ಅಸ್ಸೋಚಮ್ ಅಧ್ಯಕ್ಷರಾದ ಬಾಲಕೃಷ್ಣ ಗೋಯೆಂಕಾ ಜಿ, ಪ್ರಧಾನ ಕಾರ್ಯದರ್ಶಿಯವರಾದ ದೀಪಕ್ ಸೂದ್ ಜಿ, ಅಸ್ಸೋಚಮ್ನ ಲಕ್ಷಾಂತರ ಸದಸ್ಯರೇ, ಭಾರತೀಯ ಉದ್ಯಮದ ಪ್ರಮುಖರೇ, ಇತರ ಗಣ್ಯರೇ, ಇಲ್ಲಿ ಹಾಜರಿರುವ ಮಹಿಳೆಯರೇ ಮತ್ತು ಮಹನೀಯರೇ !!!
ಅಸ್ಸೋಚಮ್ ಇಂದು ಬಹಳ ಮಹತ್ವದ ಮೈಲಿಗಲ್ಲನ್ನು ದಾಟಿದೆ. ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಒಟ್ಟುಗೂಡಿಸಿದ 100 ವರ್ಷಗಳ ಅನುಭವವು ಅತ್ಯಂತ ಅಮೂಲ್ಯವಾದ ವಿಷಯವಾಗಿದೆ.
ಅಸ್ಸೋಚಮ್ ನ ಎಲ್ಲಾ ಸದಸ್ಯರನ್ನು ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.
ಸುಮಾರು 100 ಸ್ಥಳಗಳಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಗುತ್ತಿದೆ ಎಂದು ನನಗೆ ತಿಳಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಎಲ್ಲರಿಗೂ, ಉದ್ಯಮಿಗಳಿಗೂ ಮತ್ತು ವಿಶೇಷವಾಗಿ ಎಂಎಸ್ಎಂಇ ವಲಯಕ್ಕೆ ಸಂಬಂಧಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
2019 ರಲ್ಲಿ ಕೆಲವೇ ದಿನಗಳು ಉಳಿದಿವೆ. ಹೊಸ ವರ್ಷ ಮತ್ತು 2020ರ ಹೊಸ ದಶಕವು ನಿಮ್ಮೆಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿ ಮತ್ತು ನಿಮ್ಮ ಗುರಿಗಳು ಈಡೇರಲಿ ಎಂದು ಹಾರೈಸುತ್ತಾ ನನ್ನ ಮಾತನ್ನು ಪ್ರಾರಂಭಿಸುತ್ತೇನೆ.
ಸ್ನೇಹಿತರೇ,
ಶತಮಾನೋತ್ಸವಕ್ಕಾಗಿ ನೀವು ಆರಿಸಿಕೊಂಡಿರಿವ ವಿಷಯವು ರಾಷ್ಟ್ರ ಮತ್ತು ಭಾರತೀಯರ ಗುರಿ ಮತ್ತು ಕನಸುಗಳಿಗೆ ಸಂಬಂಧಪಟ್ಟಿದೆ. ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಪರಿವರ್ತಿಸುವ ವಿಷಯವು ಹಾಗೆಯೇ ಸುಮ್ಮನೆ ಹೊರಬಂದಿಲ್ಲ. ಕಳೆದ ಐದು ವರ್ಷಗಳಲ್ಲಿ, ದೇಶವು ತನ್ನನ್ನು ತಾನೇ ಎಷ್ಟು ಬಲಪಡಿಸಿಕೊಂಡಿದೆಯೆಂದರೆ, ಅಂತಹ ಗುರಿಗಳನ್ನು ನಾವು ಹೊಂದಬಹುದು ಮತ್ತು ಸಾಧಿಸಬಹುದು ಎನ್ನುವಷ್ಟು. 5-6 ವರ್ಷಗಳ ಹಿಂದೆ ನಮ್ಮ ಆರ್ಥಿಕತೆಯು ವಿಪತ್ತಿನತ್ತ ಸಾಗುತ್ತಿತ್ತು ಎನ್ನುವುದು ನಿಮಗೆ ಚೆನ್ನಾಗಿ ತಿಳಿದಿದೆ. ನಮ್ಮ ಸರ್ಕಾರ ಇದನ್ನು ನಿಲ್ಲಿಸಿರುವುದೇ ಅಲ್ಲದೆ ಆರ್ಥಿಕತೆಯಲ್ಲಿ ಶಿಸ್ತು ತರಲು ಪ್ರಯತ್ನಿಸಿದೆ.
ಭಾರತದ ಆರ್ಥಿಕತೆಯು ನಿಗದಿತ ನಿಯಮಗಳ ಅನುಸಾರವಾಗಿ ತನ್ನ ಗುರಿಗಳತ್ತ ಸಾಗಲು, ನಾವು ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡಿದ್ದೇವೆ, ಎಲ್ಲಾ ಕ್ಷೇತ್ರಗಳಲ್ಲೂ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಕೈಗಾರಿಕೆಗಳ ದಶಕಗಳಷ್ಟು ಹಳೆಯದಾದ ಬೇಡಿಕೆಗಳನ್ನು ಈಡೇರಿಸುವತ್ತ ಗಮನ ಹರಿಸಿದ್ದೇವೆ. ಹಾಗಾಗಿ ಈಗ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಸದೃಢವಾದ ಬುನಾದಿಯನ್ನು ಹಾಕಲಾಗಿದೆ. ನಾವು ಭಾರತದ ಆರ್ಥಿಕತೆಯನ್ನು ಔಪಚಾರಿಕೀಕರಣ ಮತ್ತು ಆಧುನೀಕರಣದ ಎರಡು ಪ್ರಮುಖ ಸ್ತಂಭಗಳ ಮೇಲೆ ನಿರ್ಮಿಸುತ್ತಿದ್ದೇವೆ. ಡಿಜಿಟಲ್ ವಹಿವಾಟಿನಲ್ಲಿ ಹೆಚ್ಚಳ, ಜಿಎಸ್ಟಿ, ಆಧಾರ್ ನಿಂದ ಜೋಡಿಸಲ್ಪಟ್ಟ ಪಾವತಿ ವ್ಯವಸ್ಥೆ ಮತ್ತು ಡಿಬಿಟಿ ಮುಂತಾದ ಆರ್ಥಿಕತೆಯ ಹೆಚ್ಚಿನ ಅಂಶಗಳನ್ನು ಔಪಚಾರಿಕ ವ್ಯವಸ್ಥೆಗೆ ತರಲು ವಿವಿಧ ಪ್ರಯತ್ನಗಳನ್ನು ಮಾಡಲಾಗಿದೆ.
ಇದಲ್ಲದೆ, ನಾವು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಆರ್ಥಿಕತೆಯನ್ನು ಆಧುನೀಕರಿಸುವ ಮತ್ತು ತ್ವರಿತಗೊಳಿಸುವತ್ತ ಸಾಗಿದ್ದೇವೆ.
