ನಮಸ್ಕಾರ,
ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಕುಲಪತಿಗಳಾದ ಗೌರವಾನ್ವಿತ ಡಾ. ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಸಾಹೇಬ್, ಶಿಕ್ಷಣ ಸಚಿವರಾದ ಡಾ. ರೇಮಶ್ ಪೋಖ್ರಿಯಾಲ್ ನಿಶಾಂಕ್ ಜಿ, ಶಿಕ್ಷಣ ಖಾತೆ ರಾಜ್ಯ ಸಚಿವರಾದ ಶ್ರೀ ಸಂಜಯ್ ದೋತ್ರೆ ಜಿ, ಉಪಕುಲಪತಿಗಳಾದ ತಾರಿಖ್ ಮನ್ಸೂರ್ ಜಿ, ಎಲ್ಲ ಪ್ರೊಫೆಸರ್ ಗಳೇ, ಸಿಬ್ಬಂದಿ ಮತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ವಿಶ್ವವಿದ್ಯಾಲಯದ ಸಾವಿರಾರು ವಿದ್ಯಾರ್ಥಿಗಳೇ, ಎಎಂಯುವಿನ ಲಕ್ಷಾಂತರ ಮಾಜಿ ವಿದ್ಯಾರ್ಥಿಗಳೇ , ಇತರೇ ಗಣ್ಯರೇ ಮತ್ತು ಮಿತ್ರರೇ,
ಮೊದಲಿಗೆ ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಎಎಂಯು ಶತಮಾನೋತ್ಸವ ಆಚರಣೆಯ ಈ ಐತಿಹಾಸಿಕ ಸಂದರ್ಭದಲ್ಲಿ ನಿಮ್ಮ ಸಂತೋಷದ ಜೊತೆಗೆ ಭಾಗಿಯಾಗಲು ನನಗೆ ಅವಕಾಶವನ್ನು ನೀಡಿದ್ದೀರಿ. ಶತಮಾನೋತ್ಸವ ಕಟ್ಟಡದ ದ್ವಾರ, ಸಮಾಜ ವಿಜ್ಞಾನ ವಿಭಾಗ, ಸಮೂಹ ಮಾಧ್ಯಮ ಮತ್ತು ಇತರೆ ವಿಭಾಗಗಳ ಕಟ್ಟಡಗಳನ್ನು ಸುಂದರವಾಗಿ ಅಲಂಕರಿಸಿರುವ ಚಿತ್ರಣವನ್ನು ನಾನು ನೋಡಿದ್ದೇನೆ. ಇವು ಕೇವಲ ಕಟ್ಟಡಗಳಲ್ಲ, ಭಾರತೀಯ ಪಾರಂಪರಿಕ ಮೌಲ್ಯಗಳನ್ನು ತನ್ನೊಳಗಿಟ್ಟುಕೊಂಡಿರುವ ಶಿಕ್ಷಣದ ಇತಿಹಾಸ ಬಿಂಬಿಸುವ ಕಟ್ಟಡಗಳಾಗಿವೆ.
ಎಎಂಯುವಿನಿಂದ ತೇರ್ಗಡೆಯಾಗಿರುವ ವ್ಯಕ್ತಿಗಳು ಇಂದು ಭಾರತದ ಎಲ್ಲ ಉತ್ತಮ ಸಂಸ್ಥೆಗಳು ಮತ್ತು ಉತ್ತಮ ಸ್ಥಳಗಳಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ನೂರಾರು ದೇಶಗಳಲ್ಲಿ ಉನ್ನತ ಸ್ಥಾನಗಳಲ್ಲಿದ್ದಾರೆ. ನಾನು ಆಗಾಗ್ಗೆ ನನ್ನ ವಿದೇಶಿ ಪ್ರವಾಸಗಳ ವೇಳೆ ಎಎಂಯು ಮಾಜಿ ವಿದ್ಯಾರ್ಥಿಗಳನ್ನು ಭೇಟಿ ಮಾಡುತ್ತಿರುತ್ತೇನೆ. ಅವರೆಲ್ಲ ಅತ್ಯಂತ ಹೆಮ್ಮೆಯಿಂದ ಎಎಂಯುವಿನಲ್ಲಿ ವ್ಯಾಸಂಗ ಮಾಡಿದ್ದೆವು ಎಂದು ಹೇಳುತ್ತಾರೆ. ಎಎಂಯುವಿನ ಮಾಜಿ ವಿದ್ಯಾರ್ಥಿಗಳು ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಮತ್ತು ಶೇರ್-ಒ-ಶಾಯರಿಯನ್ನು ಹೊಂದಿರುತ್ತಾರೆ. ಜಗತ್ತಿನ ಎಲ್ಲೇ ನೆಲೆಸಿದ್ದರೂ ಅವರು ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ.
ನಾವು ಹೆಮ್ಮೆಯ ಆಲಿಘಡ ವಿದ್ಯಾರ್ಥಿಗಳು ಎಂದು ನೀವು ನಿಮ್ಮ ಸಹೋದ್ಯೋಗಿಗಳ ಬಳಿ ಹೇಳಿಕೊಳ್ಳುತ್ತೀರಿ. ಇದು ನಿಮ್ಮ ಹೆಮ್ಮೆಗೆ ಕಾರಣವಾಗಿದೆ. ಎಎಂಯುವಿನ 100 ವರ್ಷಗಳ ಇತಿಹಾಸದಲ್ಲಿ ಮಿಲಿಯನ್ ಗಟ್ಟಲೆ ಜನರ ಜೀವನವನ್ನು ರೂಪಿಸಿದೆ ಮತ್ತು ಅವರಿಗೆ ಆಧುನಿಕ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿದೆ. ಇದು ಸಮಾಜಕ್ಕೆ ಮತ್ತು ದೇಶಕ್ಕೆ ಸ್ಫೂರ್ತಿಯ ಸೆಲೆಯಾಗಿದೆ. ಎಲ್ಲರ ಹೆಸರನ್ನು ಹೇಳುವುದಕ್ಕೆ ಬಹುಶಃ ಸಮಯ ಸಾಕಾಗುವುದಿಲ್ಲ. ಎಎಂಯುವಿನ ಹೆಗ್ಗುರುತೆಂದರೆ ಸರ್ ಸೈಯದ್ ಅಹಮದ್ ಖಾನ್ ಅವರು ಸ್ಥಾಪಿಸಿದ ನಂತರ ಸಂಸ್ಥೆ ಪಾಲಿಸಿಕೊಂಡು ಬರುತ್ತಿರುವ ಮೌಲ್ಯಗಳಾಗಿವೆ. ನಾನು ಈ ನೂರು ವರ್ಷಗಳ ಅವಧಿಯಲ್ಲಿ ಎಎಂಯುವಿನ ಮೂಲಕ ಸೇವೆ ಸಲ್ಲಿಸಿದ ಎಲ್ಲ ಪ್ರೊಫೆಸರ್, ಶಿಕ್ಷಕರು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ನಾನು ಅಭಿನಂದಿಸುತ್ತೇನೆ.
ಕೊರೊನಾ ಸಂಕಷ್ಟದ ವೇಳೆಯೂ ಎಎಂಯು, ಹಿಂದೆಂದೂ ನಿರೀಕ್ಷಿಸದ ರೀತಿಯಲ್ಲಿ ಸಮಾಜಕ್ಕೆ ಸಹಾಯ ಮಾಡಿದೆ. ಸಾವಿರಾರು ಜನರಿಗೆ ಉಚಿತ ಸೋಂಕು ಪರೀಕ್ಷೆಗಳನ್ನು ಮಾಡಿದೆ, ಐಸೋಲೇಷನ್ ವಾರ್ಡ್ ಗಳನ್ನು ನಿರ್ಮಿಸಿದೆ. ಪ್ಲಾಸ್ಮಾ ಬ್ಯಾಂಕ್ ಗಳನ್ನು ಸ್ಥಾಪಿಸಿದೆ ಮತ್ತು ಪಿಎಂ-ಕೇರ್ಸ್ ನಿಧಿಗೆ ಭಾರೀ ಮೊತ್ತದ ದೇಣಿಗೆಯನ್ನು ನೀಡಿರುವುದು ಅದು ಸಮಾಜದೆಡೆಗೆ ತಾನು ಹೊಂದಿರುವ ಹೊಣೆಗಾರಿಕೆಯನ್ನು ಈಡೇರಿಸುವ ಗಂಭೀರತೆಯನ್ನು ಪ್ರತಿಬಿಂಬಿಸುತ್ತದೆ. ಕೆಲವು ದಿನಗಳ ಹಿಂದೆ ನಾನು ಕುಲಪತಿಗಳಾದ ಡಾ. ಸೈದೆನಾ ಸಾಹೇಬ್ ಅವರಿಂದ ಪತ್ರವನ್ನು ಸ್ವೀಕರಿಸಿದೆ. ಅವರು ಲಸಿಕೆ ಆಂದೋಲನಕ್ಕೆ ಎಲ್ಲ ಹಂತಗಳಲ್ಲಿ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ. ಭಾರತ ಇಂದು ಕೊರೊನಾದಂತಹ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಯಶಸ್ವಿಯಾಗಿ ಹೋರಾಡಲು ಕಾರಣ ದೇಶದ ಹಿತಾಸಕ್ತಿಗೆ ಅಗ್ರ ಆದ್ಯತೆ ನೀಡುವ ಇಂತಹ ನಿರಂತರ ಪ್ರಯತ್ನಗಳು ಕಾರಣವಾಗಿವೆ.
