Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

 ಅಹಮದಾಬಾದ್‌ನಲ್ಲಿ ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಭಾಷಣದ ಪಠ್ಯ

 ಅಹಮದಾಬಾದ್‌ನಲ್ಲಿ ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಭಾಷಣದ ಪಠ್ಯ


ನಮಸ್ಕಾರ ಸ್ವಾಮಿನಾರಾಯಣ!

ನಮಸ್ಕಾರ ಸ್ವಾಮಿನಾರಾಯಣ!

ಪರಮಪೂಜ್ಯ ಮಹಾಂತ ಸ್ವಾಮೀಜಿ, ಪೂಜ್ಯರಾದ ಸಾಧುಸಂತರೇ,  ರಾಜ್ಯಪಾಲರೇ, ಮುಖ್ಯಮಂತ್ರಿಗಳೇ  ಹಾಗೂ ಉಪಸ್ಥಿತರಿರುವ ಸತ್ಸಂಗಿ ಕುಟುಂಬದ ಎಲ್ಲ ಸದಸ್ಯರೇ, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿರುವುದು  ಮತ್ತು ಈ ಸತ್ಸಂಗಿಯ ಭಾಗ್ಯ ಸಿಕ್ಕಿರುವುದು ನನ್ನ ಸೌಭಾಗ್ಯ.  ಈ ಕಾರ್ಯಕ್ರಮವು  ದೊಡ್ಡ ಪ್ರಮಾಣದಲ್ಲಿ ಮತ್ತು ಒಂದು ತಿಂಗಳವರೆಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಸಂಖ್ಯೆಗಳ ವಿಷಯದಲ್ಲಿ ಮಾತ್ರ ದೊಡ್ಡದಾಗಿದೆ ಎಂದು ನಾನು ನಂಬುವುದಿಲ್ಲ, ಇದು ಸಮಯದ ದೃಷ್ಟಿಯಿಂದ ಸಹ  ವಿಸ್ತಾರವಾಗಿದೆ.  ನಾನು ಇಲ್ಲಿ ಕಳೆದ ಸಮಯವನ್ನು ಇಲ್ಲಿ ದೈವಿಕತೆಯ ಭಾವನೆ  ಎಂದು ನಾನು ಭಾವಿಸುತ್ತೇನೆ.  ಇಲ್ಲಿ ಚಿಂತನೆಗಳ ಭವ್ಯತೆ ಇದೆ.  ಇಲ್ಲಿ ನಮ್ಮ ಪರಂಪರೆ ಏನು? ನಮ್ಮ ಪರಂಪರೆ ಎಂತಹದು?  ನಮ್ಮ ನಂಬಿಕೆ ಏನು ? ನಮ್ಮ ಆಧ್ಯಾತ್ಮಿಕತೆ ಏನು? ನಮ್ಮ ಸಂಪ್ರದಾಯ ಏನು ?ನಮ್ಮ ಸಂಸ್ಕೃತಿ ಏನು? ನಮ್ಮ ಸ್ವಭಾವ ಏನು? ಎಂಬ ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಾಟ ಈ ಕಾರ್ಯಕ್ರಮದಲ್ಲಿ ಸೇರಿಸಲಾಗಿದೆ.  ಭಾರತದ ಪ್ರತಿಯೊಂದರ ಬಣ್ಣವೂ ಇಲ್ಲಿ ಗೋಚರಿಸುತ್ತದೆ.  ಈ ಸಂದರ್ಭದಲ್ಲಿ, ಈ ಕಾರ್ಯಕ್ರಮಕ್ಕಾಗಿ ನಾನು ಎಲ್ಲಾ ಗೌರವಾನ್ವಿತ ಸಂತರ ಪಾದಗಳಿಗೆ ನಮಸ್ಕರಿಸುತ್ತೇನೆ, ಈ ಕಾರ್ಯಕ್ರಮಕ್ಕಾಗಿ ಸಂತರ ಸಾಮರ್ಥ್ಯ ಮತ್ತು ಆ ದೃಷ್ಟಿಯನ್ನು ಸಾಕಾರಗೊಳಿಸಲು ಅವರು ಮಾಡಿದ ಪ್ರಯತ್ನಕ್ಕಾಗಿ ನಾನು ಅವರನ್ನು ನನ್ನ ಹೃದಯಪೂರ್ವಕ ಅಭಿನಂದಿಸುತ್ತೇನೆ ಮತ್ತು ಗೌರವಾನ್ವಿತರ ಆಶೀರ್ವಾದವನ್ನು ಕೋರುತ್ತೇನೆ. ಮಹಾಂತ ಸ್ವಾಮಿಜೀ‌ ಇಂತಹ ಭವ್ಯವಾದ ಕಾರ್ಯಕ್ರಮ ರಾಷ್ಟ್ರ ಮತ್ತು ಜಗತ್ತನ್ನು ಆಕರ್ಷಿಸುತ್ತದೆ. ಅಷ್ಟೇ ಅಲ್ಲದೇ  ಪ್ರಭಾವವನ್ನೂ ಬೀರುತ್ತದೆ. ಇದು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ.