ಈಗ ಕಂಪನಿಯ ನೋಂದಣಿ ಹಲವಾರು ವಾರಗಳ ಬದಲು ಕೆಲವೇ ಗಂಟೆಗಳನ್ನು ತೆಗೆದುಕೊಳ್ಳುತ್ತದೆ; ಗಡಿಗಳಾಚೆಯ ವ್ಯಾಪಾರ ವಹಿವಾಟುಗಳು ಆಟೊಮೇಷನ್ ನಿಂದಾಗಿ ಕಡಿಮೆ ಸಮಯ ತೆಗೆದುಕೊಳ್ಳುವಂತಾಗಿದೆ; ಮೂಲಸೌಕರ್ಯಗಳ ಉತ್ತಮ ಸಂಪರ್ಕದ ಮೂಲಕ ಬಂದರುಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯ (ಟರ್ನ್ ಅರೌಂಡ್ ಟೈಮ್ ) ವನ್ನು ಕಡಿಮೆ ಮಾಡಲಾಗಿದೆ. ಇವೆಲ್ಲವೂ ಆಧುನಿಕ ಆರ್ಥಿಕತೆಯ ಉದಾಹರಣೆಗಳಾಗಿವೆ.
ಸ್ನೇಹಿತರೇ,
ಇಂದು, ನಾವು ದೇಶದಲ್ಲಿ ಕೈಗಾರಿಕೋದ್ಯಮದ ಬೇಡಿಕೆಗಳನ್ನು ಆಲಿಸುವ; ಅದರ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅದರ ಸಲಹೆಗಳಿಗೆ ಸಂಪೂರ್ಣವಾಗಿ ಸ್ಪಂದಿಸಿ ಕಾರ್ಯನಿರ್ವಹಿಸುವ ಸರ್ಕಾರವನ್ನು ಹೊಂದಿದ್ದೇವೆ. ವಿವಿಧ ರಾಜ್ಯಗಳ ವಿವಿಧ ತೆರಿಗೆ ದರಗಳ ಸಮಸ್ಯೆಯನ್ನು ತೊಡೆದುಹಾಕಲು ದೇಶದಲ್ಲಿ ಏಕ ರೀತಿಯ ತೆರಿಗೆಯನ್ನು ಕೈಗಾರಿಕಾ ವಲಯ ಬಯಸಲಿಲ್ಲವೇ? ನಮ್ಮ ಸರ್ಕಾರ ಹಗಲು ರಾತ್ರಿ ಕೆಲಸ ಮಾಡುವ ಮೂಲಕ ಈ ಬೇಡಿಕೆಯನ್ನು ಈಡೇರಿಸಿದೆ. ನಾವು ಜಿಎಸ್ ಟಿಯನ್ನು ಜಾರಿಗೆ ತಂದಿದ್ದೇವೆ. ಇದಲ್ಲದೆ, ವಾಣಿಜ್ಯ ಪ್ರಪಂಚದಿಂದ ನಮಗೆ ಯಾವುದೇ ರೀತಿಯ ಸಲಹೆ ಬಂದರೂ, ಅದರಂತೆ ನಾವು ಜಿಎಸ್ಟಿಯಲ್ಲಿ ಕಾಲಕಾಲಕ್ಕೆ ಸುಧಾರಣೆಯನ್ನು ತರುತ್ತಿದ್ದೇವೆ.
ಸ್ನೇಹಿತರೇ,
ಹಲವಾರು ವರ್ಷಗಳಿಂದ, ಭಾರತದ ಕೈಗಾರಿಕಾ ವಲಯ ಸರಳವಾದ ವ್ಯವಹಾರ ಪ್ರಕ್ರಿಯೆಗಾಗಿ ಒತ್ತಾಯಿಸುತ್ತಿತ್ತು. ಅದು ಸರ್ಕಾರದಿಂದ ಪ್ರಕ್ರಿಯೆಗಳನ್ನು ಪಾರದರ್ಶಕ ಮತ್ತು ಸರಳವಾಗಿಸಲು ಬಯಸಿತ್ತು. ನಿಮ್ಮ ಈ ಬೇಡಿಕೆಯ ಮೇರೆಗೆ ನಮ್ಮ ಸರ್ಕಾರವೂ ಕಾರ್ಯನಿರ್ವಹಿಸಿದೆ. ಇಂದು, ‘ ಈಸ್ ಆಫ್ ಡೂಯಿಂಗ್ ಬಿಸಿನೆಸ್ ‘ನಲ್ಲಿ ಒಂದೇ ಸಮನೆ ಉತ್ತಮ ಶ್ರೇಯಾಂಕಗಳನ್ನು ಗಳಿಸುತ್ತಿರುವ ಭಾರತವು ವಿಶ್ವದ ಅಗ್ರ ಹತ್ತು ರಾಷ್ಟ್ರಗಳಲ್ಲಿ ಒಂದಾಗಿದೆ, ಇದು ಕಳೆದ ಮೂರು ವರ್ಷಗಳಲ್ಲಿ ಅತ್ಯುತ್ತಮವಾಗಿದೆ. ನಾವು ಈಗ 190 ದೇಶಗಳ ಶ್ರೇಯಾಂಕದಲ್ಲಿ 142 ನೇ ಸ್ಥಾನದಿಂದ 63 ನೇ ಸ್ಥಾನಕ್ಕೆ ಏರಿದ್ದೇವೆ. ಅದು ಅಷ್ಟು ಸುಲಭವೇ?
‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ‘ ಎಂದು ಹೇಳಲು ಕೇವಲ ನಾಲ್ಕು ಪದಗಳನ್ನು ಸಾಕು, ಆದರೆ ಉತ್ತಮ ಶ್ರೇಯಾಂಕಗಳಿಗಾಗಿ ಕಠಿಣ ಪರಿಶ್ರಮದ ಅಗತ್ಯವಿರುತ್ತದೆ ಮತ್ತು ತಳಮಟ್ಟದಲ್ಲಿ ನಿಯಮಗಳನ್ನು ಬದಲಾಯಿಸಬೇಕಾಗುತ್ತದೆ.
ವಿದ್ಯುತ್ ಸಂಪರ್ಕಗಳಿರಲಿ, ನಿರ್ಮಾಣ ಪರವಾನಗಿಗಳಿರಲಿ ಅಥವಾ ರಫ್ತು-ಆಮದಿಗೆ ಅನುಮತಿ ನೀಡುವ ಬಗ್ಗೆಯೇ ಇರಲಿ, ನೂರಾರು ಪ್ರಕ್ರಿಯೆಗಳನ್ನು ಸರಳೀಕರಿಸಿದ ನಂತರ ಮತ್ತು ಹಲವಾರು ಅಡೆತಡೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದ ನಂತರ ಶ್ರೇಯಾಂಕಗಳು ಸುಧಾರಿಸುತ್ತವೆ. ಅದನ್ನು ಇನ್ನಷ್ಟು ಉತ್ತಮಗೊಳಿಸಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ.
