Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆದಾಯ ತೆರಿಗೆ ವಂಚನೆ ತಡೆ ಹಾಗೂ ಎರಡು ಬಾರಿ ತೆರಿಗೆ ವಿಧಿಸುವಿಕೆ ತಪ್ಪಿಸುವ ಕುರಿತ ಭಾರತ ಮತ್ತು ಕತಾರ್ ನಡುವಿನ ಒಪ್ಪಂದದ ಪರಿಷ್ಕರಣೆಗೆ ಸಂಪುಟ ಸಮ್ಮತಿ


ಪ್ರಧಾನಿ ನರೆಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಆದಾಯ ತೆರಿಗೆ ವಂಚನೆಯನ್ನು ತಡೆಯಲು ಹಾಗೂ ಎರಡು ಬಾರಿ ತೆರಿಗೆ ವಿಧಿಸುವಿಕೆಯನ್ನು ತಪ್ಪಿಸುವ ಕುರಿತ ಭಾರತ ಮತ್ತು ಕತಾರ್ ನಡುವಿನ ಒಪ್ಪಂದದ ಪರಿಷ್ಕರಣೆಗೆ ಸಮ್ಮತಿ ನೀಡಲಾಗಿದೆ.

ಕತಾರ್ ಜೊತೆಗಿನ ಪ್ರಸ್ತುತ ಚಾಲ್ತಿಯಲ್ಲಿರುವ ಎರಡು ತೆರಿಗೆ ತಪ್ಪಿಸುವ ಒಪ್ಪಂದ(ಡಿಟಿಎಎ ) ಕ್ಕೆ ಏಪ್ರಿಲ್ 7,1999ರಲ್ಲಿ ಸಹಿ ಹಾಕಲಾಗಿದ್ದು, ಜನವರಿ 15,2000ದಿಂದ ಚಾಲನೆಗೊಂಡಿತ್ತು. ಪರಿ ಷ್ಕøತ ಡಿಟಿಎಎ ಭಾರತದೊಡಗಿನ ಇತ್ತೀಚಿನ ಇತರ ಒಪ್ಪಂದಗಳ ಪ್ರಸ್ತಾವಗಳನ್ನು ಒಳಗೊಂಡಿದ್ದು ಮತ್ತು ಲಾಭಕ್ಕೆ ಮಿತಿ ಹೇರಿಕೆ ಸೇರಿದಂತೆ ಹಾಲಿ ಮಾನದಂಡಗಳ ಕುರಿತ ಮಾಹಿತಿ ಹಂಚಿಕೆಯ ವಿನಿಮಯಕ್ಕೆ ಸಂಬಂಧಿಸಿದ ಪ್ರಸ್ತಾವಗಳನ್ನು ಒಳಗೊಂಡಿದೆ. ಭಾರತ ಕೂಡ ಪಾಲ್ಗೊಂಡಿರುವ ಜಿ 20 ಓಇಸಿಡಿ ಬೇಸ್ ಇರೋಷನ್ ಮತ್ತು ಪ್ರಾಫಿಟ್ ಶಿಫ್ಟಿಂಗ್(ಬಿಇಪಿಎಸ್) ಪ್ರಾಜೆಕ್ಟ್ ನ ಕ್ರಿಯೆ 14ರಡಿಯ ಪರಸ್ಪರ ಒಪ್ಪಂದ ಮತ್ತು ಕ್ರಿಯೆ 6ರಡಿಯ ಒಪ್ಪಂದದ ದುರುಪಯೋಗ ಕುರಿತ ಕನಿಷ್ಠ ಮಾನದಂಡಗಳಿಗೆ ಪರಿಷ್ಕೃತ ಡಿಟಿಎಎ ಅನುಗುಣವಾಗಿದೆ.