ಜನವರಿ 15 ರವರೆಗೆ ಪ್ರಪಂಚದಾದ್ಯಂತದ ಲಕ್ಷಾಂತರ ಜನರು ಗೌರವಾನ್ವಿತ ಪ್ರಮುಖ ಸ್ವಾಮೀಜಿಯವರನ್ನ  ನನ್ನಂತೆ ಪಿತೃಪ್ರಧಾನರಿಗೆ ನಮನ ಸಲ್ಲಿಸಲು ಇಲ್ಲಿಗೆ ಬರಲಿದ್ದಾರೆ.  ವಿಶ್ವಸಂಸ್ಥೆಯಲ್ಲೂ ಪ್ರಮುಖ್ ಸ್ವಾಮೀಜಿಯವರ ಶತಮಾನೋತ್ಸವವನ್ನು ಆಚರಿಸಲಾಯಿತು ಮತ್ತು ಅವರ ಚಿಂತನೆಗಳು ಎಷ್ಟು ಶಾಶ್ವತವಾಗಿವೆ, ಅವು ಎಷ್ಟು ಸಾರ್ವತ್ರಿಕವಾಗಿವೆ. ನಮ್ಮ ಶ್ರೇಷ್ಠ ಸಂತರ ಪರಂಪರೆಯಿಂದ ಪ್ರೇರಿತಗೊಂಡಿವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ನಿಮ್ಮಲ್ಲಿ ಅನೇಕರಿಗೆ ತಿಳಿದಿರಬಹುದು. ಸ್ಥಾಪಿತ ವೇದಗಳಿಂದ ವಿವೇಕಾನಂದರಿಂದಲೂ ಪ್ರಮುಖ ಸ್ವಾಮಿಗಳಂತಹ ಮಹಾನ್ ಸಂತರಿಂದ ಮುನ್ನಡೆಸಲ್ಪಟ್ಟ ವಸುಧೈವ ಕುಟುಂಬಕಂನ ಚೈತನ್ಯವು ಇಂದು ಶತಮಾನೋತ್ಸವದ ಆಚರಣೆಯಲ್ಲಿಯೂ ಕಂಡುಬರುತ್ತದೆ.  ನಿರ್ಮಾಣವಾಗಿರುವ ಈ ನಗರದಲ್ಲಿ ಸಾವಿರಾರು ವರ್ಷಗಳ ನಮ್ಮ ಶ್ರೇಷ್ಠ ಸಂತ ಪರಂಪರೆ, ಶ್ರೀಮಂತ ಸಂತ ಪರಂಪರೆಯನ್ನು ಒಟ್ಟಾಗಿ ದರ್ಶನ ಮಾಡಲಾಗುತ್ತಿದೆ.  ನಮ್ಮ ಸಂತ ಪರಂಪರೆ ಕೇವಲ ಯಾವುದೇ ಧರ್ಮ, ಪಂಥ, ನಡತೆ, ಚಿಂತನೆಗಳನ್ನು ಹರಡುವುದಕ್ಕೆ ಸೀಮಿತವಾಗಿಲ್ಲ. ಇದು ನಮ್ಮ ಸಂತರು ಇಡೀ ಜಗತ್ತನ್ನು ಸಂಪರ್ಕಿಸಲು ವಸುಧೈವ ಕುಟುಂಬಕದ ಸನಾತನ ಚೈತನ್ಯವನ್ನು ಸಶಕ್ತಗೊಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ನಾನು ಅದೃಷ್ಟಶಾಲಿ.ಈಗ ಬ್ರಹ್ಮವಿಹಾರಿ ಸ್ವಾಮಿ ಜೀ ಅವರು ನನಗೆ ಕೆಲವು ಆಂತರಿಕ ವಿಷಯಗಳನ್ನು ತಿಳಿಸಿದ್ದಾರೆ.ಸಲಹೆ ನೀಡುತ್ತಿದ್ದಾರೆ. ಬಾಲ್ಯದಿಂದಲೂ ನನಗೆ ಅಂತಹ ಕೆಲವು ಕ್ಷೇತ್ರಗಳಲ್ಲಿ ಆಕರ್ಷಣೆ ಇತ್ತು, ಆದ್ದರಿಂದ ನಾನು ದೂರದಿಂದಲೂ ಪ್ರಮುಖ ಸ್ವಾಮೀಜಿಯವರನ್ನು ಭೇಟಿ ಮಾಡುತ್ತಿದ್ದೆ.  ನಾವು ಅವರನ್ನು ತುಂಬಾ ಹತ್ತಿರಕ್ಕೆ ತಲುಪುತ್ತೇವೆ ಎಂಬ ಕಲ್ಪನೆಯೂ ನನಗೆ  ಇರಲಿಲ್ಲ. ಆಗಾಗ ದೂರದಿಂದಲೂ ದರ್ಶನ ಪಡೆಯುವ ಅವಕಾಶ ಸಿಗುತ್ತಿತ್ತು.ಆಗ ನನ್ನ ವಯಸ್ಸು ಕೂಡ ತುಂಬಾ ಚಿಕ್ಕದಾಗಿತ್ತು, ಆದರೆ ಕುತೂಹಲ ಹೆಚ್ಚುತ್ತಲೇ ಇತ್ತು.  ಬಹಳ ವರ್ಷಗಳ ನಂತರ, ಬಹುಶಃ 1981 ರಲ್ಲಿ, ಮೊದಲ ಬಾರಿಗೆ ನಾನು ಅವರೊಂದಿಗೆ ಏಕಾಂಗಿಯಾಗಿ ಸತ್ಸಂಗ ಮಾಡುವ ಭಾಗ್ಯವನ್ನು ಪಡೆದುಕೊಂಡೆ . ನನಗೆ ಆಶ್ಚರ್ಯವಾಗುವಂತಹ ಸಂಗತಿಯೆಂದರೆ ಅವರು ನನ್ನ ಬಗ್ಗೆ ಕೆಲವು ಮಾಹಿತಿಯನ್ನು ಸಂಗ್ರಹಿಸಿದ್ದು. ಅವರು ನನ್ನೊಂದಿಗೆ ಇಡೀ ಸಮಯವನ್ನು ಧರ್ಮ ಅಥವಾ ದೇವರ ಬಗ್ಗೆ ಮಾತ್ರ ಚರ್ಚಿಸಲಿಲ್ಲ. ಆಧ್ಯಾತ್ಮಿಕತೆ, ಏನೂ ಇಲ್ಲ, ಸಂಪೂರ್ಣವಾಗಿ ಸೇವೆ, ಮಾನವ ಸೇವೆ, ಈ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು.  ಅದು ನನ್ನ ಮೊದಲ ಭೇಟಿಯಾಗಿತ್ತು ಮತ್ತು ಪ್ರತಿಯೊಂದು ಪದವೂ ನನ್ನ ಹೃದಯದಲ್ಲಿ ಅಚ್ಚೊತ್ತುತ್ತಿತ್ತು. ಸೇವೆಯು ಜೀವನದ ಅತ್ಯುನ್ನತ ಗುರಿಯಾಗಬೇಕು ಎಂಬ ಒಂದೇ ಒಂದು ಸಂದೇಶವನ್ನು ಅವರು ಹೊಂದಿದ್ದರು.  ಕೊನೆಯ ಉಸಿರು ಇರುವವರೆಗೂ ಸೇವೆಯಲ್ಲಿ ತೊಡಗಬೇಕು.

ನಮ್ಮ ಧರ್ಮಗ್ರಂಥಗಳಲ್ಲಿ ಮನುಷ್ಯ ಸೇವೆಯೇ ನಾರಾಯಣನ ಸೇವೆ ಎಂದು ಹೇಳಲಾಗಿದೆ.  ಜೀವಿಯಲ್ಲಿ ಮಾತ್ರ ಶಿವನಿದ್ದಾನೆ.ವಿಶಾಲವಾದ ಆಧ್ಯಾತ್ಮಿಕ ಚರ್ಚೆಯನ್ನು ಸರಳ ಪದಗಳಲ್ಲಿ ಹೇಳಲಾಗಿದೆ.ಅವರು ವ್ಯಕ್ತಿಗೆ ತಕ್ಕಂತೆ ಆಧ್ಯಾತ್ಮಿಕ  ಸೇವೆ ಸಲ್ಲಿಸುತ್ತಿದ್ದರು. ಒಬ್ಬ ವ್ಯಕ್ತಿ ಎಷ್ಟು ಆಧ್ಯಾತ್ಮವನ್ನು ಜೀರ್ಣಿಸಿಕೊಳ್ಳಬಹುದು, ಎಷ್ಟು ಸ್ವೀಕರಿಸಬಹುದು ಎಂಬುದರ ಮೇಲೆ ಅವರ ಪ್ರವಚನವಿರುತ್ತಿತ್ತು.ಮಾಜಿ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂ ಜೀ, ಅವರಂತಹ ಮಹಾನ್ ವಿಜ್ಞಾನಿ ಸಹ ಇವರನ್ನು  ಒಮ್ಮೊಮ್ಮೆ ಭೇಟಿಯಾಗಿ ಸಮಾಧಾನ ಹೊಂದುತ್ತಿದ್ದರು.

ಅವರ ವ್ಯಕ್ತಿತ್ವದ ವೈಶಾಲ್ಯ, ಅಗಲ, ಆಳ ಮತ್ತು ಆಧ್ಯಾತ್ಮಿಕ ಸಂತರಾಗಿದ್ದರೆಂಬುದ ನ್ನು ತಿಳಿಸುತ್ತದೆ. ಅವರು ನಿಜವಾದ ಅರ್ಥದಲ್ಲಿ ಸಮಾಜ ಸುಧಾರಕರಾಗಿದ್ದರು. ನಾವು ಅವರನ್ನು ನಮ್ಮದೇ ಆದ ರೀತಿಯಲ್ಲಿ ನೆನಪಿಸಿಕೊಂಡಾಗ ನನ್ನ ಮನಸ್ಸಿನಲ್ಲಿ ಯಾವಾಗಲೂ ಕಲಾಮ್ ಅವರ  ಸೇವಾ ಭಾವನೆಯೇ ಬರುತ್ತದೆ.ಈಗ ನನ್ನಂತಹ ಸಾಮಾನ್ಯ ಸಮಾಜ ಸೇವಕನಿಗೆ ಸೇವೆಯ ಭಾಗ್ಯ ಸಿಕ್ಕಿದೆ.  

