Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಕಾಯಗಳನ್ನು ತರ್ಕಬದ್ಧಗೊಳಿಸಲು ಸಚಿವ ಸಂಪುಟದ ಅನುಮೋದನೆ


 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸ್ವಾಯತ್ತ ಕಾಯಗಳಾದ ಅಂದರೆ ರಾಷ್ಟ್ರೀಯ ಆರೋಗ್ಯ ನಿಧಿ (ಆರ್.ಎ.ಎನ್.) ಮತ್ತು ಜನಸಂಖ್ಯಾ ಸ್ಥಿರತಾ ಕೋಶ (ಜೆ.ಎಸ್.ಕೆ.)ಯನ್ನು ಮುಚ್ಚುವ ಮತ್ತು ಈ ಕಾರ್ಯಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಡಿಓಎಚ್ಎಫ್.ಡಬ್ಲು) ನಲ್ಲಿ ನಿಯೋಜಿಸಲು ಉದ್ದೇಶಿಸಿರುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಸ್ವಾಯತ್ತ ಕಾಯಗಳ ತರ್ಕಬದ್ಧೀಕರಣವು ಈ ಕಾಯಗಳ ಚಾಲ್ತಿಯಲ್ಲಿರುವ ಅಂಗರಚನೆಯಂತೆ ಅಂತರ ಸಚಿವಾಲಯದ ಸಮಾಲೋಚನೆ ಮತ್ತು ಪರಾಮರ್ಶೆಯನ್ನು ಒಳಗೊಂಡಿರುತ್ತದೆ. ಇದರ ಜಾರಿಗೆ ಕಾಲಮಿತಿ ಒಂದು ವರ್ಷವಾಗಿರುತ್ತದೆ.

 

ನಿಯೋಜಿತ ಕೇಂದ್ರ ಸರ್ಕಾರದ ಆಸ್ಪತ್ರೆಗಳಲ್ಲಿ ಬಡ ರೋಗಿಗಳು ಪಡೆಯುವ ಚಿಕಿತ್ಸೆಗೆ ವೈದ್ಯಕೀಯ ನೆರವು ಒದಗಿಸಲು ರಾಷ್ಟ್ರೀಯ ಆರೋಗ್ಯ ನಿಧಿ (ಆರ್.ಎ.ಎನ್) ಯನ್ನು ನೋಂದಾಯಿತ ಸೊಸೈಟಿಯಾಗಿ ಸ್ಥಾಪಿಸಲಾಗಿದೆ. ಪ್ರಕರಣಗಳ ಆಧಾರದ ಮೇಲೆ ನೆರವು ಒದಗಿಸಲು ಅಂಥ ಆಸ್ಪತ್ರೆಗಳ ವೈದ್ಯಕೀಯ ಸೂಪರಿಂಟೆಂಡೆಂಟ್ ಗಳ ಬಳಿ ಮುಂಗಡವನ್ನು ಇಡಲಾಗಿದೆ. ಡಿಓಎಚ್.ಎಫ್.ಡಬ್ಲ್ಯು. ಆಸ್ಪತ್ರೆಗಳಿಗೆ ನಿಧಿ ಒದಗಿಸುವುದರಿಂದ, ಸಹಾಯಧನವನ್ನು ಇಲಾಖೆಯಿಂದ ನೇರವಾಗಿ ಆಸ್ಪತ್ರೆಗಳಿಗೇ ನೀಡಲಾಗುತ್ತಿದೆ. ಹೀಗಾಗಿ ಆರ್.ಎ.ಎನ್. ಕಾರ್ಯಗಳು ಡಿಓಎಚ್.ಎಫ್.ಡಬ್ಲ್ಯು ಬಳಿ ಇವೆ. ಆರ್.ಎ.ಎನ್ ಸೊಸೈಟಿಯ ಆಡಳಿತ ಮಂಡಳಿಗಳು ಸೊಸೈಟಿಗಳ ನೋಂದಣಿ ಕಾಯಿದೆ, 1860 (ಎಸ್.ಆರ್.ಎ) ಯ ನಿಬಂಧನೆಗಳ ಪ್ರಕಾರ ಸ್ವಾಯತ್ತ ಕಾಯವಾಗಿ (ಎಬಿ) ವಿಸರ್ಜಿಸಬಹುದಾಗಿರುತ್ತದೆ. ಇದರ ಜೊತೆಗೆ ಆರೋಗ್ಯ ಸಚಿವಾಲಯದ ಕ್ಯಾನ್ಸರ್ ರೋಗಿಗಳ ನಿಧಿ (ಎಚ್.ಎಂ.ಸಿ.ಪಿ.ಎಫ್.)ಯನ್ನು ಕೂಡ ಇಲಾಖೆಗೆ ವರ್ಗಾಯಿಸಲಾಗುತ್ತದೆ. ಇದಕ್ಕೆ ಒಂದು ವರ್ಷದ ಕಾಲಾವಕಾಶದ ಅಗತ್ಯ ಇರುತ್ತದೆ.

