Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಸ್ಸಾಂನ ಶಿವಸಾಗರದಲ್ಲಿ ಭೂರಹಿತರಿಗೆ ಭೂ ಹಂಚಿಕೆ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಷಣ

ಅಸ್ಸಾಂನ ಶಿವಸಾಗರದಲ್ಲಿ ಭೂರಹಿತರಿಗೆ ಭೂ ಹಂಚಿಕೆ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಷಣ


ಭಾರತ್‌ ಮಾತಾ ಕಿ ಜೈ!  ಭಾರತ್‌ ಮಾತಾ ಕಿ ಜೈ!

ಅಸ್ಸಾಂನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಸರ್ಬಾನಂದ ಸೋನೊವಾಲ್ ಜಿನನ್ನ ಮಂತ್ರಿಗಳ ಕೇಂದ್ರ ಪರಿಷತ್ತಿನ ಸಹೋದ್ಯೋಗಿ ಶ್ರೀ ರಾಮೇಶ್ವರ ತೆಲಿ ಜಿ, ಅಸ್ಸಾಂ ಸರ್ಕಾರದ ಸಚಿವ ಡಾ. ಹೇಮಂತ ಬಿಸ್ವಸ್ರಾಮ ಜಿ, ಸಹೋದರ ಅತುಲ್ ಬೋರಾ ಜಿಶ್ರೀ ಕೇಶಬ್ ಮಹಂತ್ ಜಿ, ಶ್ರೀ ಸಂಜಯ್ ಕಿಶನ್ ಜಿ, ಶ್ರೀ. ಜೋಗನ್‌ ಮೋಹನ್ ಜಿ, ಹೌಸ್-ಫೆಡ್ ಅಧ್ಯಕ್ಷರಾದ ಶ್ರೀ. ರಂಜಿತ್ ಕುಮಾರ್ ದಾಸ್, ಇತರ ಎಲ್ಲ ಸಂಸದರು, ಶಾಸಕರು ಮತ್ತು ಅಸ್ಸಾಂನ ನನ್ನ ಆತ್ಮೀಯ ಸಹೋದರ ಸಹೋದರಿಯರೇ!

ಮೋಯಿ ಅಖೋಮ್-ಬಾಚಿಕ್ ಇಂಗ್ರಾಜಿ ನಬ್ಬರ್ಖಾ ಅರುಭೂಗಲಿ ಬಿಹೂರ್ ಅಂಟರಿಕ್ ಹುಬೆಸ್ಸಾ ಜೊನೈಸು. ಆಹ್-ಬೊಲೊಜಿಯಾ ದಿನ್ಬರ್ ಹೊಕೊಲುರೆ ಬಾಬೆಹುಖಾರು ಹಮರಿ ಡೈರ್ ಪೂರ್ಣಹಾಕ್  ಇಂಗ್ಲಿಷ್ ಹೊಸ ವರ್ಷ ಮತ್ತು ಭೋಗಲಿಬಿಹುಗಾಗಿ ನಾನು ಅಸ್ಸಾಂನ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ.  ಮುಂಬರುವ ದಿನಗಳು ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ!

ಸ್ನೇಹಿತರೇ,

ನನ್ನ ಪ್ರೀತಿಯ ಅಸ್ಸಾಮೀಸ್ ಜನರಿಂದ ಆಶೀರ್ವಾದ ಮತ್ತು ಪ್ರೀತಿಯನ್ನು ಸ್ವೀಕರಿಸುವ ಸೌಭಾಗ್ಯವನ್ನು ಹೊಂದಿದ್ದೇನೆ.  ನಿಮ್ಮ ಪ್ರೀತಿ ಮತ್ತು ಬಾಂಧವ್ಯ ನನ್ನನ್ನು ಮತ್ತೆ ಮತ್ತೆ ಅಸ್ಸಾಂ ಕಡೆಗೆ ಎಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ, ನಾನು ಅಸ್ಸಾಂನ ವಿವಿಧ ಭಾಗಗಳಿಗೆ ಭೇಟಿ ನೀಡಲು ಮತ್ತು ನನ್ನ ಸಹೋದರ ಸಹೋದರಿಯರೊಂದಿಗೆ ಮಾತನಾಡಲು ಹಲವಾರು ಸಂದರ್ಭಗಳು  ಬಂದಿದ್ದವು  ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಜೊತೆಯಾಗಲು ಅವಕಾಶಗಳೂ ಸಹ ಸಿಕ್ಕಿದ್ದವು.

ಕಳೆದ ವರ್ಷ, ಕೊಕ್ರಜಾರ್‌ನಲ್ಲಿ ನಡೆದ ಐತಿಹಾಸಿಕ ಬೋಡೋ ಒಪ್ಪಂದದ ನಂತರ ನಡೆದ ಆಚರಣೆಯಲ್ಲಿ ನಾನು ಭಾಗವಹಿಸಿದ್ದೆ. ಅಸ್ಸಾಂನ ಮೂಲನಿವಾಸಿಗಳ ಹೆಮ್ಮೆ ಮತ್ತು ಭದ್ರತೆಗೆ ಸಂಬಂಧಿಸಿದ ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಹಾಜರಾಗಲು ಈಗ ನಾನು ಇಲ್ಲಿದ್ದೇನೆ. ನಿಮ್ಮ ಸಂತೋಷದಲ್ಲಿ ನಿಮ್ಮೊಂದಿಗೆ ಜೊತೆಯಾಗಲು ನಾನು ಇಲ್ಲಿಗೆ ಬಂದಿದ್ದೇನೆ. ಇಂದು, ನಮ್ಮ ಅಸ್ಸಾಂ ಸರ್ಕಾರವು ನಿಮ್ಮ ಜೀವನದ ಒಂದು ದೊಡ್ಡ ಚಿಂತೆಯನ್ನು ದೂರವಿಡುವ ಅಸಾಧಾರಣ ಕೆಲಸವನ್ನು ಮಾಡಿದೆ. 1 ಲಕ್ಷಕ್ಕೂ ಹೆಚ್ಚು ಸ್ಥಳೀಯ ಕುಟುಂಬಗಳು ಭೂಮಿಯ ಮಾಲೀಕತ್ವದ ಹಕ್ಕನ್ನು ಪಡೆಯುವುದರೊಂದಿಗೆ, ನಿಮ್ಮ ಜೀವನದ   ದೊಡ್ಡ ಚಿಂತೆಯನ್ನು ತೆಗೆದುಹಾಕಲಾಗಿದೆ.