ಸ್ನೇಹಿತರೇ,
ಕಂಪೆನಿಗಳ ಕಾಯ್ದೆಯಲ್ಲಿ ಇಂತಹ ನೂರಾರು ನಿಬಂಧನೆಗಳು ಇದ್ದವು ಎಂಬುದು ನಿಮಗೆ ತಿಳಿದಿದೆ, ಇದು ಸಣ್ಣ ಪುಟ್ಟ ತಪ್ಪುಗಳನ್ನೂ ಸಹ ಕ್ರಿಮಿನಲ್ ಅಪರಾಧವೆನ್ನುವಂತೆ ಪರಿಗಣಿಸಲು ಅವಕಾಶ ಮಾಡಿಕೊಟ್ಟಿತ್ತು. ನಮ್ಮ ಸರ್ಕಾರ ಈಗ ಈ ರೀತಿಯ ಹಲವು ನಿಬಂಧನೆಗಳನ್ನು ಸಡಿಲಿಸಿದೆ. ಕ್ರಿಮಿನಲ್ ವರ್ಗದಿಂದ ಇನ್ನೂ ಅನೇಕ ನಿಬಂಧನೆಗಳನ್ನು ತೆಗೆದುಹಾಕುವ ಪ್ರಕ್ರಿಯೆಯು ಇನ್ನೂ ಪ್ರಗತಿಯಲ್ಲಿದೆ.
ಅಂತೆಯೇ, ನಮ್ಮ ಸರ್ಕಾರವು ‘ಇನ್ವರ್ಟೆಡ್ ಡ್ಯೂಟಿ’ ಅಂದರೆ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕಕ್ಕೆ ಹೋಲಿಸಿದರೆ ಸಿದ್ಧಪಡಿಸಿದ ಸರಕುಗಳ ಮೇಲಿನ ಆಮದು ಸುಂಕ ಕಡಿಮೆಯಾಗಿರುವ ದರವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಬಜೆಟ್ನಲ್ಲಿ ಇದನ್ನು ಪರಿಗಣಿಸಲಾಗಿದೆ. ಇದರ ಪರಿಣಾಮವಾಗಿ, ಭಾರತದಲ್ಲಿ ಉತ್ಪಾದನಾ ವೆಚ್ಚವೂ ಕಡಿಮೆಯಾಗುತ್ತಿದೆ.
ಸ್ನೇಹಿತರೇ,
ಈ ವರ್ಷದ ಅಕ್ಟೋಬರ್ನಿಂದ, ದೇಶದ ತೆರಿಗೆ ವ್ಯವಸ್ಥೆಯಲ್ಲಿ ಮತ್ತೊಂದು ಐತಿಹಾಸಿಕ ಬದಲಾವಣೆಯ ಆರಂಭವಾಗಲಿದೆ. ತೆರಿಗೆದಾರರು ಮತ್ತು ಆದಾಯ ತೆರಿಗೆ ಇಲಾಖೆಯ ನಡುವೆ ಯಾವುದೇ ಮಾನವ ಸಂಪರ್ಕವಿಲ್ಲದ ದಿಕ್ಕಿನತ್ತ ನಾವು ಸಾಗಿದ್ದೇವೆ. ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಜವಾಬ್ದಾರಿಯನ್ನು ತರಲು ನಾವು ಮುಖರಹಿತ ತೆರಿಗೆ ಆಡಳಿತದತ್ತ ಸಾಗುತ್ತಿದ್ದೇವೆ.
ಸ್ನೇಹಿತರೇ,
ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡಲು ಮತ್ತು ಅದರ ಪ್ರಕ್ರಿಯೆಯನ್ನು ಸರಳೀಕರಿಸಲು ದೇಶದಲ್ಲಿ ಹಲವು ವರ್ಷಗಳಿಂದ ಚರ್ಚೆಗಳು ನಡೆದವು. ಆದರೆ ಇದರ ಬಗ್ಗೆ ಯಾರು ದೃಢವಾದ ಕ್ರಮಗಳನ್ನು ಕೈಗೊಂಡರು? ಅದನ್ನು ನಮ್ಮ ಸರ್ಕಾರ ಕೈಗೊಂಡಿತು. ದೇಶದಲ್ಲಿ ಇಷ್ಟೊಂದು ಕಡಿಮೆ ಕಾರ್ಪೊರೇಟ್ ತೆರಿಗೆ ಹಿಂದೆಂದೂ ಇರಲಿಲ್ಲ. ಇದರರ್ಥ ಉದ್ಯಮದಿಂದ ಕಡಿಮೆ ಕಾರ್ಪೊರೇಟ್ ತೆರಿಗೆಯನ್ನು ತೆಗೆದುಕೊಳ್ಳುವ ಯಾವುದೇ ಸರ್ಕಾರವಿದ್ದರೆ, ಅದು ನಮ್ಮ ಸರ್ಕಾರ ಮಾತ್ರ.
ಸ್ನೇಹಿತರೇ,
ಕಾರ್ಮಿಕ ಸುಧಾರಣೆಗಳ ಕುರಿತು ಹಲವಾರು ವರ್ಷಗಳಿಂದ ದೇಶದಲ್ಲಿ ಚರ್ಚೆಗಳು ನಡೆಯುತ್ತಿವೆ. ಕಾರ್ಮಿಕ ವರ್ಗಕ್ಕಾಗಿ ಏನನ್ನೂ ಮಾಡದಿರುವುದೇ ಉತ್ತಮ ಎಂದು ಕೆಲವರು ನಂಬಿದ್ದರು. ಅಂದರೆ, ಪರಿಸ್ಥಿತಿಯನ್ನು ಹಾಗೆಯೇ ಬಿಟ್ಟು ಮತ್ತು ಅದೇ ಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವಂತೆ ಮಾಡುವುದು. ಆದರೆ ನಮ್ಮ ಸರ್ಕಾರ ಹಾಗೆ ನಂಬುವುದಿಲ್ಲ.
ಕಾರ್ಮಿಕ ಸಮೂಹವನ್ನೂ ಸಹ ಎಲ್ಲ ರೀತಿಯಲ್ಲೂ ನೋಡಿಕೊಳ್ಳಬೇಕು ಎಂದು ನಾವು ನಂಬುತ್ತೇವೆ. ಅವರ ಜೀವನವನ್ನು ಸುಲಭಗೊಳಿಸಬೇಕು. ಅವರು ಸರಿಯಾದ ಸಮಯಕ್ಕೆ ಭವಿಷ್ಯ ನಿಧಿ ಮತ್ತು ಆರೋಗ್ಯ ಸೇವೆಗಳ ಪ್ರಯೋಜನಗಳನ್ನು ಪಡೆಯಬೇಕು. ಈ ಎಲ್ಲಾ ಕ್ಷೇತ್ರಗಳಲ್ಲಿ ಸರ್ಕಾರ ಕೆಲಸ ಮಾಡಿದೆ.
