡಬ್ಲುಟಿಓ ಪ್ಲಸ್ ಕೊಡುಗೆಗಳನ್ನು ವಿನಿಮಯ ಮಾಡಿಕೊಂಡಿದ್ದು ಈ ಒಪ್ಪಂದವು ವಿಶಿಷ್ಟವಾಗಿದೆ. 2012ರ ಮೇ ತಿಂಗಳಲ್ಲಿ ಎರಡೂ ರಾಷ್ಟ್ರಗಳ ನಡುವೆ ಅಂಕಿತ ಹಾಕಲಾದ ಪರಿಷ್ಕೃತ ದ್ವಿ ತೆರಿಗೆ ತಪ್ಪಿಸುವ ಒಪ್ಪಂದ ಮತ್ತು 2013ರಲ್ಲಿ ಸಹಿ ಹಾಕಲಾದ ಕಸ್ಟಮ್ಸ್ ಸಹಕಾರ ಕುರಿತ ಎಂ.ಓ.ಯು ನಮ್ಮ ವಾಣಿಜ್ಯ ಮತ್ತು ಹೂಡಿಕೆ ಸಹಕಾರವನ್ನು ಮತ್ತಷ್ಟು ಹೆಚ್ಚಿಸಿವೆ.

ಬ್ರೂನಿ

ಭಾರತ ಮತ್ತು ಬ್ರೂನಿ ನಡುವಿನ ದ್ವಿಪಕ್ಷೀಯ ವ್ಯಾಪಾರ ಕಳೆದ ಒಂದು ದಶಕದಲ್ಲಿ ಎರಡು ಪಟ್ಟಿಗಿಂತ ಅಧಿಕವಾಗಿದೆ. ಭಾರತ ಮತ್ತು ಬ್ರೂನಿ ವಿಶ್ವಸಂಸ್ಥೆ, ನಾಮ್, ಕಾಮನ್ ವೆಲ್ತ್, ಎ.ಆರ್.ಎಫ್. ಇತ್ಯಾದಿಗಲ್ಲಿ ಸಮಾನ ಸದಸ್ಯತ್ವ ಹೊಂದಿವೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಾಗಿ, ಬಲವಾದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಬಾಂಧವ್ಯ ಹೊಂದಿವೆ, ಬ್ರೂನಿ ಮತ್ತು ಭಾರತ ಹಲವು ಅಂತಾರಾಷ್ಟ್ರೀಯ ವಿಷಯಗಳಲ್ಲಿನ ಭಾಗವಹಿಸುವಿಕೆಯಲ್ಲಿ ನ್ಯಾಯಸಮ್ಮತ ಸಮಾನತೆಯನ್ನು ಅನುಭವಿಸುತ್ತಿವೆ. ಮೇ 2008ರಲ್ಲಿ ಬ್ರೂನಿ ಸುಲ್ತಾನರ ಭಾರತ ಭೇಟಿ ಭಾರತ – ಬ್ರೂನಿ ಬಾಂಧವ್ಯದಲ್ಲಿ ಒಂದು ಮೈಲಿಗಲ್ಲಾಗಿದೆ. ಭಾರತದ ಉಪರಾಷ್ಟ್ರಪತಿಯವರು 2016ರ ಫೆಬ್ರವರಿಯಲ್ಲಿ ಬ್ರೂನಿಗೆ ಬೇಟಿ ನೀಡಿದ್ದರು.

