Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಪ್ಘಾನಿಸ್ತಾನ, ಖತಾರ್, ಸ್ವಿಜರ್ಲ್ಯಾಂಡ್, ಯು.ಎಸ್.ಎ ಮತ್ತು ಮೆಕ್ಸಿಕೋಗೆ ಪ್ರಧಾನಮಂತ್ರಿಯವರ ಮುಂಬರುವ ಪ್ರವಾಸ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2016ರ ಜೂನ್ 4ರಿಂದ 2016ರ ಜೂನ್ 8ರವರೆಗೆ ಆಪ್ಘಾನಿಸ್ತಾನ, ಖತಾರ್, ಸ್ವಿಜರ್ಲ್ಯಾಂಡ್, ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಮೆಕ್ಸಿಕೋಗಳಿಗೆ ಭೇಟಿ ನೀಡಲಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸರಣಿ ಪೋಸ್ಟ್ ಮಾಡಿರುವ ಪ್ರಧಾನಿಯವರು:

“ನಾಳೆ ನನ್ನ ಆಫ್ಘಾನಿಸ್ತಾನ ಭೇಟಿಗೆ ಎದಿರು ನೋಡುತ್ತಿದ್ದೇನೆ. ನಾನು ಅಧ್ಯಕ್ಷ ಅಷ್ರಫ್ ಘನಿ ಅವರೊಂದಿಗೆ ಹೆರಾತ್ ನಲ್ಲಿ ಆಫ್ಘಾನಿಸ್ತಾನ- ಭಾರತ ಸ್ನೇಹದ ಜಲಾಶಯ ಉದ್ಘಾಟಿಸಲಿದ್ದೇನೆ. ಇದು ನಮ್ಮ ಬಾಂಧವ್ಯದ ಸಂಕೇತವಾಗಿದೆ ಮತ್ತು ಭರವಸೆ ಪ್ರತೀಹಾರಿಯಾಗಿದ್ದು, ಮನೆಗಳನ್ನು ಬೆಳಗಿಸಲಿದೆ, ಹೆರಾತ್ ನ ಫಲವತ್ತಾದ ಭೂಮಿಗೆ ನೀರುಣಿಸಲಿದೆ ಮತ್ತು ಪ್ರದೇಶದ ಜನರಲ್ಲಿ ಪ್ರಗತಿ ತರಲಿದೆ.

ನಾನು ನನ್ನ ಗೆಳೆಯರಾದ ಅಧ್ಯಕ್ಷ ಆಷ್ರಫ್ ಘನಿ ಅವರನ್ನು ಭೇಟಿ ಮಾಡಲು ಮತ್ತು ಪ್ರಾದೇಶಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ವಿನಿಮಯ ಮತ್ತು ಮುಂಬರುವ ದಿನಗಳಲ್ಲಿ ದ್ವಿಪಕ್ಷೀಯ ಸಹಕಾರದ ಕಾರ್ಯಕ್ರಮಪಟ್ಟಿ ರಚಿಸಲು ಕಾತರನಾಗಿದ್ದೇನೆ.
ಘನತೆವೆತ್ತ ಖತಾರ್ ಎಮಿರ್ ಅವರ ಆಹ್ವಾನದ ಮೇರೆಗೆ ಜೂನ್ 4 ಮತ್ತು 5ರಂದು ನಾನು ಖತಾರ್ ರಾಷ್ಟ್ರಕ್ಕೆ ಭೇಟಿ ನೀಡುತ್ತಿದ್ದೇನೆ.