ಆದ್ದರಿಂದ ಕಾರ್ಮಿಕ ಸಂಘಗಳು ಮತ್ತು ಕೈಗಾರಿಕೋದ್ಯಮದ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಮಿಕ ಕಾನೂನಿನಲ್ಲಿ ನಾವು ಹಲವಾರು ಬದಲಾವಣೆಗಳನ್ನು ಮಾಡಿದ್ದೇವೆ, ಅದು ಈಗಿನ ಅಗತ್ಯವಾಗಿದೆ. ಆದರೆ ಸ್ನೇಹಿತರೇ, ಆರ್ಥಿಕತೆಯನ್ನು ಪಾರದರ್ಶಕ ಮತ್ತು ಸದೃಢವಾಗಿಸಲು ಕೈಗಾರಿಕೆಗಳ ಹಿತದೃಷ್ಟಿಯಿಂದ ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನೂ ಪ್ರಶ್ನಿಸುವುದು ಅವರ ಜವಾಬ್ದಾರಿ ಎಂದು ಕೆಲವರು ಭಾವಿಸುತ್ತಾರೆ.
2014 ರ ಹಿಂದಿನ ವರ್ಷಗಳಲ್ಲಿ ಆರ್ಥಿಕತೆಯು ಕುಸಿಯುತ್ತಿರುವಾಗ ಆರ್ಥಿಕತೆಯ ಜವಾಬ್ದಾರಿ ಹೊತ್ತಿರುವ ಜನರು ಹೇಗೆ ಮೌನವಾಗಿದ್ದರು ಎಂಬುದನ್ನು ರಾಷ್ಟ್ರ ಎಂದಿಗೂ ಮರೆಯಬಾರದು.
ನಾವು ಮೊದಲಿನಿಂದಲೂ ಪಡೆದ ಆರ್ಥಿಕ ನೀತಿಗಳು, ಪತ್ರಿಕೆಗಳು ಪ್ರಕಟಿಸಿದ ಕಥೆಗಳು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗ ಇದ್ದ ದೇಶದ ವಿಶ್ವಾಸಾರ್ಹತೆಯ ವಿವರಗಳ ಬಗ್ಗೆ ನಾನು ಹೇಳಲು ಬಯಸುವುದಿಲ್ಲ. ಆದರೆ ಆ ಸಮಯದಲ್ಲಿ ಇದ್ದ ಕೆಟ್ಟ ಪರಿಸ್ಥಿತಿಗಳ ಪರಿಣಾಮಗಳನ್ನು ತಗ್ಗಿಸಲು ನಾವು ಕೈಗೊಂಡ ಶಾಶ್ವತ ಕ್ರಮಗಳು 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಒಂದು ಸದೃಢವಾದ ಬುನಾದಿಯನ್ನು ಹಾಕಿವೆ.
ಸ್ನೇಹಿತರೇ,
2014 ರ ಮೊದಲು ದೇಶದ ಬ್ಯಾಂಕಿಂಗ್ ವ್ಯವಸ್ಥೆಯು ಯಾವ ರೀತಿಯ ಬಿಕ್ಕಟ್ಟನ್ನು ಹೊಂದಿತ್ತೆಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಆಗಿನ ಪರಿಸ್ಥಿತಿ ಏನೆಂದರೆ, ನಷ್ಟವನ್ನು ಸರಿದೂಗಿಸಲು ಬ್ಯಾಂಕುಗಳು ಸುಮಾರು 6 ಲಕ್ಷ ಕೋಟಿ ರೂ.ಗಳ ಬಂಡವಾಳವನ್ನು ಹೂಡಬೇಕಾಗಿತ್ತು. ಇಂದ್ರಧನುಷ್ ಯೋಜನೆಯಡಿ ಸರ್ಕಾರ 70 ಸಾವಿರ ಕೋಟಿ ರೂಪಾಯಿಗಳನ್ನು ಮತ್ತು ನಂತರ 2 ಲಕ್ಷ 36 ಸಾವಿರ ಕೋಟಿ ರೂಪಾಯಿಗಳನ್ನು ರೀಕ್ಯಾಪ್ ಅಂದರೆ ಮರು ಬಂಡವಾಳೀಕರಣದ ಮೂಲಕ ನೀಡಿತು.
ಸ್ನೇಹಿತರೇ,
ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ, ಈಗ 13 ಬ್ಯಾಂಕುಗಳು ಲಾಭದ ಸ್ಥಿತಿಗೆ ಮರಳಿವೆ. ಪಿಸಿಎ ಪಟ್ಟಿಯಿಂದ 6 ಬ್ಯಾಂಕುಗಳು ಸಹ ಹೊರಬಂದಿವೆ. ನಾವು ಬ್ಯಾಂಕುಗಳ ವಿಲೀನವನ್ನು ಸಹ ತ್ವರಿತಗೊಳಿಸಿದ್ದೇವೆ. ಬ್ಯಾಂಕುಗಳು ಈಗ ದೇಶಾದ್ಯಂತ ತಮ್ಮ ಜಾಲವನ್ನು ವಿಸ್ತರಿಸುತ್ತಿವೆ ಮತ್ತು ಜಾಗತಿಕವಾಗಿ ವಿಸ್ತರಿಸಲು ಸಜ್ಜಾಗಿವೆ. ನಮ್ಮ ಸರ್ಕಾರವು ಬ್ಯಾಂಕುಗಳ ವ್ಯಾವಹಾರಿಕ ನಿರ್ಧಾರಗಳಲ್ಲಿ ಯಾವುದೇ ಹಸ್ತಕ್ಷೇಪವನ್ನು ತೆಗೆದುಹಾಕಿದೆ.
ಸರ್ಕಾರದ ಹಸ್ತಕ್ಷೇಪವಿಲ್ಲದೆ ಪಾರದರ್ಶಕ ರೀತಿಯಲ್ಲಿ ಅರ್ಹರನ್ನು ನೇಮಕ ಮಾಡಲು ಬ್ಯಾಂಕ್ ಬೋರ್ಡ್ ಬ್ಯೂರೋವನ್ನು ರಚಿಸಲಾಗಿದೆ. ಆರ್ಬಿಐ ಮತ್ತು ಬಾಹ್ಯ ತಜ್ಞರನ್ನು ಇಟ್ಟುಕೊಂಡು ಬ್ಯಾಂಕುಗಳಿಗೆ ಸಂಪೂರ್ಣ ಸ್ವಾಯತ್ತತೆ ನೀಡಲಾಗಿದೆ. ಬ್ಯಾಂಕುಗಳಲ್ಲಿ ಹಿರಿಯ ಹುದ್ದೆಗಳ ನೇಮಕಾತಿ ಬಗ್ಗೆ ಈಗ ನಿಮಗೆ ಯಾವುದೇ ಗೊಣಗಾಟ ಕೇಳಿ ಬರುವುದಿಲ್ಲ !!!
