ಘನತೆವೆತ್ತರಾದಬೆನಿನ್ ಮತ್ತು ಸೆನೆಗಲ್ ಅಧ್ಯಕ್ಷರೇ, ಘನತೆವೆತ್ತ ಕೊಟೆ ಡಿ ಐವರಿಯ
ಉಪಾಧ್ಯಕ್ಷರೇ,
ಆಫ್ರಿಕಾ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರೇ,
ಆಫ್ರಿಕಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯವರೇ,
ಆಫ್ರಿಕಾ ಒಕ್ಕೂಟದ ಆಯುಕ್ತರೇ,
ನನ್ನ ಸಂಪುಟ ಸಹೋದ್ಯೋಗಿ ಶ್ರೀ. ಅರುಣ್ ಜೇಟ್ಲಿ ಅವರೇ,
ಗುಜರಾತ್ ಮುಖ್ಯಮಂತ್ರಿ ಶ್ರೀ. ವಿಜಯ್ ರೂಪಾನಿ ಅವರೇ,
ಆಫ್ರಿಕಾದ ಗೌರವಾನ್ವಿತ ಅತಿಥಿಗಳೇ ಮತ್ತು ಸೋದರ ಮತ್ತು ಸೋದರಿಯರೇ
ಮಹಿಳೆಯರೇ ಮತ್ತು ಮಹನೀಯರೇ
ನಾವು ಇಂದು ಗುಜರಾತ್ ರಾಜ್ಯದಲ್ಲಿ ಸಮಾವೇಶಗೊಂಡಿದ್ದೇವೆ. ಗುಜರಾತ್ ವಾಣಿಜ್ಯಕ್ಕೆ ಹೆಸರುವಾಸಿಯಾಗಿದೆ. ಅದೇ ರೀತಿ ಆಫ್ರಿಕಾದೊಂದಿಗೆ ಗುಜರಾತಿಯರ ಪ್ರೇಮವೂ ಜನಪ್ರಿಯವಾಗಿದೆ. ನಾನು ಒಬ್ಬ ಭಾರತೀಯನಾಗಿ ಮತ್ತು ಗುಜರಾತಿಯಾಗಿ ಈ ಸಭೆ ಭಾರತದಲ್ಲಿ ಅದರಲ್ಲೂ ಗುಜರಾತ್ ನಲ್ಲಿ ನಡೆಯುತ್ತಿರುವುದಕ್ಕೆ ಅತೀವ ಹರ್ಷಿತನಾಗಿದ್ದೇನೆ.
ಭಾರತವು ಆಫ್ರಿಕಾದೊಂದಿಗೆ ಬಲವಾದ ಬಾಂಧವ್ಯವನ್ನು ಹೊಂದಿದೆ. ಐತಿಹಾಸಿಕವಾಗಿ, ಪಶ್ಚಿಮ ಭಾರತದ ಅದರಲ್ಲೂ ಗುಜರಾತ್ ಮತ್ತು ಆಫ್ರಿಕಾದ ಪೂರ್ವ ಕರಾವಳಿಯ ಜನ ಪರಸ್ಪರರ ನಾಡಿನಲ್ಲಿ ನೆಲೆಸಿದ್ದಾರೆ. ಭಾರತದ ಸಿದ್ಧಿ ಜನರು ಪೂರ್ವ ಆಫ್ರಿಕಾದಿಂದ ಬಂದವರೆಂದು ಹೇಳಲಾಗುತ್ತದೆ. ಕೆನ್ಯಾ ಕರಾವಳಿಯ ಬೋಹ್ರಾ ಸಮುದಾಯ 12ನೇ ಶತಮಾನದಲ್ಲೇಅಲ್ಲಿ ನೆಲೆಸಿದ್ದಾರೆ. ವಾಸ್ಕೋಡ ಗಾಮ ಮಲಿಂದಿಯ ಗುಜರಾತಿ ನಾವಿಕನ ನೆರವಿನೊಂದಿಗೆ ಕ್ಯಾಲಿಕಟ್ ತಲುಪಿದ ಎಂದು ಹೇಳಲಾಗುತ್ತದೆ. ಗುಜರಾತ್ ನ ಹಡಗುಗಳು ಸರಕುಗಳನ್ನು ಎರಡೂ ದಿಕ್ಕಿಗೆ ಸಾಗಿಸಿವೆ. ಸಮಾಜದೊಂದಿಗಿನ ಪುರಾತನವಾದ ನಂಟು ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ. ಶ್ರೀಮಂತ ಸ್ವಾಹಿಲಿ ಭಾಷೆಯಲ್ಲಿ ಹಲವು ಹಿಂದಿ ಪದಗಳಿವೆ.
ವಾಸಾಹತುಶಾಹಿ ಕಾಲದಲ್ಲಿ, 32ಸಾವಿರ ಭಾರತೀಯರು ಮೊಬಾಸಾ ಉಗಾಂಡಾ ರೈಲು ಮಾರ್ಗ ನಿರ್ಮಿಸಲು ಕೆನ್ಯಾಗೆ ಬಂದಿದ್ದರು. ಹಲವರು ನಿರ್ಮಾಣದ ವೇಳೆ ತಮ್ಮ ಜೀವ ಕಳೆದುಕೊಂಡರು. ಸುಮಾರು 6 ಸಾವಿರ ಜನರು ಅಲ್ಲೇ ಉಳಿದು ತಮ್ಮ ಕುಟುಂಬದವರನ್ನೂ ಕರೆಸಿಕೊಂಡರು. ಹಲವರು ದುಕಾಸ್ ಎಂದು ಕರೆಯಲಾಗುವ ಸಣ್ಣ ವ್ಯಾಪಾರ ಆರಂಭಿಸಿದರು
ಮತ್ತು “ದುಕ್ಕಾವಾಲಾ”ಗಳು ಎಂದೇ ಕರೆಯಲ್ಪಟ್ಟರು. ವಸಾಹತುಶಾಹಿ ಕಾಲದಲ್ಲಿ ವ್ಯಾಪಾರಿಗಳು, ಕುಶಲಕರ್ಮಿಗಳು ಮತ್ತು ಬಳಿಕ ಅಧಿಕಾರಿಗಳು, ಶಿಕ್ಷಕರು, ವೈದ್ಯರು ಮತ್ತು ಇತರ ವೃತ್ತಿಪರರು ಚೈತನ್ಯಶೀಲ ಸಮುದಾಯ ರಚಿಸಲು ಪೂರ್ವ ಮತ್ತು ಪಶ್ಚಿಮ ಆಫ್ರಿಕಾಕ್ಕೆ ತೆರಳಿದರು. ಇದು ಭಾರತ ಮತ್ತು ಆಫ್ರಿಕಾದ ಉತ್ತಮ ಸಂಯೋಜನೆಯಾಗಿದೆ.