ಕಳೆದ ವರ್ಷ ಭಾರತಕ್ಕೆ ಭೇಟಿ ನೀಡಿ, ನಮ್ಮ ಬಾಂಧವ್ಯಕ್ಕೆ ಹೊಸ ಚಾಲನೆ ನೀಡಿದ ಘನತೆವೆತ್ತ ಶೇಖ್ ತಮಿಮ್ ಅವರನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ.
ಎರಡು ದಶಕಗಳ ಕಾಲ ನಮ್ಮ ಬಾಂಧವ್ಯಕ್ಕೆ ವೈಯಕ್ತಿಕವಾಗಿ ಮಾರ್ಗದರ್ಶನ ಮಾಡಿದ ತಂದೆ ಎಮಿರ್ ಅವರನ್ನು ಭೇಟಿ ಮಾಡುವ ಗೌರವವೂ ನನಗೆ ದೊರೆತಿದೆ.
ಈ ಭೇಟಿಯು ಜನರಿಂದ ಜನರ ಸಂಪರ್ಕ, ಇಂಧನ, ವಾಣಿಜ್ಯ ಮತ್ತು ಹೂಡಿಕೆ ಪಾಲುದಾರಿಕೆಯಲ್ಲಿನ ನಮ್ಮ ಆಳವಾದ ಐತಿಹಾಸಿಕ ಬಾಂಧವ್ಯವನ್ನು ಪೋಷಿಸುತ್ತದೆ.

ನಾನು ಕಾರ್ಮಿಕರ ಶಿಬಿರದಲ್ಲಿ ಭಾರತೀಯ ಕಾರ್ಮಿಕರೊಂದಿಗೆ ಸಂವಾದ ನಡೆಸಲಿದ್ದೇನೆ ಮತ್ತು ಇಲ್ಲಿರುವ 6 ಲಕ್ಷ ಭಾರತೀಯ ಕಾರ್ಮಿಕರು ತಮ್ಮ ಶ್ರಮ ಮತ್ತು ಬೆವರಿನಿಂದ ನಮ್ಮ ಬಾಂಧವ್ಯವನ್ನು ಪೋಷಿಸಿದ್ದಾರೆ. ನಮ್ಮ ವಾಣಿಜ್ಯ ಮತ್ತು ಹೂಡಿಕೆ ಸಹಕಾರದ ಸಂಪೂರ್ಣ ಸಾಮರ್ಥ್ಯದ ಬಳಕೆಗಾಗಿ ನಾನು ಖತಾರ್ ವಾಣಿಜ್ಯ ನಾಯಕರೊಂದಿಗೆ ಸಹ ಮಾತನಾಡುತ್ತೇನೆ.
ಯೂರೋಪ್ ನ ನಮ್ಮ ಪ್ರಮುಖ ಪಾಲುದಾರ ಸ್ವಿಜರ್ಲ್ಯಾಂಡ್ ದ್ವಿಪಕ್ಷೀಯ ಭೇಟಿಗಾಗಿ ನಾನು ಜೂನ್ 5ರ ಸಂಜೆ ಜಿನೇವಾಕ್ಕೆ ತಲುಪುತ್ತೇನೆ. ನಾನು ಅಧ್ಯಕ್ಷ ಷ್ನೇಯ್ಡರ್-ಅಮ್ಮನ್ ಅವರೊಂದಿಗೆ ನಮ್ಮ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರ ಬಲಗೊಳಿಸಲು ಮಾತುಕತೆ ನಡೆಸಲಿದ್ದೇನೆ.
ಜಿನೇವಾದಲ್ಲಿ, ನಾನು ಪ್ರಮುಖ ವಾಣಿಜ್ಯೋದ್ಯಮಿಗಲನ್ನು ಭೇಟಿ ಮಾಡುತ್ತೇನೆ. ಆರ್ಥಿಕ ಮತ್ತು ಹೂಡಿಕೆಯ ಬಾಂಧವ್ಯವನ್ನು ವಿಸ್ತರಿಸುವುದು ನಮ್ಮ ಕಾರ್ಯಕ್ರಮಪಟ್ಟಿಯಲ್ಲಿದೆ. ನಾನು ಸಿ.ಇ.ಆರ್.ಎನ್.ನಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಭಾರತೀಯ ವಿಜ್ಞಾನಿಗಳನ್ನು ಭೇಟಿ ಮಾಡುತ್ತೇನೆ. ಮನುಕುಲದ ಸೇವೆಯಲ್ಲಿ ವಿಜ್ಞಾನದ ಹೊಸ ಅವಕಾಶಗಳನ್ನು ಅನ್ವೇಷಿಸುವ ಕಾರ್ಯದಲ್ಲಿ ಕೊಡುಗೆ ನೀಡಿದ ಅವರ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ.
ನಾನು ಅಧ್ಯಕ್ಷ ಬರಾಕ್ ಒಬಾಮಾ ಅವರ ಆಹ್ವಾನದ ಮೇರೆಗೆ ದ್ವಿಪಕ್ಷೀಯ ಭೇಟಿಗಾಗಿ ಜೂನ್ 6ರಂದು ಸಂಜೆ ವಾಷಿಂಗ್ಟನ್ ಡಿ.ಸಿ. ತಲುಪುತ್ತಿದ್ದೇನೆ.
ಜೂನ್ 7ರಂದು ಅಧ್ಯಕ್ಷರೊಂದಿಗೆ ನಡೆಯಲಿರುವ ಭೇಟಿಯ ಸಮಯದಲ್ಲಿ ನಾವು ವಿವಿಧ ವಿಭಾಗಗಳಲ್ಲಿನ ನಮ್ಮ ಕಾರ್ಯತಂತ್ರಾತ್ಮಕ ಪಾಲುದಾರಿಕೆಗೆ ಹೊಸ ಚಟುವಟಿಕೆಯಿಂದ ಮತ್ತು ವೇಗ ಒದಗಿಸುವ ಮೂಲಕ ಸಾಧಿತ ಪ್ರಗತಿಯ ನಿರ್ಮಾಣವನ್ನು ಅರಸುತ್ತೇನೆ.