 ನಾವು ಅವರನ್ನು ನಮ್ಮದೇ ಆದ ರೀತಿಯಲ್ಲಿ ನೆನಪಿಸಿಕೊಂಡಾಗ ಆದರೆ ನಾನು ಯಾವಾಗಲೂ ನೋಡುವ ಒಂದು ಎಳೆಯು ಆ ಮಾಲೆಯಲ್ಲಿ ವಿಭಿನ್ನವಾಗಿರಬಹುದು ಎಂಬುದು ನನ್ನ ಮನಸ್ಸಿನಲ್ಲಿ ಯಾವಾಗಲೂ ಇದೆ.  ನಾವು ವಿವಿಧ ರೀತಿಯ ಮಣಿಗಳನ್ನು ನೋಡುತ್ತಿರಬೇಕು, ನಾವು ಮುತ್ತುಗಳನ್ನು ನೋಡಬೇಕು, ಆದರೆ ಒಳಗಿನ ಎಳೆಯು ಮನುಷ್ಯ ಹೇಗಿರಬೇಕು, ಭವಿಷ್ಯ ಹೇಗಿರಬೇಕು, ವ್ಯವಸ್ಥೆಗಳಲ್ಲಿ ಏಕೆ ಬದಲಾವಣೆಯಾಗಬೇಕು ಎಂಬುದಕ್ಕೆ ಸಂಬಂಧಿಸಿದೆ.  ಉನ್ನತ ಆದರ್ಶಗಳೊಂದಿಗೆ ಸಂಪರ್ಕ ಹೊಂದಿದೆ.ಆದರೆ ಆಧುನಿಕತೆಯ ಕನಸುಗಳು, ಆಧುನಿಕತೆಯ ಎಲ್ಲವನ್ನೂ ಒಪ್ಪಿಕೊಳ್ಳುವುದು, ಅದ್ಭುತ ಸಂಯೋಜನೆ, ಅದ್ಭುತ ಸಂಗಮ, ಅವರ ವಿಧಾನವೂ ಅತ್ಯಂತ ವಿಶಿಷ್ಟವಾಗಿತ್ತು, ಅವರು ಯಾವಾಗಲೂ ಜನರ ಒಳಗಿನ ಒಳ್ಳೆಯತನವನ್ನು ಪ್ರೋತ್ಸಾಹಿಸಿದರು.  ಹೌದೆಂದು ಯಾವತ್ತೂ ಹೇಳಿಲ್ಲ ಅಣ್ಣ, ನೀನು ಹೀಗೆ ಮಾಡು, ದೇವರ ನಾಮಸ್ಮರಣೆ ಮಾಡು, ಒಳ್ಳೆಯದಾಗುವುದು, ಇಲ್ಲ, ನಿನ್ನಲ್ಲಿ ಕೊರತೆಗಳಾಗುವುದು, ತೊಂದರೆ ಆಗುವುದು,ಆದರೆ ನಿನ್ನಲ್ಲಿ ಈ ಒಳ್ಳೆತನವಿದೆ, ಅದರತ್ತ ಗಮನ ಹರಿಸಿ ಎನ್ನುತ್ತಿದ್ದರು. ಅವರು ಅದೇ ಶಕ್ತಿಗೆ ಬೆಂಬಲವೆನ್ನುವ  ಗೊಬ್ಬರ ಮತ್ತು ನೀರನ್ನು ಬಳಸುತ್ತಿದ್ದರು.  ನಿಮ್ಮೊಳಗಿನ ಒಳ್ಳೆಯತನವೇ ನಿಮ್ಮೊಳಗೆ ಬಂದು ಬೆಳೆಯುತ್ತಿರುವ ಕೆಡುಕುಗಳನ್ನು ನಿವಾರಿಸುತ್ತದೆ, ಅಂತಹ ಉನ್ನತ ಚಿಂತನೆಯನ್ನು ಮತ್ತು ಸರಳ ಪದಗಳಲ್ಲಿ ಅವರು ನಮಗೆ ಹೇಳುತ್ತಿದ್ದರು.  ಮತ್ತು ಒಂದು ರೀತಿಯಲ್ಲಿ, ಅವರು ಈ ಮಾಧ್ಯಮವನ್ನು ಮಾನವನನ್ನು ಪರಿವರ್ತಿಸುವ ಮಾಧ್ಯಮವನ್ನಾಗಿ ಮಾಡಿದರು.  ಅವರು ನಮ್ಮ ಸಾಮಾಜಿಕ ಜೀವನದಲ್ಲಿ ಹೆಚ್ಚು-ಕಡಿಮೆ ಎಂಬ ತಾರತಮ್ಯದ ಎಲ್ಲಾ ಹಳೆಯ ಅನಿಷ್ಟಗಳನ್ನು ತೆಗೆದುಹಾಕಿದರು.ಈ ಮೂಲಕ ಅವರ ವೈಯಕ್ತಿಕ ಸ್ಪರ್ಶ ಉಳಿದುಕೊಂಡಿತು. ಎಲ್ಲರಿಗೂ ಸಹಾಯ ಮಾಡುವ, ಎಲ್ಲರ ಬಗೆಗೂ ಚಿಂತಿಸುವ,  ಸಾಮಾನ್ಯ ಸಮಯವಾಗಲಿ ಅಥವಾ ಸವಾಲಿನ ಸಮಯವಾಗಲಿ, ಪೂಜ್ಯ ಪ್ರಮುಖ ಸ್ವಾಮೀಜಿಗಳು ಯಾವಾಗಲೂ ಸಮಾಜದ ಕಲ್ಯಾಣಕ್ಕಾಗಿ ಎಲ್ಲರಿಗೂ ಸ್ಫೂರ್ತಿ ನೀಡುತ್ತಿದ್ದರು.  ಮುಂದೆ, ಮುಂದೆ ಸಾಗುವ ಮೂಲಕ ಕೊಡುಗೆ ನೀಡಿದ್ದಾರೆ.  ಮೊರ್ಬಿಯಲ್ಲಿ ಮೊದಲ ಬಾರಿಗೆ ಮಚ್ಚು ಅಣೆಕಟ್ಟಿಗೆ ತೊಂದರೆಯಾದಾಗ ನಾನು ಅಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದೆ.  ನಮ್ಮ ಮೇಷ್ಟ್ರುಗಳನ್ನು, ಕೆಲವು ಸಂತರನ್ನು, ಸತ್ಸಂಗಿಯರನ್ನು ಜೊತೆಯಲ್ಲಿ ಕಳುಹಿಸಿದ್ದರು. ಅವರೆಲ್ಲರೂ ನಮ್ಮೊಂದಿಗೆ ಅಲ್ಲಿ ಮಣ್ಣು ಎತ್ತುವ ಕೆಲಸದಲ್ಲಿ ತೊಡಗಿದ್ದರು.

ಮೃತದೇಹಗಳ ಅಂತ್ಯಸಂಸ್ಕಾರದಲ್ಲಿ ನಿರತರಾಗಿದ್ದರು.  ನನಗೆ ಇನ್ನೂ  ನೆನಪಿದೆ, 2012ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರ ಬಳಿ ಹೋಗಿದ್ದೆ.  ಸಾಮಾನ್ಯವಾಗಿ ನಾನು ನನ್ನ ಜೀವನದಲ್ಲಿ ಯಾವುದೇ ಪ್ರಮುಖ ಘಟ್ಟಕ್ಕೆ ಬಂದರೂ ಪ್ರಮುಖ್ ಸ್ವಾಮೀಜಿಯವರನ್ನು ಭೇಟಿ ಮಾಡುತ್ತೇನೆ.  ನಾನು 2002 ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಬಹುಶಃ ಕೆಲವೇ ಜನರಿಗೆ ತಿಳಿದಿರಬಹುದು.  ನಾನು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಬೇಕಾಗಿತ್ತು, ಮೊದಲ ಬಾರಿಗೆ ನಾನು ನಾಮಪತ್ರ ಸಲ್ಲಿಸಬೇಕಾಗಿತ್ತು ಮತ್ತು ನಾನು ರಾಜ್‌ಕೋಟ್‌ನಿಂದ ಅಭ್ಯರ್ಥಿಯಾಗಬೇಕಾಗಿತ್ತು, ಆಗ ಅಲ್ಲಿ ಇಬ್ಬರು ಸಂತರು ಉಪಸ್ಥಿತರಿದ್ದರು, ನಾನು ಅಲ್ಲಿಗೆ ಹೋದಾಗ, ಅವರು ನನಗೆಒಂದು ಪೆಟ್ಟಿಗೆಯನ್ನು ನೀಡಿದ್ದರು, ನಾನು ಅದನ್ನು ತೆರೆದು‌ ನೋಡಿದಾಗ  ಅದರೊಳಗೆ ಒಂದು ಪೆನ್ನು (ಲೇಖನಿ) ಇತ್ತು. ಇದನ್ನು ಪ್ರಮುಖ್ ಸ್ವಾಮೀಜಿ ಕಳುಹಿಸಿದ್ದಾರೆ, ನೀವು ನಾಮಪತ್ರಕ್ಕೆ  ಈ ಪೆನ್ನಿನಿಂದ ಸಹಿ ಮಾಡಲು  ಹೇಳಿದ್ದರು. ನಂತರ‌ ಅಲ್ಲಿಂದ ಕಾಶಿಗೆ ಚುನಾವಣೆಗೆ ಹೋಗಿದ್ದೆ.