ಮಹಾತ್ಮಾಗಾಂಧಿ, ಮತ್ತೊಬ್ಬ ಗುಜರಾತಿ, ಅಹಿಂಸಾತ್ಮಕ ಹೋರಾಟದ ತಮ್ಮ ಸಾಧನವನ್ನು ದಕ್ಷಿಣ ಆಫ್ರಿಕಾದಲ್ಲಿ ಸಜ್ಜುಗೊಳಿಸಿದರು. ಅವರು ಗೋಪಾಲಕೃಷ್ಣ ಗೋಖಲೆ ಅವರೊಂದಿಗೆ 1912ರಲ್ಲಿ ತಾಂಜೇನಿಯಾಗೂ ಭೇಟಿ ನೀಡಿದ್ದರು. ಆಫ್ರಿಕಾದ ಸ್ವಾತಂತ್ರ್ಯ ಹೋರಾಟದಲ್ಲಿ ಆಫ್ರಿಕಾದ ನಾಯಕರೊಂದಿಗೆ ಶ್ರೀ. ನಯೇರೇರೆ, ಶ್ರೀ ಕೆನ್ಯಟ್ಟಾ ಮತ್ತು ನಲ್ಸೆನ್ ಮಂಡೇಲಾ ಅವರೊಂದಿಗೆ ಭಾರತೀಯ ಮೂಲದ ಹಲವು ನಾಯಕರು ಬಲವಾದ ಬೆಂಬಲ ನೀಡಿದರು. ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಭಾರತೀಯ ಮೂಲದ ಹಲವು ನಾಯಕರು ತಾಂಜೇನಿಯಾ ಮತ್ತು ದಕ್ಷಿಣ ಆಫ್ರಿಕಾದ ಸಂಪುಟದಲ್ಲಿ ನೇಮಕಗೊಂಡರು. ಇಂದೂ ಸಹ ತಾಂಜೇನಿಯಾದ ಸಂಸತ್ತಿನಲ್ಲಿ ಭಾರತೀಯ ಮೂಲದ ಆರು ತಾಂಜೇನಿಯನ್ನರು ಸೇವೆಸಲ್ಲಿಸುತ್ತಿದ್ದಾರೆ.
ಪೂರ್ವ ಆಫ್ರಿಕಾದ ಕಾರ್ಮಿಕ ಚಳವಳಿಯನ್ನು ಮಾಖನ್ ಸಿಂಗ್ ಆರಂಭಿಸಿದ್ದರು. ಕಾರ್ಮಿಕ ಒಕ್ಕೂಟದ ಸಭೆಗಳಲ್ಲಿ ಮೊದಲ ಕೆನ್ಯಾ ಸ್ವಾತಂತ್ರ್ಯ ಕಹಳೆ ಮೊಳಗಿತ್ತು. ಎಂ.ಎ. ದೇಸಾಯಿ ಮತ್ತು ಪಿಯೋ ಗಾಮಾ ಪಿಂಟೋ ಅವರು ಕೆನ್ಯಾದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅಂದಿನ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರು, ಕೆನ್ಯೆಟ್ಟಾ ಅವರ ರಕ್ಷಣಾ ತಂಡದಲ್ಲಿ ಭಾಗಿಯಾಗಲು ಭಾರತದ ಸಂಸತ್ ಸದಸ್ಯರಾಗಿದ್ದ ದಿವಾನ್ ಚಮನ್ ಲಾಲ್ ಅವರನ್ನು ಕಳುಹಿಸಿದ್ದರು. ನಂತರ ಅವರನ್ನು ಸೆರೆವಾಸದಲ್ಲಿಡಲಾಯಿತು ಮತ್ತು 1953 ರಲ್ಲಿ ಕಪೆಂಗುರಿಯಾ ವಿಚಾರಣೆಗೊಳಪಡಿಸಲಾಯಿತು. ಈ ರಕ್ಷಣಾ ತಂಡದಲ್ಲಿ ಭಾರತೀಯ ಮೂಲದ ಇನ್ನೂ ಇಬ್ಬರು ಸದಸ್ಯರಿದ್ದರು. ಭಾರತವು ಆಫ್ರಿಕಾದ ಸ್ವಾತಂತ್ರ್ಯಕ್ಕೆ ಅಛಲ ಬೆಂಬಲ ನೀಡಿತು. ನೆಲ್ಸನ್ ಮಂಡೇಲ ಹೇಳಿದ್ದಾರೆ ಮತ್ತು ಉಲ್ಲೇಖಿಸಿದ್ದಾರೆ. ‘ವಿಶ್ವದ ಇತರರು ನಮ್ಮ ದಬ್ಬಾಳಿಕೆದಾರರಿಗೆ ಬೆಂಬಲ ನೀಡುತ್ತಿದ್ದಾಗ ಅಥವಾ ನಿಂತು ನೋಡುತ್ತಿದ್ದಾಗ ಭಾರತವು ನಮ್ಮ ನೆರವಿಗೆ ಬಂತು. ಅಂತಾರಾಷ್ಟ್ರೀಯ ಮಂಡಳಿಗಳ ಬಾಗಿಲುಗಳೂ ಮುಚ್ಚಿದ್ದಾಗ, ಭಾರತ ದಾರಿ ತೋರಿತು. ನೀವು ನಮ್ಮ ಹೋರಾಟವನ್ನು ನಿಮ್ಮದೇ ಸ್ವಂತ ಎಂಬಂತೆ ತೆಗೆದುಕೊಂಡಿರಿ’ ಎಂದು ಹೇಳಿದ್ದಾರೆ.
ದಶಕಗಳ ಬಳಿಕ, ನಮ್ಮ ಬಾಂಧವ್ಯ ಬಲಗೊಂಡಿದೆ. ನಾನು 2014ರಲ್ಲಿ ಅಧಿಕಾರ ವಹಿಸಿಕೊಂಡಾಗ, ಭಾರತದ ಆರ್ಥಿಕ ಮತ್ತು ವಿದೇಶಾಂಗ ನೀತಿಯಲ್ಲಿ ನಾನು ಆಫ್ರಿಕಾಕ್ಕೆ ಉನ್ನತ ಆದ್ಯತೆ ನೀಡಿದ್ದೇನೆ. 2015ರಲ್ಲಿ ಮಹಾಪೂರವೇ ಆಗಿತ್ತು. ಆ ವರ್ಷ ಮೂರನೇ ಭಾರತ ಆಫ್ರಿಕಾ ಶೃಂಗ ನಡೆದಿತ್ತು, ಅದರಲ್ಲಿ ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಎಲ್ಲ ಐವತ್ತನಾಲ್ಕು ಆಫ್ರಿಕಾ ದೇಶಗಳು ಪಾಲ್ಗೊಂಡಿದ್ದವು. ದಾಖಲೆಯ 41 ಆಫ್ರಿಕಾ ದೇಶಗಳು ಸರ್ಕಾರ ಅಥವಾ ದೇಶದ ಮುಖ್ಯಸ್ಥರ ಮಟ್ಟದಲ್ಲಿ ಪಾಲ್ಗೊಂಡಿದ್ದವು.
