ಆಗ್ರಾ ಮೆಟ್ರೋ ಯೋಜನೆಯ ನಿರ್ಮಾಣ ಕಾರ್ಯಗಳನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 7, 2020 ರಂದು ಬೆಳಿಗ್ಗೆ 11:30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಆಗ್ರಾದ 15 ಬೆಟಾಲಿಯನ್ ಪಿಎಸಿ ಪೆರೇಡ್ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಆಗ್ರಾ ಮೆಟ್ರೋ ಯೋಜನೆಯ ಬಗ್ಗೆ
ಆಗ್ರಾ ಮೆಟ್ರೋ ಯೋಜನೆಯು ಒಟ್ಟು 29.4 ಕಿ.ಮೀ ಉದ್ದದ 2 ಕಾರಿಡಾರ್‌ಗಳನ್ನು ಹೊಂದಿದೆ. ಪ್ರಮುಖ ಪ್ರವಾಸಿ ತಾಣಗಳಾದ ತಾಜ್ ಮಹಲ್, ಆಗ್ರಾ ಕೋಟೆ, ಸಿಕಂದ್ರಾವನ್ನು ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳೊಂದಿಗೆ ಸಂಪರ್ಕಿಸುತ್ತದೆ. ಈ ಯೋಜನೆಯು ಆಗ್ರಾ ನಗರದ 26 ಲಕ್ಷ ಜನಸಂಖ್ಯೆಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಪ್ರತಿ ವರ್ಷ ಆಗ್ರಾಗೆ ಭೇಟಿ ನೀಡುವ 60 ಲಕ್ಷಕ್ಕೂ ಹೆಚ್ಚು ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುತ್ತದೆ. ಇದು ಐತಿಹಾಸಿಕ ನಗರವಾದ ಆಗ್ರಾಗೆ ಪರಿಸರ ಸ್ನೇಹಿ ಸಾಮೂಹಿಕ ತ್ವರಿತ ಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತದೆ.
ಯೋಜನೆಯ ಅಂದಾಜು ವೆಚ್ಚ 8,379.62 ಕೋಟಿ ರೂ.ಗಳಾಗಿದೆ. ಯೋಜನೆಯು 5 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಈ ಯೋಜನೆಯು ಆಗ್ರಾ ನಗರದ 26 ಲಕ್ಷ ಜನಸಂಖ್ಯೆಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಪ್ರತಿ ವರ್ಷ ಆಗ್ರಾಗೆ ಭೇಟಿ ನೀಡುವ 60 ಲಕ್ಷಕ್ಕೂ ಹೆಚ್ಚು ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುತ್ತದೆ. ಇದು ಐತಿಹಾಸಿಕ ನಗರವಾದ ಆಗ್ರಾಗೆ ಪರಿಸರ ಸ್ನೇಹಿ ಸಾಮೂಹಿಕ ತ್ವರಿತ ಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತದೆ. ಆಗ್ರಾ ಮೆಟ್ರೊವನ್ನು 4 ಪ್ರಮುಖ ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು, ಕಾಲೇಜುಗಳು, ಶಾಲೆಗಳು, ಕಚೇರಿಗಳು, ವಸತಿ ಪ್ರದೇಶಗಳು, ವಾಣಿಜ್ಯ ಸ್ಥಳಗಳು, ಮಾಲ್‌ಗಳು ಮತ್ತು ನಗರದ ಪ್ರವಾಸಿ ತಾಣಗಳಾದ ತಾಜ್ ಮಹಲ್, ಆಗ್ರಾ ಕೋಟೆ, ಸಿಕಂದ್ರ, ಇತ್ಯಾದಿಗಳಿಗೆ ಪರಿಸರ ಸ್ನೇಹಿ, ಆರಾಮದಾಯಕ, ಅಡಚಣೆ ರಹಿತ ಸಂಪರ್ಕವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ
ಇದಕ್ಕೂ ಮೊದಲು, 2019 ರ ಮಾರ್ಚ್ 8 ರಂದು ಪ್ರಧಾನ ಮಂತ್ರಿಯವರು ಆಗ್ರಾ ಮೆಟ್ರೋ ಯೋಜನೆಯನ್ನು, ಲಕ್ನೋ ಮೆಟ್ರೊದ ‘ಸಿಸಿಎಸ್ ವಿಮಾನ ನಿಲ್ದಾಣದಿಂದ ಮುನ್‌ಶಿಪುಲಿಯಾ’ವರೆಗಿನ 23 ಕಿ.ಮೀ ಉದ್ದದ ಉತ್ತರ-ದಕ್ಷಿಣ ಕಾರಿಡಾರ್‌ನ ವಾಣಿಜ್ಯ ಕಾರ್ಯಾಚರಣೆಯೊಂದಿಗೆ ಉದ್ಘಾಟಿಸಿದ್ದರು.
***