ನಾನು ಯು.ಎಸ್.ಐ.ಬಿ.ಸಿ.ಯ 40ನೇ ಎ.ಜಿ.ಎಂ.ನಲ್ಲಿ ಮಾತನಾಡಲು ಕಾತರದಿಂದ ಇದ್ದೇನೆ ಮತ್ತು ಭಾರತದ ಬಗ್ಗೆ ಕಳೆದ ಎರಡು ವರ್ಷಗಳಿಂದ ನವೀಕೃತ ವಿಶ್ವಾಸ ವ್ಯಕ್ತಪಡಿಸಿರುವ ಅಮೆರಿಕದ ವಾಣಿಜ್ಯ ನಾಯಕರನ್ನು ಭೇಟಿ ಮಾಡಲಿದ್ದೇನೆ.
ನಾನು ಅಮೆರಿಕದ ಚಿಂತಕರ ಚಾವಡಿಯೊಂದಿಗೆ ನನ್ನ ಅನಿಸಿಕೆ ಹಂಚಿಕೊಳ್ಳುತ್ತೇನೆ ಮತ್ತು ಭಾರತೀಯ ಪ್ರಾಚೀನ ವಸ್ತು ವರಳಿಸಲು ಏರ್ಪಡಿಸಲಾಗಿರುವ ಸಮಾರಂಭವೊಂದರಲ್ಲಿ ಪಾಲ್ಗೊಳ್ಳುತ್ತೇನೆ.

ಅರ್ಲಿಂಗ್ಟನ್ ಸಿಮೆಟ್ರಿಯ ಭೇಟಿಯ ವೇಳೆ ನಾನು ಅನಾಮಿಕ ಯೋಧರ ಸ್ಮಾರಕ ಮತ್ತು ಭಾರತೀಯ ಮೂಲದ ವ್ಯೋಮಯಾನಿ ಕಲ್ಪನಾ ಚಾವ್ಲಾ ಅವರನ್ನು ಕಳೆದುಕೊಂಡ ಬಾಹ್ಯಾಕಾಶ ನೌಕೆ ಕೊಲಂಬಿಯಾ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಿದ್ದೇನೆ.
ಜೂನ್ 8ರಂದು ನಾನು ಯು.ಎಸ್. ಕಾಂಗ್ರೆಸ್ ನ ಜಂಟಿ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದೇನೆ. ಕಾಂಗ್ರೆಸ್ ಮೆನ್ ಮತ್ತು ಸೆನೆಟರ್ ಗಳನ್ನುದ್ದೇಶಿಸಿ ಭಾಷಣ ಮಾಡಲು ನನ್ನನ್ನು ಆಹ್ವಾನಿಸಿದ ಸ್ಪೀಕರ್ ಪಾಲ್ ರೇಯಾನ್ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ.