2015ರಿಂದಲೂ ನಾನು ಆರು ಆಫ್ರಿಕಾ ದೇಶಗಳಿಗೆ, ದಕ್ಷಿಣ ಆಫ್ರಿಕಾ, ಮೊಜಾಂಬಿಕ್,
ತಾಂಜೇನಿಯಾ, ಕೆನ್ಯಾ, ಮಾರಿಷಸ್ ಮತ್ತು ಸೆಶೆಲ್ಸ್ ಗಳಿಗೆ ಭೇಟಿ ನೀಡಿದ್ದೇನೆ. ನಮ್ಮ ರಾಷ್ಟ್ರಪತಿಯವರು ಮೂರು ರಾಷ್ಟ್ರಗಳಿಗೆ, ನಮೀಬಿಯಾ, ಘಾನಾ ಮತ್ತು ಐವರಿ ಕೋಸ್ಟ್ ಗೆ ಭೇಟಿ ನೀಡಿದ್ದಾರೆ. ನಮ್ಮ ಉಪ ರಾಷ್ಟ್ರಪತಿಯವರು ಏಳು ರಾಷ್ಟ್ರಗಳಿಗೆ, ಮೊರಾಕ್ಕೋ, ಟುನೇಷಿಯಾ, ನೈಜೀರಿಯಾ, ಮಾಲಿ, ಅಲ್ಗೇರಿಯಾ, ರವಾಂಡಾ ಮತ್ತು ಉಗಾಂಡಕ್ಕೆ ಭೇಟಿ ಕೊಟ್ಟಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಭಾರತದ ಸಚಿವರು ಭೇಟಿ ನೀಡದ ಒಂದೇ ಒಂದು ಆಫ್ರಿಕಾ ದೇಶವೂ ಇಲ್ಲ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. ಸ್ನೇಹಿತರೆ ನಾವು ಮುಖ್ಯವಾಗಿ ಮುಂಬೈ ಮತ್ತು ಮೊಂಬಾಸಾ ನಡುವೆ ಸಾಗರ ಮತ್ತು ವಾಣಿಜ್ಯ ಸಂಬಂಧ ಹೊಂದಿದ್ದ ಕಾಲದಿಂದ, ಇಂದಿನವರೆಗೂ
• ಈ ವಾರ್ಷಿಕ ಸಭೆ ಅಬಿದ್ ಜಿನ್ ಮತ್ತು ಅಹಮದಾಬಾದ್ ಅನ್ನು ಸಂಪರ್ಕಿಸಿದೆ
• ಬಮ್ಯಾಕೋದಿಂದ ಬೆಂಗಳೂರುವರೆಗೆ ವಾಣಿಜ್ಯದ ನಂಟಿದೆ.
• ಚೆನ್ನೈನಿಂದ ಕೇಪ್ ಟೌನ್ ವರೆಗೆ ಕ್ರಿಕೆಟ್ ಸಂಪರ್ಕವಿದೆ
• ದೆಹಲಿಯಿಂದ ದಕಾರ್ ವರೆಗೆ ಅಭಿವೃದ್ಧಿಯ ನಂಟಿದೆ
ಇದು ನಮ್ಮ ಅಭಿವೃದ್ಧಿ ಸಹಕಾರಕ್ಕೆ ನನ್ನನ್ನು ಕರೆತಂದಿದೆ. ಆಫ್ರಿಕಾದೊಂದಿಗೆ ಭಾರತದ ಪಾಲುದಾರಿಕೆ ಮಾದರಿ ಸಹಕಾರದ ಆಧಾರದ ಮೇಲಿದೆ, ಅದು ಆಫ್ರಿಕಾ ದೇಶಗಳ ಅಗತ್ಯಕ್ಕೆ ಸ್ಪಂದನಶೀಲವಾಗಿದೆ. ಇದು ಬೇಡಿಕೆ ಚಾಲಿತ ಮತ್ತು ಮುಕ್ತ ಸಹಯೋಗದ್ದಾಗಿದೆ.
ಇಂಥ ಒಂದು ಸಹಕಾರದ ಕಾರ್ಯಕ್ರಮವಾಗಿ ಭಾರತದ ಎಕ್ಸಿಮ್ ಬ್ಯಾಂಕ್ ನಿಂದ ಭಾರತ ಲೈನ್ ಆಫ್ ಕ್ರೆಡಿಟ್ ನೀಡಿದೆ. 152 ಸಾಲಗಳನ್ನು 44 ರಾಷ್ಟ್ರಗಳಿಗೆ ನೀಡಲಾಗಿದ್ದು ಇದರ ಒಟ್ಟು ಮೊತ್ತ 8 ಶತಕೋಟಿ ಡಾಲರ್ ಆಗಿದೆ.
ಮೂರನೇ ಭಾರತ- ಆಫ್ರಿಕಾ ವೇದಿಕೆಯ ಶೃಂಗದ ಸಂದರ್ಭದಲ್ಲಿ, ಭಾರತ 10 ಶತಕೋಟಿ ಡಾಲರ್ ಗಳನ್ನು ಮುಂದಿನ ಐದು ವರ್ಷಗಳ ಅಭಿವೃದ್ಧಿ ಯೋಜನೆಗಳಿಗಾಗಿ ನೀಡುವುದಾಗಿ ಹೇಳಿದೆ. ಅಲ್ಲದೆ 600 ದಶಲಕ್ಷ ಡಾಲರ್ ನೆರವನ್ನೂ ನೀಡುವುದಾಗಿ ನಾವು ಹೇಳಿದ್ದೇವೆ.
ಭಾರತವು ಆಫ್ರಿಕಾದೊಂದಿಗಿನ ತನ್ನ ಶೈಕ್ಷಣಿಕ ಮತ್ತು ತಾಂತ್ರಿಕ ಬಾಂಧವ್ಯಕ್ಕೆ ಹೆಮ್ಮೆ ಪಡುತ್ತದೆ. ಆಫ್ರಿಕಾದ ಹದಿಮೂರು ಹಾಲಿ ಅಥವಾ ಮಾಜಿ ಅಧ್ಯಕ್ಷರು, ಪ್ರಧಾನಮಂತ್ರಿಗಳು ಮತ್ತು ಉಪ ರಾಷ್ಟಾಧ್ಯಕ್ಷರು ಭಾರತದ ಶೈಕ್ಷಣಿಕ ಅಥವಾ ತರಬೇತಿ ಸಂಸ್ಥೆಗಳಲ್ಲಿ ಭಾಗಿಯಾಗಿದ್ದಾರೆ. ಆಫ್ರಿಕಾದ ಆರು ಹಾಲಿ ಅಥವಾ ಮಾಜಿ ಸಶಸ್ತ್ರ ಪಡೆ ಮುಖ್ಯಸ್ಥರು ಭಾರತದ ಮಿಲಿಟರಿ ಸಂಸ್ಥೆಗಳಲ್ಲಿ ತರಬೇತಾಗಿದ್ದಾರೆ. ಇಬ್ಬರು ಹಾಲಿ ಒಳಾಡಳಿತ ಸಚಿವರು ಭಾರತೀಯ ಸಂಸ್ಥೆಗಳಲ್ಲಿ ಕಲಿತವರಾಗಿದ್ದಾರೆ. ಭಾರತದ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮದ ಅಡಿಯಲ್ಲಿ 2007ರಿಂದ 33 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ ವೇತನವನ್ನು ಆಫ್ರಿಕಾದ ಅಧಿಕಾರಿಗಳಿಗೆ ಒದಗಿಸಲಾಗಿದೆ.
