Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆತ್ಮ ನಿರ್ಭರ ಭಾರತ ಅನ್ವೇಷಣಾ ಸವಾಲಿಗೆ ಚಾಲನೆ ನೀಡಿದ ಪ್ರಧಾನಿ


 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರುಈಗಾಗಲೇ ಜನರು ಬಳಸುತ್ತಿರುವ ಅತ್ಯುತ್ತಮ ಭಾರತೀಯ ಆಪ್ ಗಳನ್ನು ಗುರುತಿಸಲು ಮತ್ತು ತಮ್ಮ ನಿರ್ದಿಷ್ಟ ಪ್ರವರ್ಗದಲ್ಲಿ ವಿಶ್ವದರ್ಜೆಯ ಆಪ್ ಆಗುವ ಸಾಮರ್ಥ್ಯ ಇರುವ ಆಪ್ ಗಳನ್ನು ಉನ್ನತೀಕರಿಸುವ ಸಲುವಾಗಿ  ಆತ್ಮ ನಿರ್ಭರ ಭಾರತ ಅನ್ವೇಷಣಾ ಸವಾಲಿಗೆ ಇಂದು ಚಾಲನೆ ನೀಡಿದರು.
 “ವಿಶ್ವ ದರ್ಜೆಯ ಮೇಡ್ ಇನ್ ಇಂಡಿಯಾ ಆಪ್ ಸೃಷ್ಟಿಸಲು ನವೋದ್ಯಮ ಮತ್ತು ತಾಂತ್ರಿಕ ಸಮುದಾಯದಲ್ಲಿ ಅಮಿತೋತ್ಸಾಹ ಇಂದು ಕಾಣುತ್ತಿದೆಅವರ ಕಲ್ಪನೆಗಳಿಗೆ ಮತ್ತು ಉತ್ಪನ್ನಗಳಿಗೆ ಅವಕಾಶ ನೀಡಲು @GoI_MeitY ಮತ್ತು @AIMtoInnovate ಗಳನ್ನು ಆತ್ಮನಿರ್ಭರ ಭಾರತ ಆಪ್ ನಾವಿನ್ಯತೆ ಸವಾಲಿಗಾಗಿ ಆರಂಭಿಸಲಾಗಿದೆ.

ನಿಮ್ಮ ಬಳಿ ಅಂಥ ಕಾರ್ಯಗತ ಉತ್ಪನ್ನ ಹೊಂದಿದ್ದರೆ ಅಥವಾ ನಿಮಗೆ ಅಂಥ ಮುನ್ನೋಟ ಇದೆ ಎಂಬ ಭಾವನೆ ಮತ್ತು ಅಂಥ ಉತ್ಪನ್ನ ತಯಾರಿಸುವ ಪರಿಣತಿ ಇದ್ದರೆ  ಸವಾಲು ನಿಮಗಾಗಿನಾನು ತಾಂತ್ರಿಕ ಸಮುದಾಯದ  ನನ್ನ ಎಲ್ಲ ಸ್ನೇಹಿತರಿಗೆ ಇದರಲ್ಲಿ ಭಾಗಿಯಾಗಲು ಕೋರುತ್ತೇನೆ”,  ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

 

 

***