ನಾನು ದಾಖಲಾತಿ ಮಾಡಲು ಹೋದಾಗ ಒಂದೇ ಒಂದು ಚುನಾವಣೆಯೂ ಈ ರೀತಿಯಾಗಿರಲಿಲ್ಲ. ಗೌರವಾನ್ವಿತ ಪ್ರಮುಖ ಸ್ವಾಮೀಜಿಯವರ ಯಾವ ವ್ಯಕ್ತಿಗಳು ಸಹ ಬಂದು ನನ್ನೊಂದಿಗೆ  ಸಹಿ ಹಾಕಲು ನಿಲ್ಲಲಿಲ್ಲ.  ಆದರೆ ನಾನು ಕಾಶಿಗೆ ಹೋದಾಗ ನನಗೆ ಆಶ್ಚರ್ಯ ನಡೆದಿದ್ದು ಏನೆಂದರೆ , ಪ್ರಮುಖ್ ಸ್ವಾಮೀಜಿಯವರು ಪೆಟ್ಟಿಗೆಯಲ್ಲಿ ನನಗೆ ನೀಡಿದ್ದ ಪೆನ್ನಿನ ಬಣ್ಣವು ಬಿಜೆಪಿ ಧ್ವಜದ ಬಣ್ಣವಾಗಿ ಅದರ ಮುಚ್ಚಳವು ಹಸಿರು ಬಣ್ಣದ್ದಾಗಿ  ಕೆಳಭಾಗವು ಕಿತ್ತಳೆ ಬಣ್ಣದ್ದಾಗಿತ್ತು.  

ಈ ಮೂಲಕ ಪ್ರಮುಖ್ ಸ್ವಾಮೀಜಿಯವರು ನನಗೆ ಮೊದಲ ಬಾರಿಗೆ ಹೇಳಿ ಕಳಿಸಿದ್ದು ಏನೆಂದರೆ, ನಾನು  (ಅವನು ) ಪೆನ್ನನ್ನು  ಕೆಲವು ದಿನಗಳವರೆಗೆ ಎಚ್ಚರಿಕೆಯಿಂದ ಇಟ್ಟುಕೊಂಡಿರಬೇಕು ಮತ್ತು ಅದೇ ಬಣ್ಣದ ಪೆನ್ನನ್ನು ಸ್ವಾಮೀಜಿಯವರಿಗೆ  ಕಳುಹಿಸಲು ಮರೆಯಬಾರದು ಎಂದಾಗಿತ್ತು. ಬಹುಶಃ ಅನೇಕ ಜನರು ನಾನು ಇದನ್ನು ಹೇಳಿದ್ದನ್ನು ಕೇಳಿ  ಆಶ್ಚರ್ಯ ಪಡಲೂಬಹುದು. ಈ  40 ವರ್ಷಗಳಲ್ಲಿ,ಪ್ರತಿ ವರ್ಷ ಪ್ರಮುಖ್ ಸ್ವಾಮೀಜಿ ನನಗೆ ಕುರ್ತಾ-ಪೈಜಾಮ ಬಟ್ಟೆಯನ್ನು ಮರೆಯದೇ  ಕಳುಹಿಸುತ್ತಿರುವುದು ನನ್ನ ಅದೃಷ್ಟ. ಏಕೆಂದರೆ ನಾನು ಅವರ ಮಗನಂತೆ. ಒಬ್ಬ ಮಗ ಏನೇ ಆಗಲಿ, ಅವನು ಎಷ್ಟೇ ದೊಡ್ಡವನಾಗಿರಲಿ ಹೆತ್ತವರಿಗೆ ಅವನೆಂದಿಗೂ ಮಗು ಎಂದು ನನಗೆ ತಿಳಿದಿದೆ.

ದೇಶ ನನ್ನನ್ನು ಪ್ರಧಾನಿಯನ್ನಾಗಿ ಮಾಡಿದೆ.ಪ್ರಧಾನಿಯಾದ ಮೇಲೂ ಸಹ ಪ್ರಮುಖ್ ಸ್ವಾಮೀಜಿ ನಡೆಸುತ್ತಿದ್ದ ಸಂಪ್ರದಾಯದಂತೆ ನನಗೆ ಈಗಲೂ  ಬಟ್ಟೆ ಕಳುಹಿಸಲಾಗುತ್ತಿದೆ.  ಇದರರ್ಥ ಈ ಬಾಂಧವ್ಯ ಕೇವಲ  ಸಾಂಸ್ಥಿಕ PRCV ಯ ಕೆಲಸ ಎಂದಷ್ಟೇ ನಾನು ನಂಬುವುದಿಲ್ಲ, ಇದು ಆಧ್ಯಾತ್ಮಿಕ ಸಂಬಂಧ. ಇದು ತಂದೆ-ಮಗನ ವಾತ್ಸಲ್ಯ, ಅವಿನಾಭಾವ ಸಂಬಂಧ ಮತ್ತು ಇಂದಿಗೂ ನಾನು ಎಲ್ಲಿದ್ದರೂ,  ನನ್ನ ಪ್ರತಿ ಕ್ಷಣವನ್ನು ಅವರು  ಗಮನಿಸುತ್ತಿರುತ್ತಾರೆ.  ನನ್ನ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.ನಾನು ಅವರು ಹಾಕಿಕೊಟ್ಟಿರುವ ಅದೇ ದಾರಿಯಲ್ಲಿ ನಡೆಯುತ್ತಿದ್ದೇನೆಯೋ ಇಲ್ಲವೋ ಎಂಬುದನ್ನು ಗಮನಿಸುತ್ತಿರುತ್ತಾರೆ. ಕಛ್‌ನಲ್ಲಿ ಭೂಕಂಪ ವಾದಾಗ ನಾನು ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದೆ , ಆಗ ನಾನು ಮುಖ್ಯಮಂತ್ರಿಯಾಗಿರುವ ಪ್ರಶ್ನೆಯೇ ಇರಲಿಲ್ಲ.  ಆದರೆ ಅಲ್ಲಿ ಎಲ್ಲ ಪುಣ್ಯಾತ್ಮ ಸಂತರನ್ನು ಭೇಟಿಯಾದಾಗ,‌ಅವರೆಲ್ಲ‌ ನನಗೆ  ಮೊಟ್ಟಮೊದಲು ನಿಮ್ಮ ಊಟದ ವ್ಯವಸ್ಥೆ ಏನು ಅಂತ ಕೇಳಿದ್ದರು. ನಾನು ಆಗ  ನನ್ನ ಕಾರ್ಯಕರ್ತರ ಜೊತೆಗೆ ಊಟ ಇರುವ  ಜಾಗಕ್ಕೆ ಬರುತ್ತೇನೆ ಎಂದಿದ್ದೆ, ಎಲ್ಲಿಗೆ ಹೋದರೂ ಅಲ್ಲಿಯೇ ಊಟ ಬರಲಿ ಎಂದು ಹೇಳಲಿಲ್ಲ, ತಡವಾಗಿ ಬಂದರೂ ರಾತ್ರಿ ಯಾವುದೇ ಆಹಾರವನ್ನು ಸೇವಿಸುತ್ತೇನೆ ಎಂದೆ.  

ಅಂದರೆ, ನಾನು ಕಛ್‌ನಲ್ಲಿ ಕೆಲಸ ಮಾಡುವವರೆಗೂ, ನನ್ನ ಆಹಾರದ ಬಗ್ಗೆ ಮುಖ್ಯ ಕಾಳಜಿ ವಹಿಸಲು ಬಹುಶಃ ಪ್ರಮುಖ್ ಸ್ವಾಮೀಜಿ‌‌ ಅವರು ಸಂತರಿಗೆ ಸೂಚಿಸಿರಬೇಕು.ಅದಕ್ಕೆ ಅವರೆಲ್ಲ ನನ್ನನ್ನು ಮುತುರ್ವರ್ಜಿ ವಹಿಸುತ್ತಿದ್ದರು. ಇದೆಲ್ಲ ನಾ ಜನರೊಂದಿಗೆ  ತುಂಬಾ ಪ್ರೀತಿಯಿಂದ ಹೇಳುತ್ತಿದ್ದೇನೆ. ನಾನು ಯಾವುದೇ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ, ನಾನು ನಿಮ್ಮೊಂದಿಗೆ(ಜನರೊಂದಿಗೆ) ಸರಳ ಮತ್ತು ಸಾಮಾನ್ಯ ನಡವಳಿಕೆಯ ಬಗ್ಗೆ ಮಾತನಾಡುತ್ತಿದ್ದೇನೆ. 