ನಮ್ಮ ಪಾಲುದಾರಿಕೆಯಲ್ಲಿ “ಸೌರ ಮಮಸ್” ಕೌಶಲ ತರಬೇತಿ ಒಂದು ಉತ್ತಮವಾದ ಕ್ಷೇತ್ರವಾಗಿದೆ. ಪ್ರತಿವರ್ಷ 80 ಆಫ್ರಿಕಾದ ಮಹಿಳೆಯರು ಭಾರತದಲ್ಲಿ ಸೌರ ಪ್ಯಾನಲ್ ಮತ್ತು ಸರ್ಕೀಟ್ ಗಳ ತರಬೇತಿ ಪಡೆಯುತ್ತಿದ್ದಾರೆ. ತಮ್ಮ ತರಬೇತಿಯ ಬಳಿಕ, ಮರಳುವ ಅವರು ಅಕ್ಷಶಃ ತಮ್ಮ ಸಮುದಾಯವನ್ನು ಬೆಳಗುತ್ತಿದ್ದಾರೆ. ಪ್ರತಿ ಮಹಿಳೆಯೂ ತಮ್ಮ ಸಮುದಾಯದ 50 ಮನೆಗಳನ್ನು ಬೆಳಗುತ್ತಿದ್ದಾರೆ. ಇಲ್ಲಿ ಮಹಿಳೆಯರಿಗೆ ಅಗತ್ಯವಾದ ವಾತಾವರಣದ ಆಯ್ಕೆ ಇದ್ದು, ಅವರು ಸಾಕ್ಷಕರು ಅಥವಾ ಅರೆ ಸಾಕ್ಷರರಾಗುತ್ತಾರೆ. ಅವರು ಇತರ ಹಲವು ಕೌಶಲ ಅಂದರೆ ಬುಟ್ಟಿ ಹೆಣೆಯುವುದು, ಜೇನು ಸಾಕಾಣಿಕೆ ಇತ್ಯಾದಿಯನ್ನು ಅವರು ಇಲ್ಲಿರುವಾಗ ಕಲಿಯುತ್ತಾರೆ.
ನಾವು ಟೆಲಿ ಮೆಡಿಸಿನ್ ಮತ್ತು ಟೆಲಿ ನೆಟ್ ವರ್ಕ್ ಗಾಗಿ ಆಫ್ರಿಕಾದ 48 ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ಆಫ್ರಿಕಾದಾದ್ಯಂತ ಇ ಜಾಲ ಯೋಜನೆಯನ್ನು ಪೂರ್ಣಗೊಳಿಸಿದ್ದೇವೆ. ಭಾರತದ ಐದು ಪ್ರಮುಖ ವಿಶ್ವವಿದ್ಯಾಲಯಗಳು ಪದವಿ, ಸ್ನಾತಕೋತ್ತರ ಕಾರ್ಯಕ್ರಮಗಳ ಪ್ರಮಾಣಪತ್ರ ನೀಡುತ್ತಿವೆ. 12 ಸೂಪರ್ ಸ್ಪೆಷಾಲಿಟಿ ಆಸ್ಪತ್ರದೆಗಳು ಸಮಾಲೋಚನೆ ಮತ್ತು ನಿರಂತರ ವೈದ್ಯಕೀಯ ಶಿಕ್ಷಣ ಒದಗಿಸುತ್ತಿವೆ. ಸುಮಾರು 7 ಸಾವಿರ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ನಾವು ಶೀಘ್ರವೇ ಮುಂದಿನ ಹಂತ ಆರಂಭಿಸಲಿದ್ದೇವೆ.
ನಾವು ಆಫ್ರಿಕಾ ರಾಷ್ಟ್ರಗಳಿಗಾಗಿ 2012ರಲ್ಲಿ ಆರಂಭಿಸಿದ ಹತ್ತಿ ತಾಂತ್ರಿಕ ನೆರವು ಕಾರ್ಯಕ್ರಮವನ್ನು ಶೀಘ್ರವೇ ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದೇವೆ. ಈ ಯೋಜನೆಯನ್ನು ಬೆನಿನ್, ಬುರ್ಕಿನಾ ಫಾಸೋ, ಛಾದ್, ಮಲಾವಿ, ನೈಜೀರಿಯಾ ಮತ್ತು ಉಗಾಂಡಾದಲ್ಲಿ ಆರಂಭಿಸಲಾಗಿದೆ.
ಸ್ನೇಹಿತರೆ,
ಆಫ್ರಿಕಾ – ಭಾರತ ವಾಣಿಜ್ಯ ಕಳೆದ ಹದಿನೈದು ವರ್ಷಗಳಲ್ಲಿ ಗುಣಕವಾಗಿದೆ. ಕಳೆದ ಐದು ವರ್ಷಗಳಲ್ಲಿ ಇದು ದುಪ್ಪಟ್ಟಾಗಿದ್ದು, 2014-15ರಲ್ಲಿ 72 ಶತಕೋಟಿ ಅಮೆರಿಕನ್ ಡಾಲರ್ ಆಗಿದೆ. ಭಾರತದ ಸರಕು ವಹಿವಾಟು 2015-16ರಲ್ಲಿ ಅಮರಿಕದೊಂದಿಗಿನ ನಮ್ಮ ಸರಕು ವಹಿವಾಟಿಗಿಂತಲೂ ಹೆಚ್ಚಾಗಿದೆ.
ಭಾರತವು ಜಪಾನ್ ಮತ್ತು ಅಮೆರಿಕಾದೊಂದಿಗೆ ಆಫ್ರಿಕಾದ ಅಭಿವೃದ್ಧಿಯನ್ನು ಬೆಂಬಲಿಸುತ್ತಿದೆ. ನನ್ನ ಟೋಕಿಯೋ ಭೇಟಿಯ ವೇಳೆ ನಾನು ಪ್ರಧಾನಮಂತ್ರಿ ಅಬೆ ಅವರೊಂದಿಗೆ ಸವಿವರವಾಗಿ ನಡೆಸಿದ ಮಾತುಕತೆಯನ್ನು ಹೆಮ್ಮೆಯಿಂದ ಸ್ಮರಿಸುತ್ತೇನೆ. ಎಲ್ಲರ ಪ್ರಗತಿಯ ವರ್ಧನೆಗೆ ನಮ್ಮ ಬದ್ಧತೆಯ ಕುರಿತು ನಾವು ಚರ್ಚಿಸಿದ್ದೆವು. ನಮ್ಮ ಜಂಟಿ ಘೋಷಣೆಯಲ್ಲಿ, ನಾವು ಏಷ್ಯಾ ಆಫ್ರಿಕ ಅಭಿವೃದ್ಧಿ ಕಾರಿಡಾರ್ ಬಗ್ಗೆ ಪ್ರಸ್ತಾಪಿಸಿದ್ದೆವು ಮತ್ತು ಈ ಕುರಿತು ಆಫ್ರಿಕಾದ ನಮ್ಮ ಸಹೋದರ ಸಹೋದರಿಯರೊಂದಿಗೆ ಹೆಚ್ಚಿನ ಮಾತುಕತೆಯ ಪ್ರಸ್ತಾಪ ಇಟ್ಟಿದ್ದೆವು.
ಭಾರತ ಮತ್ತು ಜಪಾನ್ ಸಂಶೋಧನಾ ಸಂಸ್ಥೆಗಳು ಒಂದು ದೃಷ್ಟಿಕೋನದ ದಸ್ತಾವೇಜು ಸಿದ್ಧಪಡಿಸಿವೆ. ನಾನು ಆರ್.ಐ.ಎಸ್., ಇ.ಆರ್.ಐ.ಎ ಮತ್ತು ಐಡಿಇ-ಜೆಇಟಿಆರ್.ಓ.ಗೆ ಈ ಒಟ್ಟಿಗೆ ತರುವ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಕಾರ್ಯವನ್ನು ಆಫ್ರಿಕಾದ ಚಿಂತಕರ ಚಾವಡಿಯೊಂದಿಗೆ ಚರ್ಚಿಸಿ ಮಾಡಲಾಗಿದೆ. ನಾನು ಮುನ್ನೋಟದ ದಸ್ತಾವೇಜನ್ನು ಮಂಡಳಿಯ ಸಭೆಯಲ್ಲಿ ನಂತರ ಮಂಡಿಸಲಾಗುತ್ತದೆ ಎಂದು ನಾನು ತಿಳಿದಿದ್ದೇನೆ. ಭಾರತ ಮತ್ತು ಜಪಾನ್, ಇತರ ಇಚ್ಛಿಸುವ ಪಾಲುದಾರರು, ಕೌಶಲ, ಆರೋಗ್ಯ, ಮೂಲಸೌಕರ್ಯ, ಉತ್ಪಾದನೆ ಮತ್ತು ಸಂಪರ್ಕದಲ್ಲಿ ಜಂಟಿ ಉಪಕ್ರಮದ ಸಾಧ್ಯತೆಯನ್ನು ಪರಿಶೋಧಿಸಲಿದ್ದಾರೆ.
