Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಸ್ಸಾಂ ನಲ್ಲಿ “ಮಹಾಬಾಹು-ಬ್ರಹ್ಮಪುತ್ರ” ಯೋಜನೆ ಜಾರಿ: ಎರಡು ಸೇತುವೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ

ಅಸ್ಸಾಂ ನಲ್ಲಿ “ಮಹಾಬಾಹು-ಬ್ರಹ್ಮಪುತ್ರ” ಯೋಜನೆ ಜಾರಿ: ಎರಡು ಸೇತುವೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ


ಅಸ್ಸಾಂನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ “ಮಹಾಬಹು-ಬ್ರಹ್ಮಪುತ್ರ” ಯೋಜನೆ ಪ್ರಾರಂಭಿಸಿದರು ಮತ್ತು ಎರಡು ಸೇತುವೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. 

ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವರು, ಕೇಂದ್ರ ಕಾನೂನು ಮತ್ತು ನ್ಯಾಯ, ಸಂಪರ್ಕ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು, ಬಂದರು, ಹಡಗು ಮತ್ತು ಜಲ ಸಾರಿಗೆ [ಐ.ಸಿ] ಖಾತೆ ರಾಜ್ಯ ಸಚಿವರು, ಅಸ್ಸಾಂ ಮತ್ತು ಮೇಘಾಲಯದ ಮುಖ್ಯಮಂತ್ರಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

“ಮಹಾಬಾಹು-ಬ್ರಹ್ಮಪುತ್ರ“ಗೆ ಚಾ;ಲನೆ ನೀಡಿ ನಿಯಮತಿ – ಮಜುಲಿ ದ್ವೀಪ, ಉತ್ತರ ಗುವಾಹತಿ-ದಕ್ಷಿಣ ಗುವಾಹತಿ ಮತ್ತು ಧುಬ್ರಿ-ಹತ್ಸಿಂಗಿಮರಿ ನಡುವಿನ ರೋ-ಪಾಕ್ಸ್ ನಡುವೆ ಹಡಗು ಸೇವೆಯ ಕಾರ್ಯಾಚರಣೆಗೆ ಚಾಲನೆ ನೀಡಿದರು. ಭ್ರಹ್ಮಪುತ್ರ ನದಿಯಲ್ಲಿ ಜೊಗಿಗ್ಹೊಪ ಮತ್ತು ವಿವಿಧ ಪ್ರವಾಸಿ ತಾಣಗಳಿಗೆ ಒಳನಾಡು ಸಾರಿಗೆ [ಐಡಬ್ಲ್ಯೂಟಿ] ಗೆ ಶಿಲಾನ್ಯಾಸ ನೆರವೇರಿಸಿದರು ಮತ್ತು ಸುಗಮ ವ್ಯವಹಾರ ನಡೆಸುವ ಡಿಜಿಟಲ್ ಪರಿಹಾರಗಳನ್ನು ಲೋಕಾರ್ಪಣೆ ನೆರವೇರಿಸಿದರು.  

ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ನಿನ್ನೆ ಆಚರಿಸಲಾಗಿದ್ದ ಅಲಿ-ಅಯೆ-ಲಿಗಾಂಗ್ ಕೃಷಿ ಹಬ್ಬಕ್ಕೆ ಮೈಸಿಂಗ್ ಸಮುದಾಯಕ್ಕೆ ಶುಭಹಾರೈಸಿದರು. ವರ್ಷಗಳಿಂದ ಈ ಪವಿತ್ರ ನದಿ ಸಾಮಾಜಿಕ ಮತ್ತು ಸಂಪರ್ಕ ವಲಯದಲ್ಲಿ ಸಮನಾರ್ಥಕವಾಗಿದೆ. ಆದರೆ ಭ್ರಹ್ಮಪುತ್ರ ನದಿಯಲ್ಲಿ ಸಂಪರ್ಕಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕೆಲಸಗಳು ನಡೆದಿಲ್ಲ. ಈ ಕಾರಣದಿಂದ ಅಸ್ಸಾಂ ರಾಜ್ಯದ ಒಳಗಡೆ ಮತ್ತು ಈಶಾನ್ಯ ಭಾಗಗಳ ಇತರೆ ಪ್ರದೇಶಗಳ ನಡುವೆ ಸಂಪರ್ಕ ಸಾಧಿಸುವುದು ಪ್ರಮುಖ ಸವಾಲಾಗಿದೆ. ಈಗಿನ ಯೋಜನೆಗಳು ತ್ವರಿತವಾಗಿದ್ದು, ಭೌಗೋಳಿಕ ಮತ್ತು ಸಾಂಸ್ಕೃತಿಕವಾಗಿರುವ ಅಂತರವನ್ನು ತಗ್ಗಲಿದೆ. ಅಸ್ಸಾಂ ಸೇರಿದಂತೆ ಸಂಪೂರ್ಣ ಈಶಾನ್ಯ ಭಾಗದಲ್ಲಿ ಭೌತಿಕ ಮತ್ತು ಸಾಂಸ್ಕೃತಿಕ ಸಮಗ್ರತೆಯೂ ಸಹ ಬಲಗೊಳ್ಳಲಿದೆ ಎಂದು ಹೇಳಿದರು. 

ಡಾಕ್ಟರ್ ಭೂಪೇನ ಹಜಾರಿಕ ಸೇತುವೆ, ಬೋಗಿಬೀಲ್ ಸೇತುವೆ, ಸರೈಘಾಟ್ ನಂತಹ ಸೇತುವೆಗಳು ಅಸ್ಸಾಂನ ಇಂದಿನ ಜೀವನದ ಭಾಗಗಳಾಗಿವೆ. ಇವು ದೇಶದ ಭದ್ರತೆಯನ್ನು ಬಲಗೊಳಿಸಲಿದೆ ಮತ್ತು ನಮ್ಮ ಸೈನಿಕರಿಗೆ ಹೆಚ್ಚಿನ ಅನುಕೂಲ ಒದಗಿಸುತ್ತದೆ. ಅಸ್ಸಾಂ ಮತ್ತು ಈಶಾನ್ಯ ಭಾಗಗಳನ್ನು ಸಂಪರ್ಕಿಸುವ ಅಭಿಯಾನಕ್ಕೆ ಈಗ ಮುನ್ನಡೆ ದೊರೆತಿದೆ ಎಂದು ಹೇಳಿದರು.

ಅಸ್ಸಾಂ ಮುಖ್ಯಮಂತ್ರಿ ಮತ್ತು ಅವರ ಸರ್ಕಾರ ಇದನ್ನು ಸಾಧಿಸಲು ಕಾರ್ಯಪ್ರವೃತ್ತವಾಗಬೇಕು. ಮಜುಲಿಯಲ್ಲಿ ಅಸ್ಸಾಂನ ಮೊದಲ ಹೆಲಿಪ್ಯಾಡ್ ಅಸ್ಥಿತ್ವಕ್ಕೆ ಬಂದಿದೆ ಮತ್ತು ಕಲಿಬರ್ ನಿಂದ ಜೊರ್ಹತ್ ಅನ್ನು ಸಂಪರ್ಕಿಸುವ ದೀರ್ಘಕಾಲೀನ 8 ಕಿಲೋಮೀಟರ್ ಉದ್ದದ ದೀರ್ಘಕಾಲದ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುತ್ತಿರುವುದರಿಂದ ವೇಗ ಮತ್ತು ಸುರಕ್ಷಿತ ರಸ್ತೆ ಮಾರ್ಗದ ಆಯ್ಕೆಗಳನ್ನು ಪಡೆಯುತ್ತಿದೆ. “ ಇದು ಅನುಕೂಲತೆ ಮತ್ತು ಸಾಧ್ಯತೆಗಳ ಸೇತುವೆಯಾಗಲಿದೆ “ ಎಂದು ಪ್ರಧಾನಮಂತ್ರಿಯವರು ತಿಳಿಸಿದರು.   