ಸಹೋದರ ಮತ್ತು ಸಹೋದರಿಯರೇ,

ಈ ದಿನ, ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ಸುರಕ್ಷತೆಯ ಮೂರು ಚಿಹ್ನೆಗಳು ಸಹ ಒಂದು ರೀತಿಯಲ್ಲಿ ಸಮಾಗಮವಾಗುತ್ತಿದೆ.

ಮೊದಲನೆಯದಾಗಿ, ಅಸ್ಸಾಂನ ಮಣ್ಣಿನ ಮಕ್ಕಳು, ಸ್ಥಳೀಯ ಜನರು, ಅವರು ಹೊಂದಿರುವ ಭೂಮಿಗೆ ಕಾನೂನಿನ ರಕ್ಷಣೆ ಪಡೆದಿದ್ದಾರೆ. ಎರಡನೆಯದಾಗಿ, ಐತಿಹಾಸಿಕ ಶಿವಸಾಗರ್ ಜೆರೆಂಗಾ ಪ್ರಸ್ಥಭೂಮಿಯ ಭೂಮಿ ಈ ಸಾಧನೆಗೆ ಸಾಕ್ಷಿಯಾಗಿದೆ.  ಅಸ್ಸಾಂನ ಭವಿಷ್ಯಕ್ಕಾಗಿ ಮಹಾಸತಿ ಜಾಯ್‌ ಮತಿ ಮಾಡಿದ ಸರ್ವೋಚ್ಚ ತ್ಯಾಗಕ್ಕೆ ಈ ಭೂಮಿ ಸಾಕ್ಷಿಯಾಗಿದೆ. ನಾನು ಅವರ ಅದಮ್ಯ ಧೈರ್ಯಕ್ಕೆ ನಮಸ್ಕರಿಸುತ್ತೇನೆ ಮತ್ತು ಈ ಭೂಮಿಗೆ ಗೌರವಯುತವಾಗಿ ನಮಸ್ಕರಿಸುತ್ತೇನೆ.  ಶಿವಸಾಗರದ ಈ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಇದನ್ನು ದೇಶದ 5 ಅತ್ಯಂತ ಸಾಂಪ್ರದಾಯಿಕ ಪುರಾತತ್ವ ಸ್ಥಳಗಳಲ್ಲಿ ಸೇರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಸಹೋದರ ಮತ್ತು ಸಹೋದರಿಯರೇ,

ಇಂದು, ದೇಶವು ನಮ್ಮ ಪ್ರೀತಿಯ ಮತ್ತು ಪೂಜಿಸಲ್ಪಟ್ಟ ನೇತಾಜಿಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿದೆ.  ದೇಶವು ಈಗ ಈ ದಿನವನ್ನು ಅವರ ಸ್ಮರಣಾರ್ಥವಾಗಿ ಪರಾಕ್ರಮ್ ದಿವಸವನ್ನಾಗಿ ಆಚರಿಸಲು ನಿರ್ಧರಿಸಿದೆ.  ಭಾರತ ಮಾತೆಯ ಸ್ವಾಭಿಮಾನ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ನೇತಾಜಿಯ ಬದ್ಧತೆಯ ನೆನಪು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಇದು ಪರಾಕ್ರಮ್‌ ದಿವಸದ ಸಂದರ್ಭದಲ್ಲಿ ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಘೋಷಿಸಲಾಗುತ್ತಿದೆ.  ಒಂದು ರೀತಿಯಲ್ಲಿ ಹೇಳುವುದಾದರೆ, ದೇಶವಾಸಿಗಳ ನಿರೀಕ್ಷೆಗಳ ಈಡೇರಿಕೆಯೊಂದಿಗೆ ನಮ್ಮ ರಾಷ್ಟ್ರೀಯ ನಿರ್ಣಯಗಳ ಈಡೇರಿಕೆಗಾಗಿ ಸ್ಫೂರ್ತಿ ಪಡೆಯಲು ಮತ್ತು ಶ್ರಮಿಸಲು ಇಂದು ಒಂದು ಅವಕಾಶವಾಗಿದೆ.

ಸ್ನೇಹಿತರೇ,

ನಾವೆಲ್ಲರೂ ನಮ್ಮ ಭೂಮಿಯನ್ನು, ಕೇವಲ ಹುಲ್ಲು, ಮಣ್ಣು, ಕಲ್ಲು ಎಂದು ನೋಡದಿರುವ ಸಂಸ್ಕೃತಿಯನ್ನು ಎತ್ತಿಹಿಡಿಯುವವರಾಗಿದ್ದೇವೆ.  ಭೂಮಿಯನ್ನು ನಮ್ಮ ತಾಯಿಯಾಗಿ ಪೂಜಿಸಲಾಗುತ್ತಿದೆ.  ಅಸ್ಸಾಂನ ಪ್ರಸಿದ್ಧ ಪುತ್ರರಾದ ಭಾರತ್ ರತ್ನ ಭೂಪೆನ್ ಹಜಾರಿಕಾ ಹೇಳಿದ್ದು- ಒಮುಧಾರಿತ್ರಿ, ಚೊರೊನೊಟೀಬಥೈ, ಖೆಟಿಯೊಕೊರಿನಿಸ್ಟರನ್ನೈ, ಮಟಿಬಿನೋಹೋಹೈ.  ಅಂದರೆ ಓ ಮಾತೃ ಭೂಮಿ, ನಿನ್ನ ಪಾದದಲ್ಲಿ ನನಗೆ ಸ್ಥಾನ ನೀಡಿ. ನೀವು ಇಲ್ಲದೆ ಹೋದರೆ ರೈತ ಏನು ಮಾಡುತ್ತಾನೆ? ಮಣ್ಣು ಇಲ್ಲದಿದ್ದರೆ ಅವನು ಅಸಹಾಯಕನಾಗಿರುತ್ತಾನೆ.