ನಮ್ಮ ಪಾಲುದಾರಿಕೆ ಸರ್ಕಾರಕ್ಕೆ ಮಾತ್ರವೇ ಸೀಮಿತವಲ್ಲ. ಭಾರತದ ಖಾಸಗಿ ವಲಯ ಈಗ ಇದರ ಚಾಲನೆಯ ಮುಂಚೂಣಿಯಲ್ಲಿದೆ. 1996ರಿಂದ 2016ರವರೆಗೆ, ಆಫ್ರಿಕಾವು ಭಾರತದ ಸಾಗರದಾಚೆಯ ನೇರ ಹೂಡಿಕೆಯ ಐದನೇ ಒಂದು ಭಾಗವನ್ನು ಹೊಂದಿತ್ತು. ಭಾರತವು ಈ ಖಂಡದಲ್ಲಿ ಹೂಡಿಕೆ ಮಾಡುವ ಐದನೆ ಅತಿದೊಡ್ಡ ರಾಷ್ಟ್ರವಾಗಿದ್ದು, ಕಳೆದ 20 ವರ್ಷಗಳಲ್ಲಿ ಹೂಡಿಕೆಯು ಸುಮಾರು 54 ಶತಕೋಟಿ ಡಾಲರ್ ಆಗಿದೆ. ಇದು ಆಫ್ರಿಕಾದೇಶದ ಜನತೆಗೆ ಉದ್ಯೋಗವನ್ನೂ ಸೃಷ್ಟಿಸಿದೆ.
2015ರ ನವೆಂಬರ್ ನಲ್ಲಿ ಪ್ಯಾರಿಸ್ ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಆರಂಭಿಸಲಾದ ಸೌರ ಸಹಯೋಗ ಉಪಕ್ರಮಕ್ಕೆ ಸಂಬಂಧಿಸಿದಂತೆ ಆಫ್ರಿಕಾ ದೇಶಗಳ ಸ್ಪಂದನೆಯಿಂದ ನಾವು ಉತ್ತೇಜಿತರಾಗಿದ್ದೇವೆ. ಈ ಸಹಯೋಗವನ್ನು ಅವರ ವಿಶೇಷ ಇಂಧನ ಅಗತ್ಯ ಪೂರೈಸಲು ಸೌರ ಶ್ರೀಮಂತ ಸಂಪನ್ಮೂಲ ರಾಷ್ಟ್ರಗಳ ಒಗ್ಗೂಡಿಸುವಿಕೆಯಿಂದ ಆರಂಭಿಸಲಾಗಿದೆ. ಹಲವು ಆಫ್ರಿಕಾದ ದೇಶಗಳು ಈ ಉಪಕ್ರಮಕ್ಕೆ ಬೆಂಬಲ ನೀಡಿರುವುದು ಸಂತೋಷ ತಂದಿದೆ.
ಬ್ರಿಕ್ಸ್ ಬ್ಯಾಂಕ್ ಎಂದೇ ಕರೆಯಲಾಗುವ ಹೊಸ ಅಭಿವೃದ್ಧಿ ಬ್ಯಾಂಕ್ ಸ್ಥಾಪಕನಾಗಿ, ಭಾರತವು ಆಫ್ರಿಕಾದಲ್ಲಿ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ನಿರಂತರವಾಗಿ ಬೆಂಬಲ ನೀಡಿದೆ. ಆಫ್ರಿಕ ಅಭಿವೃದ್ದಿ ಬ್ಯಾಂಕ್ ಸೇರಿದಂತೆ ಎನ್.ಡಿ.ಬಿ. ಮತ್ತು ಇತರ ಅಭಿವೃದ್ಧಿ ಪಾಲುದಾರರ ನಡುವೆ ಸಹಯೋಗದ ಉತ್ತೇಜನಕ್ಕೆ ಇದು ವೇದಿಕೆ ಒದಗಿಸುತ್ತದೆ.
ಭಾರತವು ಆಫ್ರಿಕಾ ಅಭಿವೃದ್ಧಿ ನಿಧಿಗೆ 1982ರಲ್ಲಿ ಮತ್ತು 1983ರಲ್ಲಿ ಆಪ್ರಿಕಾ ಅಭಿವೃದ್ಧಿ ಬ್ಯಾಂಕ್ ಗೆ ಸೇರ್ಪಡೆಯಾಗಿದೆ. ಭಾರತವು ಎಲ್ಲ ಬ್ಯಾಂಕ್ ಗಳ ಸಾಮಾನ್ಯ ಬಂಡವಾಳ ವರ್ಧನೆಗೆ ಕೊಡುಗೆ ನೀಡಿದೆ. ಇತ್ತೀಚೆಗೆ ಆಫ್ರಿಕಾ ಅಭಿವೃದ್ಧಿ ಬ್ಯಾಂಕ್ ನಿಧಿಯ ಪುನಃಸ್ಥಾಪನೆಗೆ ಭಾರತವು 29 ದಶಲಕ್ಷ ಡಾಲರ್ ನೀಡಿದೆ. ನಾವು ಹೆಚ್ಚು ಬಡ ದೇಶಗಳಿಗೆ ಬಹುಪಕ್ಷೀಯ ಸಾಲ ಕಡಿತ ಉಪಕ್ರಮಗಳ ಕೊಡುಗೆ ನೀಡಿದ್ದೇವೆ.
ಈ ಸಭೆಯ ಸಂದರ್ಭದಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟದ ಪಾಲುದಾರಿಕೆಯಲ್ಲಿ ಭಾರತ ಸರ್ಕಾರ ಸಮಾವೇಶ ಮತ್ತು ಸಂವಾದವನ್ನೂ ಏರ್ಪಡಿಸಿದೆ. ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಸಹಯೋಗದಲ್ಲಿ ಒಂದು ವಸ್ತುಪ್ರದರ್ಶನವನ್ನೂ ಆಯೋಜಿಸಲಾಗಿದೆ. ನಾವು ಗಮನ ಹರಿಸಿರುವ ಕ್ಷೇತ್ರಗಳು ಕೃಷಿಯಿಂದ ನಾವಿನ್ಯತೆವರೆಗೆ ಮತ್ತು ನವೋದ್ಯಮದಿಂದ ಇತರ ಧ್ಯೇಯಗಳೆಡೆಗೆ ಇದೆ.