ಜೀವನದ ಅತ್ಯಂತ ಕಷ್ಟದ ಕ್ಷಣಗಳಲ್ಲಿ ಸ್ವತಃ ಪ್ರಮುಖ್ ಸ್ವಾಮಿಯೇ ನನಗೆ ಕರೆ ಮಾಡದ ಅಥವಾ ನನ್ನೊಂದಿಗೆ ಫೋನ್‌ನಲ್ಲಿ ಮಾತನಾಡದ ಪ್ರಸಂಗ ಇಲ್ಲವೇ  ಇಲ್ಲ.  

****

 1991-92ರಲ್ಲಿ ನನ್ನ ಪಕ್ಷವು ಶ್ರೀನಗರದ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಏಕತಾ ಯಾತ್ರೆಯನ್ನು ಯೋಜಿಸಿತ್ತು.  ಆ ಯಾತ್ರೆಯು ಡಾ.ಮುರಳಿ ಮನೋಹರ್ ಜಿಯವರ ನೇತೃತ್ವದಲ್ಲಿ ನಡೆಯುತ್ತಿತ್ತು ಮತ್ತು ನಾನು ಅದರ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದೆ.  ಹೊರಡುವ ಮುನ್ನ ಪ್ರಮುಖ್ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದರಿಂದ ನಾನು ಎಲ್ಲಿಗೆ ಹೋಗುತ್ತಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬುದು ಅವರಿಗೆ ಗೊತ್ತಿತ್ತು.
  ನಾವು ಪಂಜಾಬ್‌ನಿಂದ ಹೋಗುತ್ತಿದ್ದಾಗ, ನಮ್ಮ ಪ್ರಯಾಣದಲ್ಲಿದ್ದವರ ಮೇಲೆ ಭಯೋತ್ಪಾದಕರ ಗುಂಪೊಂದು‌ ಗುಂಡಿನ  ದಾಳಿ ಮಾಡಿತು.ದಾಳಿಯಲ್ಲಿ ನಮ್ಮ ಕೆಲವು ಸಹಚರರು ಕೊಲ್ಲಲ್ಪಟ್ಟರು.  ಇದು ಇಡೀ ದೇಶದಲ್ಲಿ ಬಹಳ ಆತಂಕದ ವಿಷಯವಾಯಿತು.    ತದನಂತರ ಅಲ್ಲಿಂದ ಜಮ್ಮು ತಲುಪಿ ನಾವು ಶ್ರೀನಗರದ ಲಾಲ್ ಚೌಕ್ ನಲ್ಲಿ  ತ್ರಿವರ್ಣ ಧ್ವಜವನ್ನು ಹಾರಿಸಿದೆವು.  
ಆದರೆ ನಾನು ಜಮ್ಮುವಿಗೆ ಬಂದಿಳಿದ ತಕ್ಷಣ ನನಗೆ‌ ಮೊದಲ ಫೋನ್ ಕರೆ ಪ್ರಮುಖ್ ಸ್ವಾಮಿಜಿಯವರಿಂದ ಬಂದಿತ್ತು.  ನಾನು ಚೆನ್ನಾಗಿದ್ದೇನೆ ಎಂದೆ.ಅವರು ನನಗೆ  ದೇವರು ನಿಮ್ಮನ್ನು ಆಶೀರ್ವದಿಸಲಿ, ನೀವು ಬಂದರೆ ನಾವು ಮತ್ತೆ ಭೇಟಿಯಾಗುತ್ತೇವೆ ಎಂದು ಆಶೀರ್ವದಿಸಿದರು. ನಂತರ ನಾನು ಮುಖ್ಯಮಂತ್ರಿಯಾದೆ. ಅಕ್ಷರಧಾಮದ ಮುಂದೆ 20 ಮೀಟರ್ ದೂರದಲ್ಲಿ ಸಿಎಂ ನಿವಾಸ ಬಳಿ‌ ಇದ್ದ ನನ್ನ ಮನೆಯಲ್ಲಿ ವಾಸ ಮಾಡುತ್ತಿದ್ದೆ.  ನನ್ನ ಹೋಗುವ ದಾರಿಯೂ ಹೇಗಿತ್ತೆಂದರೆ, ನಾನು ಹೋದ ತಕ್ಷಣ ಅಕ್ಷರಧಾಮದ ಶಿಖರವನ್ನು ನೋಡಿದ ನಂತರವೇ ಮುಂದೆ ಹೋಗುತ್ತಿದ್ದೆ. ದಿನನಿತ್ಯ ಅಕ್ಷರಧಾಮದ ದರ್ಶನವಾಗುತ್ತಿತ್ತು.‌ ಒಮ್ಮೆ ಭಯೋತ್ಪಾದಕರು  ಅಕ್ಷರಧಾಮದ ಮೇಲೆ ದಾಳಿ ಮಾಡಿ ಗುಂಡು ಹಾರಿಸಲಾಯಿತು. ಇದರಿಂದ ವಾತಾವರಣ ಸಂಪೂರ್ಣ ಮಬ್ಬಾಗಿತ್ತು.ಇದನ್ನು ಕಂಡ ನಾನು 
ಆತಂಕದಲ್ಲಿ ತಕ್ಷಣವೇ  ಪ್ರಮುಖ ಸ್ವಾಮೀಜಿಯವರಿಗೆ ಕರೆ ಮಾಡಿದೆ.ಯಾವ ಸಂತರಿಗೆ ಏನಾಗಿದೆಯೋ, ಅಕ್ಷರಧಾಮದ ಮೇಲಾದ ಪರಿಣಾಮ ಹಾನಿಯೇನೆಂಬ ಚಿಂತೆಯಲ್ಲೇ ಅವರನ್ನು ವಿಚಾರಿಸಿದೆ.  ಆಗ ಪ್ರಮುಖ್ ಸ್ವಾಮೀಜಿ ಫೋನ್ ಎತ್ತುತ್ತಲೇ ಸಹೋದರ ನೀನು ಸುರಕ್ಷಿತವಾಗಿದ್ದೀಯಾ ತಾನೇ ಅಕ್ಷರಧಾಮದ ಮುಂದೆಯೇ ನಿನ್ನ ಮನೆಯಿದೆಯಲ್ಲವೇ ಎಲ್ಲವೂ ಸೌಖ್ಯವೇ ತಾನೇ ..ಏನೂ ತೊಂದರೆಯಾಗಿಲ್ಲವಲ್ಲವೇ ಎಂದು ವಿಚಾರಿಸಿದರು.ಆಗ ನಾನು, ತಂದೆ ಇಂತಹ ಸಂದಿಗ್ಧ ಆತಂಕದ ಪರಿಸ್ಥಿತಿಯಲ್ಲಿಯೂ ನೀವು ನನ್ನ ಬಗ್ಗೆ ಕಾಳಜಿ ತೋರುತ್ತಿದ್ದೀರಲ್ಲಾ ಎಂದು ನಮ್ರವಾಗಿ ಕೇಳಿದೆ. ಆಗ ಅವರು,
 ನೋಡು ಸಹೋದರ,  ದೇವರನ್ನು ನಂಬಿದರೇ  ಎಲ್ಲವೂ ಚೆನ್ನಾಗಿರುತ್ತದೆ ಎಂದು ಹೇಳಿದರು.  ದೇವರು ಸತ್ಯದೊಂದಿಗೆ ಇದ್ದಾನೆ, ಅಂದರೆ ವ್ಯಕ್ತಿ ಯಾರೇ ಆಗಿರಲಿ, ಎಂತಹದ್ದೇ ಪರಿಸ್ಥಿತಿಯಲ್ಲಿಯೂ ಮಾನಸಿಕ ಸಮತೋಲನವಿದ್ದು, ಆರೋಗ್ಯವಿರುತ್ತದೆ. ಆಳವಾದ ಆಧ್ಯಾತ್ಮಿಕ ಶಕ್ತಿಯಿಲ್ಲದೇ ಇದಾವುದೂ  ಸಾಧ್ಯವಿಲ್ಲ ಎಂದರು.ಇದೆಲ್ಲವೂ 
ಪ್ರಮುಖ್ ಸ್ವಾಮೀಜಿಯವರು ತಮ್ಮ ಗುರುಗಳಿಂದಾಗಿ ಮತ್ತು ತಮ್ಮ ತಪಸ್ಸಿನಿಂದ ಬಂದಿರುವುದು ಎಂದು ಹೇಳಿ ಅದನ್ನು ಸಾಬೀತುಪಡಿಸಿದರು.  ನಾನು ಯಾವಾಗಲೂ ಒಂದು ವಿಷಯವನ್ನು ನೆನಪಿಸಿಕೊಳ್ಳುವುದೇನೆಂದರೆ, ಪ್ರಮುಖ್ ಸ್ವಾಮೀಜಿ ಅವರು ನನಗೆ ತಂದೆಯಂತೆ ಇದ್ದಾರೆ ಆದರೆ ನೀವೆಲ್ಲ‌ ಅವರು ನನ್ನ ಗುರು ಎಂದು  ಭಾವಿಸುತ್ತೀರಿ.  ಆದರೆ ಇನ್ನೂ ಒಂದು ವಿಷಯ ನನ್ನ ಗಮನವನ್ನು ಸೆಳೆಯುವುದಾದರೆ ದೆಹಲಿಯಲ್ಲಿ ಅಕ್ಷರಧಾಮವನ್ನು  ನಿರ್ಮಿಸಿದಾಗ  ಯಮುನಾ ದಡದಲ್ಲಿ ಅಕ್ಷರಧಾಮ ನೆಲೆಗೊಳ್ಳಬೇಕೆಂಬುದು ಯೋಗಿ ಮಹಾರಾಜರ ಆಶಯವಾಗಿತ್ತು ಎಂದು ಯಾರೋ ಹೇಳಿದ್ದನ್ನು ನಾನು ಆಗ ಪ್ರಸ್ತಾಪಿಸಿದ್ದೆ.ಈಗ ಯೋಗಿಜೀ‌ ಮಹಾರಾಜರೇ ಪ್ರಮುಖ್‌ಜೀ ಅವರ  ಬಾಯಿಂದ ವಿಷಯಗಳನ್ನು ಹೇಳಿಸಿರಬೇಕು.ಯೋಗಿಜೀ ಇಲ್ಲದಿದ್ದರೂ ಅವರು ಅವರ ಪ್ರಮುಖ ಶಿಷ್ಯನ ಮೂಲಕ ಅವರ ಮಾತುಗಳಲ್ಲಿ ಜೀವಿಸುತ್ತಲೇ ಇದ್ದಾರೆ.ನಾವು ಅವರ ಶಕ್ತಿಯನ್ನು ಈಗ ಪ್ರಮುಖ್‌ಜೀ ಮೂಲಕ ಗುರುವಾಗಿ ನೋಡುತ್ತಿದ್ದೇವೆ. ಪ್ರಮುಖ್‌ಜೀ ಅವರು ತಮ್ಮ ಗುರುಗಳ ಮಾತಿಗೆ ತಕ್ಕಂತೆ ನಡೆದುಕೊಂಡ  ಶಿಷ್ಯರಾಗಿ ಯಮುನಾ ದಡದಲ್ಲಿ ಅಕ್ಷರಧಾಮವನ್ನು ನಿರ್ಮಿಸಿ ಇಂದು ವಿಶ್ವದಾದ್ಯಂತ ಜನರು ಅಕ್ಷರಧಾಮಕ್ಕೆ ಬರುವಂತೆ ಮಾಡಿದ್ದಾರೆ. ಈ ಮೂಲಕ ಭಾರತದ ಶ್ರೇಷ್ಠ ಪರಂಪರೆಯನ್ನು ಅರ್ಥಮಾಡಿಸಲು  ಪ್ರಯತ್ನಿಸಿದ್ದಾರೆ‌. ಇದು ಯುಗಯುಗಗಳವರೆಗೆ ಮಾಡುವ ಕೆಲಸ, ಬಾಳಿಗೆ ಸ್ಪೂರ್ತಿ ತುಂಬುವ ಕೆಲಸ.
ಇಂದು ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಹೋದರೂ  ಇಲ್ಲಿನಷ್ಟು ಇರುವ  ದೇವಾಲಯಗಳು ಇಲ್ಲದಿರುವುದು ಹೊಸ ವಿಷಯವೇನಲ್ಲ. ಸಾವಿರಾರು ವರ್ಷಗಳಿಂದ ದೇವಾಲಯಗಳನ್ನು ನಿರ್ಮಿಸಲಾಗುತ್ತಿದೆ.  ಆದರೆ ನಮ್ಮ ದೇವಾಲಯದ ಸಂಪ್ರದಾಯವನ್ನು ಆಧುನೀಕರಿಸಲು, ದೇವಾಲಯದ ವ್ಯವಸ್ಥೆಗಳಲ್ಲಿ ಆಧ್ಯಾತ್ಮಿಕತೆ ಮತ್ತು ಆಧುನಿಕತೆಯನ್ನು ಸಂಯೋಜಿಸಲು   ಪ್ರಮುಖ್ ಸ್ವಾಮೀಜಿಯವರಿಂದ ಒಂದು ದೊಡ್ಡ ಸಂಪ್ರದಾಯವನ್ನು ಸ್ಥಾಪಿಸಲಾಗಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ.  ನಮ್ಮ ಸಂತ ಸಂಪ್ರದಾಯದ ಹಿರಿಯರು ಹೊಸ ತಲೆಮಾರಿನ ಮನಸ್ಸಿನಲ್ಲಿ ಏನು ತುಂಬುತ್ತಿದ್ದಾರೆ ಎಂಬುದು ನಮಗೆ ತಿಳಿದಿಲ್ಲ ಎಂದು ಹಲವರು ಹೇಳುತ್ತಾರೆ.  