ಮಿತ್ರರೇ,
ಹಲವು ಜನರು ಹೇಳುತ್ತಾರೆ ಎಎಂಯು ಕ್ಯಾಂಪಸ್ ಅದೇ ಒಂದು ನಗರವಿದ್ದಂತೆ ಎಂದು. ಹಲವು ವಿಭಾಗಗಳಲ್ಲಿ ಡಜನ್ ಗಟ್ಟಲೆ ಹಾಸ್ಟೆಲ್ ಗಳಲ್ಲಿ ಸಹಸ್ರಾರು ಶಿಕ್ಷಕರಲ್ಲಿ, ಪ್ರಾಧ್ಯಾಪಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಹಲವು ಮಿನಿ ಭಾರತಗಳನ್ನು ಕಾಣಬಹುದಾಗಿದೆ. ಒಂದೆಡೆ ಎಎಂಯುವಿನಲ್ಲಿ ಉರ್ದುವನ್ನು ಕಲಿಸಲಾಗುತ್ತಿದೆ. ಆನಂತರ ಹಿಂದಿ ಮತ್ತು ಅರೆಬಿಕ್ ಭಾಷೆಗಳನ್ನೂ ಸಹ ಕಲಿಸಲಾಗುತ್ತಿದೆ. ಸಂಸ್ಕೃತ ಶಿಕ್ಷಣಕ್ಕೆ ಶತಮಾನದಷ್ಟೂ ಹಳೆಯದಾದ ಶಿಕ್ಷಣ ಸಂಸ್ಥೆಯಿದೆ. ಪ್ರಯೋಗಾಲಯದಲ್ಲಿ ಖುರಾನ್ ಹಸ್ತಪ್ರತಿ ಇದೆ. ಗೀತಾ ರಾಮಾಯಣದ ಅನುವಾದಗಳನ್ನು ಸಂರಕ್ಷಿಸಿಡಲಾಗಿದೆ. ಈ ವೈವಿಧ್ಯತೆ ಪ್ರತಿಷ್ಠಿತ ಸಂಸ್ಥೆಗಳಾದ ಎಎಂಯುದಂತಹ ಸಂಸ್ಥೆಗಳ ಶಕ್ತಿ ಮಾತ್ರವಲ್ಲ, ಅವು ದೇಶದ ಶಕ್ತಿಯೂ ಆಗಿವೆ. ನಾವು ಈ ಶಕ್ತಿಯನ್ನು ಮರೆಯಬಾರದು ಮತ್ತು ಯಾವುದೇ ಕಾರಣಕ್ಕೂ ಅದು ದುರ್ಬಲವಾಗದಂತೆ ನೋಡಿಕೊಳ್ಳಬೇಕು. ನಾವೆಲ್ಲರೂ ಒಗ್ಗೂಡಿ ದಿನೇ ದಿನೇ ಏಕ ಭಾರತ – ಶ್ರೇಷ್ಠ ಭಾರತ(ಒಂದು ಭಾರತ – ಉತ್ತಮ ಭಾರತ) ಭಾವನೆಯನ್ನು ಬಲವರ್ಧನೆಗೊಳಿಸಬೇಕಿದೆ.
ಮಿತ್ರರೇ,
ಕಳೆದ 100 ವರ್ಷಗಳಲ್ಲಿ ಎಎಂಯು ವಿಶ್ವದ ಹಲವು ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಉರ್ದು, ಅರೆಬಿಕ್ ಮತ್ತು ಪರ್ಷಿಯನ್ ಭಾಷೆಗಳಲ್ಲಿನ ಸಂಶೋಧನೆ ಮತ್ತು ಇಸ್ಲಾಮಿಕ್ ಸಾಹಿತ್ಯದ ಸಂಶೋಧನೆ ಇಡೀ ಇಸ್ಲಾಮಿಕ್ ಜಗತ್ತಿಗೆ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಕ್ಕೆ ಹೊಸ ಶಕ್ತಿಯನ್ನು ನೀಡಿದೆ. ಇಲ್ಲಿ ಸುಮಾರು 1000 ವಿದೇಶಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಎಂದು ನಾನು ಕೇಳಲ್ಪಟ್ಟಿದ್ದೇನೆ. ಆ ವಿದ್ಯಾರ್ಥಿಗಳು ಇಲ್ಲಿ ಏನು ಉತ್ತಮವಾದುದು, ದೇಶದಲ್ಲಿನ ಉತ್ತಮವಾದುದನ್ನು ಮತ್ತು ದೇಶದ ಸಾಮರ್ಥ್ಯದ ನೆನಪುಗಳನ್ನು ತಮ್ಮ ದೇಶಗಳಿಗೆ ಕೊಂಡೊಯ್ಯುವಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಇದೆ. ಏಕೆಂದರೆ ಅವರು ಎಎಂಯುವಿನಲ್ಲಿ ಏನು ಕಲಿಯುತ್ತಾರೋ ಅದನ್ನು ಆಧರಿಸಿ ಭಾರತದ ರಾಷ್ಟ್ರೀಯ ಹೆಗ್ಗುರುತಿನ ಜೊತೆ ಸಂಪರ್ಕ ಬೆಸೆಯಲಿದ್ದಾರೆ. ಹಾಗಾಗಿ ನಿಮ್ಮ ಸಂಸ್ಥೆಗೆ ಒಂದು ರೀತಿಯಲ್ಲಿ ಎರಡೆರಡು ಜವಾಬ್ದಾರಿ ಇದೆ.
ನೀವು ನಿಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ನಿಖರವಾಗಿ ನಿಮ್ಮ ಜವಾಬ್ದಾರಿಯನ್ನೂ ನಿರ್ವಹಿಸಬೇಕು. ನೀವು ಒಂದೆಡೆ ನಿಮ್ಮ ವಿಶ್ವವಿದ್ಯಾಲಯದ ಶಕ್ತಿಯನ್ನು ಮರು ಪರಿಷ್ಕರಿಸಿಕೊಳ್ಳಬೇಕಿದೆ ಮತ್ತು ಮತ್ತೊಂದೆಡೆ ರಾಷ್ಟ್ರ ನಿರ್ಮಾಣದ ನಿಮ್ಮ ಕರ್ತವ್ಯವನ್ನು ನಿರಂತರವಾಗಿ ಈಡೇರಿಸಬೇಕು. ಎಎಂಯು ಜೊತೆ ಸಂಬಂಧ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಯಲಿದ್ದಾರೆ ಎಂಬ ವಿಶ್ವಾಸ ನನಗಿದೆ. ನಾನು ಸರ್ ಸೈಯದ್ ಅವರು ಹೇಳಿದ್ದ ಒಂದು ಸಂಗತಿಯನ್ನು ನೆನಪು ಮಾಡಲು ಬಯಸುತ್ತೇನೆ. ಅವರು “ಯಾವುದೇ ವ್ಯಕ್ತಿಯ ಮೊದಲ ಮತ್ತು ಪರಮೋಚ್ಛ ಕರ್ತವ್ಯ ಎಂದರೆ ಆತ ಯಾವುದೇ ಜಾತಿ, ನಂಬಿಕೆ ಅಥವಾ ಧರ್ಮದ ಬೇಧ-ಭಾವ ಮಾಡದೆ ದೇಶದ ಜನರ ಕಲ್ಯಾಣಕ್ಕಾಗಿ ಕರ್ತವ್ಯ ನಿರ್ವಹಿಸುವುದು” ಎಂದು ಹೇಳಿದ್ದರು.
ಮಿತ್ರರೇ,
ಅದನ್ನು ವಿಸ್ತರಿಸುತ್ತಾ ಸರ್ ಸೈಯದ್ ಅವರು ಒಂದು ಉದಾಹರಣೆಯನ್ನೂ ಸಹ ನೀಡಿದ್ದರು. ಅವರು “ಮಾನವ ಜೀವನ ಆರೋಗ್ಯವಾಗಿರಬೇಕಾದರೆ ದೇಹದ ಪ್ರತಿಯೊಂದು ಭಾಗವೂ ಆರೋಗ್ಯದಿಂದಿರಬೇಕು. ಅಂತೆಯೇ ಪ್ರತಿಯೊಂದು ಹಂತದಲ್ಲೂ ದೇಶದ ಅಭಿವೃದ್ಧಿಯಾಗಬೇಕಾದರೆ ಅದರ ಏಳಿಗೆಯೂ ಅತ್ಯಗತ್ಯವಾಗಿದೆ”.