ಈ ಸಮಾರಂಭದ ಧ್ಯೇಯವು ‘ಆಫ್ರಿಕಾದಲ್ಲಿ ಐಶ್ವರ್ಯ ಸೃಷ್ಟಿಗೆ ಕೃಷಿಯ ಪರಿವರ್ತನೆ’ಎಂಬುದಾಗಿದೆ. ಈ ಕ್ಷೇತ್ರದಲ್ಲಿ ಭಾರತ ಮತ್ತು ಬ್ಯಾಂಕ್ ಫಲಪ್ರದವಾಗಿ ಕೈಜೋಡಿಸಬಹುದಾಗಿದೆ. ನಾನು ಈಗಾಗಲೇ ಹತ್ತಿ ತಾಂತ್ರಿಕ ನೆರವು ಕಾರ್ಯಕ್ರಮವನ್ನು ಪ್ರಸ್ತಾಪಿಸಿದ್ದೇನೆ.
ಭಾರತದಲ್ಲಿ, ನಾನು 2022ರಹೊತ್ತಿಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡಲು ಕ್ರಮ ಕೈಗೊಂಡಿದ್ದೇನೆ. ಇದಕ್ಕೆ ಸಮಗ್ರವಾದ ಹೆಜ್ಜೆಯ ಅಗತ್ಯವಿದೆ, ಇದರಲ್ಲಿ ಬೀಜಗಳ ಸುಧಾರಣೆಯಿಂದ ಹಿಡಿದು ಬೆಳೆ ಹಾನಿ ತಡೆಗೆ ಸೂಕ್ತ ಕ್ರಮದ ಹಾಗೂ ಉತ್ತಮ ಮಾರುಕಟ್ಟೆ ಮೂಲಸೌಕರ್ಯದ ಅಗತ್ಯವಿದೆ. ಭಾರತವು ನಿಮ್ಮ ಅನುಭವದಿಂದ ಕಲಿತು ಈ ಉಪಕ್ರಮ ಆರಂಭಿಸಿದ್ದೇವೆ.
ಆಫ್ರಿಕಾದ ನನ್ನ ಸಹೋದರ ಮತ್ತು ಸಹೋದರಿಯರೇ,
ನಾವು ಎದುರಿಸುತ್ತಿರುವ ಸವಾಲುಗಳು ಬಹುತೇಕ ಒಂದೇ ಆಗಿವೆ: ನಮ್ಮ ರೈತರ, ಬಡವರ ಅಭ್ಯುದಯ, ಮಹಿಳಾ ಸಬಲೀಕರಣ, ನಮ್ಮ ಗ್ರಾಮೀಣ ಸಮುದಾಯಗಳಿಗೆ ಹಣಕಾಸಿನ ಲಭ್ಯತೆ, ಮೂಲಸೌಕರ್ಯ ವರ್ಧನೆ. ನಾವು ಈ ಎಲ್ಲವನ್ನೂ ನಮ್ಮ ಆರ್ಥಿಕ ನಿರ್ಬಂಧಗಳ ನಡುವೆಯೇ ಮಾಡಬೇಕು. ನಾವು ಬೃಹತ್ ಆರ್ಥಿಕ ಸುಸ್ಥಿರತೆ ಕಾಪಾಡಬೇಕು ಹಾಗಾದಾಗ ಹಣದುಬ್ಬರ ನಿಯಂತ್ರಣದಲ್ಲಿರುತ್ತದೆ ಮತ್ತು ನಮ್ಮ ಪಾವತಿಯ ಬಾಕಿ ಸ್ಥಿರವಾಗಿರುತ್ತದೆ. ಈ ಎಲ್ಲ ರಂಗಗಳಲ್ಲಿ ನಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ನಾವು ಹೆಚ್ಚಿನದನ್ನು ಗಳಿಸಬಹುದು. ಉದಾಹರಣೆಗೆ ಕಡಿಮೆ ನಗದು ಆರ್ಥಿಕತೆಯ ನಮ್ಮ ಪ್ರಯತ್ನದಲ್ಲಿ, ಕೀನ್ಯಾದಂಥ ಆಫ್ರಿಕಾದ ದೇಶಗಳು ಮೊಬೈಲ್ ಬ್ಯಾಂಕಿಂಗ್ ನಲ್ಲಿ ನಡೆಸಿದ ಬೃಹತ್ ಅಧ್ಯಯನದಿಂದಲೂ ಕಲಿತಿದ್ದೇವೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಭಾರತವು ಎಲ್ಲ ಬೃಹತ್ ಆರ್ಥಿಕ ಸೂಚ್ಯಂಕಗಳಲ್ಲೂ ಸುಧಾರಣೆ ಕಂಡಿದೆ ಎಂದು ತಿಳಿಸಲು ನಾನು ಹರ್ಷಿಸುತ್ತೇನೆ. ವಿತ್ತೀಯ ಕೊರತೆ, ಕೊರತೆ ಪಾವತಿಯ ಬಾಕಿ, ಹಣದುಬ್ಬರ ಎಲ್ಲವೂ ಇಳಿಮುಖವಾಗಿವೆ. ಜಿಡಿಪಿ ವೃದ್ಧಿ ದರ, ವಿದೇಶೀ ವಿನಿಮಯ ಮೀಸಲು ಮತ್ತು ಸಾರ್ವಜನಿಕ ಬಂಡವಾಳ ಹೂಡಿಕೆ ಹೆಚ್ಚಳವಾಗಿದೆ. ಅದೇ ವೇಳೆ ನಾವು ಅಭಿವೃದ್ಧಿಯಲ್ಲಿ ದೊಡ್ಡ ದಾಪುಗಾಲು ಇಟ್ಟಿದ್ದೇವೆ.
ಆಫ್ರಿಕಾ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರೇ, ತಾವು ನಮ್ಮ ಇತ್ತೀಚಿನ ಕ್ರಮಗಳನ್ನು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪಠ್ಯಪುಸ್ತಕದ ಅಧ್ಯಾಯವಾಗುವಂಥ ಕ್ರಮ ಹಾಗೂ ಇದೊಂದು ಅಭಿವೃದ್ಧಿಯ ಸಂಕೇತ ಎಂದು ಬಣ್ಣಿಸಿದ್ದಾಗಿ ವರದಿಯಾಗಿದೆ. ಈ ರೀತಿಯ ಉತ್ತಮ ಮಾತುಗಳಿಗೆ ನಾನು ತಮಗೆ ಧನ್ಯವಾದ ಅರ್ಪಿಸುತ್ತೇನೆ, ತಾವು ಈ ಮುನ್ನ ಹೈದ್ರಾಬಾದ್ ನಲ್ಲಿ ತರಬೇತಿಗಾಗಿ ಕೆಲ ಕಾಲ ಕಳೆದಿದ್ದೀರೆಂದೂ ತಿಳಿದಿದ್ದೇನೆ. ಆದಾಗ್ಯೂ, ನಾನು ಮುಂದಿನ ಹಲವು ಸವಾಲುಗಳನ್ನು ಎದುರಿಸಲು ಗಮನ ಹರಿಸಿದ್ದೇನೆ. ಈ ನಿಟ್ಟಿನಲ್ಲಿ, ನಾನು ಕಳೆದ ಮೂರು ವರ್ಷಗಳಲ್ಲಿ ನಾವು ಕೈಗೊಂಡ ಕೆಲವು ಕ್ರಮಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ.