ನೀವು ಸನ್ಯಾಸಿಯಾಗಲು ಬಯಸಿದರೆ ಸಂತ ಸ್ವಾಮಿನಾರಾಯಣರಾಗಿ ನೀವು ಆನಂದಿಸುತ್ತೀರಿ ಎಂಬ ಕಥೆ ಮೊದಲು ಹೇಳಲಾಗುತ್ತಿತ್ತು. ಆದರೆ ಪ್ರಮುಖ್ ಸ್ವಾಮೀಜಿಗಳು ಸಂತ ಸಂಪ್ರದಾಯವನ್ನು ಸಂಪೂರ್ಣವಾಗಿ ಬದಲಾಯಿಸಿದ ರೀತಿ, ಸ್ವಾಮಿ ವಿವೇಕಾನಂದ ಜೀ ಅವರು ರಾಮಕೃಷ್ಣ ಮಿಷನ್ ಮೂಲಕ ಸೇವೆಗಾಗಿ ಸನ್ಯಾಸ ಜೀವನವನ್ನು ದೊಡ್ಡ ವಿಸ್ತರಣೆಯನ್ನು ನೀಡಿರುವುದು ಇಲ್ಲಿ ಗಮನಾರ್ಹವಾಗಿದೆ. ಪ್ರಮುಖ್ ಸ್ವಾಮೀಜಿಗಳು ಕೂಡ ಸಂತರು. ಅಂದರೆ ಅವರು ಆತ್ಮ ಕಲ್ಯಾಣಕ್ಕಾಗಿ ಮಾತ್ರ ಸಂತರಲ್ಲ, ಸಮಾಜದ ಹಿತಕ್ಕಾಗಿಯೂ ಸಂತರೇ ಆಗಿದ್ದಾರೆ. ಆದ್ದರಿಂದ ಅವರು ಪ್ರತಿಯೊಬ್ಬ ಸಂತರನ್ನು ಸಮಾಜದ ಹಿತಕ್ಕಾಗಿ  ತಯಾರು ಮಾಡಿದ್ದಾರೆ. ಇಲ್ಲಿ ಕುಳಿತಿರುವ ಪ್ರತಿಯೊಬ್ಬ ಸಂತರೂ  ಕೆಲವು ಸಾಮಾಜಿಕ ಕಾರ್ಯಗಳಿಂದ ಹೊರಬಂದಿದ್ದಾರೆ ಮತ್ತು ಇಂದಿಗೂ ಸಹ ಸಮಾಜಸೇವೆ ಅವರ ಜವಾಬ್ದಾರಿಯಾಗಿದೆ.  ಇವರು ಬರೀ ಆಶೀರ್ವಾದ ನೀಡಿ ಮೋಕ್ಷ ಪಡೆಯುವುದಷ್ಟೇ ಮಾಡುವುದಿಲ್ಲ ಬದಲಿಗೆ ಕಾಡುಗಳಿಗೂ  ಹೋಗುತ್ತಾರೆ, ಅಗತ್ಯಬಿದ್ದರೆ ಆದಿವಾಸಿಗಳ ನಡುವೆಯೂ ಕೆಲಸ ಮಾಡುತ್ತಾರೆ.ಪ್ರಾಕೃತಿಕ ವಿಕೋಪ ಬಂದಾಗ ಸ್ವಯಂಸೇವಕರಾಗಿ ಜೀವನ ಕಳೆಯುತ್ತಾರೆ.  ಗೌರವಾನ್ವಿತ ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಈ ಸಂಪ್ರದಾಯವನ್ನು ಸ್ಥಾಪಿಸುವಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ.  ದೇವಾಲಯಗಳ ಮೂಲಕ ಜಗತ್ತಿನಲ್ಲಿ ನಮ್ಮ ಗುರುತನ್ನು ಮಾಡಲು ಅವರು ಎಷ್ಟೊಂದು ಸಮಯ, ಶಕ್ತಿ ವಿನಿಯೋಗಿಸಿದ್ದಾರೆ ಮತ್ತು ಸ್ಫೂರ್ತಿಯನ್ನು ನೀಡಿ  ಅವರು ಸಂತರ ಅಭಿವೃದ್ಧಿಗೆ ಹೆಚ್ಚು ದುಡಿದಿದ್ದಾರೆ. ಪ್ರಮುಖ್ ಸ್ವಾಮೀಜಿಯವರು ಗಾಂಧಿ ನಗರದಲ್ಲಿ ವಾಸಿಸಬಹುದಿತ್ತು, ಅಹಮದಾಬಾದ್‌ನಲ್ಲಿಯೂ  ವಾಸಿಸಬಹುದಿತ್ತು, ಯಾವುದೇ ದೊಡ್ಡ ನಗರದಲ್ಲಿ‌ ಕೂಡ ವಾಸ ಮಾಡಬಹುದಿತ್ತು
ಆದರೆ ಅವರು ತಮ್ಮ ಹೆಚ್ಚಿನ ಸಮಯವನ್ನು ಸಹರಾನ್‌ಪುರದಲ್ಲಿ ಕಳೆಯಲು ಆದ್ಯತೆ ನೀಡಿದರು.  ಇದು ಇಲ್ಲಿಂದ 80-90 ಕಿಲೋಮೀಟರ್ ದೂರದಲ್ಲಿದೆ. ಸಂತರ ತರಬೇತಿ ಸಂಸ್ಥೆಗೆ ಅವರು ಒತ್ತಾಯಿಸಿದರು ಮತ್ತು ಇಂದು ನಾನು ಯಾವುದೇ ಅಖಾಡದ ಜನರನ್ನು ಭೇಟಿಯಾದಾಗ,  ನೀವು 2 ದಿನ ಸಹರಾನ್‌ಪುರಕ್ಕೆ ಹೋಗಬೇಕು ಎಂದು ಒತ್ತಾಯಿಸುತ್ತೇನೆ.‌ ಸಂತರ ತರಬೇತಿ, ನಮ್ಮ ಮಹಾತ್ಮರು ಹೇಗಿರಬೇಕು, ಸಾಧು-ಮಹಾತ್ಮರು ಹೇಗಿರಬೇಕು ಎಂದು ನೋಡಿ ಬರಬೇಕು ಎನ್ನುತ್ತೇನೆ.ಅವರು ಹೋಗಿ ನೋಡಿ ಬರುತ್ತಾರೆ.ಅಂದರೆ ಆಧುನಿಕತೆಯಲ್ಲಿ ನಾವು ಭಾಷೆಯನ್ನು ಕಲಿಸುತ್ತೇವೆ, ಇಂಗ್ಲಿಷ್ ಭಾಷೆಯನ್ನು ಕಲಿಸುತ್ತೇವೆ, ಸಂಸ್ಕೃತವನ್ನೂ ಕಲಿಸುತ್ತೇವೆ, ವಿಜ್ಞಾನವನ್ನು ಸಹ ಕಲಿಸುತ್ತೇವೆ. ನಮ್ಮ ಆಧ್ಯಾತ್ಮಿಕ ಸಂಪ್ರದಾಯಗಳನ್ನೂ ಕಲಿಸುತ್ತೇವೆ.  ಅಂದರೆ, ಅಭಿವೃದ್ಧಿಗೆ ಸಂಪೂರ್ಣ ಪ್ರಯತ್ನ ಮಾಡುವ ಮೂಲಕ, ಸಮಾಜದಲ್ಲಿ ಅಂತಹ ಪೂಜ್ಯರಾಗಿರಬೇಕು.  ತ್ಯಾಗ ಇರಬೇಕೆನ್ನುವುದು ಈ ಸಣ್ಣ ವಿಚಾರದಲ್ಲಿ ಅಲ್ಲ, ಅದರಲ್ಲಿ ಶಕ್ತಿ ಇರಬೇಕು.  ಅವರು ರಚಿಸಿದ ಸಂಪೂರ್ಣ ಸಂತ ಸಂಪ್ರದಾಯವೆನ್ನುವುದು ಅಕ್ಷರಧಾಮ ದೇವಾಲಯಗಳ ಮೂಲಕ ನಮ್ಮ ಶ್ರೇಷ್ಠ ಭಾರತೀಯ ಸಂಪ್ರದಾಯವನ್ನು ಜಗತ್ತಿಗೆ ಪರಿಚಯಿಸಲು ಒಂದು ಮಾಧ್ಯಮವನ್ನು ರಚಿಸಿದಂತಾಗಿತ್ತು .  ಅಂದಹಾಗೆ, ಗೌರವಾನ್ವಿತ ಪ್ರಮುಖ್  ಸ್ವಾಮಿ ಜೀ ಮಹಾರಾಜ್ ಅವರು ಅತ್ಯುತ್ತಮ ರೀತಿಯ ಸಂತ ಸಂಪ್ರದಾಯವನ್ನು ರಚಿಸಲು ಸಾಂಸ್ಥಿಕ ಕಾರ್ಯವಿಧಾನವನ್ನು ಸ್ಥಾಪಿಸಿದ್ದಾರೆ.  ವೈಯಕ್ತಿಕ ವ್ಯವಸ್ಥೆಯಲ್ಲಿ ಅಲ್ಲ, ಇದು ಸಾಂಸ್ಥಿಕ ಕಾರ್ಯವಿಧಾನ. ಆದ್ದರಿಂದ ಶತಮಾನಗಳಿಂದ ಜನರು ಬರುತ್ತಾರೆ, ಹೋಗುತ್ತಾರೆ, ಹೊಸ ಸಂತರು ಬರುತ್ತಾರೆ, ಆದರೆ ಈ ವ್ಯವಸ್ಥೆಯನ್ನು ಹೊಸ ಸಂಪ್ರದಾಯದ ತಲೆಮಾರುಗಳು ರೂಪುಗೊಳ್ಳುವ ರೀತಿಯಲ್ಲಿ ಮಾಡಲಾಗಿದೆ. ಇದನ್ನು ನಾನು ನನ್ನ ಕಣ್ಣುಗಳ ಮುಂದೆ ನೋಡುತ್ತಿದ್ದೇನೆ. ಅವರು ದೇವರ ಮೇಲಿನ ಭಕ್ತಿ ಮತ್ತು ದೇಶಭಕ್ತಿಯ ನಡುವೆ ವ್ಯತ್ಯಾಸವನ್ನು ತೋರಿಸಲಿಲ್ಲ ಎಂಬುದು ನನ್ನ ಅನುಭವವಾಗಿದೆ. ದೇವರ ಮೇಲಿನ ಭಕ್ತಿಗಾಗಿಯೂ ಬದುಕುವುದು ದೇಶಭಕ್ತಿಗಾಗಿಯೂ  ಬದುಕುವುದು ನನಗೆ ಎರಡೂ ಸತ್ಸಂಗಿ ಎಂದು ಅವರು ಭಾವಿಸುತ್ತಾರೆ. 