ಸ್ನೇಹಿತರೇ,

ಸ್ವಾತಂತ್ರ್ಯದ ಬಂದ ಇಷ್ಟು ವರ್ಷಗಳ ನಂತರವೂ ಕೆಲವು ಕಾರಣಗಳಿಂದಾಗಿ ಅಸ್ಸಾಂನಲ್ಲಿ ತಮ್ಮ ಭೂಮಿಗೆ ಕಾನೂನು ರೀತಿಯ ಹಕ್ಕುಗಳನ್ನು ಪಡೆಯಲು ಸಾಧ್ಯವಾಗದೆ ಲಕ್ಷಾಂತರ ಕುಟುಂಬಗಳು ಇದ್ದವುಎನ್ನುವುದು ನಿಜಕ್ಕೂ ದುಃಖಕರ ಸಂಗತಿ. ಈ ಕಾರಣದಿಂದಾಗಿ, ವಿಶೇಷವಾಗಿ ಬುಡಕಟ್ಟು ಪ್ರದೇಶಗಳ ಹೆಚ್ಚಿನ ಜನರು ಭೂರಹಿತವಾಗಿಯೇ ಉಳಿದುಕೊಂಡರು, ಮತ್ತು ಅವರ ಜೀವನೋಪಾಯವು ಅಪಾಯಕ್ಕೆ ಸಿಲುಕಿತು.  ಅಸ್ಸಾಂನಲ್ಲಿ ನಮ್ಮ ಸರ್ಕಾರ ಅಧಿಕಾರ ವಹಿಸಿಕೊಳ್ಳುವ ಸಮಯದಲ್ಲಿ, ಸುಮಾರು 6 ಲಕ್ಷ ಸ್ಥಳೀಯ ಕುಟುಂಬಗಳು ತಮ್ಮ ಜಮೀನುಗಳ ದಾಖಲೆಗಳನ್ನು ಹೊಂದಿರಲಿಲ್ಲ.  ಹಿಂದಿನ ಸರ್ಕಾರಗಳು ಇದನ್ನು ಆದ್ಯತೆಯಾಗಿ ಪರಿಗಣಿಸಲಿಲ್ಲ.ಆದರೆ, ಇಲ್ಲಿನ ಪ್ರಸ್ತುತ ಸರ್ಕಾರ, ಸರ್ವಾನಂದ್ ಸೋನೊವಾಲ್ಜಿ ಅವರ ನೇತೃತ್ವದಲ್ಲಿ, ನಿಮ್ಮ ಕಳವಳಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಪರಿಹರಿಸಲು ಅಧಿಕಾರ ವಹಿಸಿಕೊಂಡಿದೆ.  ಇಂದು, ಅಸ್ಸಾಂನ ಮೂಲ ನಿವಾಸಿಗಳ ಭಾಷೆ ಮತ್ತು ಸಂಸ್ಕೃತಿಯನ್ನು ಒಳಗೊಳ್ಳುವುದರ ಜೊತೆಗೆ ಭೂಮಿಗೆ ಸಂಬಂಧಿಸಿದ ಅವರ ಹಕ್ಕುಗಳನ್ನು ಪಡೆದುಕೊಳ್ಳುವುದರ ಬಗ್ಗೆ ವಿಶೇಷ ಒತ್ತು ನೀಡಲಾಗುತ್ತಿದೆ.  2019 ರಲ್ಲಿ ಜಾರಿಗೆ ಬಂದ ಹೊಸ ಭೂ ನೀತಿ ಇಲ್ಲಿ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಈ ಪ್ರಯತ್ನಗಳ ಫಲವಾಗಿ, ಕಳೆದ ವರ್ಷಗಳಲ್ಲಿ, 2.5 ಲಕ್ಷಕ್ಕೂ ಹೆಚ್ಚು ಸ್ಥಳೀಯ ಕುಟುಂಬಗಳಿಗೆ ಭೂಮಿಯ ಹಕ್ಕನ್ನು ನೀಡಲಾಗಿದೆ. ಈಗ 1 ಲಕ್ಷಕ್ಕೂ ಹೆಚ್ಚು ಕುಟುಂಬಗಳನ್ನು ಇದಕ್ಕೆ ಸೇರಿಸಲಾಗುವುದು.  ಅಸ್ಸಾಂನ ಅಂತಹ ಪ್ರತಿಯೊಂದು ಕುಟುಂಬವು ಆದಷ್ಟು ಬೇಗ  ತಮ್ಮ ಭೂಮಿಯ ಕಾನೂನುಬದ್ಧ ಹಕ್ಕುಗಳನ್ನು ಪಡೆಯಬೇಕು ಎಂಬುದು ಗುರಿಯಾಗಿದೆ.

ಸಹೋದರ ಮತ್ತು ಸಹೋದರಿಯರೇ,

ಭೂ ದಾಖಲೆಗಳ ಅನುದಾನದಿಂದ ಸ್ಥಳೀಯ ಜನರ ಬಹುದಿನಗಳ ಬೇಡಿಕೆ ಈಡೇರಿರಿರುವಲ್ಲದೇ ಇದು ಲಕ್ಷಾಂತರ ಜನರ ಜೀವನ ಮಟ್ಟವನ್ನು ಸುಧಾರಿಸಲು ದಾರಿ ಮಾಡಿಕೊಟ್ಟಿದೆ.  ಈಗ ವಂಚಿತರಾಗಿದ್ದ ಈ ಸ್ನೇಹಿತರಿಗೆ ಕೇಂದ್ರದ ಮತ್ತು ರಾಜ್ಯ ಸರ್ಕಾರದ ಇತರ ಹಲವು ಯೋಜನೆಗಳ ಪ್ರಯೋಜನವನ್ನು ಖಾತರಿಪಡಿಸಲಾಗಿದೆ.