 

ಜನಸಂಖ್ಯಾ ಸ್ಥಿರತಾ ಕೋಶ (ಜೆ.ಎಸ್.ಕೆ.)ವನ್ನು ಜನಸಂಖ್ಯೆ ಸ್ಥಿರತೆ ಕಾರ್ಯತಂತ್ರಗಳ ಬಗ್ಗೆ ಜಾಗೃತಿ ಮೂಡಿಸಲು 100 ಕೋಟಿ ರೂಪಾಯಿ ಕಾಪು ನಿಧಿಯ ಸಹಾಯಧನದೊಂದಿಗೆ 2003ರಲ್ಲಿ ಸ್ಥಾಪಿಸಲಾಯಿತು. ಜೆ.ಎಸ್.ಕೆ. ನಿರ್ದಿಷ್ಟ ಜನಸಂಖ್ಯೆಗಾಗಿ ಮತ್ತು ತನ್ನ ಕಡ್ಡಾಯ ಕಾರ್ಯಕ್ರಮದ ಭಾಗವಾಗಿ ವಿವಿಧ ಚಟುವಟಿಕೆಗಳನ್ನು ಆಯೋಜಿಸುತ್ತದೆ. ಜೆಎಸ್.ಕೆ.ಗೆ ಸಚಿವಾಲಯದಿಂದ ನಿರಂತರವಾಗಿ ಯಾವುದೇ ಹಣಕಾಸು ನೆರವು ಇರುವುದಿಲ್ಲ. ಜನಸಂಖ್ಯೆ ಸ್ಥಿರತೆಯ ಕಾರ್ಯತಂತ್ರಗಳಿಗೆ ಖಾಸಗಿ ಮತ್ತು ಸಾಂಸ್ಥಿಕ ಹಣಕಾಸು ನೆರವು ಬೇಕಿದ್ದು, ಅದನ್ನು ಜೆಎಸ್.ಕೆ. ಮೂಲಕ ಪಡೆಯಲಾಗುತ್ತಿದೆ. ಜೆ.ಎಸ್.ಕೆ. ಜನಸಂಖ್ಯೆ ಸ್ಥಿರತೆಯ ಕಾರ್ಯತಂತ್ರಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆಯಾದರೂ ಸ್ವಾಯತ್ತ ಕಾಯವಾಗಿ ಅದರ ಅಸ್ತಿತ್ವದ ಅಗತ್ಯವಿರುವುದಿಲ್ಲ. ಹೀಗಾಗಿ ಇದನ್ನು ಇಲಾಖೆಯ ನಿಧಿಯಿಂದಲೇ ನಿರ್ವಹಿಸಬಹುದಾದ ಕಾರಣ, ಸ್ವಾಯತ್ತ ಕಾಯವಾಗಿ ಜೆ.ಎಸ್.ಕೆ.ಯನ್ನು ಮುಚ್ಚಬಹುದಾಗಿದೆ.

 

ಹಿನ್ನೆಲೆ:   

ವೆಚ್ಚ ನಿರ್ವಹಣಾ ಆಯೋಗದ ಶಿಫಾರಸುಗಳ ಆಧಾರದ ಮೇಲೆ, ನೀತಿ ಆಯೋಗವು, ಸೊಸೈಟಿಗಳ ನೋಂದಣಿ ಕಾಯಿದೆ1860 (ಎಸ್.ಆರ್.ಎ) ಅಡಿಯಲ್ಲಿ ಮತ್ತು 1971 ರ ಡಿಒಎಚ್ಎಫ್.ಡಬ್ಲ್ಯೂ ಅಡಿಯಲ್ಲಿ ರಚನೆಯಾದ 19 ಸ್ವಾಯತ್ತ ಕಾಯಗಳ ಪರಾಮರ್ಶೆ ಕೈಗೊಂಡಿದ್ದು, ಅವುಗಳನ್ನು ತರ್ಕಬದ್ಧಗೊಳಿಸುವ ಶಿಫಾರಸುಗಳೊಂದಿಗೆ ಸಮಿತಿಗೆ ಸ್ವಾಯತ್ತ ಕಾಯಗಳ ಪರಾಮರ್ಶೆಯ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಸ್ವಾಯತ್ತ ಕಾಯಗಳ ಫಲಪ್ರದತೆಯ ದಕ್ಷತೆ, ಸಾಮರ್ಥ್ಯ, ಅವುಗಳ ಹಣ ಮತ್ತು ಮಾನವ ಶಕ್ತಿಯ ಬಳಕೆ, ಆಡಳಿತ ಮತ್ತು ಪ್ರಸಕ್ತ ನೀತಿ ಕಾರ್ಯಕ್ರಮಗಳ ಸನ್ನಿವೇಶದಲ್ಲಿ ಪ್ರಸಕ್ತತೆಯ ಸುಧಾರಣೆ ದೃಷ್ಟಿಯಿಂದ ಅವುಗಳ ಸುಧಾರಿತ ನಿಗಾ ಮತ್ತು ಪರಾಮರ್ಶೆಯ ಮತ್ತು ತರ್ಕಬದ್ಧೀಕರಣದ ಅಗತ್ಯವಿದೆ ಎಂಬುದು ಸರ್ಕಾರದ ಮುಖ್ಯ ಕಾಳಜಿಯಾಗಿದೆ. ಸಮಿತಿಯು ಆರ್.ಎ.ಎನ್ ಮತ್ತು ಜೆಎಸ್.ಕೆ.ಯನ್ನು ಮುಚ್ಚಲು ಮತ್ತು ಅವುಗಳ ಕಾರ್ಯವನ್ನು ಸಚಿವಾಲಯದಲ್ಲಿಯೇ ಉಳಿಸಲು ಶಿಫಾರಸು ಮಾಡಿದೆ.

 

****