ದರ ರಿಯಾಯಿತಿ ನೀಡುವ ಬದಲು ಬಡವರಿಗೆ ನೇರವಾಗಿ ಸಬ್ಸಿಡಿಯನ್ನು ನೀಡಿದ್ದೇನೆ, ಇದರಿಂದ ನಾವು ದೊಡ್ಡ ಆರ್ಥಿಕ ಉಳಿತಾಯ ಮಾಡಿದ್ದೇವೆ. ಅಡುಗೆ ಅನಿಲವೊಂದರಲ್ಲೇ ನಾವು 4 ಶತಕೋಟಿ ಡಾಲರ್ ಗಳನ್ನು ಕಳೆದ ಮೂರು ವರ್ಷಗಳಲ್ಲಿ ಉಳಿತಾಯ ಮಾಡಿದ್ದೇವೆ. ಇದರ ಜೊತೆಗೆ, ನಾನು ಆರ್ಥಿಕವಾಗಿ ಸದೃಢರಾಗಿರುವವರಿಗೆ ಸ್ವಯಂ ಪ್ರೇರಣೆಯಿಂದ ನಿಮ್ಮ ಅಡುಗೆ ಅನಿಲ ಸಬ್ಸಿಡಿ ಬಿಟ್ಟುಕೊಡಿ ಎಂದು ಕೇಳಿದೆ. ಗೀವ್ ಇಟ್ ಅಪ್ ಅಭಿಯಾನದಡಿ ನೀವು ಬಿಟ್ಟುಕೊಡುವ ಹಣವನ್ನು ಬಡ ಕುಟುಂಬಗಳಿಗೆ ಅಡುಗೆ ಅನಿಲ ಪೂರೈಸಲು ಬಳಸುತ್ತೇವೆಂದು ವಾಗ್ದಾನ ಮಾಡಿದ್ದೆ. ನಿಮಗೆ ಅಚ್ಚರಿ ಆಗಬಹುದು 10 ದಶಲಕ್ಷ ಭಾರತೀಯರು ವ್ಯಕ್ತಿಗತವಾಗಿ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ. ಅದಕ್ಕಾಗಿ ಧನ್ಯವಾದಗಳು. ಈಗ ನಾವು 50 ದಶಲಕ್ಷ ಬಡ ಕುಟುಂಬಗಳಿಗೆ ಅಡುಗೆ ಅನಿಲ ಪೂರೈಸುವ ಯೋಜನೆ ಹಾಕಿಕೊಂಡಿದ್ದೇವೆ. ಈಗಾಗಲೇ 15 ದಶಲಕ್ಷ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಿದ್ದೇವೆ. ಇದು ಗ್ರಾಮೀಣ ಮಹಿಳೆಯರ ಜೀವನ ಮಟ್ಟದಲ್ಲಿ ಸುಧಾರಣೆ ತರುತ್ತಿದೆ. ಇದು ಕಟ್ಟಿಗೆಉರಿಸಿ ಅಡುಗೆ ಮಾಡಿ ಅನಾರೋಗ್ಯಕ್ಕೆ ತುತ್ತಾಗುವುದರಿಂದ ತಪ್ಪಿಸುತ್ತಿದೆ. ಇದು ಪರಿಸರವನ್ನೂ ಉಳಿಸುತ್ತದೆ ಮತ್ತು ಮಾಲಿನ್ಯದ ಮಟ್ಟ ಕಡಿಮೆ ಮಾಡುತ್ತದೆ. ಇದು ಸುಧಾರಣೆಯಿಂದ ಪರಿವರ್ತನೆಗೆ ಒಂದು ಉದಾಹರಣೆಯಾಗಿದೆ. ನಾನು ಜೀವನ ಪರಿವರ್ತನೆಗೆ ಕ್ರಮಗಳನ್ನು ಕೈಗೊಂಡಿದ್ದೇನೆ.
ಕೃಷಿಗಾಗಿ ಮೀಸಲಾದ ಸಬ್ಸಿಡಿ ಸಹಿತ ಯೂರಿಯಾ ಅಕ್ರಮವಾಗಿ ಕೃಷಿಯೇತರ ಕಾರ್ಯಕ್ಕೆ ಬಳಕೆ ಆಗುತ್ತಿತ್ತು, ರಾಸಾಯನಿಕ ತಯಾರಿಕೆಗೆ ಹೋಗುತ್ತಿತ್ತು. ನಾವು ಸಾರ್ವತ್ರಿಕವಾಗಿ ಬೇವು ಲೇಪಿತ ಯೂರಿಯಾ ಮಾಡಿದೆವು. ಇದು ಕೃಷಿಯೇತರ ಬಳಕೆಗೆ ಕಡಿವಾಣ ಹಾಕಿದೆ. ಇದರಿಂದ ಗಣನೀಯ ಪ್ರಮಾಣದ ಹಣ ಉಳಿತಾಯವಾಗಿದೆ ಜೊತೆಗೆ ಬೇವು ಲೇಪಿತ ಯೂರಿಯಾದಿಂದ ಕೃಷಿ ಉತ್ಪನ್ನದಲ್ಲಿ ಹೆಚ್ಚಳ ಆಗಿದೆ ಎಂದು ಅಧ್ಯಯನಗಳು ತಿಳಿಸಿವೆ.
ನಾವು ನಮ್ಮ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ಗಳನ್ನೂ ಒದಗಿಸುತ್ತಿದ್ದೇವೆ. ಅದು ಅವರಿಗೆ ಅವರ ಹೊಲ ಗದ್ದೆಯ ಮಣ್ಣಿನ ಗುಣ ತಿಳಿಸುತ್ತದೆ. ಫಲವತ್ತತೆಯ ಬಗ್ಗೆ ಹೇಳುತ್ತದೆ. ಉತ್ತಮ ಸಲಹೆಗಳನ್ನೂ ನೀಡಲಾಗುತ್ತದೆ. ಇದು ಇಳುವರಿಯ ಹೆಚ್ಚಳಕ್ಕೂ ಕಾರಣವಾಗಿದೆ.
ರೈಲ್ವೆ, ಹೆದ್ದಾರಿ, ವಿದ್ಯುತ್ ಮತ್ತು ಅನಿಲ ಕೊಳವೆ ಮಾರ್ಗದ ಬಂಡವಾಳ ಹೂಡಿಕೆಯ ವಿಚಾರದಲ್ಲಿ ನಾವು ಅಭೂತಪೂರ್ವ ಹೆಚ್ಚಳ ಮಾಡಿದ್ದೇವೆ. ಮುಂದಿನ ವರ್ಷದೊಳಗೆ, ದೇಶದ ಯಾವುದೇ ಹಳ್ಳಿ ವಿದ್ಯುತ್ ಸಂಪರ್ಕ ರಹಿತವಾಗಿರುವುದಿಲ್ಲ. ನಮ್ಮ ಗಂಗಾಶುದ್ಧೀಕರಣ, ನವೀಕರಿಸಬಹುದಾದ ಇಂಧನ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿ, ಎಲ್ಲರಿಗೂ ವಸತಿ, ಕೌಶಲ ಭಾರತಗಳು ನಮಗೆ ಹೆಚ್ಚು ಶುದ್ಧೀಕರಣಕ್ಕೆ ಮತ್ತು ಹೆಚ್ಚಿನ ಪ್ರಗತಿಗೆ ಹಾಗೂ ತ್ವರಿತ ಬೆಳವಣಿಗೆಗೆ ಹಾಗೂ ನವ ಭಾರತದ ನಿರ್ಮಾಣಕ್ಕೆ ಸಜ್ಜುಗೊಳಿಸುತ್ತಿವೆ. ಭಾರತವು ಮುಂಬರುವ ವರ್ಷಗಳಲ್ಲಿ ಪರಿಸರ ಸ್ನೇಹಿ ಅಭಿವೃದ್ಧಿಯ ಚಾಲಕ ಶಕ್ತಿಯಾಗಬೇಕು ಎಂಬುದು ನಮ್ಮ ಗುರಿಯಾಗಿದೆ.
