Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆರೋಗ್ಯ ಕ್ಷೇತ್ರದಲ್ಲಿ ಭಾರತ ಮತ್ತು ಜರ್ಮನಿಯ ನಡುವೆ ನಿರ್ದಿಷ್ಟ ಉದ್ದೇಶದ ಜಂಟಿ ಘೋಷಣೆ (ಜೆಡಿಐ)ಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಜರ್ಮನಿಯ ನಡುವೆ ಆರೋಗ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ನಿರ್ದಿಷ್ಟ ಉದ್ದೇಶದ ಜಂಟಿ ಘೋಷಣೆ (ಜೆಡಿಐ)ಯ ಅಂಕಿತಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ಜೆಡಿಐಗೆ 2017ರ ಜೂನ್ 1ರಂದು ಅಂಕಿತ ಹಾಕಲಾಗಿತ್ತು.

ಜೆಡಿಐ ಈ ಕೆಳಕಂಡ ಕ್ಷೇತ್ರಗಳ ಸಹಕಾರವನ್ನು ಒಳಗೊಂಡಿದೆ :-

a)ಸ್ನಾತಕೋತ್ತರ ಶಿಕ್ಷಣ;

b) ವೈದ್ಯಕೀಯ ಸಿಬ್ಬಂದಿಯ ತರಬೇತಿ;

c) ಔಷಧ ಮತ್ತು ಔಷಧ ಆರ್ಥಿಕತೆ; ಮತ್ತು

d) ಆರೋಗ್ಯ ಆರ್ಥಶಾಸ್ತ್ರ.

ಈ ಸಹಕಾರದ ವಿವರವನ್ನು ವ್ಯಾಖ್ಯಾನಿಸಲು ಮತ್ತು ಜೆಡಿಐ ಅನುಷ್ಠಾನದ ಬಗ್ಗೆ ನಿಗಾ ವಹಿಸಲು ಜಂಟಿ ಕಾರ್ಯಪಡೆಯನ್ನು ಸ್ಥಾಪಿಸಲಾಗುತ್ತದೆ.

*****

AKT/VBA/