ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಆರೋಗ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಮೊರಕ್ಕೋ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ಎಂ.ಓ.ಯು ಈ ಕೆಳಗಿನ ಸಹಕಾರ ವಲಯಗಳ ವ್ಯಾಪ್ತಿ ಹೊಂದಿದೆ:-
i) ಮಕ್ಕಳ ಹೃದಯನಾಳದ ಕಾಯಿಲೆಗಳು ಮತ್ತು ಕ್ಯಾನ್ಸರ್ ಸೇರಿದಂತೆ ಸಾಂಕ್ರಾಮಿಕವಲ್ಲದ ರೋಗಗಳು;
ii)ಔಷಧ ನಿಯಂತ್ರಣ ಮತ್ತು ಔಷಧೀಯ ಗುಣಮಟ್ಟ ನಿಯಂತ್ರಣ;
iii) ಸಾಂಕ್ರಾಮಿಕ ರೋಗಗಳು;
iv) ತಾಯಿಯ, ಮಗುವಿನ ಮತ್ತು ನವಜಾತ ಶಿಶುವಿನ ಆರೋಗ್ಯ;
v)ಉತ್ತಮ ಪದ್ಧತಿಗಳ ವಿನಿಮಯಕ್ಕಾಗಿ ಆಸ್ಪತ್ರೆಗಳ ಜೋಡಣೆ;
vi) ಆರೋಗ್ಯ ಸೇವೆಗಳು ಮತ್ತು ಆಸ್ಪತ್ರೆಗಳ ಆಡಳಿತ ಮತ್ತು ನಿರ್ವಹಣೆಯಲ್ಲಿ ತರಬೇತಿ;
vii) ಪರಸ್ಪರು ನಿರ್ಧರಿಸುವ ಯಾವುದೇ ಇತರ ಕ್ಷೇತ್ರದಲ್ಲಿನ ಸಹಕಾರ
ಸಹಕಾರದ ವಿವರಗಳನ್ನು ಸವಿಸ್ತಾರವಾಗಿ ತಿಳಿಸಲು ಮತ್ತು ಎಂ.ಓ.ಯು. ಜಾರಿಯ ಮೇಲೆ ನಿಗಾ ಇಡಲು ಕಾರ್ಯಪಡೆಯನ್ನು ಸ್ಥಾಪಿಸಲಾಗುತ್ತದೆ.