ಧುಬ್ರಿಯಿಂದ ಫುಲ್ಬಾರಿ ನಡುವಿನ 19 ಕಿಲೋಮೀಟರ್ ಉದ್ದದ ಸೇತುವೆಯಿಂದ ಬರಕ್ ಕಣಿವೆಯ ಸಂಪರ್ಕ ಸುಧಾರಣೆಯಾಗಲಿದೆ ಮತ್ತು ಅಸ್ಸಾಂ, ಮಣಿಪುರ, ಮಿಜೋರಾಂ ಮತ್ತು ಮೇಘಾಲಯ ನಡುವಿನ ಅಂತರವನ್ನು ತಗ್ಗಿಸಲಿದೆ. ಮೇಘಾಲಯ ಮತ್ತು ಅಸ್ಸಾಂ ನಡುವೆ ಪ್ರಸ್ತುತ 250 ಕಿಲೋಮೀಟರ್ ದೂರವಿದ್ದು, ಈ ಅಂತರ 19-20 ಕಿಲೋಮೀಟರ್ ಗೆ ಇಳಿಕೆಯಾಗಲಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. 

ಮಹಾಬಾಹು-ಬ್ರಹ್ಮಪುತ್ರ ಯೋಜನೆ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಬಂದರು ಅಭಿವೃದ್ಧಿ ಕಾರ್ಯಕ್ರಮ  ಭ್ರಹ್ಮಪುತ್ರ ಜಲ ಸಂಪರ್ಕವನ್ನು ಬಲಗೊಳಿಸಲಿದೆ. ಇಂದು ಮೂರು ರೊ-ಪಾಕ್ಸ್ ಹಡಗುಗಳ ಸೇವೆಯನ್ನು ಆರಂಭಿಸಿದ್ದು, ಈ ಮೂಲಕ  ರೊ-ಪಾಕ್ಸ್ ಹಡಗು ಸೇವೆ ಅಸ್ಸಾಂ ನಲ್ಲಿ ಮಂಚೂಣಿಗೆ ಬರಲಿದೆ. ನಾಲ್ಕು ಪ್ರವಾಸಿ ಜಟ್ಟಿಗಳಿಂದ ಈಶಾನ್ಯ ಭಾಗದಲ್ಲಿ ಸಂಪರ್ಕ ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿದೆ ಎಂದು ಹೇಳಿದರು.