ಸ್ನೇಹಿತರೇ,
ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಹಲವು ಬಾರಿ ಕಂಪನಿಗಳ ವೈಫಲ್ಯವನ್ನು ನಾವು ಒಪ್ಪಿಕೊಳ್ಳಬೇಕು ಎನ್ನುವುದನ್ನು ನಮ್ಮ ಸರ್ಕಾರ ನಂಬುತ್ತದೆ. ಎಲ್ಲಾ ವೈಫಲ್ಯಗಳು ಯಾವುದೇ ಆರ್ಥಿಕ ಅಪರಾಧದಿಂದ ಉಂಟಾಗುವುದಿಲ್ಲ. ಆದ್ದರಿಂದ, ಅಂತಹ ಕಂಪನಿಗಳು ಮತ್ತು ಅವುಗಳ ಮಾಲೀಕರು ಉತ್ತಮ ನಿರ್ಗಮನ ಮಾರ್ಗವನ್ನು ಹೊಂದಲಿ ಎನ್ನುವ ಅಂಶಕ್ಕೆ ಸರ್ಕಾರ ಗಮನ ಹರಿಸಿದೆ.
ಇಂದು, ಐಬಿಸಿ – ದಿವಾಳಿತನ ಮತ್ತು ದಿವಾಳಿತನ ಸಂಹಿತೆಯು ಕೆಲವು ಅಥವಾ ಇತರ ಕಾರಣಗಳಿಂದಾಗಿ ವೈಫಲ್ಯಗಳನ್ನು ಎದುರಿಸುತ್ತಿರುವ ಅನೇಕ ಕಂಪನಿಗಳಿಗೆ ಸಹಾಯಕವಾಗುತ್ತಿದೆ.
ದಿವಾಳಿಯಾಗುತ್ತಿರುವ ಕಂಪನಿಗಳು ತಮ್ಮ ಅನುಭವಗಳಿಂದ ಕಲಿಯಬಹುದು ಮತ್ತು ಭವಿಷ್ಯದಲ್ಲಿ ಏನಾದರೂ ಉತ್ತಮವಾಗಿ ಮಾಡಬಹುದು ಎನ್ನುವ ಆಶಾಭಾವನೆಯೊಂದಿಗೆ ವಿಷಮ ಪರಿಸ್ಥಿತಿಯಲ್ಲಿ ಅವುಗಳಿಗೆ ಮಾರ್ಗದರ್ಶನ ನೀಡಲು ಸರ್ಕಾರವು ಮಾಡಿದ ಪ್ರಯತ್ನ ಇದಾಗಿದೆ.
ಸ್ನೇಹಿತರೇ,
ಈ ಎಲ್ಲಾ ನಿರ್ಧಾರಗಳು ಉದ್ಯಮ ಮತ್ತು ಅದರ ಬಂಡವಾಳವನ್ನು ಸುರಕ್ಷಿತವಾಗಿಡಲು ಹೆಚ್ಚಿನ ಸಹಾಯ ಮಾಡಲಿವೆ.
ಇಂದು, ಅಸ್ಸೋಚಮ್ನ ವೇದಿಕೆಯಿಂದ, ದೇಶದಲ್ಲಿನ ಬ್ಯಾಂಕಿಂಗ್ಗೆ ಸಂಬಂಧಿಸಿದ ಜನರಿಗೆ, ಕಾರ್ಪೊರೇಟ್ ಜಗತ್ತಿನ ಜನರಿಗೆ ಹಳೆಯ ದೌರ್ಬಲ್ಯಗಳನ್ನು ಬಹುಮಟ್ಟಿಗೆ ನಿವಾರಿಸಲಾಗಿದೆ ಎಂದು ಭರವಸೆ ನೀಡಲು ನಾನು ಬಯಸುತ್ತೇನೆ. ಆದ್ದರಿಂದ ನಿರ್ಧಾರಗಳನ್ನು ಧಾರಾಳವಾಗಿ ತೆಗೆದುಕೊಳ್ಳಿ, ಮುಕ್ತವಾಗಿ ಹೂಡಿಕೆ ಮಾಡಿರಿ ಮತ್ತು ಮುಕ್ತವಾಗಿ ಖರ್ಚು ಮಾಡಿರಿ. ಸರಿಯಾದ ನಿರ್ಧಾರಗಳ ಮೇಲೆ ಮತ್ತು ನೈಜವಾದ ವಾಣಿಜ್ಯ ನಿರ್ಧಾರಗಳ ಮೇಲೆ ಯಾವುದೇ ಅನ್ಯಾಯದ ಕ್ರಮ ಕೈಗೊಳ್ಳುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ.
ಸ್ನೇಹಿತರೇ,
ಇಂದು, ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಅಡಿಪಾಯವು ಎಷ್ಟು ಪಾರದರ್ಶಕ ಮತ್ತು ಪ್ರಬಲವಾಗಿದೆಯೆಂದರೆ ಅದು 5 ಟ್ರಿಲಿಯನ್ ಡಾಲರ್ ನ ಆರ್ಥಿಕತೆಯ ಗುರಿಯನ್ನು ತಲುಪುವ ಶಕ್ತಿಯನ್ನು ನೀಡುತ್ತದೆ ಎಂದು ಹೇಳಬಹುದು . ಇಂದಿಗೂ ನಮ್ಮ ದೇಶವು ವಿಶ್ವದ 10 ಅತ್ಯುತ್ತಮ ಎಫ್ಡಿಐ ತಾಣಗಳಲ್ಲಿ ಒಂದಾಗಿದೆ. ಕಳೆದ ಕೆಲವು ವರ್ಷಗಳಿಂದ ಭಾರತಕ್ಕೆ ಎಫ್ಡಿಐ ನ ಒಳಹರಿವು ಹೆಚ್ಚಾಗಿದೆ.