 ಇಂದು ಪ್ರಮುಖ ಸ್ವಾಮೀಜಿಯವರ ಶತಮಾನೋತ್ಸವ ಆಚರಣೆ ನಮ್ಮ ಹೊಸ ಪೀಳಿಗೆಗೆ ಸ್ಪೂರ್ತಿಯಾಗಲಿದೆ ಎಂಬ ಕುತೂಹಲ ಮೂಡಲಿದೆ.  ಇಂದಿನ ಯುಗದಲ್ಲಿಯೂ ಪ್ರಮುಖ್‌ ಸ್ವಾಮೀಜಿಯವರ ವಿವರಗಳಿಗೆ ಹೋದರೆ, ಅವರು ಯಾವುದೇ ದೊಡ್ಡದೊಡ್ಡ  ವಿಚಾರಗಳನ್ನು ಉಪದೇಶಿಸಲಿಲ್ಲ, ಅವರು ಯಾವುದೇ ದೊಡ್ಡದೊಡ್ಡ ಸಮಸ್ಯೆಗಳಿದ್ದರೂ ಅವುಗಳನ್ನು ಸರಳವಾಗಿ ಪರಿಹರಿಸಿ ಎಂಬ ವಿಷಯಗಳನ್ನು ಮಾತನಾಡುತ್ತಾರೆ, ಸುಲಭವಾದ ಜೀವನದ ಉಪಯುಕ್ತ ವಿಷಯಗಳನ್ನು ಹೇಳಿದ್ದಾರೆ.80 ಸಾವಿರ ಸ್ವಯಂಸೇವಕರ ದೊಡ್ಡ ಗುಂಪು ಇದೆ ಎಂದು ಹೇಳಿದ್ದಾರೆ. ನಾವು ಈಗ ಬರುತ್ತಿರುವಾಗ, ನಮ್ಮ ಬ್ರಹ್ಮ್ ಜೀ ಅವರು ಎಲ್ಲರೂ ಸ್ವಯಂಸೇವಕರು ಮತ್ತು ಪ್ರಧಾನಿ ಭೇಟಿ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದರು.  ನಾನು ಹೇಳಿದೆ, ನೀವೂ ಅದ್ಭುತ ಮನುಷ್ಯ, ನೀವು ಮರೆತಿದ್ದೀರಾ?  ಹಾಗಾಗಿ ನಾನು ಹೇಳಿದೆ, ಈಗ 80 ಸಾವಿರಕ್ಕೆ ಒಂದನ್ನು ಸೇರಿಸಿ.ನಾನೂ ಸ್ವಯಂಸೇವಕ.ನಾನೂ ಕೂಡ ಈ ಗುಂಪಿನಲ್ಲಿ ಒಬ್ಬ ಎಂದೆ.