ವರ್ಷಗಳ ಕಾಲದಿಂದ ಈ ಭಾಗ ಸಂಪರ್ಕದಲ್ಲಿನ ನಿರ್ಲಕ್ಷ್ಯದಿಂದ ರಾಜ್ಯ ಸಮೃದ್ಧಿಯನ್ನು ಕಳೆದುಕೊಂಡಿತ್ತು ಎಂದು ವಿಷಾದಿಸಿದ ಅವರು, ಇದರಿಂದಾಗಿ ಮೂಲ ಸೌಕರ್ಯ ವ್ಯವಸ್ಥೆ ಹದಗೆಟ್ಟಿತ್ತು ಮತ್ತು ಜಲ ಮಾರ್ಗಗಳು ಬಹುತೇಕ ಇರಲಿಲ್ಲ. ಇದು ಅಶಾಂತಿಗೂ ಸಹ ಕಾರಣವಾಗಿತ್ತು.  ಈ ತಪ್ಪುಗಳನ್ನು ಸರಿಪಡಿಸುವ ಪ್ರಕ್ರಿಯೆ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಆರಂಭವಾಯಿತು, ಇತ್ತೀಚಿನ ವರ್ಷಗಳಲ್ಲಿ ಅಸ್ಸಾಂನಲ್ಲಿ ಬಹು ಮಾದರಿಯ ಸಂಪರ್ಕ ಪುನಃ ಸ್ಥಾಪಿಸಲು ಸಾಧ್ಯವಾಯಿತು. ಅಸ್ಸಾಂ ಮತ್ತು ಈಶಾನ್ಯ ಭಾಗದಲ್ಲಿ ಇತರೆ ಪೂರ್ವ ಏಷ್ಯಾದ ದೇಶಗಳೊಂದಿಗಿನ ನಮ್ಮ ಸಾಂಸ್ಕೃತಿಕ ಮತ್ತು ವ್ಯವಹಾರಗಳ ಸಂಬಂಧಗಳ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಈ ಭಾಗದಲ್ಲಿ ಜಲ ಮಾರ್ಗ ಕೆಲಸಗಳಿಂದಾಗಿ ಪ್ರಮುಖ ಪರಿಣಾಮ ಬೀರುವಂತಾಗಿದೆ. ಇತ್ತೀಚೆಗೆ ಬಾಂಗ್ಲಾದೇಶದೊಂದಿಗೆ ಜಲ ಸಂಪರ್ಕವನ್ನು ಸಾಧಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಹೂಗ್ಲಿ ನದಿಯೊಂದಿಗೆ ಭ್ರಹ್ಮಪುತ್ರ ನದಿ ಸಂಪರ್ಕಹೊಂದಿದ್ದು, ಬರಾಕ್ ನದಿಯ ಮೂಲಕ ಭಾರತ – ಬಾಂಗ್ಲಾದೇಶ ನಡುವೆ ಜಲಮಾರ್ಗದ ಶಿಷ್ಟಾಚಾರಗಳ ಅನುಷ್ಠಾನ ಪ್ರಗತಿಯಲ್ಲಿದೆ.  ಈಶಾನ್ಯ ಭಾಗವನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಮೂಲಕ ಕಿರಿದಾದ ಸಂಪರ್ಕ ವ್ಯವಸ್ಥೆ ಹೊಂದಿರುವ ಪ್ರದೇಶದ ಅವಲಂಬನೆ ಕಡಿಮೆಯಾಗಿದೆ ಎಂದು ಹೇಳಿದರು.

ಜೋಗಿಗೋಪ ಐಡಬ್ಲ್ಯೂಟಿ ಟರ್ಮಿನಲ್ ಅಸ್ಸಾಂ ಅನ್ನು ಹಲ್ಡಿಯ ಮತ್ತು ಕೊಲ್ಕತ್ತಾದೊಂದಿಗೆ ಜಲ ಮಾರ್ಗದ ಮೂಲಕ ಸಂಪರ್ಕಿಸಲು ಪರ್ಯಾಯ ಮಾರ್ಗವನ್ನು ಬಲಪಡಿಸುತ್ತದೆ.   ಈ ಟರ್ಮಿನಲ್ ಭೂತಾನ್ ಮತ್ತು ಬಾಂಗ್ಲಾದೇಶ ನಡುವಿನ ಸರಕುಗಳು ಮತ್ತು ಜೋಗಿಗೋಪಾದಲ್ಲಿ ಬಹುಮಾದರಿಯ ಲಾಜಿಸ್ಟಿಕ್ ಪಾರ್ಕ್ ಮೂಲಕ ಭ್ರಹ್ಮಪುತ್ರ ನದಿಯ ವಿವಿಧ ಸ್ಥಳಗಳಿಗೆ ಸರಕು ಸಾಗಾಣೆಯ ಸೌಲಭ್ಯವನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.

