ಆಟಿಕೆ ತಯಾರಿಕಾ ವಲಯದಲ್ಲಿ ಕೇಂದ್ರ ಸರ್ಕಾರದ ದಾಪುಗಾಲುಗಳು ಆತ್ಮನಿರ್ಭರತೆಗಾಗಿ ಹೊಸ ಅವಕಾಶಗಳ ನಮ್ಮ ಅನ್ವೇಷಣೆಯನ್ನು ಹೆಚ್ಚಿಸಿವೆ ಮತ್ತು ಆಟಿಕೆ ತಯಾರಿಕಾ ಸಂಪ್ರದಾಯಗಳು ಮತ್ತು ಉದ್ಯಮವನ್ನು ಜನಪ್ರಿಯಗೊಳಿಸಿವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೇಳಿದರು.
ಮನ್ ಕಿ ಬಾತ್ ನವೀಕರಣಗಳ ಕುರಿತಾಗಿ ಎಕ್ಸ್ ತಾಣದ ಸಂದೇಶಕ್ಕೆ ಪ್ರತಿಕ್ರಿಯಿಸುತ್ತಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಬರೆದಿದ್ದಾರೆ:
“ಮನ್ ಕಿ ಬಾತ್ (#MannKiBaat) ಸಂಚಿಕೆಯೊಂದರಲ್ಲಿ ನಾವು ಆಟಿಕೆ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ಮತ್ತು ಭಾರತದಾದ್ಯಂತ ಸಾಮೂಹಿಕ ಪ್ರಯತ್ನಗಳಿಂದ ನಡೆಸಲ್ಪಡುವ ಆಟಿಕೆ ತಯಾರಿಕಾ ವಲಯದ ಜನಪ್ರಿಯಗೊಳಿಸುವಿಕೆ ಬಗ್ಗೆ ಮಾತನಾಡಿದ್ದೇವೆ, ನಾವು ಅದರಲ್ಲಿ ಬಹಳಷ್ಟು ವಿಷಯಗಳನ್ನು ಒಳಪಡಿಸಿದ್ದೇವೆ.
ಈ ವಲಯದಲ್ಲಿ ನಮ್ಮ ದಾಪುಗಾಲುಗಳು ಆತ್ಮನಿರ್ಭರತೆಗಾಗಿ ಹೊಸ ಅವಕಾಶಗಳ ನಮ್ಮ ಅನ್ವೇಷಣೆಯನ್ನು ಹೆಚ್ಚಿಸಿವೆ ಮತ್ತು ಆಟಿಕೆ ತಯಾರಿಕಾ ಸಂಪ್ರದಾಯಗಳು ಮತ್ತು ಉದ್ಯಮವನ್ನು ಜನಪ್ರಿಯಗೊಳಿಸಿವೆ.”
*****
It was during one of the #MannKiBaat episodes that we had talked about boosting toy manufacturing and powered by collective efforts across India, we’ve covered a lot of ground in that.
— Narendra Modi (@narendramodi) January 20, 2025
Our strides in the sector have boosted our quest for Aatmanirbharta and popularised… https://t.co/9YmECjt1h4