ಲಾವೋ ಪಿಡಿಆರ್

ಭಾರತ ಮತ್ತು ಲಾವೋ ಪಿಡಿಆರ್ ನಡುವಿನ ಬಾಂಧವ್ಯ ವ್ಯಾಪಕವಾಗಿ ಹಲವು ಕ್ಷೇತ್ರಗಳಲ್ಲಿ ಹಬ್ಬಿವೆ. ಭಾರತ ವಾಸ್ತವವಾಗಿ ಲಾವೋ ಪಿಡಿಆರ್ ನಲ್ಲಿ ವಿದ್ಯುತ್ ಪ್ರಸರಣ ಮತ್ತು ಕೃಷಿ ವಲಯದಲ್ಲಿ ತೊಡಗಿಕೊಂಡಿದೆ. ಇಂದು ಭಾರತ ಮತ್ತು ಲಾವೋ ಪಿಡಿಆರ್ ಸಹಕಾರ ಬಹುಪಕ್ಷೀಯ ಮತ್ತು ಪ್ರಾದೇಶಿಕ ವೇದಿಕೆಗಳಲ್ಲಿವೆ.

ಆದಾಗ್ಯೂ, ಭಾರತ ಮತ್ತು ಲಾವೋ ಪಿಡಿಆರ್ ನಡುವಿನ ವಾಣಿಜ್ಯ ಸಾಮರ್ಥ್ಯಕ್ಕಿಂತ ಕಡಿಮೆಯೇ ಇದೆ. ಭಾರತವು ಲಾವೋ ಪಿಡಿಆರ್ ಗೆ ಡ್ಯೂಟಿ ಮುಕ್ತ ಸಾರಿಗೆಯ ಆದ್ಯತೆಯ ಯೋಜನೆಯನ್ನು ಒದಗಿಸಿದ್ದು, ಲಾವೋ ಪಿಡಿಆರ್ ನಿಂದ ಭಾರತಕ್ಕೆ ಸರಕುಗಳ ರಫ್ತಿಗೆ ಉತ್ತೇಜನ ನೀಡಿದೆ. ಲಾವೋ ಪಿಡಿಆರ್ ನ ಆರ್ಥಿಕತೆಯನ್ನು ನಿರ್ಮಿಸುವ ಸೇವಾ ವ್ಯಾಪಾರದಲ್ಲಿ ನಮಗೆ ಹೇರಳ ಅವಕಾಶಗಳಿವೆ. ಆಸಿಯಾನ್ ಭಾರತ ಸೇವೆಗಳು ಮತ್ತು ಹೂಡಿಕೆ ಒಪ್ಪಂದ ನಮ್ಮ ಸೇವಾ ವಾಣಿಜ್ಯಕ್ಕೆ ಅವಕಾಶ ನೀಡುತ್ತದೆ.

ಇಂಡೋ ನೇಷಿಯಾ

ಹಿಂದೂ ಮಹಾ ಸಾಗರದಲ್ಲಿ 90 ನಾವಿಕ ಮೈಲಿಗಳಿಂದ ಪ್ರತ್ಯೇಕವಾಗಿರುವ ಭಾರತ ಮತ್ತು ಇಂಡೋನೇಷಿಯಾ ಎರಡು ಸಹಸ್ರಮಾನಗಳಿಂದ ನಾಗರಿಕತೆಯ ಬಾಂಧವ್ಯದ ನಿರಂತರತೆಯನ್ನು ಹಂಚಿಕೊಂಡಿವೆ.

ಅದು ಒಡಿಶಾದಲ್ಲಿ ಆಚರಿಸಲಾಗುವ ವಾರ್ಷಿಕ ಬಲಿಜಾತ್ರೆಯಾಗಲೀ ಅಥವಾ ಮಹಾಭಾರತ ಮತ್ತು ರಾಮಾಯಣದ ಕಥೆಯೇ ಆಗಲಿ, ಇದನ್ನು ನಾವು ಇಡೀ ಇಂಡೋನೇಷಿಯಾ ಭೂ ರಮೆಯಲ್ಲಿ ಕಾಣಬಹುದಾಗಿದೆ. ಈ ವಿಶಿಷ್ಟವಾದ ಸಾಂಸ್ಕೃತಿಕ ಎಳೆಗಳು ಹೊಂಬಣ್ಣದಿಂದ ವಿಶೇಷ ನೆರೆಹೊರೆಯ ಏಷ್ಯಾದ ಎರಡು ದೊಡ್ಡ ಪ್ರಜಾಪ್ರಭುತ್ವಗಳ ಜನರನ್ನು ಬಂಧಿಸುತ್ತವೆ.