ಈಗ ಈ ಸಹೋದರ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಅಡಿಯಲ್ಲಿ ಸಾವಿರಾರು ರೂಪಾಯಿಗಳನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿರುವ ಅಸ್ಸಾಂನ ಲಕ್ಷಾಂತರ ರೈತ ಕುಟುಂಬಗಳನ್ನು ಸೇರಲಿದ್ದಾರೆ.   ಈಗ, ಅವರು ಕಿಸಾನ್ ಕ್ರೆಡಿಟ್ ಕಾರ್ಡ್, ಬೆಳೆ ವಿಮಾ ಯೋಜನೆ ಮತ್ತು ಇತರ ಯೋಜನೆಗಳ ಪ್ರಯೋಜನವನ್ನು ಸಹ ಪಡೆಯುತ್ತಾರೆ.  ಅಷ್ಟೇ ಅಲ್ಲಇಲ್ಲಿರುವ ಬ್ಯಾಂಕುಗಳಿಂದ ತಮ್ಮ ವ್ಯಾಪಾರಕ್ಕಾಗಿ ಸುಲಭವಾಗಿ ಸಾಲ ಪಡೆಯಲು ಸಹ ಅವರಿಗೆ ಸಾಧ್ಯವಾಗುತ್ತದೆ.

ಸಹೋದರ ಮತ್ತು ಸಹೋದರಿಯರೇ,

ಅಸ್ಸಾಂನ ಸುಮಾರು 70 ಸಣ್ಣ ಮತ್ತು ದೊಡ್ಡ ಬುಡಕಟ್ಟು ಜನಾಂಗಗಳಿಗೆ ಸಾಮಾಜಿಕ ಭದ್ರತೆಯನ್ನು ನೀಡುವುದು ಮತ್ತು ಅವರ ತ್ವರಿತ ಪ್ರಗತಿಯು ನಮ್ಮ ಸರ್ಕಾರದ ಬದ್ಧತೆಯಾಗಿದೆ.  ಅಟಲ್‌ ಜಿಯವರ  ಸರ್ಕಾರದ ಸಮಯದಲ್ಲಿರಲಿ ಅಥವಾ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಎನ್‌ಡಿಎ ಸರ್ಕಾರವಿರಲಿ ಕಳೆದ ಕೆಲವು ವರ್ಷಗಳಲ್ಲಿ, ಅಸ್ಸಾಂನ ಸಂಸ್ಕೃತಿ, ಸ್ವಾಭಿಮಾನ ಮತ್ತು ಸುರಕ್ಷತೆಯು ನಮ್ಮ ಆದ್ಯತೆಯಾಗಿದೆ. ಅಸ್ಸಾಮೀಸ್ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಲು ಸಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಂತೆಯೇ, ಅಸ್ಸಾಂನ ಪ್ರತಿ ಸಮುದಾಯದ ಶ್ರೇಷ್ಠ ವ್ಯಕ್ತಿಗಳನ್ನು ಗೌರವಿಸುವ ಕೆಲಸವನ್ನು ಕಳೆದ ವರ್ಷಗಳಲ್ಲಿ   ಮಾಡಲಾಗಿದೆ  ಶ್ರೀಮಂತ್‌  ಶಂಕರ್‌ದೇವ್ಜಿಯವರ ತತ್ತ್ವಶಾಸ್ತ್ರ, ಅವರ ಸಿದ್ಧಾಂತಗಳು ಅಸ್ಸಾಂ ಜೊತೆಗೆ ಇಡೀ ದೇಶಕ್ಕೆ, ಇಡೀ ಮಾನವೀಯತೆಗೆ ಬಹಳ ಅಮೂಲ್ಯವಾದ ಆಸ್ತಿಯಾಗಿದೆ.   ಅಂತಹ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಪ್ರಯತ್ನಗಳನ್ನು ಮಾಡುವುದು ಪ್ರತಿ ಸರ್ಕಾರದ ಜವಾಬ್ದಾರಿ. ಆದರೆ ಬಟಾದ್ರವಾಸತ್ರ ಮತ್ತು ಈ ರೀತಿಯ ಅನೇಕ ಧರ್ಮಗ್ರಂಥಗಳೊಂದಿಗೆ ಏನು ಮಾಡಲಾಯಿತು ಎಂಬುದು ಅಸ್ಸಾಂನ ಜನರಿಂದ ಮುಚ್ಚಲ್ಪಟ್ಟ ಸಂಗತಿಯಲ್ಲ.  ಕಳೆದ ನಾಲ್ಕೂವರೆ ವರ್ಷಗಳಲ್ಲಿ, ಅಸ್ಸಾಂ ಸರ್ಕಾರವು ಈ ನಂಬಿಕೆ ಮತ್ತು ಆಧ್ಯಾತ್ಮಿಕ ಸ್ಥಳಗಳನ್ನು ಭವ್ಯವಾಗಿಸಲು ಮತ್ತು ಅಂತಹ ಅಪರೂಪದ ಐತಿಹಾಸಿಕ ಕಲಾಕೃತಿಗಳನ್ನು ಸಂರಕ್ಷಿಸುವ ಹಲವಾರು ಪ್ರಯತ್ನಗಳನ್ನು ಮಾಡಿದೆ. ಅಂತೆಯೇ, ಅಸ್ಸಾಂ ಮತ್ತು ಭಾರತದ ಹೆಮ್ಮೆ  ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವನ್ನು ಅತಿಕ್ರಮಣದಿಂದ ಮುಕ್ತಗೊಳಿಸಲು ಮತ್ತು ವನ್ಯಧಾಮವನ್ನು ಅದ್ಭುತವಾಗಿಸಲು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಸಹೋದರ ಮತ್ತು ಸಹೋದರಿಯರೇ,

