ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ವೇತಾಂಬರ ತೇರಾಪಂಥ್‌ನ ಅಹಿಂಸಾ ಯಾತ್ರೆ ಸಂಪನ್ನತಾ ಸಮರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿ ತಮ್ಮ ಸಂದೇಶ ನೀಡಿದರು.
ಆರಂಭದಲ್ಲಿ ಪ್ರಧಾನಮಂತ್ರಿ ಅವರು, ನಿರಂತರ ಚಲನೆಗೆ ಒತ್ತು ನೀಡುವ ಸಾವಿರಾರು ವರ್ಷಗಳ ಭಾರತೀಯ ಸಂತರ ಸಂಪ್ರದಾಯವನ್ನು ನೆನಪಿಸಿಕೊಂಡರು. ಶ್ವೇತಾಂಬರ ತೇರಾಪಂಥವು ಆಲಸ್ಯವನ್ನು ಆಧ್ಯಾತ್ಮಿಕ ಪ್ರತಿಜ್ಞೆಯಾಗಿ ಮಾಡಿದೆ ಎಂದು ಅವರು ವಿಶೇಷವಾಗಿ ಉಲ್ಲೇಖಿಸಿದರು.
ಮೂರು ದೇಶಗಳಲ್ಲಿ 18 ಸಾವಿರ ಕಿಲೋಮೀಟರ್ ಪಾದಯಾತ್ರೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ಆಚಾರ್ಯ ಮಹಾಶ್ರಮನ್ ಜಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ವಸುಧೈವ ಕುಟುಂಬಕಂ’ ಸಂಪ್ರದಾಯವನ್ನು ವಿಸ್ತರಿಸಿದ್ದಕ್ಕಾಗಿ ಮತ್ತು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಎಂಬ ಮಂತ್ರವನ್ನು ಆಧ್ಯಾತ್ಮಿಕ ಪ್ರತಿಜ್ಞೆಯಾಗಿ ಪ್ರಚಾರ ಮಾಡಿದ ಆಚಾರ್ಯರನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಪ್ರಧಾನಮಂತ್ರಿ ಅವರು ಶ್ವೇತಾಂಬರ ತೇರಾಪಂಥ್‌ನೊಂದಿಗಿನ ತಮ್ಮ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡರು ಮತ್ತು “ಯೇ ತೇರಾ ಪಂಥ್ ಹೈ, ಯೇ ಮೇರಾ ಪಂಥ್ ಹೈ’ – ಈ ತೇರಾಪಂಥ್ ನನ್ನ ಮಾರ್ಗವಾಗಿದೆ ಎಂಬ ಅವರ ಹಿಂದಿನ ಹೇಳಿಕೆಯನ್ನು ಸ್ಮರಿಸಿದರು.
2014ರಲ್ಲಿ ಕೆಂಪು ಕೋಟೆಯಿಂದ ಚಾಲನೆ ನೀಡಲಾದ ‘ಪಾದಯಾತ್ರೆ’ಯ ಪ್ರಾಮುಖ್ಯವನ್ನು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು ಮತ್ತು ಕಾಕತಾಳೀಯವೆಂದರೆ ಅದೇ ವರ್ಷದಲ್ಲಿ ತಾವು ಸ್ವತಃ ಭಾರತದ ಪ್ರಧಾನಮಂತ್ರಿಯಾಗಿ ಹೊಸ ಪಯಣ ಆರಂಭಿಸಿದ್ದು ಮತ್ತು ಸಾರ್ವಜನಿಕ ಕಲ್ಯಾಣದ ಸೇವೆಯ ಪಣಯವನ್ನು ಆರಂಭಿಸಿದೆ ಎಂದು ಅವರು ಉಲ್ಲೇಖಿಸಿದರು.ಪಾದಯಾತ್ರೆಯ ವಿಷಯ ಅಂದರೆ ಸಾಮರಸ್ಯ, ನೈತಿಕತೆ ಮತ್ತು ನಿಷ್ಠುರತೆಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು. ಯಾವುದೇ ರೀತಿಯ ವ್ಯಸನ ಇಲ್ಲದಿದ್ದಾಗ ಮಾತ್ರ ನಿಜವಾದ ಆತ್ಮಸಾಕ್ಷಾತ್ಕಾರ ಸಾಧ್ಯ ಎಂದು ಹೇಳಿದರು. ವ್ಯಸನಗಳಿಂದ ಮುಕ್ತಿಯು ಬ್ರಹ್ಮಾಂಡದೊಂದಿಗೆ ಸ್ವಯಂ ವಿಲೀನಕ್ಕೆ ಕಾರಣವಾಗುತ್ತದೆ ಮತ್ತು ಎಲ್ಲರ ಕಲ್ಯಾಣವು ಸಾಧ್ಯವಾಗುತ್ತದೆ ಎಂದರು,
ಇಂದು ಆಜಾದಿ ಕಾ ಅಮೃತ್ ಮಹೋತ್ಸವದ ನಡುವೆಯೇ, ದೇಶವು ಸಮಾಜ ಮತ್ತು ರಾಷ್ಟ್ರದ ಕಡೆಗೆ ಆತ್ಮವನ್ನು ಮೀರಿದ ಕರ್ತವ್ಯಕ್ಕೆ ಕರೆ ನೀಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಾಯಸ್ ಎಂಬ ಭಾವನೆಯಿಂದ ದೇಶ ಸಾಗುತ್ತಿದೆ ಎಂದರು. ಭಾರತದ ಪ್ರವೃತ್ತಿಯು ಎಂದಿಗೂ ಸರ್ಕಾರದ ಮೂಲಕ ಎಲ್ಲವನ್ನೂ ಮಾಡುವುದಲ್ಲ ಮತ್ತು ಇಲ್ಲಿ ಸರ್ಕಾರ, ಸಮಾಜ ಮತ್ತು ಆಧ್ಯಾತ್ಮಿಕ ಅಧಿಕಾರವು ಯಾವಾಗಲೂ ಸಮಾನ ಪಾತ್ರವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ದೇಶವು ತನ್ನ ಪ್ರತಿಜ್ಞೆಗಳನ್ನು ಸಾಧಿಸುವ ಕಡೆಗೆ ಕರ್ತವ್ಯದ ಹಾದಿಯಲ್ಲಿ ನಡೆಯುವಾಗ ಈ ಮನೋಭಾವವನ್ನು ಪ್ರತಿಬಿಂಬಿಸುತ್ತಿದೆ ಎಂದು ಅವರು ಹೇಳಿದರು.
ಭಾಷಣದ ಕೊನೆಯಲ್ಲಿ ಪ್ರಧಾನಮಂತ್ರಿ ಅವರು ದೇಶದ ಪ್ರಯತ್ನಗಳು ಮತ್ತು ಪ್ರತಿಜ್ಞೆಗಳನ್ನು ಮುಂದೆ ಕೊಂಡೊಯ್ಯುವುದನ್ನು ಮುಂದುವರಿಸುವಂತೆ ಆಧ್ಯಾತ್ಮಿಕ ನಾಯಕರಲ್ಲಿ ಮನವಿ ಮಾಡಿದರು.
***
Addressing the Ahimsa Yatra Sampannata Samaroh Karyakram. https://t.co/Vq5SMTXsvV
— Narendra Modi (@narendramodi) March 27, 2022