ಎಫ್ಡಿಐಗೆ ಎರಡು ಅರ್ಥಗಳಿವೆ ಎಂದು ನಾನು ನಂಬುತ್ತೇನೆ. ಸಂದರ್ಭಕ್ಕೆ ಅನುಗುಣವಾಗಿ ನಾನು ಅವೆರಡನ್ನೂ ಬಳಸುತ್ತೇನೆ. ಒಂದು ಯಾವುದೆಂದರೆ ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿರುವ ಫಾರಿನ್ ಡೈರೆಕ್ಟ್ ಇನವೆಸ್ಟ್ ಮೆಂಟ್ , ವಿದೇಶಿ ನೇರ ಹೂಡಿಕೆ, ಮತ್ತು ಇನ್ನೊಂದು ನನಗೆ ” ಫರ್ಸ್ಟ್ ಡೆವಲಪ್ಡ್ ಇಂಡಿಯಾ ಮೊದಲ ಅಭಿವೃದ್ಧಿ ಹೊಂದಿದ ಭಾರತ”. ಕಳೆದ 20 ವರ್ಷಗಳಲ್ಲಿ ದೇಶಕ್ಕೆ ಹರಿದಿರುವ ಎಫ್ಡಿಐನ ಮೊತ್ತದ ಶೇಕಡಾ 50 ರಷ್ಟು ಭಾಗವು ಕಳೆದ 5 ವರ್ಷಗಳಲ್ಲಿ ಬಂದಿದೆ. ನಾವು ಇತ್ತೀಚಿನ ವರ್ಷಗಳಲ್ಲಿ ನಮ್ಮ ಜಾಗತಿಕಮಟ್ಟದ ಗುಣಮಟ್ಟವನ್ನು ಹೆಚ್ಚು ಸುಧಾರಿಸಿದ್ದೇವೆ. ಇಂದು, ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್-ಅಪ್ ಇಕೋಸಿಸ್ಟಮ್ ನವ್ಯೋದ್ಯಮ ವ್ಯವಸ್ಥೆ ನಮ್ಮ ದೇಶದಲ್ಲಿದೆ. ದೇಶದಲ್ಲಿ ನಾವೀನ್ಯತೆ ಮತ್ತು ಉದ್ಯಮದ ಹೊಸ ವಾತಾವರಣವನ್ನು ಸೃಷ್ಟಿಸಲಾಗಿದೆ. ಇಂದು ವಿಶ್ವದ ಹೆಚ್ಚಿನ ಹೂಡಿಕೆದಾರರು ಭಾರತವನ್ನು ಪೂರ್ಣ ವಿಶ್ವಾಸ ಮತ್ತು ಭರವಸೆಯಿಂದ ನೋಡುತ್ತಿದ್ದಾರೆ. ವಿಶ್ವದಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಅಭೂತಪೂರ್ವ ವಿಶ್ವಾಸ ಹುಟ್ಟಿದೆ.
ಸ್ನೇಹಿತರೇ,
ಇದೇ ಸಕಾರಾತ್ಮಕತೆಯನ್ನು ಆಧರಿಸಿ, ನಾವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಸಾಗಲಿದ್ದೇವೆ. ಮುಂದಿನ ವರ್ಷಗಳಲ್ಲಿ ಮೂಲಸೌಕರ್ಯಕ್ಕಾಗಿ 100 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಹೂಡುವುದರಿಂದ ಅದು ಬಲವನ್ನು ನೀಡುತ್ತದೆ. ದೇಶದ ಗ್ರಾಮೀಣವಲಯದಲ್ಲಿ 25 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯಿಂದಾಗಿ ಈ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಪ್ರತಿ ಮನೆಗೆ ನೀರು ಒದಗಿಸಲು 3.5 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯು ಹೊಸ ಉತ್ತೇಜನವನ್ನು ನೀಡುತ್ತದೆ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ 2 ಕೋಟಿ ಹೊಸ ಮನೆಗಳ ನಿರ್ಮಾಣ, ಅಥವಾ ಪ್ರತಿಯೊಬ್ಬ ದೇಶವಾಸಿಗಳಿಗೆ ಕೈಗೆಟುಕುವ ಆರೋಗ್ಯ ಸೇವೆ ಒದಗಿಸುವ ನಿರ್ಣಯ, ಅಥವಾ ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಯತ್ನಗಳು ಅಥವಾ ದೇಶಾದ್ಯಂತ ಲಕ್ಷಾಂತರ ಎಂಎಸ್ಎಂಇಗಳಿಗೆ ಸುಲಭ ಧನಸಹಾಯ, ಅಥವಾ ಕೋಟ್ಯಂತರ ಸ್ವಸಹಾಯ ಗುಂಪುಗಳು, 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸಲು ಹೊಸ ಶಕ್ತಿ ಮತ್ತು ಹೊಸ ವಿಶ್ವಾಸವನ್ನು ನೀಡುತ್ತದೆ.
ಸ್ನೇಹಿತರೇ,
ಭಾರತದ ಆರ್ಥಿಕತೆಯನ್ನು ದ್ವಿಗುಣಗೊಳಿಸುವ ನಮ್ಮ ಪ್ರಯತ್ನಗಳು ಕೇವಲ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. ಇದೇ ರೀತಿ ನಾವು ರಾಜ್ಯಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ಉತ್ಪಾದನೆ, ರಫ್ತು ಹೆಚ್ಚಿಸಲು ಮತ್ತು ಮೇಕ್ ಇನ್ ಇಂಡಿಯಾವನ್ನು ವಿಸ್ತರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಉತ್ಪಾದನೆ ಮಾಡುವುದು ನಮ್ಮ ಆದ್ಯತೆಯಾಗಿದೆ. ನಾವು ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ವೇಗವಾಗಿ ಸಾಗುತ್ತಿದ್ದೇವೆ.
ಸ್ನೇಹಿತರೇ,
ಇವುಗಳೆಲ್ಲದರ ಮಧ್ಯೆ, ಆರ್ಥಿಕತೆಯ ಬಗ್ಗೆ ಇಂದು ನಡೆಯುತ್ತಿರುವ ಚರ್ಚೆಗಳ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಆದರೆ ಹಿಂದಿನ ಸರ್ಕಾರದ ಆಡಳಿತದ ಒಂದು ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿಯ ಬೆಳವಣಿಗೆಯ ದರವು ಶೇಕಡಾ 3.5 ಕ್ಕೆ ತಲುಪಿತ್ತು ಎನ್ನುವುದನ್ನು ನಾವು ನೆನಪಿನಲ್ಲಿಡಬೇಕು.
ನೆನಪಿಸಿಕೊಳ್ಳಲು ಪ್ರಯತ್ನಿಸಿ, ಆ ಅವಧಿಯಲ್ಲಿ ಸಿಪಿಐ – ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ ಹಣದುಬ್ಬರ ಎಲ್ಲಿಗೆ ತಲುಪಿತ್ತು ? ಅದು ಶೇಕಡಾ 9.4 ಕ್ಕೆ ತಲುಪಿತ್ತು. ಸಿಪಿಐ ಕೋರ್ ಹಣದುಬ್ಬರ ಎಲ್ಲಿತ್ತು? ಇದು ಶೇಕಡಾ 7.3 ರಷ್ಟಿತ್ತು !!! ಡಬ್ಲ್ಯುಪಿಐ ಹಣದುಬ್ಬರ ಎಲ್ಲಿಗೆ ತಲುಪಿತು? ಇದು ಶೇಕಡಾ 5.2 ಕ್ಕೆ ತಲುಪಿತ್ತು. ಹಣಕಾಸಿನ ಕೊರತೆ ಎಷ್ಟು ನೀಗಿತು? ಇದು ಜಿಡಿಪಿಯ ಶೇಕಡಾ 5.6 ರಷ್ಟಿತ್ತು. ಆ ಸಮಯದಲ್ಲಿ, ಜಿಡಿಪಿಯ ಹಲವಾರು ವಿಭಾಗಗಳು ದುರ್ಬಲವಾಗಿದ್ದವು, ಆರ್ಥಿಕತೆಯು ತುಂಬಾ ಖಿನ್ನತೆಗೆ ಒಳಗಾಯಿತು. ಆ ಸಮಯದಲ್ಲಿ ಕೆಲವರು ಏಕೆ ಸುಮ್ಮನಿದ್ದರು ಎಂಬ ವಿವಾದಕ್ಕೆ ಸಿಲುಕಲು ನಾನು ಬಯಸುವುದಿಲ್ಲ.