ಹೊಸ ಮಾರ್ಗಗಳು ಸಾಮಾನ್ಯ ಜನರ ಅನುಕೂಲಕ್ಕಾಗಿ ಮತ್ತು ಈ ಭಾಗದ ಅಭಿವೃದ್ಧಿಗಾಗಿ ನಿರ್ಮಿಸಲಾಗಿದೆ. ರೊ-ಪಾಕ್ಸ್ ಸೇವೆಯಿಂದ ಮುಜುಲಿ ಮತ್ತು ನೆಮತಿ ನಡುವಿನ 425 ಕಿಲೋಮೀಟರ್ ದೂರವನ್ನು ಕೇವಲ 12 ಕಿಲೋಮೀಟರ್ ಗೆ ತಗ್ಗಿಸಿದಂತಾಗಿದೆ. ಈ ಮಾರ್ಗದಲ್ಲಿ ಎರಡು ಹಡಗುಗಳು ಸಂಚರಿಸಲಿದ್ದು, ಪ್ರತಿ ಬಾರಿಗೆ 1600 ಪ್ರಯಾಣಿಕರನ್ನು ಸಾಗಿಸಲಿವೆ. ಇದೇ ರೀತಿಯ ಸೌಲಭ್ಯವನ್ನು ಗುವಾಹತಿಯಲ್ಲಿ ಕಲ್ಪಿಸಿದ್ದು, ಉತ್ತರ ಮತ್ತು ದಕ್ಷಿಣ ಗುವಾಹತಿ ನಡುವಿನ 40 ಕಿಲೋಮೀಟರ್ ದೂರ 3 ಕಿಲೋಮೀಟರ್ ತಗ್ಗಲಿದೆ ಎಂದರು.   

ಬಳಕೆದಾರರಿಗೆ ನಿಖರ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಪ್ರಧಾನಮಂತ್ರಿಯವರು ಇ ಪೋರ್ಟಲ್ ಗೆ ಚಾಲನೆ ನೀಡಿದರು. ಕಾರ್ ಡಿ ಪೋರ್ಟಲ್ ರಾಷ್ಟ್ರೀಯ ಜಲ ಮಾರ್ಗದ ಎಲ್ಲಾ ಸರಕು ಮತ್ತು ಸಂಚಾರ ಮಾರ್ಗದ ನೈಜ ಸಮಯದ ದತ್ತಾಂಶಗಳನ್ನು ಪಡೆಯಲು ಸಹಕಾರಿಯಾಗಲಿದೆ.  ಜತೆಗೆ ಜಲ ಮಾರ್ಗದ ಮೂಲ ಸೌಕರ್ಯ ಕುರಿತ ಮಾಹಿತಿಯನ್ನೂ ಸಹ ದೊರಕಿಸಲಿದೆ. ಜಿ.ಐ.ಎಸ್ ಆಧರಿತ ಇಂಡಿಯಾ ಮ್ಯಾಪ್ ಪೋರ್ಟಲ್ ನಿಂದ ಇಲ್ಲಿಗೆ ವ್ಯಾಪಾರ ಉದ್ದೇಶಕ್ಕೆ ಬರುವವರಿಗೆ ಮಾಹಿತಿ ಒದಗಿಸಲಿದೆ ಎಂದು ಮಾಹಿತಿ ನೀಡಿದರು.