ವಿವಿಧತೆಯಲ್ಲಿ ಏಕತೆ ಅಥವಾ ಬಿನ್ನೇಕ ತುಂಗಲ್ ಇಕಾ ಪ್ರಜಾಪ್ರಭುತ್ವ ಮತ್ತು ಕಾನೂನಿನ ನಿಯಮಗಳ ಸಾಮಾನ್ಯ ಮೌಲ್ಯಗಳೆರಡನ್ನೂ ಹಂಚಿಕೊಂಡಿರುವ ಹಂಚಿಕೆಯ ಸಾಮಾಜಿಕ ಮೌಲ್ಯದ ರಚನೆಗಳ ಒಂದು ಪ್ರಮುಖ ಅಂಶವೂ ಸಹ ಆಗಿದೆ. ಇಂದು ವ್ಯೂಹಾತ್ಮಕ ಪಾಲುದಾರರಾಗಿ, ನಮ್ಮ ಸಹಕಾರ ರಾಜಕೀಯ, ಆರ್ಥಿಕ, ರಕ್ಷಣೆ ಮತ್ತು ಭದ್ರತೆ, ಸಾಂಸ್ಕೃತಿಕ ಮತ್ತು ಜನರೊಂದಿಗಿನ ಕ್ಷೇತ್ರಗಳಲ್ಲಿ ವ್ಯಾಪಿಸಿವೆ. ಇಂಡೋನೇಷಿಯಾ ಆಸಿಯಾನ್ ನಲ್ಲಿ ನಮ್ಮ ದೊಡ್ಡ ವಾಣಿಜ್ಯ ಪಾಲುದಾರನಾಗಿ ಮುಂದುವರಿದಿದೆ. ಭಾರತ ಮತ್ತು ಇಂಡೋನೇಷಿಯಾ ನಡುವಿನ ದ್ವಿಪಕ್ಷೀಯ ವಾಣಿಜ್ಯ ಕಳೆದ 10 ವರ್ಷಗಳಲ್ಲಿ 2.5ಪಟ್ಟು ಹೆಚ್ಚಳವಾಗಿದೆ. ಅಧ್ಯಕ್ಷ ಜೋಕೋ ವಿಡೋಡೋ ಅವರ 2016ರ ಭಾರತ ಭೇಟಿ ನಮ್ಮ ದ್ವಿಪಕ್ಷೀಯ ಬಾಂಧವ್ಯದಲ್ಲಿ ದೀರ್ಘಕಾಲೀನ ಪರಿಣಾಮ ಬೀರಿದೆ.

ಕಾಂಬೋಡಿಯಾ

ಭಾರತ ಮತ್ತು ಕಾಂಬೋಡಿಯಾ ನಡುವಿನ ಸಾಂಪ್ರದಾಯಿಕ ಮತ್ತು ಸ್ನೇಹ ಸಂಬಂಧಗಳು ನಮ್ಮ ನಾಗರಿಕತೆಯ ಬೇರುಗಳಲ್ಲಿ ಆಳವಾಗಿವೆ. ಆಂಗ್ಕೋರ್ ವಾಟ್ ದೇವಾಲಯದ ಅದ್ಭುತ ವಾಸ್ತು ವಿನ್ಯಾಸ, ನಮ್ಮ ಪುರಾತನ ಐತಿಹಾಸಿಕ ಧಾರ್ಮಿ ಮತ್ತು ಸಾಂಸ್ಕೃತಿಕ ನಂಟಿಗೆ ದೊಡ್ಡ ಸಂಕೇತವಾಗಿದೆ. ಭಾರತವು 1986-1993ರ ಕ್ಲಿಷ್ಟಕರ ಅವಧಿಯಲ್ಲೂ ಈ ದೇವಾಲಯ ಸಂರಕ್ಷಣೆ ಮತ್ತು ಜೀರ್ಣೋದ್ಧಾರದ ಕಾರ್ಯ ಕೈಗೊಂಡಿದ್ದಕ್ಕೆ ಹೆಮ್ಮೆಪಡುತ್ತದೆ. ಭಾರತವು ಈಗ ನಡೆಯುತ್ತಿರುವ ತಾ ಪ್ರೋಹಮ್ ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ಈ ಅಮೂಲ್ಯ ಬಂಧವನ್ನು ಮುಂದುವರಿಸಿದೆ.