ಮಿತ್ರರೇ,
ದೇಶ ಇಂದು, ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬ ಪ್ರಜೆಯೂ ಅಭಿವೃದ್ಧಿಯ ಫಲದ ಪ್ರಯೋಜನವನ್ನು ಪಡೆಯುವಂತಹ ದಿಕ್ಕಿನಲ್ಲಿ ಸಾಗುತ್ತಿದೆ. ದೇಶ ಇಂದು ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಗೂ ಖಾತ್ರಿಪಡಿಸಿರುವ ತನ್ನ ಹಕ್ಕುಗಳನ್ನು ಪಡೆಯುವಂತಹ ದಿಕ್ಕಿನಲ್ಲಿ ಸಾಗುತ್ತಿದೆ. ಇಂದು ದೇಶದಲ್ಲಿ ಯಾವುದೇ ವ್ಯಕ್ತಿ ಧರ್ಮದ ಕಾರಣಕ್ಕಾಗಿ ಹಿಂದೆ ಬೀಳುವಂತಹ ಸ್ಥಿತಿ ಇಲ್ಲ, ಪ್ರತಿಯೊಬ್ಬರಿಗೂ ಮುಂದುವರಿಯಲು ಸಮಾನ ಅವಕಾಶಗಳು ಲಭ್ಯವಾಗುತ್ತಿವೆ ಮತ್ತು ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ಸಾಕಾರ ಮಾಡಿಕೊಳ್ಳಬಹುದು, ಅದಕ್ಕೆ ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಆಧಾರವಾಗಿದೆ. ಈ ಸಂಕಲ್ಪ ದೇಶದ ಉದ್ದೇಶಗಳು ಮತ್ತು ನೀತಿಗಳನ್ನು ಪ್ರತಿಬಿಂಬಿಸುತ್ತದೆ. ಇಂದು ದೇಶದ ಬಡ ಜನರಿಗಾಗಿ ರೂಪಿಸುತ್ತಿರುವ ಯೋಜನೆಗಳು ಯಾವುದೇ ಧರ್ಮ ಅಥವಾ ನಂಬಿಕೆಯ ತಾರತಮ್ಯ ಮಾಡದೆ ಪ್ರತಿಯೊಂದು ವರ್ಗವನ್ನೂ ತಲುಪುತ್ತಿವೆ.
ಯಾವುದೇ ಬೇಧ-ಭಾವವಿಲ್ಲದೆ 40 ಕೋಟಿಗೂ ಅಧಿಕ ಬಡವರ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಯಾವುದೇ ತಾರತಮ್ಯವಿಲ್ಲದೆ ಎರಡು ಕೋಟಿಗೂ ಅಧಿಕ ಬಡವರಿಗೆ ಪಕ್ಕಾ ಮನೆಗಳನ್ನು ನೀಡಲಾಗಿದೆ. ಎಂಟು ಕೋಟಿಗೂ ಅಧಿಕ ಮಹಿಳೆಯರಿಗೆ ಯಾವುದೇ ತಾರತಮ್ಯವಿಲ್ಲದೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಯಾವುದೇ ಬೇಧ-ಭಾವವಿಲ್ಲದೆ 80 ಕೋಟಿಗೂ ಅಧಿಕ ದೇಶವಾಸಿಗಳಿಗೆ ಉಚಿತ ಆಹಾರವನ್ನು ಖಾತ್ರಿಪಡಿಸಲಾಯಿತು. ಆಯುಷ್ಮಾನ್ ಯೋಜನೆ ಅಡಿ ಸುಮಾರು 50 ಕೋಟಿ ಜನರಿಗೆ ಯಾವುದೇ ತಾರತಮ್ಯವಿಲ್ಲದೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಗೆ ಅವಕಾಶ ನೀಡಲಾಗಿತ್ತು. ದೇಶಕ್ಕೆ ಬೇಕಾಗಿರುವುದು ಪ್ರತಿಯೊಬ್ಬ ಪ್ರಜೆಯೂ ತನ್ನ ಫಲವನ್ನು ಪಡೆಯಬೇಕು ಎಂಬುದಾಗಿದೆ. ನಮ್ಮ ಸರ್ಕಾರ ಅದೇ ಸ್ಫೂರ್ತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.
ಮಿತ್ರರೇ,
ಕೆಲವು ದಿನಗಳ ಹಿಂದೆ ನಾನು ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿಯನ್ನು ಭೇಟಿ ಮಾಡಿದ್ದೆ, ಅವರೊಬ್ಬ ಇಸ್ಲಾಮಿಕ್ ವಿದ್ವಾಂಸರು. ಅವರು ನನಗೆ ಒಂದು ಆಸಕ್ತಿಕರ ಸಂಗತಿಯನ್ನು ಹೇಳಿದರು. ನಾನು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಸ್ವಚ್ಛ ಭಾರತ್ ಮಿಷನ್ ಅಡಿ ದೇಶದಲ್ಲಿ 10 ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಿಸಿದಾಗ ಅದರಿಂದ ಪ್ರತಿಯೊಬ್ಬರಿಗೂ ಪ್ರಯೋಜನವಾಯಿತು. ಈ ಶೌಚಾಲಯಗಳನ್ನು ಯಾವುದೇ ತಾರತಮ್ಯವಿಲ್ಲದೆ ನಿರ್ಮಿಸಲಾಗಿದೆ. ಆದರೆ ಒಂದು ಸಂಗತಿಯನ್ನು ಇಲ್ಲಿ ವಿವರವಾಗಿ ಚರ್ಚಿಸಿಲ್ಲ ಅಥವಾ ಶೈಕ್ಷಣಿಕ ಜಗತ್ತು ಆ ಬಗ್ಗೆ ಅಷ್ಟೊಂದು ಗಮನಹರಿಸಿಲ್ಲ. ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಪ್ರತಿಯೊಬ್ಬ ವಿದ್ಯಾರ್ಥಿಯೂ ಆ ಬಗ್ಗೆ ಗಮನಹರಿಸಬೇಕು ಎಂದು ನಾನು ಬಯಸುತ್ತೇನೆ.
ಮಿತ್ರರೇ,
ಅದೊಂದು ಕಾಲವಿತ್ತು ಆಗ ನಮ್ಮ ದೇಶದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಲ್ಲಿ ಶಾಲೆಯಿಂದ ಹೊರಗುಳಿದವರ ಪ್ರಮಾಣ ಶೇ.70ಕ್ಕೂ ಅಧಿಕ ಪ್ರಮಾಣದಲ್ಲಿತ್ತು. ಶಿಕ್ಷಣವನ್ನು ಅರ್ಧದಲ್ಲೇ ತೊರೆಯುವುದರಿಂದ ಮುಸ್ಲಿಂ ಸಮಾಜದಲ್ಲಿ ಹೆಣ್ಣುಮಕ್ಕಳ ಪ್ರಗತಿಗೆ ಬಹುದೊಡ್ಡ ಅಡಚಣೆ ಉಂಟಾಗಿತ್ತು. ಆದರೆ 70 ವರ್ಷಗಳಲ್ಲಿ ಶೇ.70ಕ್ಕೂ ಅಧಿಕ ಮುಸ್ಲಿಂ ಹೆಣ್ಣು ಮಕ್ಕಳು ವ್ಯಾಸಂಗವನ್ನು ಪೂರ್ಣಗೊಳಿಸದಂತಹ ಸ್ಥಿತಿ ಇತ್ತು. ಇಂತಹ ಸಂದರ್ಭದಲ್ಲಿ ಸ್ವಚ್ಛ ಭಾರತ ಮಿಷನ್ ಆರಂಭವಾಯಿತು. ಗ್ರಾಮಗಳಲ್ಲಿ ಶೌಚಾಲಯಗಳು ನಿರ್ಮಾಣಗೊಂಡವು. ಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗಾಗಿಯೇ ಸರ್ಕಾರ ಸಮರೋಪಾದಿಯಲ್ಲಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಿತು. ಇಂದು ದೇಶದ ಮುಂದೆ ಎಂತಹ ಸ್ಥಿತಿ ಇದೆ ಗೊತ್ತೇ ? ಶೇ.70ಕ್ಕೂ ಅಧಿಕವಿದ್ದ ಮುಸ್ಲಿಂ ಹೆಣ್ಣುಮಕ್ಕಳ ಶಾಲೆಗಳಿಂದ ಹೊರಗುಳಿದವರ ಪ್ರಮಾಣ ಇದೀಗ ಶೇ.30ಕ್ಕೆ ಇಳಿಕೆಯಾಗಿದೆ.
