Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಹಮದಾಬಾದ್ ಅಂತಾರಾಷ್ಟ್ರೀಯ ಫಲಪುಷ್ಪ ಪ್ರದರ್ಶನದ ಇಣುಕುನೋಟಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಹಮದಾಬಾದ್ ಅಂತಾರಾಷ್ಟ್ರೀಯ ಫಲಪುಷ್ಪ ಪ್ರದರ್ಶನದ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಪ್ರದರ್ಶನದ ಬೆಳವಣಿಗೆಯನ್ನು ಗಮನಿಸುತ್ತಿರುವುದರಿಂದ ಈ ಪ್ರದರ್ಶನದೊಂದಿಗೆ ನನಗೆ ಬಲವಾದ ನಂಟಿದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ. ಇಂತಹ ಪ್ರದರ್ಶನಗಳು ಪ್ರಕೃತಿಯ ಸೌಂದರ್ಯವನ್ನು ವೈಭವೀಕರಿಸಿ ಸುಸ್ಥಿರತೆಯ ಬಗ್ಗೆ ಜಾಗೃತಿ ಮೂಡಿಸುತ್ತವೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ.

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ;

“ಅಹಮದಾಬಾದ್ ಅಂತರರಾಷ್ಟ್ರೀಯ ಫಲಪುಷ್ಪ ಪ್ರದರ್ಶನದ ಕೆಲವು ನೋಟಗಳು ಇಲ್ಲಿವೆ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಪ್ರದರ್ಶನವು ಬೆಳೆಯುತ್ತಿರುವುದನ್ನು ನಾನು ನೋಡಿದ್ದರಿಂದ ಈ ಪ್ರದರ್ಶನದೊಂದಿಗೆ ನನಗೆ ಬಲವಾದ ನಂಟಿದೆ. ಇಂತಹ ಪ್ರದರ್ಶನಗಳು ಪ್ರಕೃತಿಯ ಸೌಂದರ್ಯವನ್ನು ವೈಭವೀಕರಿಸಿ ಸುಸ್ಥಿರತೆಯ ಬಗ್ಗೆ ಜಾಗೃತಿ ಮೂಡಿಸುತ್ತವೆ. ಇಂತಹ ಪ್ರದರ್ಶನಗಳು ಸ್ಥಳೀಯ ರೈತರು, ತೋಟಗಾರರು ಮತ್ತು ಉತ್ಸಾಹಿಗಳಿಗೆ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಅವಕಾಶವನ್ನು ನೀಡುತ್ತವೆ. 

“ಅಹಮದಾಬಾದ್ ಇಂಟರ್ನ್ಯಾಷನಲ್ ಫ್ಲವರ್ ಶೋನಿಂದ ಇನ್ನೂ ಕೆಲವು ನೋಟಗಳು…” ಎಂದು ಹೇಳಿದ್ದಾರೆ.

 

 

*****