Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಸ್ಸಾಂನ ಚಹಾ ತೋಟಗಳಲ್ಲಿ ಶಾಲೆಗಳ ಸ್ಥಾಪನೆಯನ್ನು  ಸ್ವಾಗತಿಸಿದ ಪ್ರಧಾನ ಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಸ್ಸಾಂ ಸರ್ಕಾರದ ಹೊಸ ಉಪಕ್ರಮವನ್ನು ಸ್ವಾಗತಿಸಿದ್ದಾರೆ.

ಜೂನ್ 19 ರಿಂದ ಜೂನ್ 25 ರವರೆಗೆ ಅಸ್ಸಾಂ ಸರ್ಕಾರವು 38 ಹೊಸ ಮಾಧ್ಯಮಿಕ ಶಾಲೆಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ಸಮರ್ಪಿಸಲಿದೆ. 38 ಶಾಲೆಗಳ ಪೈಕಿ 19 ಶಾಲೆಗಳು ಚಹಾ ತೋಟ ಪ್ರದೇಶದಲ್ಲಿರಲಿವೆ.

 ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿಯವರು ತಮ್ಮ ಟ್ವೀಟ್ ನಲ್ಲಿ:

“ಶ್ಲಾಘನೀಯ ಉಪಕ್ರಮ. ಶಿಕ್ಷಣವು ಸಮೃದ್ಧ ರಾಷ್ಟ್ರದ ಅಡಿಪಾಯವಾಗಿದೆ ಮತ್ತು ಈ ಹೊಸ ಮಾಧ್ಯಮಿಕ ಶಾಲೆಗಳು ಯುವಜನರಿಗೆ  ಬಲವಾದ ಅಡಿಪಾಯವನ್ನು ಒದಗಿಸುತ್ತವೆ. ಚಹಾ ತೋಟದ ಪ್ರದೇಶಗಳ ಬಗೆಗಿನ ಬದ್ಧತೆಯ ಬಗ್ಗೆ ಕೇಳಿ ವಿಶೇಷವಾದ ಸಂತೋಷವಾಗಿದೆ” ಎಂದು ಹೇಳಿದ್ದಾರೆ. 

***