ಹಿಂದೆ ಲಕ್ಷಾಂತರ ಮುಸ್ಲಿಂ ಹೆಣ್ಣು ಮಕ್ಕಳು ವ್ಯಾಸಂಗವನ್ನು ಕೈಬಿಡಲು ಶೌಚಾಲಯಗಳ ಕೊರತೆಯೇ ಕಾರಣವಾಗಿತ್ತು. ಇದೀಗ ಕಾಲ ಬದಲಾಗುತ್ತಿದೆ. ಕೇಂದ್ರ ಸರ್ಕಾರ ಶಿಕ್ಷಣದಿಂದ ಹೊರಗುಳಿಯವ ಮುಸ್ಲಿಂ ಹೆಣ್ಣು ಮಕ್ಕಳ ಪ್ರಮಾಣವನ್ನು ಕನಿಷ್ಠಕ್ಕೆ ಇಳಿಸುವ ಪ್ರಯತ್ನಗಳನ್ನು ಕೈಗೊಂಡಿದೆ. ನಿಮ್ಮ ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳಿಗಾಗಿ ಒಂದು ಬ್ರಿಜ್ ಕೋರ್ಸ್(ಸಂಪರ್ಕ ಸೇತು)ಅನ್ನು ನಡೆಸುತ್ತಿದೆ. ನಾನು ಮತ್ತೊಂದು ಸಂಗತಿಯನ್ನು ಕೇಳಿದೆ ಅದು ಅತ್ಯಂತ ಒಳ್ಳೆಯದು. ಎಎಂಯುವಿನಲ್ಲಿ ಮಹಿಳಾ ವಿದ್ಯಾರ್ಥಿಗಳ ಪ್ರಮಾಣ ಇದೀಗ ಶೇ.35ಕ್ಕೆ ಹೆಚ್ಚಳವಾಗಿರುವುದು. ನಾನು ನಿಮ್ಮೆಲ್ಲರನ್ನೂ ಅಭಿನಂದಿಸಲು ಬಯಸುತ್ತೇನೆ. ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಅವರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಅತ್ಯಂತ ಹೆಚ್ಚು ಗಮನವನ್ನು ಹರಿಸುತ್ತಿದೆ. ಕಳೆದ ಆರು ವರ್ಷಗಳಲ್ಲಿ ಸರ್ಕಾರದಿಂದ ಸುಮಾರು ಒಂದು ಕೋಟಿಗೂ ಅಧಿಕ ಮುಸ್ಲಿಂ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ.
ಮಿತ್ರರೇ,
ಎಎಂಯು ಸ್ಥಾಪನೆ ಹಿಂದಿನ ಒಂದು ಪ್ರಮುಖ ಆದ್ಯತೆ ಎಂದರೆ ಯಾವುದೇ ಲಿಂಗದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡಬಾರದು, ಪ್ರತಿಯೊಬ್ಬರಿಗೂ ಸಮಾನ ಹಕ್ಕಿದೆ. ದೇಶದ ಅಭಿವೃದ್ಧಿಯ ಪಾಲನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂಬುದಾಗಿದೆ. ಎಎಂಯುವಿನಲ್ಲಿ ಸಂಸ್ಥಾಪಕ ಕುಲಪತಿಯಾಗಿ ಬೇಗಂ ಸುಲ್ತಾನ್ ಅವರ ಹೊಣೆಗಾರಿಕೆ ವಹಿಸಿಕೊಂಡಿದ್ದರು ಎಂಬುದು ಭಿನ್ನವಾಗಿದೆ. 100 ವರ್ಷಗಳ ಹಿಂದೆ ಎಂತಹ ಪರಿಸ್ಥಿತಿ ಇತ್ತು. ಆಗ ಎಂತಹ ದೊಡ್ಡ ಕೆಲಸ ಆಗಿದೆ ಎಂಬುದನ್ನು ಊಹಿಸಿಕೊಳ್ಳಿ. ಆಗ ಆರಂಭವಾದ ಆಧುನಿಕ ಮುಸ್ಲಿಂ ಸಮಾಜ ನಿರ್ಮಾಣದ ಪ್ರಯತ್ನಗಳು ಮುಂದುವರಿದು ಇದೀಗ ಅನಿಷ್ಟ ತ್ರಿವಳಿ ತಲಾಖ್ ಪದ್ಧತಿ ಅಂತ್ಯವಾಗುವ ಸ್ಥಿತಿಯತ್ತ ಮುಂದುವರಿದಿದ್ದೇವೆ.
ಮಿತ್ರರೇ,
ಮಹಿಳೆ ಶಿಕ್ಷಣ ಪಡೆದರೆ ಇಡೀ ಕುಟುಂಬ ಶಿಕ್ಷಣ ಪಡೆದಂತೆ ಎಂಬ ಮಾತೊಂದು ಇದೆ, ಅದು ನಿಜ. ಕುಟುಂಬದ ಶಿಕ್ಷಣದ ಹೊರತಾಗಿಯೂ ಇದಕ್ಕೆ ಇನ್ನೂ ಆಳವಾದ ಅರ್ಥವಿದೆ. ಮಹಿಳೆ ಶಿಕ್ಷಿತಳಾದರೆ ಆಕೆ ತನ್ನ ಹಕ್ಕುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬಲ್ಲರು ಮತ್ತು ತನ್ನ ಭವಿಷ್ಯವನ್ನು ತಾನೇ ನಿರ್ಧರಿಸಿಕೊಳ್ಳುವರು ಎಂಬುದು. ಶಿಕ್ಷಣ, ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಬೆಳೆಸುತ್ತದೆ. ಉದ್ಯೋಗ ಮತ್ತು ಉದ್ಯಮಶೀಲತೆ ಆರ್ಥಿಕ ಸ್ವಾತಂತ್ರ್ಯವನ್ನು ತಂದುಕೊಡುತ್ತದೆ. ಆರ್ಥಿಕ ಸ್ವಾತಂತ್ರ್ಯದಿಂದಾಗಿ ಸಬಲೀಕರಣವಾಗುತ್ತದೆ. ಸಬಲೀಕರಣಗೊಂಡ ಮಹಿಳೆ ಪ್ರತಿಯೊಂದು ಹಂತದಲ್ಲೂ ಇತರರಂತೆ ಪ್ರತಿಯೊಂದು ನಿರ್ಧಾರಕ್ಕೂ ತನ್ನ ಕೊಡುಗೆಯನ್ನು ನೀಡುತ್ತಾರೆ. ಅದು ಕುಟುಂಬಕ್ಕೆ ಒಂದು ದಿಕ್ಕು ತೋರಿಸುವುದಾಗಿರಬಹುದು ಅಥವಾ ದೇಶಕ್ಕೆ ದಿಕ್ಕು ತೋರುವುದಾಗಿರಬಹುದು. ಇಂದು ನಾನು ನಿಮ್ಮೊಡನೆ ಮಾತನಾಡುತ್ತಿದ್ದೇನೆ ಹಾಗೂ ಇತರೆ ದೇಶದ ಇತರೆ ಶಿಕ್ಷಣ ಸಂಸ್ಥೆಗಳನ್ನು ನಾನು ಕೇಳುವುದೆಂದರೆ ಇನ್ನೂ ಹೆಚ್ಚು ಹೆಚ್ಚು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಮತ್ತು ಅವರಿಗೆ ಕೇವಲ ಶಿಕ್ಷಣವಲ್ಲ, ಉನ್ನತ ಶಿಕ್ಷಣ ನೀಡಿ ಎಂದು.