ಆತ್ಮ ನಿರ್ಭರ ಭಾರತಕ್ಕಾಗಿ   ಈಶಾನ್ಯ ಮತ್ತು ಅಸ್ಸಾಂನ ತ್ವರಿತ ಅಭಿವೃದ್ಧಿ ಬಹಳ ಮುಖ್ಯ.   ಅಸ್ಸಾಂ ಜನರ ಆತ್ಮ ವಿಶ್ವಾಸದ ಮೂಲಕ ಆತ್ಮ ನಿರ್ಭರ ಅಸ್ಸಾಂಗೆ ಹೋಗುವ ಮಾರ್ಗವಿದೆ. ಕುಟುಂಬಕ್ಕೆ ಮೂಲಭೂತ ಸೌಲಭ್ಯಗಳು ಲಭ್ಯವಿರುವಾಗ ಇದು ಸಾಧ್ಯಹಾಗೆಯೇ ರಾಜ್ಯದೊಳಗಿನ ಮೂಲಸೌಕರ್ಯಗಳು ಸಹ ಪ್ರಗತಿ ಹೊಂದುತ್ತವೆ.  ಕಳೆದ ವರ್ಷಗಳಲ್ಲಿ, ಈ ಎರಡೂ ರಂಗಗಳಲ್ಲಿ ಅಸ್ಸಾಂನಲ್ಲಿ ಅಭೂತಪೂರ್ವ ಕೆಲಸಗಳು ನಡೆದಿವೆ.  ಅಸ್ಸಾಂನಲ್ಲಿ ಸುಮಾರು 1.75 ಕೋಟಿ ಬಡವರ ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆಇದರಿಂದಾಗಿ ಮತ್ತು ಕೊರೊನಾದ  ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಸಹ ಅಸ್ಸಾಂನ ಸಾವಿರಾರು ಸಹೋದರಿಯರ ಹಾಗೂ ಲಕ್ಷಾಂತರ ರೈತರ ಬ್ಯಾಂಕ್ ಖಾತೆಗಳಿಗೆ ನೇರ ಸಹಾಯವನ್ನು ಕಳುಹಿಸಲು ಸಾಧ್ಯವಾಗಿದೆ.  ಇಂದು, ಅಸ್ಸಾಂನ ಜನಸಂಖ್ಯೆಯ ಸುಮಾರು ಶೇಕಡಾ 40ರಷ್ಟು ಜನರು ಆಯುಷ್ಮಾನ್ ಭಾರತ್ ನ ಫಲಾನುಭವಿಗಳಾಗಿದ್ದು, ಅದರಲ್ಲಿ ಸುಮಾರು 1.5 ಲಕ್ಷ ನಾಗರಿಕರು ಉಚಿತ ಚಿಕಿತ್ಸೆ ಪಡೆದಿದ್ದಾರೆ.  ಕಳೆದ 6 ವರ್ಷಗಳಲ್ಲಿ ಅಸ್ಸಾಂನಲ್ಲಿನ ಶೌಚಾಲಯಗಳ ವ್ಯಾಪ್ತಿ 38 ಪ್ರತಿಶತದಿಂದ 100 ಪ್ರತಿಶತಕ್ಕೆ ಏರಿದೆ.  ಕಳೆದ 5 ವರ್ಷಗಳಲ್ಲಿ, ಅಸ್ಸಾಂನಲ್ಲಿ 50 ಪ್ರತಿಶತಕ್ಕಿಂತಲೂ ಕಡಿಮೆ ಕುಟುಂಬಗಳಿಗೆ ವಿದ್ಯುತ್ ಸೌಲಭ್ಯವಿತ್ತು, ಆದರೆ ಇದು ಈಗ ಸುಮಾರು 100 ಪ್ರತಿಶತಕ್ಕೆ ತಲುಪಿದೆ.  ಜಲಜೀವನ್  ಮಿಷನ್ ಅಡಿಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಅಸ್ಸಾಂನ 2.5 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ.  ಕೇಂದ್ರ ಮತ್ತು ರಾಜ್ಯ ಸರ್ಕಾರದ ಡಬಲ್ ಎಂಜಿನ್ 3-4 ವರ್ಷಗಳಲ್ಲಿ ಅಸ್ಸಾಂನ ಪ್ರತಿ ಮನೆಗೆ ಕೊಳವೆ ನೀರು ಪೂರೈಸಲು ಪಟ್ಟುಬಿಡದೆ ಕಾರ್ಯನಿರ್ವಹಿಸುತ್ತಿದೆ.

ಸಹೋದರ ಮತ್ತು ಸಹೋದರಿಯರೇ,

ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಈ ಎಲ್ಲಾ ಸೌಲಭ್ಯಗಳ ನಿಜವಾದ ಫಲಾನುಭವಿಗಳು. ಉಜ್ವಾಲಾ ಯೋಜನೆಯಿಂದಲೂ ಅವರು ಲಾಭ ಪಡೆದಿದ್ದಾರೆ.  ಇಂದು, ಅಸ್ಸಾಂನ ಸುಮಾರು 35 ಲಕ್ಷ ಬಡ ಸಹೋದರಿಯರು ಅಡುಗೆಮನೆಯಲ್ಲಿ ಉಜ್ವಾಲಾ ಅನಿಲ ಸಂಪರ್ಕವನ್ನು ಹೊಂದಿದ್ದಾರೆ.  ಈ ಪೈಕಿ ಎಸ್‌ಸಿ / ಎಸ್‌ಟಿ ವರ್ಗಕ್ಕೆ ಸೇರಿದ ಸುಮಾರು 4 ಲಕ್ಷ ಕುಟುಂಬಗಳು ಸೇರಿವೆ.  2014 ರಲ್ಲಿ ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾದಾಗ, ಅಸ್ಸಾಂನಲ್ಲಿ ಎಲ್ಪಿಜಿ ವ್ಯಾಪ್ತಿ ಕೇವಲ 40 ಪ್ರತಿಶತದಷ್ಟಿತ್ತು. ಈಗ, ಉಜ್ವಾಲಾ ಕಾರಣದಿಂದಾಗಿ, ಅಸ್ಸಾಂನಲ್ಲಿ ಎಲ್‌ ಪಿಜಿ ವ್ಯಾಪ್ತಿ ಸುಮಾರು 99 ಪ್ರತಿಶತಕ್ಕೆ ಏರಿದೆ. ಅಸ್ಸಾಂನ ದೂರದ ಪ್ರದೇಶಗಳಲ್ಲಿ ಅನಿಲವನ್ನು ಒದಗಿಸುವಲ್ಲಿ ಯಾವುದೇ ತೊಂದರೆಯಾಗದಂತೆ ಸರ್ಕಾರವು ವಿತರಕರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ.   2014 ರಲ್ಲಿ ಅಸ್ಸಾಂನಲ್ಲಿ ಮುನ್ನೂರು ಮತ್ತು ಮೂವತ್ತು ಎಲ್‌ ಪಿಜಿ ಅನಿಲ ವಿತರಕರು ಇದ್ದರು, ಈಗ ಅವರ ಸಂಖ್ಯೆ ಐನೂರ ಎಪ್ಪತ್ತೈದಕ್ಕೂ ಹೆಚ್ಚಾಗಿದೆ.  ಕೊರೊನಾದ ಕಾಲದಲ್ಲಿಯೂ ಉಜ್ವಲಾ ಜನರಿಗೆ ಹೇಗೆ ಸಹಾಯ ಮಾಡಿದೆ ಎನ್ನುವುದನ್ನು ನಾವು ನೋಡಿದ್ದೇವೆ.  ಈ ಅವಧಿಯಲ್ಲಿ, ಅಸ್ಸಾಂನ ಉಜ್ವಲಾದ ಫಲಾನುಭವಿಗಳಿಗೆ 50 ಲಕ್ಷಕ್ಕೂ ಹೆಚ್ಚು ಉಚಿತ ಗ್ಯಾಸ್ ಸಿಲಿಂಡರ್-ಗಳನ್ನು ನೀಡಲಾಗಿದೆ. ಅಂದರೆ, ಉಜ್ವಲಾ ಯೋಜನೆಯಿಂದ ಅಸ್ಸಾಂ ಸಹೋದರಿಯರ ಜೀವನವನ್ನು ಸುಲಭಗೊಳಿಸಲಾಗಿದೆ ಮತ್ತು ಇದಕ್ಕಾಗಿ ನೂರಾರು ಹೊಸ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಇದು ಅನೇಕ ಯುವಕರಿಗೆ ಉದ್ಯೋಗವನ್ನು ಸೃಷ್ಟಿಸಿದೆ.