ಎರಡು ಪ್ರಮುಖ ಅಂಶಗಳು ನಮಗೆ ನೆರವಾಗಿವೆ. ಮೊದಲನೆಯದು ಬ್ಯಾಂಕಿಂಗ್ ವಲಯದ ಬದಲಾವಣೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ, ನಾವು ಸಾರ್ವತ್ರಿಕ ಬ್ಯಾಂಕಿಂಗ್ ಮಾಡಿದ್ದೇವೆ. ನಾವು ಜನ್ ಧನ್ ಅಭಿಯಾನ ಆರಂಭಿಸಿದ್ದೇವೆ. ಇದರಡಿ ಗ್ರಾಮೀಣ ಮತ್ತು ನಗರದ ಬಡವರಿಗಾಗಿ 280 ದಶಲಕ್ಷ ಖಾತೆಗಳನ್ನು ತೆರೆಯಲಾಗಿದೆ. ಈ ಉಪಕ್ರಮಕ್ಕೆ ಧನ್ಯವಾದಗಳು, ಈಗ ವಸ್ತುಶಃ ಎಲ್ಲ ಭಾರತೀಯ ಕುಟುಂಬಗಳೂ ಬ್ಯಾಂಕ್ ಖಾತೆ ಹೊಂದಿವೆ. ಸಾಮಾನ್ಯವಾಗಿ ಬ್ಯಾಂಕ್ ಗಳು ಶ್ರೀಮಂತರು ಮತ್ತು ವಾಣಿಜ್ಯಕ್ಕೆ ನೆರವು ನೀಡುತ್ತಿದ್ದವು. ನಾವು ಅವುಗಳಿಗೆ ಬಡವರಿಗೆ ಅವರ ಅಭಿವೃದ್ಧಿಯ ಆಶಯಕ್ಕೆ ಬೆಂಬಲ ನೀಡುವಂತೆ ಮಾಡಿದ್ದೇವೆ. ನಾವು ಸರ್ಕಾರಿ ಬ್ಯಾಂಕ್ ಗಳನ್ನು ರಾಜಕೀಯ ನಿರ್ಧಾರಗಳಿಂದ ಮುಕ್ತಗೊಳಿಸಿ ಬಲಪಡಿಸಿದ್ದೇವೆ ಮತ್ತು ಪಾರದರ್ಶಕವಾದ ನೇಮಕಾತಿ ಪ್ರಕ್ರಿಯೆಯಡಿ ಪ್ರತಿಭೆಗನುಗುಣವಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ನೇಮಕ ಮಾಡಿದ್ದೇವೆ.
ನಮ್ಮ ಸಾರ್ವತ್ರಿಕ ಬಯೋ ಮೆಟ್ರಿಕ್ ಗುರುತಿನ ವ್ಯವಸ್ಥೆ –ಆಧಾರ್ ನಮ್ಮ ಎರಡನೇ ಮಹತ್ವದ ಅಂಶವಾಗಿದೆ. ಇದು ಅನರ್ಹರು ಸೌಲಭ್ಯ ಪಡೆಯದಂತೆ ಮಾಡಿದೆ. ಯಾರಿಗೆ ಸರ್ಕಾರದ ಸೌಲಭ್ಯ ನೆರವು ಪಡೆಯಲು ಅರ್ಹತೆ ಇದೆಯೋ ಅವರಿಗೆ ಸುಲಭವಾಗಿ ಅದು ದೊರಕುವಂತೆ ಮಾಡಲು ನೆರವಾಗಿದ್ದು, ಅನರ್ಹರನ್ನು ಹೊರಗಿಟ್ಟಿದೆ.
ಸ್ನೇಹಿತರೆ, ನಿಮ್ಮ ಈ ವಾರ್ಷಿಕ ಸಭೆ ಫಲಪ್ರದವಾಗಿರಲಿ, ಯಶಸ್ವಿಯಾಗಲಿ ಎಂದು ನಾನು ಹಾರೈಸುತ್ತೇನೆ. ಕ್ರೀಡಾ ಜಗತ್ತಿನಲ್ಲಿ ದೂರದ ಓಟದ ಸ್ಪರ್ಧೆಯಲ್ಲಿ ಭಾರತ ಆಫ್ರಿಕಾದೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ, ನಿಮ್ಮ ದೀರ್ಘ ಕಾಲೀನ ಉತ್ತಮ ಭವಿಷ್ಯದ ಓಟದಲ್ಲಿ ಭಾರತವು ಸದಾ ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಇರುತ್ತದೆ ಎಂದು ನಾನು ಆಶ್ವಾಸನೆ ನೀಡುತ್ತೇನೆ.
ಗಣ್ಯರೇ, ಮಹಿಳೆಯರೆ ಮತ್ತು ಮಹನೀಯರೇ, ಆಫ್ರಿಕಾ ಅಭಿವೃದ್ಧಿ ಬ್ಯಾಂಕ್ ನ ವಾರ್ಷಿಕ ಸಭೆಯು ಅಧಿಕೃತವಾಗಿ ಈಗ ಆರಂಭಗೊಂಡಿದೆ ಎಂದು ನಾನು ಘೋಷಿಸುತ್ತಿರುವುದು ನನಗೆ ಹೆಮ್ಮೆ ಎನಿಸುತ್ತದೆ.
ಧನ್ಯವಾದಗಳು,
ತುಂಬಾ ತುಂಬಾ ಧನ್ಯವಾದಗಳು.
*****
AKT/SH –
India has had strong ties with Africa for centuries: PM @narendramodi pic.twitter.com/oSo2NwC8ru
— PMO India (@PMOIndia) May 23, 2017
After assuming office in 2014, I have made Africa a top priority for India’s foreign and economic policy: PM @narendramodi pic.twitter.com/tTDFEFWuei
— PMO India (@PMOIndia) May 23, 2017
I am proud to say that there is no country in Africa that has not been visited by an Indian Minister in the last three years: PM pic.twitter.com/9rBFXCS3hJ
— PMO India (@PMOIndia) May 23, 2017
India’s partnership with Africa is based on a model of cooperation which is responsive to the needs of African countries: PM @narendramodi pic.twitter.com/1HHork6FlJ
— PMO India (@PMOIndia) May 23, 2017
Africa-India trade multiplied in last 15 years. It doubled in the last 5 years to reach nearly seventy-two billion US dollars in 2014-15: PM
— PMO India (@PMOIndia) May 23, 2017
From 1996 to 2016, Africa accounted for nearly one-fifth of Indian overseas direct investments: PM @narendramodi
— PMO India (@PMOIndia) May 23, 2017
We are encouraged by the response of African countries to the International Solar Alliance initiative: PM @narendramodi
— PMO India (@PMOIndia) May 23, 2017
Many of the challenges we face are the same: uplifting our farmers and the poor, empowering women: PM @narendramodi
— PMO India (@PMOIndia) May 23, 2017
Our challenges also include ensuring our rural communities have access to finance, building infrastructure: PM @narendramodi
— PMO India (@PMOIndia) May 23, 2017
By paying subsidies directly to the poor rather than indirectly through price concessions, we have achieved large fiscal savings: PM
— PMO India (@PMOIndia) May 23, 2017
Our aim is that India must be an engine of growth as well as an example in climate friendly development in the years to come: PM
— PMO India (@PMOIndia) May 23, 2017