ಮಿತ್ರರೇ,
ಎಎಂಯು ತನ್ನ ಉನ್ನತ ಶಿಕ್ಷಣದ ಸಮಕಾಲೀನ ಪಠ್ಯಕ್ರಮದಿಂದಾಗಿ ಹಲವರ ಗಮನವನ್ನು ಸೆಳೆದಿದೆ. ನಿಮ್ಮ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಅಂತರ ಶಿಸ್ತೀಯ ವಿಷಯಗಳನ್ನು ಬೋಧಿಸಲಾಗುತ್ತಿದೆ. ಓರ್ವ ವಿದ್ಯಾರ್ಥಿ ವಿಜ್ಞಾನದಲ್ಲಿ ಜಾಣನಾಗಿದ್ದರೆ ಆತ ಇತಿಹಾಸವನ್ನೂ ಕೂಡ ಆನಂದಿಸುತ್ತಾನೆ. ಹಾಗಾಗಿ ಏಕೆ ಕೇವಲ ಒಂದೇ ಒಂದು ವಿಷಯ ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಎಂಬ ಕಡ್ಡಾಯವೇಕೆ ? ಅದಕ್ಕಾಗಿಯೇ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ. ಅದರಲ್ಲಿ 21ನೇ ಶತಮಾನದ ಭಾರತದ ಆಸಕ್ತಿಗಳನ್ನು ಮತ್ತು ವಿದ್ಯಾರ್ಥಿಗಳ ಅಗತ್ಯತೆಗಳನ್ನು ಪರಿಗಣಿಸಲಾಗಿದೆ. ರಾಷ್ಟ್ರ ಮೊದಲು ಎನ್ನುವ ಕರೆಯಂತೆ ನಮ್ಮ ದೇಶದ ಯುವಕರು ನಮ್ಮ ದೇಶವನ್ನು ಮುನ್ನಡೆಸಲು ಬದ್ಧತೆಯನ್ನು ತೋರುತ್ತಿದ್ದಾರೆ. ಹೊಸ ನವೋದ್ಯಮಗಳ ಮೂಲಕ ಆತ ದೇಶದ ಸವಾಲುಗಳನ್ನು ಎದುರಿಸುತ್ತಿದ್ದಾನೆ. ಕ್ರಾಂತಿಕಾರಿ ಯೋಚನೆ ಮತ್ತು ವೈಜ್ಞಾನಿಕ ಮನೋಭಾವ ಅವರ ಮೊದಲ ಆದ್ಯತೆಗಳಾಗಿವೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಭಾರತದ ಯುವಕರ ಈ ಆಶೋತ್ತರಗಳಿಗೆ ಆದ್ಯತೆಯನ್ನು ನೀಡುತ್ತಿದೆ. ನಾವೂ ಕೂಡ ಜಗತ್ತಿನ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ. ಹೊಸ ಶಿಕ್ಷಣ ನೀತಿಯಲ್ಲಿ ಹಲವು ಪ್ರವೇಶ ಮತ್ತು ನಿರ್ಗಮನ ಅಂಶಗಳನ್ನು ನೀಡಲಾಗಿದ್ದು, ಇದರಿಂದಾಗಿ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದ ಕುರಿತು ನಿರ್ಧಾರಗಳನ್ನು ಕೈಗೊಳ್ಳುವುದು ಸುಲಭವಾಗುತ್ತದೆ. ಪ್ರತಿಯೊಂದು ಭಾರಿ ನಿರ್ಗಮನ ಆಯ್ಕೆ ಮಾಡಿಕೊಂಡಾಗಲೂ ಅವರಿಗೆ ಸೂಕ್ತ ಪ್ರಮಾಣ ಪತ್ರಗಳು ಸಿಗಲಿವೆ. ಇಡೀ ಕೋರ್ಸ್ ನ ಶುಲ್ಕದ ಬಗ್ಗೆ ಚಿಂತಿಸದೆ ವಿದ್ಯಾರ್ಥಿಗಳು ತಮ್ಮ ನಿರ್ಧಾರಗಳನ್ನು ಕೈಗೊಳ್ಳಲು ಸ್ವತಂತ್ರರಾಗಿದ್ದಾರೆ.
ಮಿತ್ರರೇ,
ಉನ್ನತ ಶಿಕ್ಷಣದಲ್ಲಿ ಸೀಟುಗಳ ಸಂಖ್ಯೆ ಹೆಚ್ಚಳ ಮತ್ತು ಪ್ರವೇಶ ಹೆಚ್ಚಳಕ್ಕೆ ಸರ್ಕಾರ ನಿರಂತರವಾಗಿ ಕಾರ್ಯೋನ್ಮುಖವಾಗಿದೆ. 2014ರಲ್ಲಿ ನಮ್ಮ ದೇಶದಲ್ಲಿ 16 ಐಐಟಿಗಳು ಮಾತ್ರ ಇದ್ದವು, ಇಂದು 23 ಐಐಟಿಗಳಿವೆ. 2014ರಲ್ಲಿ ದೇಶದಲ್ಲಿ 9 ಐಐಐಟಿಗಳಿದ್ದವು, ಇಂದು 25 ಐಐಐಟಿಗಳಿವೆ. 2014ರಲ್ಲಿ 13 ಐಐಎಂಗಳಿದ್ದವು, ಇಂದು 20 ಐಐಎಂಗಳಿವೆ. ವೈದ್ಯಕೀಯ ಶಿಕ್ಷಣದಲ್ಲಿ ಸಾಕಷ್ಟು ಕೆಲಸವನ್ನು ಮಾಡಲಾಗಿದೆ. ಆರು ವರ್ಷಗಳ ವರೆಗೆ ದೇಶದಲ್ಲಿ ಕೇವಲ 7 ಏಮ್ಸ್ ಗಳಿದ್ದವು. ಇಂದು ದೇಶದಲ್ಲಿ ಏಮ್ಸ್ ಗಳ ಸಂಖ್ಯೆ 22ಕ್ಕೇರಿದೆ. ಶಿಕ್ಷಣ, ಅದು ಆನ್ ಲೈನ್ ಅಥವಾ ಆಫ್ ಲೈನ್ ಆಗಿರಬಹುದು ಅದು ಪ್ರತಿಯೊಬ್ಬರನ್ನೂ ಸಮಾನವಾಗಿ ತಲುಪಬೇಕು ಮತ್ತು ಎಲ್ಲರ ಜೀವನವನ್ನು ಬದಲಿಸಬೇಕು.ನಾವು ಆ ಗುರಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ.
ಮಿತ್ರರೇ,
ಎಎಂಯು 100 ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ ನಿಮ್ಮಂತಹ ಯುವ ಪಾಲುದಾರರಿಂದ ನಾನು ಕೆಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇನೆ. ಈ 100 ವರ್ಷಗಳ ಸಂದರ್ಭದಲ್ಲಿ ಎಎಂಯುವಿನ 100 ಹಾಸ್ಟೆಲ್ ಗಳಲ್ಲಿ ಏಕೆ ನೀವು ಪಠ್ಯೇತರ ಚಟುವಟಿಕೆಗಳನ್ನು ಕೈಗೊಳ್ಳಬಾರದು, ಈ ಎಲ್ಲ ಚಟುವಟಿಕೆಗಳು ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವುದಕ್ಕೆ ಏಕೆ ಸಂಯೋಜಿಸಿಕೊಳ್ಳಬಾರದು. ಎಎಂಯುನಲ್ಲಿ ಭಾರೀ ಪ್ರಮಾಣದ ಆವಿಷ್ಕಾರಿ ಮತ್ತು ಸಂಶೋಧನಾ ಆಧಾರಿತ ಪ್ರತಿಭೆ ಇವೆ. ಹಾಸ್ಟೆಲ್ ವಿದ್ಯಾರ್ಥಿಗಳು ಏಕೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸಂಶೋಧನೆ ಮಾಡಬಾರದು ಮತ್ತು ಯಾರ ಬಗ್ಗೆ ಹೆಚ್ಚು ಮಾಹಿತಿ ಇಲ್ಲವೋ ಅಂತಹವರ ಜೀವನ ಸಂಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಏಕೆ ದೇಶದ ಮುಂದೆ ಮಂಡಿಸಬಾರದು. ಕೆಲವು ವಿದ್ಯಾರ್ಥಿಗಳು ಇಂತಹ ಶ್ರೇಷ್ಠ ವ್ಯಕ್ತಿಗಳ ಜನ್ಮಸ್ಥಳಗಳಿಗೆ ಭೇಟಿ ನೀಡಬೇಕು ಮತ್ತು ಅವರ ಕುಟುಂಬದವರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಬೇಕು. ಕೆಲವು ವಿದ್ಯಾರ್ಥಿಗಳು ಆನ್ ಲೈನ್ ಸಂಪನ್ಮೂಲದ ಮೂಲಕ ಹೆಚ್ಚಿನ ಶೋಧ ಕಾರ್ಯ ಮಾಡಬೇಕು. ಉದಾಹರಣೆಗೆ 75 ಹಾಸ್ಟೆಲ್ ಗಳ, ಪ್ರತಿಯೊಂದು, ಪ್ರತಿಯೊಬ್ಬ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸಂಶೋಧನಾ ದಾಖಲೆಗಳನ್ನು ಸಂಗ್ರಹಿಸಬಹುದಲ್ಲವೇ. ಅಂತೆಯೇ 25 ಹಾಸ್ಟೆಲ್ ಗಳು ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರ ಬಗ್ಗೆ ಏಕೆ ಸಂಶೋಧನೆ ನಡೆಸಬಾರದು.