ಅಸ್ಸಾಂ ಮತ್ತು ಈಶಾನ್ಯ ಭಾಗದಲ್ಲಿ ಜಲ ಮಾರ್ಗ, ರೈಲ್ವೆ ಮಾರ್ಗ, ಹೆದ್ದಾರಿಯುದ್ಧಕ್ಕೂ ಇಂಟರ್ ನೆಟ್ ಸಂಪರ್ಕ ದೊರಕಿಸಿವುದು ಸಹ ಅಷ್ಟೇ ಪ್ರಮುಖ ಸವಾಲಾಗಿದೆ ಮತ್ತು ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಯುತ್ತಿವೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ನೂರಾರು ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಗುವಾಹತಿಯಲ್ಲಿ ಈಶಾನ್ಯ ಭಾಗದ ಮೊದಲ ದತ್ತಾಂಶ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ.  ಈ ದತ್ತಾಂಶ ಕೇಂದ್ರ 8 ರಾಜ್ಯಗಳಿಗೆ ಮತ್ತು ಐಟಿ ಸೇವೆ ಆಧರಿತ ಕೈಗಾರಿಕೆಗಳಿಗೆ ಬಿಪಿಒ ವ್ಯವಸ್ಥೆಯನ್ನೊಳಗೊಂಡ ದತ್ತಾಂಶ ಕೇಂದ್ರವಾಗಲಿದೆ. ಇ ಆಡಳಿತದ ಮೂಲಕ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ನವೋದ್ಯಮಗಳನ್ನು ಬಲಪಡಿಸಲಾಗುವುದು ಎಂದು ಹೇಳಿದರು.

ಈಶಾನ್ಯ ಭಾಗವೂ ಸೇರಿದಂತೆ ದೇಶದಲ್ಲಿ ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಮತ್ತು ಸಬ್‌ಕಾ ವಿಶ‍್ವಾಸ್ ದೃಷ್ಟಿಕೋನದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರಲ್ಲದೇ ಮಜುಲಿ ಪ್ರದೇಶದ ಸಾಂಸ್ಕೃತಿಕ ಆಳ ಮತ್ತು ಶ್ರೀಮಂತಿಕೆ, ಅಸ್ಸಾಂನ ಸಂಸ್ಕೃತಿ ಮತ್ತು ಸ್ಥಳೀಯ ಜೀವ ವೈವಿದ್ಯತೆಯನ್ನು ಶ್ರೀ ನರೇಂದ್ರ ಮೋದಿಯವರು ಪ್ರಸ್ಥಾಪಿಸಿದರು.  ಮಜುಲಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ, ಜೀವ ವೈವಿದ್ಯ ಪರಂಪರೆ ತಾಣ, ತೇಜ್ಪುರ್-,ಮಜುಲಿ-ಸಿವಸಾಗರ್ ನ ಪಾರಂಪರಿಕ ಸರ್ಕ್ಯೂಟ್, ನವಾಮಿ ಬ್ರಹ್ಮಪುತ್ರ, ನವಾಮಿ ಬರಾಕ್ ನಂತಹ ಆಚರಣೆಗಳನ್ನು ಪ್ರಧಾನಮಂತ್ರಿಯವರು ಪಟ್ಟಿ ಮಾಡಿದರು. ಈ ಎಲ್ಲಾ ಕ್ರಮಗಳು ಹಿಂದೆಂಗಿಂತ ಹೆಚ್ಚಾಗಿ ಅಸ್ಸಾಂನ ಅಸ್ಮಿತೆಯನ್ನು ಹೆಚ್ಚಿಸಿದೆ. ಇಂದು ಆರಂಭಿಲಾಗಿರುವ ಪ್ರಮುಖ ಸಂಪರ್ಕ ವ್ಯವಸ್ಥೆಗಳಿಂದ ಈ ಭಾಗದ ಪ್ರವಾಸೋದ್ಯಮ ಮತ್ತು ಹಡಗು ಪ್ರವಾಸೋದ್ಯಮದಲ್ಲಿ ಅಸ್ಸಾಂ ಪ್ರಮುಖ ಕೇಂದ್ರವಾಗಿ ಹೊರ ಹೊಮ್ಮಲಿದೆ. ಅಸ್ಸಾಂ ಮತ್ತು ಈಶಾನ್ಯ ಭಾಗಗಳು ಆತ್ಮ ನಿರ್ಭರ್ ಭಾರತ್ ನ ಪ್ರಮುಖ ಆಧಾರ ಸ್ಥಂಭಗಳನ್ನಾಗಿ ಮಾಡಲು ನಾವೆಲ್ಲರೂ ಸಾಮೂಹಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು.

***