ಸ್ನೇಹಿತರೇ,

ಸಬ್ಕಾ ಸಾಥ್ ಸಬ್ಕಾ ವಿಕಾಸ್- ಸಮಗ್ರ ಬೆಳವಣಿಗೆಗೆ ಸಾಮೂಹಿಕ ಪ್ರಯತ್ನಗಳು, ನಮ್ಮ ಸರ್ಕಾರದ ಮಂತ್ರವಾಗಿದೆ, ಇದು ಅಸ್ಸಾಂನ ಪ್ರತಿಯೊಂದು ವಿಭಾಗಕ್ಕೂ ತ್ವರಿತ ಅಭಿವೃದ್ಧಿಯ ಪ್ರಯೋಜನಗಳನ್ನು ಒದಗಿಸುವಲ್ಲಿ ತೊಡಗಿದೆ.  ಹಿಂದಿನ ನೀತಿಗಳಿಂದಾಗಿ  ಟೀ ಟ್ರೈಬಿನವರ ದುಃಸ್ಥಿತಿಯ ಬಗ್ಗೆ ನಿಮ್ಮೆಲ್ಲರಿಗೂ ತಿಳಿಯದೇನಿಲ್ಲ.  ಈಗ ಟೀ ಸಮುದಾಯದವರಿಗೆ ಮನೆ ಮತ್ತು ಶೌಚಾಲಯದಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ.  ಈ ಕುಟುಂಬಗಳಲ್ಲಿ ಹಲವರಿಗೆ ಶೀಘ್ರದಲ್ಲೇ ಅವರ ಜಮೀನುಗಳಿಗೆ ಕಾನೂನು ಹಕ್ಕುಗಳನ್ನು ಒದಗಿಸಲಾಗುವುದು.  ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಬಗ್ಗೆ ಮತ್ತು ಅವರ ಆರೋಗ್ಯ ಸೌಲಭ್ಯಗಳ ಜೊತೆಗೆ ಉದ್ಯೋಗದ ವ್ಯವಸ್ಥೆ ಮಾಡುವ ಬಗ್ಗೆಯೂ ಸರ್ಕಾರ ಮನಸ್ಸು ಮಾಡಿದೆ.  ಮೊದಲ ಬಾರಿಗೆ ಅವರು ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಸಂಪರ್ಕ ಹೊಂದಿದ್ದಾರೆ.  ಈಗ ಈ ಕುಟುಂಬಗಳು ಹಲವಾರು ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ನೇರವಾಗಿ ತಮ್ಮ ಖಾತೆಗಳಿಗೆ ಪಡೆಯಬಹುದು.  ಟೀ  ಸಮುದಾಯದ ಕಾರ್ಮಿಕ ಮುಖಂಡ ಸಂತೋಷ್ ಟೊಪಾನೊ ಸೇರಿದಂತೆ ಇತರ ದೊಡ್ಡ ನಾಯಕರ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕರಾಜ್ಯ ಸರ್ಕಾರವು ಚಹಾ ಸಮುದಾಯದ ಕೊಡುಗೆಯನ್ನು ಗೌರವಿಸುತ್ತಿದೆ.

ಸ್ನೇಹಿತರೇ,

ಅಸ್ಸಾಂನ ಪ್ರತಿಯೊಂದು ಪ್ರದೇಶದ ಪ್ರತಿಯೊಂದು ಬುಡಕಟ್ಟು ಜನಾಂಗವನ್ನು ಒಟ್ಟಿಗೆ ಸೇರಿಸುವ ಈ ನೀತಿಯಿಂದಾಗಿ, ಅಸ್ಸಾಂ ಶಾಂತಿ ಮತ್ತು ಪ್ರಗತಿಯ ಹಾದಿಯಲ್ಲಿದೆ. ಅಸ್ಸಾಂನ ಬಹುಪಾಲು ಭಾಗವು ಈಗ ಐತಿಹಾಸಿಕ ಬೋಡೋ ಒಪ್ಪಂದದೊಂದಿಗೆ ಶಾಂತಿ ಮತ್ತು ಅಭಿವೃದ್ಧಿಯ ಹಾದಿಗೆ ಮರಳಿದೆ.  ಒಪ್ಪಂದದ ನಂತರ ಚುನಾಯಿತ ಪ್ರತಿನಿಧಿಯಾಗಿ ಬೋಡೋ ಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ಲಿಗೆ ಮೊದಲ ಚುನಾವಣೆ ನಡೆಯಿತು. ಈಗ ಬೋಡೋ ಟೆರಿಟೋರಿಯಲ್ ಕೌನ್ಸಿಲ್ ಅಭಿವೃದ್ಧಿ ಮತ್ತು ವಿಶ್ವಾಸದ ಹೊಸ ಮಾದರಿಗಳನ್ನು ಸ್ಥಾಪಿಸುತ್ತದೆ ಎಂದು ನನಗೆ ವಿಶ್ವಾಸವಿದೆ.