ಖಮೇರ್ ರೂಜ್ ಆಡಳಿತದ ಪತನದ ನಂತರ 1981 ರಲ್ಲಿ ಹೊಸ ಸರಕಾರವನ್ನು ಪರಿಗಣಿಸಿದ ಮೊದಲ ದೇಶ ಭಾರತವಾಗಿತ್ತು. ಭಾರತವು ಪ್ಯಾರಿಸ್ ಶಾಂತಿ ಒಪ್ಪಂದ ಮತ್ತು 1991ರಲ್ಲಿ ಅದನ್ನು ಆಖೈರುಗೊಳಿಸುವುದರಲ್ಲೂ ಭಾರತ ಭಾಗಿಯಾಗಿತ್ತು. ಈ ಸಾಂಪ್ರದಾಯಿಕ ನಂಟು, ಸ್ನೇಹ ಉನ್ನತ ಮಟ್ಟದ ಭೇಟಿಯಲ್ಲಿನ ನಿರಂತರ ವಿನಿಮಯದ ಮೂಲಕ ಬಲಗೊಂಡಿದೆ. ನಾವು ನಮ್ಮ ಸಹಕಾರವನ್ನು ವಿವಿಧ ಕ್ಷೇತ್ರಗಳಿಗೆ ಅಂದರೆ ಸಾಂಸ್ಥಿಕ ಸಾಮರ್ಥ್ಯ ವರ್ಧನೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಅಭಿವೃದ್ಧಿ ಮತ್ತು ಸಾಮಾಜಿಕ ಯೋಜನೆಗಳು, ಸಾಂಸ್ಕೃತಿಕ ವಿನಿಮಯ, ರಕ್ಷಣಾ ಸಹಕಾ, ಪ್ರವಾಸೋದ್ಯಮ ಮತ್ತು ಜನರೊಂದಿಗಿನ ಸಂಪರ್ಕ ವಿಸ್ತರಿಸಿದ್ದೇವೆ.

ಆಸಿಯಾನ್ ವಿಚಾರದಲ್ಲಿ ಮತ್ತು ವಿವಿಧ ಜಾಗತಿಕ ವೇದಿಕೆಗಳಲ್ಲಿ ಕಾಂಬೋಡಿಯಾ ಭಾರತಕ್ಕೆಬೆಂಬಲದ ಪಾಲುದಾರ ಮತ್ತು ಮಹತ್ವದ ಸಂವಾದಕವಾಗಿದೆ. ಭಾರತವು ಕಾಂಬೋಡಿಯಾದ ಆರ್ಥಿಕ ಅಭಿವೃದ್ಧಿಯ ಪಾಲುದಾರನಾಗಿ ಮುಂದುವರಿಯಲು ಭಾರತ ಬದ್ಧವಾಗಿದೆ ಮತ್ತು ಅದರ ಸಾಂಪ್ರದಾಯಿಕ ಬಾಂಧವ್ಯವನ್ನು ಮತ್ತಷ್ಟು ಆಳಗೊಳಿಸಲು ಎದಿರು ನೋಡುತ್ತಿದೆ.