ಸ್ನೇಹಿತರೇ,
ದೇಶದ ಆರ್ಥಿಕತೆಯಲ್ಲಿ ಇಂತಹ ಏರಿಳಿತಗಳು ಈ ಮೊದಲು ಕೂಡ ಬಂದಿವೆ. ಆದರೆ ದೇಶವು ಪ್ರತಿ ಬಾರಿಯೂ ಅಂತಹ ಪರಿಸ್ಥಿತಿಯಿಂದ ಹೊರಬರಲು ಮತ್ತು ಮೊದಲಿಗಿಂತ ಬಲವಾಗಿ ಹೊರಬರುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ, ಈಗಿನ ಪರಿಸ್ಥಿತಿಯಿಂದ ಭಾರತ ಖಂಡಿತವಾಗಿಯೂ ಹೊರಬರುತ್ತದೆ.
ಸ್ನೇಹಿತರೇ,
ಭವಿಷ್ಯದ ನಮ್ಮ ಉದ್ದೇಶಗಳು ಸ್ಪಷ್ಟವಾಗಿವೆ ಮತ್ತು ನಾವು ದೃಢ ನಿಶ್ಚಯವನ್ನು ಹೊಂದಿದ್ದೇವೆ. ಈ ಸರ್ಕಾರವು ಹೇಳುವದನ್ನು ಮಾಡುವುದರಲ್ಲಿ ಹೆಸರುವಾಸಿಯಾಗಿದೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯೂ ಸಾಧ್ಯವಿದೆ ಏಕೆಂದರೆ ಈ ಹಿಂದೆ ಅಸಾಧ್ಯವೆಂದು ತೋರುತ್ತಿದ್ದ ಇಂತಹ ಅನೇಕ ಕೆಲಸಗಳನ್ನು ದೇಶವು ಮಾಡಿದೆ. 60 ತಿಂಗಳಲ್ಲಿ, 60 ಕೋಟಿ ಜನರನ್ನು ಬಯಲು ಮಲವಿಸರ್ಜನೆಯಿಂದ ಮುಕ್ತಗೊಳಿಸುವುದು ಅಸಾಧ್ಯವೆಂದು ತೋರುತ್ತಿತ್ತು. ಆದರೆ ಇಂದು ಅದು ಸಾಧ್ಯವಾಗಿದೆ. 3 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ 8 ಕೋಟಿ ಮನೆಗಳಿಗೆ ಅನಿಲ ಸಂಪರ್ಕವನ್ನು ಒದಗಿಸುವುದು ಮತ್ತು 10 ಲಕ್ಷಕ್ಕೂ ಹೆಚ್ಚು ಅನಿಲ ವಿತರಣಾ ಕೇಂದ್ರಗಳನ್ನು ಸ್ಥಾಪಿಸುವುದು ಅಸಾಧ್ಯವೆಂದು ತೋರುತ್ತಿದ್ದಾದರೂ ಅದು ಸಾಧ್ಯವಾಗಿದೆ.
ಈ ಹಿಂದೆ ಪ್ರತಿ ಕುಟುಂಬವನ್ನು ಇಷ್ಟು ಕಡಿಮೆ ಸಮಯದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಜೋಡಿಸುವುದು ಅಸಾಧ್ಯವೆಂದು ತೋರುತ್ತಿತ್ತು, ಆದರೆ ಈಗ ಅದು ಸಾಧ್ಯವಾಗಿದೆ. ದೇಶದ ಬಹು ದೊಡ್ಡ ಜನಸಂಖ್ಯೆಗೆ ಡಿಜಿಟಲ್ ಬ್ಯಾಂಕಿಂಗ್ ತೆರೆದುಕೊಳ್ಳುವುದು ಅಸಾಧ್ಯವೆಂದು ಈ ಹಿಂದೆ ಭಾವಿಸಲಾಗಿತ್ತು. ಇಂದು ದೇಶದಲ್ಲಿ ಪ್ರತಿದಿನ ಕೋಟ್ಯಂತರ ಡಿಜಿಟಲ್ ವಹಿವಾಟು ನಡೆಯುತ್ತಿದೆ. ಈ ದೇಶದಲ್ಲಿ ಭೀಮ್ ಆ್ಯಪ್ ಮತ್ತು ರುಪೇ ಕಾರ್ಡ್ ಕೂಡ ಹೆಚ್ಚು ಪ್ರಚಲಿತವಾಗಲಿದೆ ಎಂದು ಯಾರು ಭಾವಿಸಿದ್ದರು? ಆದರೆ ಇಂದು ಅದು ಸಾಧ್ಯವಾಗಿದೆ. ಮನೆಯಿಲ್ಲದ ಪ್ರತಿಯೊಬ್ಬರಿಗೂ ಮನೆ ಒದಗಿಸುವುದು ಅಸಾಧ್ಯವೆಂದು ತೋರುತ್ತಿತ್ತು, ಆದರೆ ಈಗ ಅದು ಸಾಧ್ಯವಾಗಿದೆ. ಈಗ ನಾನು ಕಳೆದ 6 ತಿಂಗಳುಗಳಿನ ಹೆಚ್ಚಿನ ಉದಾಹರಣೆಗಳನ್ನು ನೀಡಲು ಪ್ರಾರಂಭಿಸಿದರೆ, ನಿಮ್ಮ ಊಟದ ಸಮಯವನ್ನು ಕಳೆದುಕೊಳ್ಳುತ್ತೀರಿ.
ಸ್ನೇಹಿತರೇ,
‘ಸಂಕಲ್ಪ ದಿಂದ ಸಿದ್ಧಿ’ ಎನ್ನುವ ಈ ಸಕಾರಾತ್ಮಕ ಮತ್ತು ಪಾರದರ್ಶಕ ವಾತಾವರಣದಲ್ಲಿ, ನಿಮಗಾಗಿ ಅವಕಾಶಗಳು ಸಹ ವಿಸ್ತಾರಗೊಳ್ಳುತ್ತಿವೆ.