ಸಹೋದರ ಮತ್ತು ಸಹೋದರಿಯರೇ,

ಇಂದು, ನಮ್ಮ ಸರ್ಕಾರವು ಅಸ್ಸಾಂನ ಅಗತ್ಯಗಳನ್ನು ಗುರುತಿಸುವ ಪ್ರತಿಯೊಂದು ಪ್ರಮುಖ ಯೋಜನೆಯಲ್ಲೂ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ.  ಕಳೆದ 6 ವರ್ಷಗಳಿಂದ, ಅಸ್ಸಾಂ ಸೇರಿದಂತೆ ಇಡೀ ಈಶಾನ್ಯದ ಮೂಲೆಮೂಲೆಗೂ ಸಂಪರ್ಕ, ಮತ್ತು ಇತರ ಎಲ್ಲ ಮೂಲಸೌಕರ್ಯಗಳನ್ನು ಸಹ ವಿಸ್ತರಿಸಲಾಗುತ್ತಿದೆ ಮತ್ತು ಆಧುನೀಕರಿಸಲಾಗುತ್ತಿದೆ.  ಇಂದು, ಅಸ್ಸಾಂ ಮತ್ತು ಈಶಾನ್ಯ ಭಾರತದ  ನೀತಿಯು ಪೂರ್ವ ಏಷ್ಯಾದ ದೇಶಗಳೊಂದಿಗೆ ನಮ್ಮ ಸಂಪರ್ಕವನ್ನು ಹೆಚ್ಚಿಸುತ್ತಿದೆ. ಉತ್ತಮ ಮೂಲಸೌಕರ್ಯದಿಂದಾಗಿ, ಅಸ್ಸಾಂ ಸ್ವಾವಲಂಬಿ ಭಾರತದ ಪ್ರಮುಖ ಕ್ಷೇತ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಕಳೆದ ವರ್ಷಗಳಲ್ಲಿ ಅಸ್ಸಾಂನ ಹಳ್ಳಿಗಳಲ್ಲಿ 11 ಸಾವಿರ ಕಿಲೋಮೀಟರ್ ರಸ್ತೆಗಳನ್ನು ನಿರ್ಮಿಸಲಾಗಿದೆ.  ಡಾ. ಭೂಪೆನ್ ಹಜರಿಕಾ ಸೇತು, ಬೋಗಿಬೀಲ್ ಸೇತುವೆ, ಸರೈಘಾಟ್ ಸೇತುವೆ, ಅಸ್ಸಾಂನ ಭಾರತದ ಇತರ ಭಾಗಗಳು ಮತ್ತು ಗಡಿಗಳಿಗೆ ಸಂಪರ್ಕವನ್ನು ಬಲಪಡಿಸುವಂತಹ ಅನೇಕ ಸೇತುವೆಗಳನ್ನು ನಿರ್ಮಿಸಲಾಗಿದೆ ಅಥವಾ ನಿರ್ಮಿಸಲಾಗುತ್ತಿದೆ. ಈಗ ಈಶಾನ್ಯ ಮತ್ತು ಅಸ್ಸಾಂನ ಜನರರ ಪ್ರಯಾಣದ ದೂರ ಮತ್ತು ಜೀವಕ್ಕೆ ಅಪಾಯ ಕಡಿಮೆಯಾಗಿದೆ. ಇದಲ್ಲದೆ, ಬಾಂಗ್ಲಾದೇಶ, ನೇಪಾಳ, ಭೂತಾನ್ ಮತ್ತು ಮ್ಯಾನ್ಮಾರ್‌ಗಳೊಂದಿಗೆ ಜಲಮಾರ್ಗಗಳ ಮೂಲಕ ಸಂಪರ್ಕ ಸಾಧಿಸುವತ್ತ ಗಮನ ಹರಿಸಲಾಗಿದೆ.

ಸ್ನೇಹಿತರೇ,

ಅಸ್ಸಾಂನಲ್ಲಿ ರೈಲು ಮತ್ತು ವಾಯು ಸಂಪರ್ಕದ ವ್ಯಾಪ್ತಿ ಹೆಚ್ಚುತ್ತಿರುವುದರಿಂದ, ಲಾಜಿಸ್ಟಿಕ್‌ ಗೆ ಸಂಬಂಧಿಸಿದ ಸೌಲಭ್ಯಗಳು ಉತ್ತಮಗೊಳ್ಳುತ್ತಿವೆ, ಇದರಿಂದಾಗಿ ಉದ್ಯಮ ಮತ್ತು ಉದ್ಯೋಗದ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ.

ಉನ್ನತ ಮಟ್ಟದ ಅತ್ಯಾಧುನಿಕ ಟರ್ಮಿನಲ್ ಮತ್ತು ಕಸ್ಟಮ್ ಕ್ಲಿಯರೆನ್ಸ್ ಕೇಂದ್ರವನ್ನು ಹೊಂದಿರುವ ಗೋಪಿನಾಥ್ ಬೋರ್ಡೊಲೊಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಧುನೀಕರಣ, ಕೊಕ್ರಜಾರ್‌ನ ರೂಪಾಸಿ ವಿಮಾನ ನಿಲ್ದಾಣದ ಪರಿವರ್ತನೆ, ಮತ್ತು ಬೊಂಗೈ ಗ್ರಾಮದ ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಹಬ್, ಇಂತಹ ಸೌಲಭ್ಯಗಳು ಅಸ್ಸಾಂನಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಹೊಸ ಉತ್ತೇಜನವನ್ನು ನೀಡುತ್ತವೆ.