ಭಾರತ ಮತ್ತು ಆಸಿಯಾನ್ ಇನ್ನೂ ಹೆಚ್ಚಿನದನ್ನು ಮಾಡುತ್ತಿವೆ. ಆಸಿಯಾನ್ ನೇತೃತ್ವದ ಸಂಸ್ಥೆಗಳಾದ ಪೂರ್ವ ಏಷ್ಯಾ ಶೃಂಗ, ಎಡಿಎಂಎಂ ಪ್ಲಸ್ (ಆಸಿಯಾನ್ ರಕ್ಷಣಾ ಸಚಿವರುಗಳ ಮಟ್ಟದ ಸಭೆ ಪ್ಲಸ್) ಮತ್ತು ಎ.ಆರ್.ಎಫ್. (ಆಸಿಯಾನ್ ಪ್ರಾದೇಶಿಕ ವೇದಿಕೆ)ಗಳಲ್ಲಿನ ನಮ್ಮ ಪಾಲುದಾರಿಕೆ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆ ಮುಂದುವರಿಸಿವೆ. ಭಾರತ ಸಹ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದಲ್ಲಿ ಉತ್ಸಾಹಿ ಪಾಲುದಾರನಾಗಿದ್ದು, ಸಮಗ್ರ, ಸಮತೋಲಿತ ಮತ್ತು ನ್ಯಾಯಸಮ್ಮತ ಒಪ್ಪಂದವನ್ನು ಎಲ್ಲ 16 ಸಹಭಾಕಿ ರಾಷ್ಟ್ರಗಳೊಂದಿಗೆ ಸಹಕರಿಸುತ್ತದೆ.

ಪಾಲುದಾರಿಕೆಯ ಸಾಮರ್ಥ್ಯ ಮತ್ತು ಸ್ಥಿತಿಸ್ಥಾಪಕತ್ವವು ಸಂಖ್ಯೆಗಳ ಲೆಕ್ಕಾಚಾರದಿಂದ ಮಾತ್ರವಲ್ಲ, ಸಂಬಂಧದ ಆಧಾರದ ಮೇಲೆ ಕೂಡಾ ಬರುತ್ತದೆ. ಭಾರತ ಮತ್ತು ಆಸಿಯಾನ್ ರಾಷ್ಟ್ರಗಳು ಸ್ಪರ್ಧೆ ಮತ್ತು ಹಕ್ಕು ಮುಕ್ತ ಬಾಂಧವ್ಯ ಹೊಂದಿವೆ. ನಾವು ಸೇರ್ಪಡೆ ಮತ್ತು ಸಮನ್ವಯಕ್ಕೆ ಬದ್ಧವಾದ, ಎಲ್ಲಾ ರಾಷ್ಟ್ರಗಳ ಸಾರ್ವಭೌಮ ಸಮಾನತೆಯ ನಂಬಿಕೆ, ಗಾತ್ರ, ಮತ್ತು ಮುಕ್ತ ಮತ್ತು ಮುಕ್ತ ಮಾರ್ಗಗಳ ವಾಣಿಜ್ಯ ಮತ್ತು ಕಾರ್ಯಕ್ರಮದ ಬೆಂಬಲದ ಮೇಲೆ .ಭವಿಷ್ಯಕ್ಕೆ ಸಮಾನ ಮುನ್ನೋಟವನ್ನು ಹೊಂದಿದ್ದೇವೆ.