ದೇಶಕ್ಕಾಗಿ ಎಎಂಯು ವಿದ್ಯಾರ್ಥಿಗಳು ಮಾಡಬಹುದಾದಂತಹ ಮತ್ತೊಂದು ಕಾರ್ಯವಿದೆ. ಎಎಂಯುವಿನಲ್ಲಿ ದೇಶದ ಅತ್ಯಂತ ಅಮೂಲ್ಯವಾದ ಪುರಾತನ ಹಸ್ತ ಪ್ರತಿಗಳಿವೆ. ಅವು ನಮ್ಮ ಸಾಂಸ್ಕೃತಿಕ ಪರಂಪರೆಗಳಾಗಿವೆ. ಅವುಗಳನ್ನು ತಂತ್ರಜ್ಞಾನದ ಮೂಲಕ ಡಿಜಿಟಲ್ ಅಥವಾ ವರ್ಚುವಲ್ ರೂಪದಲ್ಲಿ ಇಡೀ ಜಗತ್ತಿಗೆ ಪರಿಚಯಿಸಬೇಕಾಗಿದೆ. ಹಾಗಾಗಿ ನಾನು ಎಎಂಯುವಿನ ಅತಿ ದೊಡ್ಡ ಹಳೆಯ ವಿದ್ಯಾರ್ಥಿಗಳ ಜಾಲವನ್ನು ನವಭಾರತ ನಿರ್ಮಾಣದ ಈ ಕಾರ್ಯದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡುತ್ತೇನೆ. ಸ್ವಾವಲಂಬಿ ಭಾರತದ ಅಭಿಯಾನ ಯಶಸ್ವಿಯಾಗಲು, ಸ್ಥಳೀಯ ಉತ್ಪನ್ನಗಳಿಗೆ ದನಿಯಾಗುವ ಅಭಿಯಾನ ಯಶಸ್ಸಿಗೆ ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಎಎಂಯು ಮತ್ತು ಎಎಂಯು ಮಾಜಿ ವಿದ್ಯಾರ್ಥಿಗಳಿಂದ ಸಲಹೆಗಳು ಬಂದರೆ ನನಗೆ ಅದು ಸಂತೋಷವಾಗುತ್ತದೆ.
ಮಿತ್ರರೇ,
ಇಂದು ಇಡೀ ಜಗತ್ತಿನ ಗಮನ ಭಾರತದದತ್ತ ನೆಟ್ಟಿದೆ. ಈ ಶತಮಾನವನ್ನು ಭಾರತದ ಶತಮಾನವೆಂದು ಬಣ್ಣಿಸಲಾಗುತ್ತಿದೆ. ಆದ್ದರಿಂದ ಭಾರತ ಹೇಗೆ ಆ ಗುರಿ ಸಾಧನೆಯತ್ತ ಮುನ್ನಡೆಯುತ್ತದೆ ಎಂಬ ಕುತೂಹಲ ಇಡೀ ಜಗತ್ತಿನಾದ್ಯಂತ ನಿರ್ಮಾಣವಾಗಿದೆ. ಹಾಗಾಗಿ ಇಂದು ನಮ್ಮೆಲ್ಲರ ಏಕೈಕ ಮತ್ತು ಒಂದೇ ಪ್ರಮುಖ ಗುರಿ ಎಂದರೆ ನಾವು ಹೇಗೆ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಬಹುದು ಎಂಬುದು. ನಾವು ಎಲ್ಲಿ ಹುಟ್ಟಿದ್ದೇವೆ, ಯಾವ ಕುಟುಂಬದಲ್ಲಿ ಹುಟ್ಟಿದ್ದೇವೆ, ಯಾವ ಧರ್ಮದಲ್ಲಿ ಬೆಳೆದಿದ್ದೇವೆ ಇದ್ಯಾವುದೂ ಮುಖ್ಯವಲ್ಲ. ಮುಖ್ಯವಾದ ಸಂಗತಿ ಎಂದರೆ ದೇಶದ ಪ್ರತಿಯೊಬ್ಬ ಪ್ರಜೆಯ ಆಶೋತ್ತರಗಳೇನು ಮತ್ತು ದೇಶದ ಆಶೋತ್ತರ ಜೊತೆ ಅವುಗಳನ್ನು ಸೇರಿಸುವ ನಿಟ್ಟಿನಲ್ಲಿ ಪ್ರಯತ್ನಗಳೇನು ಎಂಬುದು. ಇದಕ್ಕಾಗಿ ಭದ್ರ ಬುನಾದಿಯನ್ನು ಹಾಕಿದರೆ ಆನಂತರ ಗುರಿಯನ್ನು ತಲುಪುವುದು ಸುಲಭವಾಗುತ್ತದೆ.
ಮಿತ್ರರೇ,
ಸಮಾಜದಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳು ಇವೆ. ಇವು ಸಹಜ ಕೂಡ. ಆದರೆ ರಾಷ್ಟ್ರೀಯ ಗುರಿಗಳ ಸಾಧನೆಯ ವಿಚಾರಕ್ಕೆ ಬಂದಾಗ ಪ್ರತಿಯೊಂದು ಭಿನ್ನಾಭಿಪ್ರಾಯವನ್ನು ಬದಿಗೊತ್ತಬೇಕಾಗುತ್ತದೆ. ನೀವೆಲ್ಲಾ ಯುವ ಸಹೋದ್ಯೋಗಿಗಳು, ಈ ಮನೋಭಾವದಿಂದ ಮುಂದುವರಿದರೆ ನಾವು ಸಾಧಿಸಲಾಗದಂತಹ ಯಾವುದೇ ಗುರಿ ಇರುವುದಿಲ್ಲ. ಅದು ಶಿಕ್ಷಣ ಆರ್ಥಿಕ ಅಭಿವೃದ್ಧಿ, ಉತ್ತಮ ಜೀವನ, ಅವಕಾಶಗಳು, ಮಹಿಳಾ ಹಕ್ಕುಗಳು, ಭದ್ರತೆ, ರಾಷ್ಟ್ರೀಯತೆ ಇವೇ ಮೊದಲಾದವು ಪ್ರತಿಯೊಬ್ಬ ಪ್ರಜೆಗೂ ಅತ್ಯಗತ್ಯವಾಗಿದೆ. ಇವೆಲ್ಲಾ ವಿಚಾರಗಳ ಕುರಿತಂತೆ ನಾವು ನಮ್ಮ ರಾಜಕೀಯ ಅಥವಾ ತಾತ್ವಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಒಪ್ಪಿಕೊಳ್ಳಲಾಗದೇ ಇರದು. ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಈ ವಿಷಯಗಳ ಬಗ್ಗೆ ನಾನು ಮಾತನಾಡುವುದು ಅತ್ಯಂತ ಅವಶ್ಯಕವಾಗಿದೆ. ಏಕೆಂದರೆ ಹಲವು ಸ್ವಾತಂತ್ರ್ಯ ಹೋರಾಟಗಾರರು ಇಲ್ಲಿಂದ ಬಂದವರು. ಅವರು ಈ ನೆಲದಿಂದ ಬಂದವರು. ಈ ಸ್ವಾತಂತ್ರ್ಯ ಹೋರಾಟಗಾರರಿಗೆ ತಮ್ಮದೇ ಆದ ಕುಟುಂಬ, ಸಮಾಜ, ಆದರ್ಶಗಳಿದ್ದವು. ಆದರೂ ಅವರಿಗೆ ತಮ್ಮದೇ ಆದ ಅಭಿಪ್ರಾಯಗಳೂ ಇದ್ದವು. ಆದರೆ ಗುಲಾಮಗಿರಿಯಿಂದ ಸ್ವಾತಂತ್ರ್ಯದ ವಿಚಾರ ಬಂದಾಗ ಎಲ್ಲ ಆದರ್ಶಗಳು ಒಗ್ಗೂಡಿ ಸ್ವಾತಂತ್ರ್ಯದ ಗುರಿಯೊಂದಿಗೆ ವಿಲೀನಗೊಂಡವು.
ಮಿತ್ರರೇ,
ಸ್ವಾಂತ್ರ್ಯಕ್ಕಾಗಿ ನಮ್ಮ ಪೂರ್ವಜರು ಏನು ಮಾಡಿದರೋ ಇದೀಗ ಯುವಜನತೆ ಕೂಡ ಅದೇ ರೀತಿ ನವಭಾರತ ನಿರ್ಮಾಣಕ್ಕೆ ಕಾರ್ಯೋನ್ಮುಖವಾಗಬೇಕಿದೆ. ಸ್ವಾತಂತ್ರ್ಯಕ್ಕಾಗಿ ಒಗ್ಗೂಡಿ ಹೋರಾಡಿದ್ದಂತೆ, ಇದೀಗ ನವಭಾರತ ನಿರ್ಮಾಣಕ್ಕೆ ನಾವೆಲ್ಲರೂ ಒಂದೇ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಬೇಕಿದೆ. ನವಭಾರತ ಎಲ್ಲ ವಿಧದಲ್ಲೂ ಸ್ವಾವಲಂಬಿಯಾದರೆ ದೇಶದ 130ಕ್ಕೂ ಕೋಟಿಗೂ ಅಧಿಕ ವಾಸಿಗಳಿಗೆ ಪ್ರಯೋಜನವಾಗಲಿದೆ. ಈ ಸಮಾಲೋಚನೆಗಳು ಸಮಾಜದ ಪ್ರತಿಯೊಂದು ಭಾಗಕ್ಕೂ ತಲುಪಬೇಕು. ನೀವು ಆ ಕೆಲಸವನ್ನು ಮಾಡಬಹುದು. ನಿಮ್ಮಂತಹ ಯುವ ಚಾಂಪಿಯನ್ ಗಳು ಮಾತ್ರ ಈ ಕೆಲಸ ಮಾಡಬಹುದಾಗಿದೆ.