ನಿಮ್ಮ ಸಾಮರ್ಥ್ಯಗಳು ಮೊದಲಿಗಿಂತ ಉತ್ತಮವಾಗಿರಲೆಂದು, ಕೃಷಿ ಮತ್ತು ಕಂಪನಿಗಳಲ್ಲಿ ಉತ್ಪಾದನೆ ಮೊದಲಿಗಿಂತ ಉತ್ತಮವಾಗಿರಲೆಂದು ಮತ್ತು ಸಂಪತ್ತಿನ ಸೃಷ್ಟಿ ಮತ್ತು ಉದ್ಯೋಗ ಸೃಷ್ಟಿಯೂ ಮೊದಲಿಗಿಂತ ಉತ್ತಮವಾಗಿರಲೆಂದು ಸರ್ಕಾರವು ಭಾರತದ ಕೈಗಾರಿಕಾ ವಲಯದೊಂದಿಗೆ ಎಲ್ಲ ರೀತಿಯಲ್ಲೂ ಕೈಜೋಡಿಸುತ್ತದೆ, ಈ ವೇದಿಕೆಯ ಮೂಲಕ, ನಾನು ದೇಶದ ಉದ್ಯಮಿಗಳಿಗೆ ಹೇಳುವುದೇನೆಂದರೆ – ನೀವು ಮುಂದುವರಿಯಿರಿ, ನೀವು ಸಮರ್ಥರು! ವಿಶ್ವ ಮಾರುಕಟ್ಟೆ ನಮ್ಮ ಮುಂದೆ ಇದೆ. ಇಡೀ ಪ್ರಪಂಚದೊಂದಿಗೆ ಸ್ಪರ್ಧಿಸುವ ಧೈರ್ಯ ನಮಗಿದೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಭಾರತದ ಕನಸನ್ನು ಈಡೇರಿಸುವಲ್ಲಿ ನಿಮ್ಮ ಸಂಕಲ್ಪ ಮತ್ತು ನಿಮ್ಮ ಸಾಮರ್ಥ್ಯ ದೊಡ್ಡ ಪಾತ್ರ ವಹಿಸಲಿದೆ.
ನಿಮ್ಮ ಸಮೃದ್ಧ ಸಂಪ್ರದಾಯವು 21 ನೇ ಶತಮಾನದ ಹೊಸ ಭಾರತವನ್ನು ವಿಸ್ತರಿಸಲು ಮತ್ತು ಬಲಪಡಿಸಲು ಹೊರಟಿದೆ. ನಿಮ್ಮ ಪ್ರಯತ್ನಗಳಲ್ಲಿ ನೀವೆಲ್ಲರೂ ಯಶಸ್ವಿಯಾಗಬೇಕೆಂಬ ಆಶಯದೊಂದಿಗೆ ನಾನು ನನ್ನ ಮಾತನ್ನು ಮುಗಿಸುತ್ತಿದ್ದೇನೆ.
ಮತ್ತೊಮ್ಮೆ, ನಿಮಗೆಲ್ಲರಿಗೂ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು.
ಧನ್ಯವಾದಗಳು !!!
आपने अपने सेन्टेनरी सेलीब्रेशन की जो थीम रखी है, वो देश के, देशवासियों के लक्ष्यों और सपनों के साथ जुड़ी है: PM @narendramodi
— PMO India (@PMOIndia) December 20, 2019
बीते पाँच वर्षों में देश ने खुद को इतना मजबूत किया है कि इस तरह के लक्ष्य रखे भी जा सकते हैं और उन्हें प्राप्त भी किया जा सकता है: PM @narendramodi
— PMO India (@PMOIndia) December 20, 2019
हमने अर्थव्यवस्था के ज्यादातर आयामों को Formal व्यवस्था में लाने का प्रयास किया है।इसके साथ ही हम अर्थव्यवस्था को आधुनिक टेक्नोलॉजी का इस्तेमाल करते हुए Modernize और Speed-Up करने की दिशा में भी आगे बढ़े हैं: PM @narendramodi
— PMO India (@PMOIndia) December 20, 2019
हमने अर्थव्यवस्था के ज्यादातर आयामों को Formal व्यवस्था में लाने का प्रयास किया है।इसके साथ ही हम अर्थव्यवस्था को आधुनिक टेक्नोलॉजी का इस्तेमाल करते हुए Modernize और Speed-Up करने की दिशा में भी आगे बढ़े हैं: PM @narendramodi
— PMO India (@PMOIndia) December 20, 2019
Ease of Doing Business कहने में चार शब्द लगते हैं लेकिन इसकी रैंकिंग में बदलाव तब होता है जब दिन-रात मेहनत की जाती है, जमीनी स्तर पर जाकर नीतियों में, नियमों में बदलाव होता है: PM @narendramodi
— PMO India (@PMOIndia) December 20, 2019
टैक्स सिस्टम में Transparency, Efficiency और Accountability लाने के लिए हम Faceless Tax Administration की ओर बढ़ रहे हैं: PM @narendramodi pic.twitter.com/xmtthdx7AT
— PMO India (@PMOIndia) December 20, 2019
Labor Reforms की बातें भी बहुत वर्षों से देश में चलती रही हैं।कुछ लोग ये भी मानते थे कि इस क्षेत्र में कुछ न करना ही लेबर वर्ग के हित में है। यानि उन्हें अपने हाल पर छोड़ दो, जैसे चलता रहा है, वैसे ही आगे भी चलेगा।लेकिन हमारी सरकार ऐसा नहीं मानती: PM @narendramodi pic.twitter.com/8K6oJdDEOG
— PMO India (@PMOIndia) December 20, 2019
सरकार द्वारा उठाए गए कदमों की वजह से अब 13 बैंक मुनाफे में वापस आ चुके हैं। 6 बैंक PCA से भी बाहर निकल चुके हैं।हमने बैंकों का एकीकरण भी तेज किया है।बैंक अब अपना देशव्यापी नेटवर्क बढ़ा रहे हैं और अपनी ग्लोबल पहुंच कायम करने की ओर अग्रसर हैं: PM @narendramodi pic.twitter.com/PTqtQqxCx9
— PMO India (@PMOIndia) December 20, 2019
मैं आज Assocham के इस मंच से, देश की बैंकिंग से जुड़े लोगों को, कॉरपोरेट जगत के लोगों को ये विश्वास दिलाना चाहता हूं कि अब जो पुरानी कमजोरियां थीं, उस पर काफी हद तक काबू पा लिया गया है।इसलिए खुलकर फैसले लें, खुलकर निवेश करें, खुलकर खर्च करें: PM @narendramodi pic.twitter.com/548muR79M1
— PMO India (@PMOIndia) December 20, 2019
इसी Positivity के आधार पर हम 5 ट्रिलियन डॉलर की इकोनॉमी की तरफ बढ़ने वाले हैं।आने वाले वर्षों में इंफ्रास्ट्रक्चर पर 100 लाख करोड़ रुपए का निवेश, इसे ताकत देगा।देश की ग्रामीण अर्थव्यवस्था पर 25 लाख करोड़ रुपए का निवेश इस लक्ष्य को प्राप्त करने में मदद करेगा: PM @narendramodi pic.twitter.com/tp7LlMKeR8
— PMO India (@PMOIndia) December 20, 2019