ಆಸಿಯಾನ್ – ಭಾರತ ಪಾಲುದಾರಿಕೆ ನಿರಂತವಾಗಿ ಬೆಳೆಯುತ್ತಿದೆ. ಜನಸಂಖ್ಯೆ, ಚೈತನ್ಯ ಮತ್ತು ಬೇಡಿಕೆಯ ಕೊಡುಗೆಯೊಂದಿಗೆ – ತ್ವರಿತವಾಗಿ ಪ್ರೌಢವಾಗುತ್ತಿರುವ ಆರ್ಥಿಕತೆ ಯೊಂದಿಗೆ ಭಾರತ ಮತ್ತು ಆಸಿಯಾನ್ ಬಲಿಷ್ಠವಾದ ಆರ್ಥಿಕ ಪಾಲುದಾರಿಕೆಯನ್ನು ನಿರ್ಮಿಸುತ್ತಿವೆ.  ಸಂಪರ್ಕ ಹೆಚ್ಚುತ್ತಿದ್ದು, ವಾಣಿಜ್ಯ ವಿಸ್ತಾರವಾಗುತ್ತಿದೆ. ಭಾರತದಲ್ಲಿ ಸಹಕಾರ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯ ಯುಗದಲ್ಲಿ, ನಮ್ಮ ರಾಜ್ಯಗಳು ಆಗ್ನೇಯ ಏಷ್ಯಾದ ರಾಷ್ಟ್ರಗಳೊಂದಿಗೆ ಫಲಪ್ರದ ಸಹಕಾರವನ್ನು ನಿರ್ಮಿಸುತ್ತಿವೆ. ಭಾರತದ ಈಶಾನ್ಯವು ಪುನರುಜ್ಜೀವನದ ಮಾರ್ಗವಾಗಿದೆ. ಆಗ್ನೇಯ ಏಷ್ಯಾದೊಂದಿಗಿನ ನಂಟು ಅದರ ಪ್ರಗತಿಯನ್ನು ವೇಗಗೊಳಿಸುತ್ತಿದೆ. ಇದಕ್ಕೆ ಪ್ರತಿಯಾಗಿ, ಅದಕ್ಕೆ ಹೊಂದಿಕೊಂಡ ಈಶಾನ್ಯ ಭಾರತ-ಆಸಿಯಾನ್ ನಡುವಿನ ನಮ್ಮ ಕನಸಿನ ಬಾಂಧವ್ಯದ ಸೇತುವೆಯಾಗಿದೆ.

ಪ್ರಧಾನಮಂತ್ರಿಯಾಗಿ ನಾನು, ನಾಲ್ಕು ಆಸಿಯಾನ್ – ಭಾರತ ಶೃಂಗಸಭೆ ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳಲ್ಲಿ ಭಾಗವಹಿಸಿದ್ದೇನೆ. ಇವು ಆಸಿಯಾನ್ ಏಕತೆ, ಕೇಂದ್ರೀಕರಣ ಮತ್ತು ವಲಯದಲ್ಲಿ ಈ ನೋಟವನ್ನು ರೂಪಿಸುವ ನಾಯಕತ್ವದ ಬಗ್ಗೆ ನನ್ನ ನಿಶ್ಚಯವನ್ನು ಪುನಶ್ಚೇತನಗೊಳಿಸಿವೆ. ಈ ವರ್ಷ ಮೈಲಿಗಲ್ಲಿನ ವರ್ಷವಾಗಿದೆ. ಭಾರತಕ್ಕೆ ಕಳೆದ ವರ್ಷ 70 ತುಂಬಿದೆ. ಆಸಿಯಾನ್ 50 ವರ್ಷಗಳ ಸುವರ್ಣ ಮೈಲಿಗಲ್ಲು ದಾಟಿದೆ. ನಾವು ಪರಸ್ಪರ ನಮ್ಮ ಭವಿಷ್ಯದತ್ತ ಆಶಾಭಾವನೆಯೊಂದಿಗೆ ಮತ್ತು ವಿಶ್ವಾಸಪೂರ್ಣವಾದ ನಮ್ಮ ಪಾಲುದಾರಿಕೆಯೊಂದಿಗೆ ನೋಡಬಹುದಾಗಿದೆ.