ಮಿತ್ರರೇ,
ನಾವು ರಾಜಕಾರಣ ಸಮಾಜದ ಅತ್ಯಂತ ಪ್ರಮುಖ ಭಾಗ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಅಲ್ಲದೆ ರಾಜಕಾರಣ ಮಾತ್ರವಲ್ಲದೆ ಸಮಾಜದಲ್ಲಿ ಇತರೆ ವಿಷಯಗಳೂ ಸಹ ಇರುತ್ತವೆ. ಯಾವುದೇ ದೇಶದ ಸಮಾಜ, ರಾಜಕಾರಣ ಮತ್ತು ಶಕ್ತಿಗಿಂತ ಅತಿ ದೊಡ್ಡ ಹಾಗೂ ಸಮಗ್ರವಾಗಿ ಇರುತ್ತದೆ. ರಾಜಕಾರಣವನ್ನೂ ಮೀರಿ ಸಮಾಜವನ್ನು ಮುಂದೆ ಕೊಂಡೊಯ್ಯಲು ಸಾಕಷ್ಟು ಅವಕಾಶಗಳಿವೆ. ಹೊಸ ಅವಕಾಶಗಳನ್ನು ಅನ್ವೇಷಿಸುವುದೂ ಕೂಡ ಅಷ್ಟೇ ಮುಖ್ಯವಾಗಿದೆ. ಎಎಂಯುನಂತಹ ಕ್ಯಾಂಪಸ್ ಗಳಿಂದ ಈ ಕೆಲಸಗಳು ಆಗಲಿವೆ. ನೀವೆಲ್ಲರೂ ಅದನ್ನು ಮಾಡಬಹುದು.
ಮಿತ್ರರೇ,
ನವಭಾರತದ ಮುನ್ನೋಟದ ಬಗ್ಗೆ ನಾವು ಮಾತನಾಡಬೇಕಾದರೆ ರಾಷ್ಟ್ರದ ಅಭಿವೃದ್ಧಿ ಅತ್ಯಂತ ಪ್ರಮುಖವಾದುದುದು. ಅದನ್ನು ಸಮಾಜ ರಾಜಕೀಯ ಆಯಾಮದಿಂದ ನೋಡಬಾರದು. ನಾವು ಈ ದೊಡ್ಡ ಉದ್ದೇಶಕ್ಕಾಗಿ ಒಗ್ಗೂಡಿದಾಗ ಕೆಲವು ಶಕ್ತಿಗಳು ಆಗ ತೊಂದರೆ ನೀಡಬಹುದು. ಅಂತಹ ಶಕ್ತಿಗಳನ್ನು ಜಗತ್ತಿನ ಪ್ರತಿಯೊಂದು ಸಮಾಜದಲ್ಲೂ ಸಹ ಕಾಣಬಹುದಾಗಿದೆ. ಕೆಲವು ವ್ಯಕ್ತಿಗಳು ಇರುತ್ತಾರೆ ಅವರಿಗೆ ತಮ್ಮದೇ ಹಿತಾಸಕ್ತಿಗಳು ಮುಖ್ಯವಾಗಿರುತ್ತವೆ. ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಪ್ರತಿಯೊಂದು ಗಿಮಿಕ್ ಗಳನ್ನು ಅಳವಡಿಸಿಕೊಳ್ಳುತ್ತಾರೆ ಮತ್ತು ಎಲ್ಲ ಬಗೆಯ ನಕಾರಾತ್ಮಕತೆಯನ್ನು ಹರಡುತ್ತಿರುತ್ತಾರೆ. ಆದರೆ ನಮ್ಮ ಮನಸ್ಸಿನಲ್ಲಿ ನವಭಾರತ ನಿರ್ಮಾಣ ಪರಮೋಚ್ಛ ವಾಗಿರುವುದರಿಂದ ಅಂತಹ ಜನರ ಧನಿ ಸಹಜವಾಗಿಯೇ ಕುಗ್ಗಲಿದೆ.
ಮಿತ್ರರೇ,
ರಾಜಕಾರಣ ಕಾಯಬಹುದು ಆದರೆ ಸಮಾಜ ಕಾಯುವುದಿಲ್ಲ, ದೇಶದ ಅಭಿವೃದ್ಧಿ ಕೂಡ ಕಾಯುವುದಿಲ್ಲ. ಸಮಾಜದ ಯಾವುದೇ ವರ್ಗದ ಜನರೂ ಕೂಡ ಕಾಯುವುದಿಲ್ಲ. ಮಹಿಳೆಯರು, ಶೋಷಿತರು, ಸಂತ್ರಸ್ತರು, ದೌರ್ಜನ್ಯಕ್ಕೊಳಗಾದವರು ಅಭಿವೃದ್ಧಿಗಾಗಿ ಕಾಯಲಾಗುವುದಿಲ್ಲ. ಅತ್ಯಂತ ಪ್ರಮುಖವಾಗಿ ನಮ್ಮ ಯುವಕರು ಅಂದರೆ ನೀವೆಲ್ಲ ಕಾಯುವುದಿಕ್ಕೆ ಸಿದ್ಧರಿಲ್ಲ. ಕಳೆದ ಶತಮಾನದಲ್ಲಿ ಅತ್ಯಮೂಲ್ಯ ಸಮಯವನ್ನು ಈಗಾಗಲೇ ಭಿನ್ನಾಭಿಪ್ರಾಯಗಳಿಂದಾಗಿ ಕಳೆದುಕೊಂಡಿದ್ದೇವೆ. ಇದೀಗ ಕಳೆದುಕೊಳ್ಳುವುದಕ್ಕೆ ಸಮಯವಿಲ್ಲ. ಪ್ರತಿಯೊಬ್ಬರೂ ಒಗ್ಗೂಡಿ ಏಕೈಕ ಗುರಿಯೊಂದಿಗೆ ನವ ಭಾರತವನ್ನು, ಸ್ವಾವಲಂಬಿ ಭಾರತವನ್ನು ನಿರ್ಮಾಣ ಮಾಡಬೇಕಿದೆ.
ಮಿತ್ರರೇ,
1920ರಲ್ಲಿ ಅಂದರೆ 100 ವರ್ಷಗಳ ಹಿಂದೆ ಯುವಕರಿಗೆ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡುವ ಅವಕಾಶ ದೊರಕಿತ್ತು. ಅವರಿಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಲು, ತ್ಯಾಗ ಮಾಡಲು ಅವಕಾಶ ಸಿಕ್ಕಿತ್ತು. ಆ ಪೀಳಿಗೆಯ ತ್ಯಾಗ ಮತ್ತು ಪ್ರಯತ್ನಗಳ ಪರಿಣಾಮ ದೇಶ 1947ರಲ್ಲಿ ಸ್ವಾತಂತ್ರ್ಯವನ್ನು ಪಡೆಯಿತು. ನೀವು ಯುವ ಪೀಳಿಗೆ ಇದೀಗ ಸ್ವಾವಲಂಬಿ ಭಾರತ, ನವಭಾರತದ ಗುರಿಯನ್ನು ಸಾಧಿಸುವ ಅವಕಾಶವಿದೆ. ಆಗ ಸಮಯ 1920, ಈಗ 2020. 1920ರ ಬಳಿಕ 27 ವರ್ಷಗಳ ನಂತರ ದೇಶ ಸ್ವಾತಂತ್ರ್ಯಗಳಿಸಿತು. ಇದೀಗ 2020ರ ನಂತರ 27 ವರ್ಷಗಳ ಬಳಿಕ ಅಂದರೆ 2047 ನಿಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ವರ್ಷವಾಗಲಿದೆ.
2047ಕ್ಕೆ ಭಾರತ ಸ್ವಾತಂತ್ರ್ಯಗಳಿಸಿ 100 ವರ್ಷಗಳನ್ನು ಪೂರೈಸಲಿದೆ. ಈ ಐತಿಹಾಸಿಕ ಕ್ಷಣಕ್ಕೆ ನೀವು ಸಾಕ್ಷಿಯಾಗಲಿದ್ದೀರಿ. ಅಲ್ಲದೆ ಈ 27 ವರ್ಷಗಳಲ್ಲಿ ಆಧುನಿಕ ಭಾರತ ನಿರ್ಮಾಣದಲ್ಲಿ ನೀವು ಕೂಡ ಪಾಲುದಾರರಾಗಬೇಕಿದೆ. ಪ್ರತಿಯೊಂದು ಕ್ಷಣವೂ ನೀವು ದೇಶಕ್ಕಾಗಿ ಚಿಂತನೆ ನಡೆಸಬೇಕಿದೆ. ಪ್ರತಿಯೊಂದು ನಿರ್ಧಾರದಲ್ಲೂ ದೇಶಕ್ಕಾಗಿ ಯೋಚಿಸಬೇಕು. ನೀವು ಕೈಗೊಳ್ಳುವ ಪ್ರತಿಯೊಂದು ನಿರ್ಧಾರವೂ ದೇಶದ ಹಿತಾಸಕ್ತಿಯ ಆಧಾರದ ಮೇಲಿರಬೇಕು.