ಸಹೋದರ ಮತ್ತು ಸಹೋದರಿಯರೇ,

ಇಂದು, ದೇಶವು ಅನಿಲ ಆಧಾರಿತ ಆರ್ಥಿಕತೆಯತ್ತ ವೇಗವಾಗಿ ಸಾಗುತ್ತಿರುವಾಗ, ಅಸ್ಸಾಂ ಕೂಡ ಈ ಅಭಿಯಾನದ ಪ್ರಮುಖ ಪಾಲುದಾರವಾಗಿದೆ. ಅಸ್ಸಾಂನಲ್ಲಿನ ತೈಲ ಮತ್ತು ಅನಿಲ ಸಂಬಂಧಿತ ಮೂಲಸೌಕರ್ಯಗಳಿಗಾಗಿ ಕಳೆದ ವರ್ಷಗಳಲ್ಲಿ 40 ಸಾವಿರ ಕೋಟಿ ರೂಪಾಯಿಗಳನ್ನು ಹೂಡಲಾಗಿದೆ.  ಗುವಾಹಟಿ-ಬಾರೌನಿ ಅನಿಲ ಪೈಪ್‌ಲೈನ್ ಈಶಾನ್ಯ ಮತ್ತು ಪೂರ್ವ ಭಾರತದ ಅನಿಲ ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು  ಇದು ಅಸ್ಸಾಂನಲ್ಲಿ ಹೊಸ ಉದ್ಯೋಗಾವಕಾಶಗಳಿಗೆ ಕಾರಣವಾಗಿದೆ ಈಗ ಅಲ್ಲಿ ಜೈವಿಕ ಸಂಸ್ಕರಣಾಗಾರ ಸೌಲಭ್ಯವನ್ನೂ ಸೇರಿಸಲಾಗಿದೆ. ಇದರೊಂದಿಗೆ, ತೈಲ ಮತ್ತು ಅನಿಲವನ್ನು ಹೊರತುಪಡಿಸಿ, ಎಥೆನಾಲ್ ನಂತಹ ಜೈವಿಕ ಇಂಧನವನ್ನು ಉತ್ಪಾದಿಸುವ ಅಸ್ಸಾಂ ದೇಶದ ಪ್ರಮುಖ ರಾಜ್ಯವಾಗಲಿದೆ.

ಸಹೋದರ ಮತ್ತು ಸಹೋದರಿಯರೇ,

ಅಸ್ಸಾಂ ಈಗ ಆರೋಗ್ಯ ಮತ್ತು ಶಿಕ್ಷಣದ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಏಮ್ಸ್ ಮತ್ತು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ರಚನೆಯೊಂದಿಗೆ, ಅಸ್ಸಾಂನ ಯುವಕರು ಆಧುನಿಕ ಶಿಕ್ಷಣಕ್ಕೆ ಹೊಸ ಅವಕಾಶಗಳನ್ನು ಪಡೆಯಲಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗವನ್ನು ಅಸ್ಸಾಂ ನಿಭಾಯಿಸಿದ ರೀತಿ ಕೂಡ ಪ್ರಶಂಸನೀಯವಾಗಿದೆ.  ನಾನು ವಿಶೇಷವಾಗಿ ಅಸ್ಸಾಂನ ಜನರನ್ನು ಹಾಗೂ ಸೋನೊವಾಲ್ಜಿ, ಹೇಮಂತಾಜಿ ಮತ್ತು ಅವರ ತಂಡವನ್ನು ಅಭಿನಂದಿಸುತ್ತೇನೆ. ವ್ಯಾಕ್ಸಿನೇಷನ್ ಅಭಿಯಾನವನ್ನು ಅಸ್ಸಾಂ ಈಗ ಯಶಸ್ವಿಯಾಗಿ ಮುನ್ನಡೆಸಲಿದೆ ಎಂದು ನನಗೆ ವಿಶ್ವಾಸವಿದೆ. ಕೊರೊನಾ ತಡೆಗಟ್ಟಲು ಲಸಿಕೆ ಹಾಕಿಸಿಕೊಳ್ಳಬೇಕೆಂದು ನಾನು ಅಸ್ಸಾಂನ ಜನರನ್ನು ಕೋರುತ್ತೇನೆ.  ಲಸಿಕೆಯ ಒಂದು ಡೋಸ್ ಅಲ್ಲ, ಎರಡು ಡೊಸ್‌  ಕೂಡ ಮುಖ್ಯ  ಎನ್ನುವುದನ್ನು ದಯವಿಟ್ಟು ನೆನಪಿಡಿ.

ಸ್ನೇಹಿತರೇ,

ಭಾರತದಲ್ಲಿ ತಯಾರಿಸಿದ ಲಸಿಕೆಗಳಿಗೆ ಪ್ರಪಂಚದಾದ್ಯಂತ ಬೇಡಿಕೆಯಿದೆ. ಭಾರತದಲ್ಲಿ ಈವರೆಗೆ ಲಕ್ಷಾಂತರ ಜನರಿಗೆ ಲಸಿಕೆ ನೀಡಲಾಗಿದೆ. ನಾವು ಲಸಿಕೆ ಹಾಕಿಸಿಕೊಳ್ಳಬೇಕು ಮತ್ತು ಜಾಗರೂಕರಾಗಿರಬೇಕು. ಅಂತಿಮವಾಗಿ, ಮತ್ತೊಮ್ಮೆ, ತಮ್ಮ ಜಮೀನುಗಳಿಗೆ ಕಾನೂನುಬದ್ಧ ಹಕ್ಕುಗಳನ್ನು ಪಡೆದ ಎಲ್ಲರಿಗೂ ಅನೇಕ ಅಭಿನಂದನೆಗಳು. ನೀವೆಲ್ಲರೂ ಆರೋಗ್ಯವಾಗಿರಲಿ, ಸಮೃದ್ಧಿಯ ಹಾದಿಯಲ್ಲಿರಲಿ. ಈ ಆಸೆಯಿಂದ, ತುಂಬಾ ಧನ್ಯವಾದಗಳು! ನನ್ನ ಜೊತೆಗೆ ಹೇಳಿರಿ! ಭಾರತ್ ಮಾತಾ ಕಿ ಜೈ!  ಭಾರತ್ ಮಾತಾ ಕಿ ಜೈ! ಭಾರತ್ ಮಾತಾ ಕಿ ಜೈ! 

ಬಹಳ ಬಹಳ ಧನ್ಯವಾದಗಳು!

***