70 ನೇ ವಯಸ್ಸಿನಲ್ಲಿ, ಭಾರತವು ತನ್ನ ಯುವ ಜನರ ಸ್ಫೂರ್ತಿ, ಉದ್ಯಮಶೀಲತೆ ಮತ್ತು ಚೈತನ್ಯವನ್ನು ಹೊರಹಾಕುತ್ತದೆ. ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ರಾಷ್ಟ್ರವಾಗಿ, ಜಾಗತಿಕ ಆರ್ಥಿಕತೆಗಳ ಹೊಸ ಎಲ್ಲೆ ಮತ್ತು ಜಾಗತಿಕ ಆರ್ಥಿಕತೆಯ ಸ್ಥಿರತೆಗೆ ಆಧಾರವಾಗಿದೆ. ಕಳೆದ ಪ್ರತಿ ದಿನದಲ್ಲಿ, ಭಾರತದಲ್ಲಿ ವ್ಯಾಪಾರ ಮಾಡುವುದು ಸುಲಭ ಮತ್ತು ಸುಗಮವಾಗಿದೆ. ಸ್ನೇಹಿತರು ಮತ್ತು ನಮ್ಮ ನೆರೆಹೊರೆಯವರು ಮತ್ತು ಆಸಿಯಾನ್ ರಾಷ್ಟ್ರಗಳು ನವ ಭಾರತದ ರೂಪಾಂತರದ ಅವಿಭಾಜ್ಯ ಭಾಗವೆಂದು ನಾನು ಭಾವಿಸುತ್ತೇನೆ.

ನಾವು ಆಸಿಯಾನ್ ನ ಸ್ವಂತ ಪ್ರಗತಿಯನ್ನು ಮೆಚ್ಚುತ್ತೇವೆ. ಆಗ್ನೇಯ ಏಷ್ಯಾವು ಜನ್ಮ ತಳೆದಾಗ ಕ್ರೂರ ಯುದ್ಧದ ಒಂದು ರಂಗ ಮತ್ತು ಅನಿಶ್ಚಿತ ರಾಷ್ಟ್ರಗಳ ಒಂದು ಪ್ರದೇಶವಾಗಿತ್ತು, ಆಸಿಯಾನ್  10 ರಾಷ್ಟ್ರಗಳನ್ನು ಒಂದು ಸಾಮಾನ್ಯ ಉದ್ದೇಶ ಮತ್ತು ಒಂದು ಹಂಚಿಕೆಯ ಭವಿಷ್ಯದಲ್ಲಿ ಏಕೀಕರಿಸಿದೆ. ಮೂಲಸೌಕರ್ಯ ಮತ್ತು ನಗರೀಕರಣದಿಂದ ಹಿಡಿದು ಚೇತರಿಸಿಕೊಳ್ಳುವ ಕೃಷಿ ಮತ್ತು ಆರೋಗ್ಯಕರ ಗ್ರಹದವರೆಗೆ ಹೆಚ್ಚಿನ ಮಹತ್ವಾಕಾಂಕ್ಷೆಗಳನ್ನು ಮುಂದುವರಿಸಲು ಮತ್ತು ನಮ್ಮ ಸಮಯದ ಸವಾಲುಗಳನ್ನು ಪರಿಹರಿಸುವ ಸಾಮರ್ಥ್ಯ ನಮಗೆ ಇದೆ. ಅಭೂತಪೂರ್ವ ವೇಗ ಮತ್ತು ಗಾತ್ರದಲ್ಲಿ ಬದುಕನ್ನು ಪರಿವರ್ತಿಸಲು ನಾವು ಡಿಜಿಟಲ್ ತಂತ್ರಜ್ಞಾನ, ನಾವಿನ್ಯತೆ ಮತ್ತು ಸಂಪರ್ಕದ ಶಕ್ತಿಯನ್ನು ಬಳಸಬಹುದಾಗಿದೆ.