ನನಗೆ ವಿಶ್ವಾಸವಿದೆ. ನಾವೆಲ್ಲರೂ ಒಗ್ಗೂಡಿ ಸ್ವಾವಲಂಬಿ ಭಾರತದ ಕನಸನ್ನು ಸಾಕಾರಗೊಳಿಸುತ್ತೇವೆ ಎಂದು. ನಾವೆಲ್ಲರೂ ಒಗ್ಗೂಡಿ ದೇಶವನ್ನು ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯೋಣ ಎಎಂಯುವಿನ ಈ 100 ವರ್ಷಗಳ ವರ್ಷಾಚರಣೆ ಸಂದರ್ಭದಲ್ಲಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಅಲ್ಲದೆ ಈ 100 ವರ್ಷಗಳಲ್ಲಿ ಸಂಸ್ಥೆಯ ವೈಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿರಂತರವಾಗಿ ಶ್ರಮಿಸಿದ ಶ್ರೇಷ್ಠ ವ್ಯಕ್ತಿಗಳಿಗೆ ಗೌರವವನ್ನು ಸಲ್ಲಿಸುತ್ತೇನೆ. ಮತ್ತೆ ಇಂದಿನ ಈ ಸಂದರ್ಭದಲ್ಲಿ ಎಲ್ಲರಿಗೂ ಉತ್ತಮ ಭವಿಷ್ಯಕ್ಕಾಗಿ ನಾನು ಶುಭ ಕೋರುತ್ತೇನೆ. ಜಗತ್ತಿನ ಎಲ್ಲೆಡೆ ಇರುವ ಮಾಜಿ ವಿದ್ಯಾರ್ಥಿಗಳಿಗೂ ನಾನು ಶುಭಾಶಯ ಕೋರುತ್ತೇನೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಕೋರುತ್ತೇನೆ. ಎಎಂಯು ಭವಿಷ್ಯ ಉಜ್ವಲವಾಗಲಿ ಎಂದು ಶುಭ ಕೋರುತ್ತಾ ನಿಮ್ಮ ಕನಸುಗಳ ಸಾಕಾರಕ್ಕೆ ಮತ್ತು ನಿಮ್ಮ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಎಂದಿಗೂ ಹಿಂದೆ ಬೀಳುವುದಿಲ್ಲ ಎಂದು ನಾನು ಭರವಸೆಯನ್ನು ನೀಡುತ್ತೇನೆ.
ಈ ವಿಶ್ವಾಸದೊಂದಿಗೆ ತುಂಬಾ ತುಂಬಾ ಧನ್ಯವಾದಗಳು.
ಘೋಷಣೆ: ಪ್ರಧಾನಮಂತ್ರಿ ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು, ಇದು ಅದರ ಅಂದಾಜು ಅನುವಾದ.
Speaking at the Aligarh Muslim University. Watch. https://t.co/sNUWDAUHIH
— Narendra Modi (@narendramodi) December 22, 2020
अभी कोरोना के इस संकट के दौरान भी AMU ने जिस तरह समाज की मदद की, वो अभूतपूर्व है।
— PMO India (@PMOIndia) December 22, 2020
हजारों लोगों का मुफ्त टेस्ट करवाना, आइसोलेशन वार्ड बनाना, प्लाज्मा बैंक बनाना और पीएम केयर फंड में बड़ी राशि का योगदान देना, समाज के प्रति आपके दायित्वों को पूरा करने की गंभीरता को दिखाता है: PM
बीते 100 वर्षों में AMU ने दुनिया के कई देशों से भारत के संबंधों को सशक्त करने का भी काम किया है।
— PMO India (@PMOIndia) December 22, 2020
उर्दू, अरबी और फारसी भाषा पर यहाँ जो रिसर्च होती है, इस्लामिक साहित्य पर जो रिसर्च होती है, वो समूचे इस्लामिक वर्ल्ड के साथ भारत के सांस्कृतिक रिश्तों को नई ऊर्जा देती है: PM
आज देश जो योजनाएँ बना रहा है वो बिना किसी मत मजहब के भेद के हर वर्ग तक पहुँच रही हैं।
— PMO India (@PMOIndia) December 22, 2020
बिना किसी भेदभाव, 40 करोड़ से ज्यादा गरीबों के बैंक खाते खुले।
बिना किसी भेदभाव, 2 करोड़ से ज्यादा गरीबों को पक्के घर दिए गए।
बिना किसी भेदभाव 8 करोड़ से ज्यादा महिलाओं को गैस मिला: PM
बिना किसी भेदभाव आयुष्मान योजना के तहत 50 करोड़ लोगों को 5 लाख रुपए तक का मुफ्त इलाज संभव हुआ।
— PMO India (@PMOIndia) December 22, 2020
जो देश का है वो हर देशवासी का है और इसका लाभ हर देशवासी को मिलना ही चाहिए, हमारी सरकार इसी भावना के साथ काम कर रही है: PM
सरकार higher education में number of enrollments बढ़ाने और सीटें बढ़ाने के लिए भी लगातार काम कर रही है।
— PMO India (@PMOIndia) December 22, 2020
वर्ष 2014 में हमारे देश में 16 IITs थीं। आज 23 IITs हैं।
वर्ष 2014 में हमारे देश में 9 IIITs थीं। आज 25 IIITs हैं।
वर्ष 2014 में हमारे यहां 13 IIMs थे। आज 20 IIMs हैं: PM
Medical education को लेकर भी बहुत काम किया गया है।
— PMO India (@PMOIndia) December 22, 2020
6 साल पहले तक देश में सिर्फ 7 एम्स थे। आज देश में 22 एम्स हैं।
शिक्षा चाहे Online हो या फिर Offline, सभी तक पहुंचे, बराबरी से पहुंचे, सभी का जीवन बदले, हम इसी लक्ष्य के साथ काम कर रहे हैं: PM
बीते 100 वर्षों में AMU ने कई देशों से भारत के संबंधों को सशक्त करने का काम किया है।
— Narendra Modi (@narendramodi) December 22, 2020
इस संस्थान पर दोहरी जिम्मेदारी है - अपनी Respect बढ़ाने की और Responsibility निभाने की।
मुझे विश्वास है कि AMU से जुड़ा प्रत्येक व्यक्ति अपने कर्तव्यों को ध्यान में रखते हुए आगे बढ़ेगा। pic.twitter.com/LtA5AiPZCk
महिलाओं को शिक्षित इसलिए होना है ताकि वे अपना भविष्य खुद तय कर सकें।
— Narendra Modi (@narendramodi) December 22, 2020
Education अपने साथ लेकर आती है- Employment और Entrepreneurship.
Employment और Entrepreneurship अपने साथ लेकर आते हैं- Economic Independence.
Economic Independence से होता है- Empowerment. pic.twitter.com/PLbUio9jqs
हमारा युवा Nation First के आह्वान के साथ देश को आगे बढ़ाने के लिए प्रतिबद्ध है।
— Narendra Modi (@narendramodi) December 22, 2020
वह नए-नए स्टार्ट-अप्स के जरिए चुनौतियों का समाधान निकाल रहा है।
Rational Thinking और Scientific Outlook उसकी Priority है।
नई शिक्षा नीति में युवाओं की इन्हीं Aspirations को प्राथमिकता दी गई है। pic.twitter.com/JHr0lqyF90
AMU के सौ साल पूरा होने पर सभी युवा ‘पार्टनर्स’ से मेरी कुछ और अपेक्षाएं हैं... pic.twitter.com/qYGQTU3R3t
— Narendra Modi (@narendramodi) December 22, 2020
समाज में वैचारिक मतभेद होते हैं, यह स्वाभाविक है।
— Narendra Modi (@narendramodi) December 22, 2020
लेकिन जब बात राष्ट्रीय लक्ष्यों की प्राप्ति की हो तो हर मतभेद किनारे रख देना चाहिए।
नया भारत आत्मनिर्भर होगा, हर प्रकार से संपन्न होगा तो लाभ भी 130 करोड़ से ज्यादा देशवासियों का होगा। pic.twitter.com/esAsh9DTHv
सियासत और सत्ता की सोच से बहुत बड़ा, बहुत व्यापक किसी भी देश का समाज होता है।
— Narendra Modi (@narendramodi) December 22, 2020
पॉलिटिक्स से ऊपर भी समाज को आगे बढ़ाने के लिए बहुत Space होता है, जिसे Explore करते रहना बहुत जरूरी है। pic.twitter.com/iNSWFcpRxS