Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆರ್ಚ್‌ಬಿಷಪ್ ಮೊನ್ಸಿಂಜರ್ ಜಾರ್ಜ್ ಜಾಕೋಬ್ ಕೂವಕಾಡ್ ಅವರಿಗೆ ಕಾರ್ಡಿನಲ್ ಶ್ರೇಣಿ ಪ್ರದಾನ ಮಾಡಿದ ಪೋಪ್ ಫ್ರಾನ್ಸಿಸ್: ಪ್ರಧಾನಮಂತ್ರಿ


ಪೋಪ್ ಫ್ರಾನ್ಸಿಸ್ ಅವರಿಂದ ಪವಿತ್ರ ರೋಮನ್ ಕ್ಯಾಥೋಲಿಕ್ ಚರ್ಚ್‌ನ ಕಾರ್ಡಿನಲ್ ಶ್ರೇಣಿ ಪದವಿ ಪ್ರದಾನ ಪಡೆದ ಕೇರಳ ಮೂಲದ ಆರ್ಚ್‌ಬಿಷಪ್ ಮೊನ್ಸಿಂಜರ್ ಜಾರ್ಜ್ ಜಾಕೋಬ್ ಕೂವಕಾಡ್ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದ್ದಾರೆ. 

ಈ ಸಂತಸವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಶ್ರೀ ಮೋದಿ,

”ಭಾರತಕ್ಕೆ ಬಹಳ ಸಂತೋಷ ಮತ್ತು ಹೆಮ್ಮೆಯ ವಿಷಯ!  

ಪವಿತ್ರ ಪೋಪ್ ಫ್ರಾನ್ಸಿಸ್ ಅವರು ರೋಮನ್ ಕ್ಯಾಥೋಲಿಕ್ ಚರ್ಚ್‌ನ ಕಾರ್ಡಿನಲ್ ಪದವಿಯನ್ನು ಗೌರವಾನ್ವಿತ ಜಾರ್ಜ್ ಜಾಕೋಬ್ ಕೂವಕಾಡ್ ಅವರಿಗೆ ಪ್ರದಾನ ಮಾಡಿದ್ದು ನನಗೆ ಬಹಳ ಸಂತೋಷವಾಗಿದೆ. 

ಶ್ರೇಷ್ಠ ಜಾರ್ಜ್ ಕಾರ್ಡಿನಲ್ ಕೂವಕಾಡ್ ಅವರು ಭಗವಾನ್ ಯೇಸು ಕ್ರಿಸ್ತರ ಕಟ್ಟಾ ಅನುಯಾಯಿಯಾಗಿ ಮಾನವ ಜನಾಂಗದ ಸೇವೆಯಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರ ಮುಂದಿನ ಪಯಣಕ್ಕೆ ನನ್ನ ಶುಭಾಶಯಗಳು” ಎಂದು ಬರೆದಿದ್ದಾರೆ.

@Pontifex”

 

 

*****