ಭವಿಷ್ಯದ ಭರವಸೆಗೆ ಶಾಂತಿಯ ಹೆಬ್ಬಂಡೆಯ ಅಗತ್ಯವಿದೆ. ಇದು ಬದಲಾವಣೆಯ ಯುಗ. ಅಡೆತಡೆಗಳು ಮತ್ತು ಬದಲಾವಣೆಗಳು ಇತಿಹಾಸದಲ್ಲಿ ಅಪರೂಪಕ್ಕೆ ಬರುತ್ತವೆ. ಆಸಿಯಾನ್ ಮತ್ತು ಭಾರತಕ್ಕೆ ಅಪಾರ ಅವಕಾಶಗಳಿವೆ – ಜೊತೆಗೆ ಸಾಕಷ್ಟು ಜವಾಬ್ದಾರಿಯೂ ಇದೆ – ನಮ್ಮ ಸಮಯದ ಅನಿಶ್ಚಿತತೆ ಮತ್ತು ಪ್ರಕ್ಷುಬ್ಧತೆಯು ನಮ್ಮ ಪ್ರದೇಶ ಮತ್ತು ಪ್ರಪಂಚಕ್ಕೆ ಸ್ಥಿರ ಮತ್ತು ಶಾಂತಿಯುತ ಭವಿಷ್ಯದ ಮೂಲಕ ಸ್ಥಿರತೆಯನ್ನು ಒದಗಿಸುತ್ತದೆ.

ಭಾರತೀಯರು ಸದಾ ಉದಯಿಸುವ ಸೂರ್ಯ ಮತ್ತು ಅವಕಾಶದ ಬೆಳಕು ನೋಡಲು ಪೂರ್ವದತ್ತ ಮುಖ ಮಾಡುತ್ತಾರೆ. ಈಗ, ಹಿಂದಿನಂತೆ, ಪೂರ್ವ ಮತ್ತು ಭಾರತ ಪೆಸಿಫಿಕ್ ವಲಯ, ಭಾರತದ ಭವಿಷ್ಯಕ್ಕೆ ಮತ್ತು ನಮ್ಮ ಸಮಾನ ಡೆಸ್ಟಿನಿಗೆ ಅನಿವಾರ್ಯವಾಗಿದೆ. ಆಸಿಯಾನ್ ಭಾರತ ಪಾಲುದಾರಿಕೆ ವಿವರಣಾತ್ಮಕ ಪಾತ್ರ ನಿರ್ವಹಿಸುತ್ತದೆ. ದೆಹಲಿಯಲ್ಲಿ ಆಸಿಯಾನ್ ಮತ್ತು ಭಾರತ ಮುಂದಿನ ಪಯಣದ ಸಂಕಲ್ಪ ನವೀಕರಿಸಿದೆ.

ಆಸಿಯಾನ್ ದಿನ ಪತ್ರಿಕೆಗಳ ಸಂಪಾದಕೀಯ ಪುಟದ ಪಕ್ಕದ ಪುಟದಲ್ಲಿ ಪ್ರಕಟವಾದ ಪ್ರಧಾನಮಂತ್ರಿಯವರ ಲೇಖನದ ಪಠ್ಯವನ್ನು ಈ ಲಿಂಕ್ ಮೂಲಕ ನೋಡಬಹುದು:

https://www.bangkokpost.com/opinion/opinion/1402226/asean-india-shared-values-and-a-common-destiny

http://vietnamnews.vn/opinion/421836/asean-india-shared-values-common-destiny.html#31stC7owkGF6dvfw.97

http://www.businesstimes.com.sg/opinion/asean-india-shared-values-common-destiny

http://www.globalnewlightofmyanmar.com/asean-india-shared-values-common-destiny/

http://www.thejakartapost.com/news/2018/01/26/69th-republic-day-india-asean-india-shared-values-common-destiny.html

http://www.mizzima.com/news-opinion/asean-india-shared-values-common-destiny

http://www.straitstimes.com/opinion/shared-values-common-destiny

https://news.mb.com.ph/2018/01/26/asean-india-shared-values-common-destiny/

                                                                 

 

  *****