ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂನ ಜೋಗಿಘೋಪಾದಲ್ಲಿ ಬ್ರಹ್ಮಪುತ್ರ ನದಿಯ ಮೇಲೆ (ರಾಷ್ಟ್ರೀಯ ಜಲಮಾರ್ಗ-2) ಒಳನಾಡು ಜಲಮಾರ್ಗ ಸಾರಿಗೆ (IWT) ಟರ್ಮಿನಲ್ ಉದ್ಘಾಟನೆಯನ್ನು ಶ್ಲಾಘಿಸಿದ್ದಾರೆ.
ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗಗಳು ಹಾಗೂ ಆಯುಷ್ ಖಾತೆ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್ ಅವರು ಭೂತಾನ್‌ನ ಹಣಕಾಸು ಸಚಿವರಾದ ಲಿಯಾನ್ಪೋ ನಾಮ್ಗಲ್ ದೋರ್ಜಿ ಅವರೊಂದಿಗೆ ಅಸ್ಸಾಂನ ಜೋಗಿಘೋಪಾದಲ್ಲಿ ಒಳನಾಡು ಜಲಮಾರ್ಗ ಸಾರಿಗೆ (IWT) ಟರ್ಮಿನಲ್ ಅನ್ನು ಉದ್ಘಾಟಿಸಿದರು. ಈ ಅತ್ಯಾಧುನಿಕ ಟರ್ಮಿನಲ್, ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗೆ ಸಂಪರ್ಕ ಹೊಂದಿದೆ ಮತ್ತು ಜೋಗಿಘೋಪಾದಲ್ಲಿ ಕಾರ್ಯತಂತ್ರವಾಗಿ ನೆಲೆಗೊಂಡಿದ್ದು ಅಸ್ಸಾಂ ಮತ್ತು ಈಶಾನ್ಯ ಭಾರತದಲ್ಲಿ ಸರಕು ಸಾಗಣೆಯನ್ನು ಹೆಚ್ಚಿಸುತ್ತಾ ಭೂತಾನ್ ಮತ್ತು ಬಾಂಗ್ಲಾದೇಶಕ್ಕೆ ಅಂತಾರಾಷ್ಟ್ರೀಯ ಬಂದರು ಆಗಿರಲಿದೆ.
ಕೇಂದ್ರ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್ ಅವರ ಎಕ್ಸ್ ಪೋಸ್ಟ್ ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ:
“ಪ್ರಗತಿ ಮತ್ತು ಸಮೃದ್ಧಿಗಾಗಿ ಹಾಗೂ ಮೂಲಸೌಕರ್ಯವನ್ನು ಸುಧಾರಿಸುವ ನಮ್ಮ ಅನ್ವೇಷಣೆಯಲ್ಲಿ ಒಳನಾಡಿನ ಜಲಮಾರ್ಗಗಳ ಉತ್ತೇಜನ ಗಮನಾರ್ಹ ಸೇರ್ಪಡೆಯಾಗಿದೆ.”
*****
A noteworthy addition in our quest for improving infrastructure as well as encouraging inland waterways for progress and prosperity. https://t.co/2heHuWxagw
— Narendra Modi (@narendramodi) February 18, 2025