ಹೇಳಲು ಬಹಳಷ್ಟಿದೆ, ಹಳೆಯ ನೆನಪುಗಳು ಇಂದು ಮನಸ್ಸನ್ನು ತಟ್ಟುತ್ತಿವೆ.  ಆದರೆ ನಾನು ಯಾವಾಗಲೂ ಪ್ರಮುಖ್‌ ಸ್ವಾಮೀಜಿಯವರ ಅನುಪಸ್ಥಿತಿಯನ್ನು ಅನುಭವಿಸುತ್ತಿದ್ದೆ. ನಾನು ಅವರೊಂದಿಗೆ ಎಂದಿಗೂ ದೊಡ್ಡದನ್ನು ಏನನ್ನೂ ಮಾಡಿಲ್ಲ, ನಾನು ಜ್ಞಾನಕ್ಕಾಗಿ ಏನನ್ನೂ ಮಾಡಿಲ್ಲ,  ನಾನು ಹೋಗಿ ಅವರೊಂದಿಗೆ ಕುಳಿತುಕೊಳ್ಳಲು ಇಷ್ಟಪಡುತ್ತೇನೆ.  ಉದಾಹರಣೆಗೆ, ನೀವು ಮರದ ಕೆಳಗೆ ಕುಳಿತು ದಣಿದಿದ್ದೀರಿ ಎಂದು ಭಾವಿಸಿ.ನೀವು ಮರದ ಕೆಳಗೆ ಕುಳಿತಾಗ ನಿಮಗೆ ತುಂಬಾ ಸಂತೋಷವಾಗುತ್ತದೆ. ದಣಿವಾರುತ್ತದೆ.‌ ಈಗ ಅದೇ ರೀತಿ ಮರವು ನಮಗೆ ಭಾಷಣವನ್ನು ನೀಡುತ್ತಿದೆ.  ನಾನು ಪ್ರಮುಖ್ ಸ್ವಾಮೀಜಿಯ ಬಳಿ ಕೂತಿದ್ದಾಗ ಹೀಗೆ ಅನ್ನಿಸುತ್ತಿತ್ತು.  ಆಲದ ಮರದ ನೆರಳಿನಲ್ಲಿ ಕುಳಿತಿದ್ದೇನೆ, ಜ್ಞಾನ ಭಂಡಾರದ ಬುಡದಲ್ಲಿ ಕುಳಿತಿದ್ದೇನೆ.  ನಾನು ಈ ವಿಷಯಗಳನ್ನು ಬರೆಯಲು ಸಾಧ್ಯವಾಗುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ನನ್ನ ಅಂತರಂಗದ ಪ್ರಯಾಣವು ಅಂತಹ ಸಂತ ಸಂಪ್ರದಾಯ, ಆಧ್ಯಾತ್ಮಿಕ ಸಂಪ್ರದಾಯದಿಂದ ಬದ್ಧವಾಗಿದೆ ಮತ್ತು ಅದರಲ್ಲಿ ಗೌರವಾನ್ವಿತ ಯೋಗಿ ಜೀ‌ ಮಹಾರಾಜ್, ಪೂಜ್ಯ ಪ್ರಮುಖ್ ಸ್ವಾಮಿ ಮಹಾರಾಜ್ ಮತ್ತು ಪೂಜ್ಯ ಮಹಂತ ಸ್ವಾಮಿ ಮಹಾರಾಜ್, ಇವರುಗಳ‌‌ ಉಪಸ್ಥಿತಿಯ ಇಂತಹ ಸಾತ್ವಿಕ ವಾತಾವರಣದಲ್ಲಿ, ಸೇಡಿನ ಪ್ರಪಂಚದ ಮಧ್ಯದಲ್ಲಿ ನನ್ನನ್ನು ರಕ್ಷಿಸಿಕೊಳ್ಳುವ ಮೂಲಕ ಕೆಲಸ ಮಾಡುವ ಶಕ್ತಿಯನ್ನು ನಾನು ಪಡೆಯುತ್ತಿದ್ದೇನೆ.ಇದಕ್ಕಾಗಿ ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ.ಇಂತಹ ಸತ್ಸಂಗದಿಂದ ನಿರಂತರ‌‌ ಪ್ರಭಾವದಿಂದಾಗಿ ರಾಜಸಿಕನೂ ಆಗಬಾರದು, ತಾಮಸಿಕನೂ ಆಗಬಾರದು, ಸಾತ್ವಿಕನಾಗಿ ಮುಂದುವರಿಯಬೇಕು, ಮುಂದುವರಿಯಬೇಕು.ನಿಮ್ಮೆಲ್ಲರಿಗೂ ಅನೇಕ ಶುಭ ಹಾರೈಕೆಗಳು.

ಜಯ ಸ್ವಾಮಿ ನಾರಾಯಣ

****