ಅಮೆರಿಕದ ರಾಜಧಾನಿಗೆ ಭೇಟಿ ನೀಡುವ ಸಂದರ್ಭದಲ್ಲಿ, ನಾನು ಹೌಸ್ ಆಫ್ ರೆಪ್ರಸೆಂಟಿಟೀವ್ಸ್ ಮತ್ತು ಸೆನೆಟ್ ನ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದೇನೆ, ಇವರಲ್ಲಿ ಅನೇಕರು ಭಾರತದ ಮೌಲ್ಯಯುತ ಗೆಳೆಯರಾಗಿದ್ದಾರೆ ಮತ್ತು ಭಾರತ ಮತ್ತು ಯು.ಎಸ್.ಎ. ಬಾಂಧವ್ಯ ಬಲಗೊಳಿಸುವ ಕಟ್ಟಾ ಬೆಂಬಲಿಗರಾಗಿದ್ದಾರೆ.
ಭಾರತ ಮತ್ತು ಅಮೆರಿಕ ಸ್ವಾಭಾವಿಕ ಪಾಲುದಾರರಾಗಿದ್ದೇವೆ, ಎರಡೂ ಚೈತವ್ಯಶೀಲ ಪ್ರಜಾಪ್ರಭುತ್ವ ರಾಷ್ಟ್ರಗಳು ಬಹು ಸಂಸ್ಕೃತಿ ಮತ್ತು ವೈವಿಧ್ಯವನ್ನು ನಡೆಸಿಕೊಂಡು ಬಂದಿದ್ದೇವೆ. ಭಾರತ – ಅಮೆರಿಕದ ಬಲವಾದ ಬಾಂಧವ್ಯದ ಲಾಭ ನಮ್ಮ ಎರಡು ರಾಷ್ಟ್ರಗಳಿಗೆ ಮಾತ್ರವೇ ಅಲ್ಲ, ಇಡೀ ವಿಶ್ವಕ್ಕೇ ಲಾಭ ತರಲಿದೆ.
ನಾನು ಜೂನ್ 8ರಂದು ಲ್ಯಾಟಿನ್ ಅಮೇರಿಕಾ ವಲಯದ ವಿಶೇಷ ಪಾಲುದಾರ ಮೆಕ್ಸಿಕೋಗೆ ಭೇಟಿ ನೀಡುವ ವೇಳೆ ಅಧ್ಯಕ್ಷ ಪೇನಾ ನಿಯೇಟೋ ಅವರನ್ನು ಭೇಟಿ ಮಾಡಲಿದ್ದೇನೆ,

ಅಧ್ಯಕ್ಷ ಪೇನಾ ನಿಯೇಟೋ ದೂರದವರೆಗೆ ತಲುಪುವ ಸುಧಾರಣೆಗೆ ದಾರಿ ತೋರಿದ್ದಾರೆ. ನಾನು ನಮ್ಮ ಅನುಭವಗಳನ್ನು ಹಂಚಿಕೊಳ್ಳಲು ಎದಿರು ನೋಡುತ್ತಿದ್ದೇನೆ. 30 ವರ್ಷಗಳ ಬಳಿಕ ಇದು ಪ್ರಧಾನಮಂತ್ರಿಗಳ ಮಟ್ಟದ ಮೊದಲ ದ್ವಿಪಕ್ಷೀಯ ಮೆಕ್ಸಿಕೋ ಭೇಟಿಯಾಗಿದೆ. ಇದು ಅಲ್ಪ ಸಮಯದ ಭೇಟಿಯಾದರೂ ಗಣನೀಯ ಕಾರ್ಯಕ್ರಮ ಪಟ್ಟಿ ಹೊಂದಿರುವ ಭೇಟಿ ನಮ್ಮ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ” ಎಂದು ಪ್ರಧಾನಿಯವರು ಹೇಳಿದ್ದಾರೆ.